ಹೊಸದಿಲ್ಲಿ: ದೇಶದಲ್ಲಿ ಈಗ ಮಾನವ ಬಿಕ್ಕಟ್ಟು ಎದುರಾಗಿದೆ, ಮಾಹಿತಿ ಹಂಚಿಕೆ ಹತ್ತಿಕ್ಕುವುದು ನ್ಯಾಯಾಂಗ ನಿಂದನೆ, ರಾಜ್ಯಗಳಿಗೆ ಸುಪ್ರೀಂ ಎಚ್ಚರಿಕೆ

Source: VB | By S O News | Published on 1st May 2021, 12:51 PM | National News |

ಹೊಸದಿಲ್ಲಿ: ಸಾಮಾಜಿಕ ಮಾಧ್ಯಮಗಳಲ್ಲಿ ಜನತೆ ತಮ್ಮ ದೂರು, ಅಹವಾಲುಗಳನ್ನು ಹಂಚಿಕೊಳ್ಳುವುದನ್ನು ಯಾವುದೇ ರಾಜ್ಯಗಳು ನಿಗ್ರಹಿಸಲು ಸಾಧ್ಯವಿಲ್ಲ. ಯಾವುದೇ ಪ್ರಜೆಗಳಿಗೆ ಈ ವಿಷಯದಲ್ಲಿ ಕಿರುಕುಳ ಆದರೆ ಅಂತಹ ಘಟನೆಗಳನ್ನು ನ್ಯಾಯಾಂಗ ನಿಂದನೆ ಪ್ರಕರಣ ಎಂದು ಪರಿಗಣಿಸಲಾಗುವುದು ಎಂದು ಸುಪ್ರೀಂಕೋರ್ಟ್ ಶುಕ್ರವಾರ ಹೇಳಿದೆ.

ದೇಶದಲ್ಲಿ ಕೊರೋನ ಸೋಂಕಿನ ಮಾರಣಾಂತಿಕ ಎರಡನೇ ಅಲೆಯನ್ನು ಸೂಕ್ತವಾಗಿ ನಿರ್ವಹಿಸಲು ಆಸ್ಪತ್ರೆಗಳಲ್ಲಿ ಸಂಪನ್ಮೂಲಗಳ ಕೊರತೆಯಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶ ಪ್ರಸಾರವಾಗುತ್ತಿದ್ದು ಇದಕ್ಕೆ ಹಲವು ರಾಜ್ಯ ಸರಕಾರಗಳು ಆಕ್ಷೇಪ ಸೂಚಿಸಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಸುಪ್ರೀಂಕೋರ್ಟ್, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುವ ಎಲ್ಲಾ ಸುದ್ದಿಗಳೂ ಸುಳ್ಳು ಎಂದು ಭಾವಿಸುವುದು ಸರಿಯಲ್ಲ ಎಂದು ತಿಳಿಸಿದೆ.

ಓರ್ವ ನಾಗರಿಕನಾಗಿ ಅಥವಾ ಪ್ರಜೆಯಾಗಿ ನನಗೆ ಇದು ತೀವ್ರ ಕಳವಳದ ವಿಷಯವಾಗಿದೆ. ಜನತೆ

ಜನರು ಬೆಡ್ ಅಥವಾ ಆಮ್ಲಜನಕಕ್ಕೆ ಬೇಡಿಕೆ ಇರಿಸಿದಾಗ ಅವರ ಮೇಲೆ ದಬ್ಬಾಳಿಕೆ ಅಥವಾ ಕಿರುಕುಳ ನಡೆದರೆ ಅದನ್ನು ನ್ಯಾಯಾಂಗ ನಿಂದನೆ  ಎಂದು ಪರಿಗಣಿಸುತ್ತೇವೆ.

 ನ್ಯಾ.ಡಿ.ವೈ.ಚಂದ್ರಚೂಡ್

ಸುಪ್ರೀಂ ಎತ್ತಿದ ಪ್ರಶ್ನೆಗಳು

ದೇಶದಲ್ಲಿ 3ನೇ ಹಂತದ ಲಸಿಕಾ ಅಭಿಯಾನ ಮೇ 1ರಿಂದ ಆರಂಭವಾಗುವ ಬಗ್ಗೆ  ಪ್ರಸ್ತಾವಿಸಿದ ನ್ಯಾಯಾಲಯ, ಲಸಿಕೆಗಳ ದರದಲ್ಲಿರುವ  ಗೊಂದಲದಬಗ್ಗೆ ಕೇಂದ್ರ ಸರಕಾರವನ್ನು ಪ್ರಶ್ನಿಸಿತು. ಈ ಸಂದರ್ಭದಲ್ಲಿ ಉತ್ಪಾದನೆಯಾದ ಎಲ್ಲಾ ಲಕಸಿಕೆಗಳನ್ನೂ ಸರಕಾರವೇ ಖರೀದಿಸಬೇಕು. ರಾಜ್ಯಗಳಿಗೊಂದು, ಕೇಂದ್ರ ಸರಕಾರಕ್ಕೆ ಒಂದು ವಿಧದ ದರ ಯಾಕೆ? ಇದರ ತರ್ಕವೇನು?

ಸಾತಂತ್ರ್ಯ ದೊರೆತ ದಿನದಿಂದಲೂ ದೇಶದಲ್ಲಿ ಪಾಲಿಸಿಕೊಂಡು ಬಂದಿವ ರಾಷ್ಟ್ರೀಯ ಲಸಿಕಾ ವಿಧಾನವನ್ನು ದೇಶ ಅನುಸರಿಸಬೇಕು. ದರದ ಕುರಿತ ಗೊಂದಲ ತುಂಬಾ ಗಂಭೀರ ವಿಷಯ. ಬಡಜನತೆ ಲಸಿಕೆಗೆ ಎಲ್ಲಿಂದ ಹಣ ತರಬೇಕು? ಖಾಸಗಿ ಕ್ಷೇತ್ರದ ಮಾದರಿ ಸೂಕ್ತವಲ್ಲ.

ಹಾಸ್ಟೆಲ್‌ಗಳು, ದೇವಸ್ಥಾನ ಮತ್ತು ಮಸೀದಿಗಳನ್ನು ಕೋವಿಡ್ ಚಿಕಿತ್ಸಾ ಕೇಂದ್ರಗಳನ್ನಾಗಿಸಬೇಕು.

ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ದೂರು, ಅಹವಾಲುಗಳನ್ನು ಹಂಚಿಕೊಳ್ಳಲು ಬಯಸಿದರೆ ನಾವು ಮಾಹಿತಿಯ ಮೇಲೆ ನಿರ್ಬಂಧ ವಿಧಿಸಲು ಬಯಸಬಾರದು. ಅವರು ಏನು ಹೇಳುತ್ತಿದ್ದಾರೆ ಎಂದು ಕೇಳೋಣ. ನಾವು ಈಗ ಮಾನವ ಬಿಕ್ಕಟ್ಟಿನ ಸ್ಥಿತಿಯಲ್ಲಿದ್ದೇವೆ. ವೈದ್ಯರು ಅಥವಾ ಆರೋಗ್ಯ ಕಾರ್ಯಕರ್ತರಿಗೂ ಬೆಡ್ ಸಿಗುತ್ತಿಲ್ಲ. ಪರಿಸ್ಥಿತಿ ಗಂಭೀರವಾಗಿದೆ. ಜನರು ಬೆಡ್ ಅಥವಾ ಆಮ್ಲಜನಕಕ್ಕೆ ಬೇಡಿಕೆ ಇರಿಸಿದಾಗ ಅವರ ಮೇಲೆ ದಬ್ಬಾಳಿಕೆ ಅಥವಾ ಕಿರುಕುಳ ನಡೆದರೆ ಅದನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸುತ್ತೇವೆ ಎಂದು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹೇಳಿದ್ದಾರೆ.

ದೇಶದ ರಾಜಧಾನಿಯಾಗಿರುವ ದಿಲ್ಲಿ ದೇಶದ ಸೂಕ್ಷ್ಮ ಸಮಸ್ಯೆಗಳ ಪ್ರತಿನಿಧಿಸುತ್ತಿರುವುದರಿಂದ ದಿಲ್ಲಿಯ ವಿಷಯದಲ್ಲಿ ಕೇಂದ್ರ ಸರಕಾರಕ್ಕೆ ವಿಶೇಷ ಹೊಣೆಗಾರಿಕೆಯಿದೆ ಎಂದ ಸುಪ್ರೀಂಕೋರ್ಟ್, ಈಗ ರಾಜಕೀಯ ಮೇಲಾಟದ ಸಮಯವಲ್ಲ, ರಾಜ್ಯ ಸರಕಾರವೂ ಕೇಂದ್ರದೊಂದಿಗೆ ಸಹಕರಿಸಬೇಕು ಎಂದು ಅರವಿಂದ್ ಕೇಜ್ರವಾಲ್ ಸರಕಾರಕ್ಕೆ ಕಿವಿಮಾತು ಹೇಳಿತು. ದಿಲ್ಲಿಯಲ್ಲಿ ಆಮ್ಲಜನಕ ಲಭಿಸುತ್ತಿಲ್ಲ. ದಿಲ್ಲಿಯಲ್ಲಷ್ಟೇ ಅಲ್ಲ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕದಲ್ಲೂ ಇದೇ ಸ್ಥಿತಿಯಿದೆ. ಗಂಭೀರ ಸಮಸ್ಯೆ ಎದುರಿಸುತ್ತಿರುವ ಈ ರಾಜ್ಯಗಳಿಗೆ ಎಷ್ಟು ಆಮ್ಲಜನಕ ಒದಗಿಸಲು ಸಾಧ್ಯ ಎಂದು ಸುಪ್ರೀಂಕೋರ್ಟ್ ಕೇಂದ್ರ ಸರಕಾರವನ್ನು ಪ್ರಶ್ನಿಸಿತು.

ಉತ್ಪಾದಕರು ಕೊರೋನ ಲಸಿಕೆಯ ದರ ನಿರ್ಧರಿಸುವಂತಿಲ್ಲ ಸುಪ್ರೀಂ ಕೋರ್ಟ್

ಹೊಸದಿಲ್ಲಿ: ಕೊರೋನ ಸೋಂಕಿನ ವಿರುದ್ಧದ ಲಸಿಕೆಗೆ ವಿಭಿನ್ನ ದರ ನಿಗದಿಯಾಗಿರುವ ವಿಷಯದಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್, ಲಸಿಕೆಯ ದರವನ್ನು ಉತ್ಪಾದಕರು ನಿಗದಿಗೊಳಿಸಲು ಬಿಡಬಾರದು ಎಂದು ಕೇಂದ್ರ ಸರಕಾರಕ್ಕೆ ಸೂಚಿಸಿದೆ. ಬೆಲೆ ವ್ಯತ್ಯಾಸ 40,000 ಕೋಟಿ ರೂ. ಗಳಷ್ಟಾಗುತ್ತದೆ. ಬೆಲೆ ವ್ಯತ್ಯಾಸಕ್ಕೆ ಕಾರಣಗಳೇ ಇಲ್ಲ. ಇದಕ್ಕೆ ದೇಶ ಯಾಕೆ ಬೆಲೆತೆರಬೇಕು. ನೀವು ಲಸಿಕೆ ಖರೀದಿಸಬೇಕು ಎಂದು ನಾವು ಹೇಳುತ್ತಿಲ್ಲ. ಆದರೆ ಈ ಬಗ್ಗೆ ನೀವು ಗಮನ ಹರಿಸಬೇಕಾಗಿದೆ ಎಂದು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ನಾಗೇಶ್ವರ ರಾವ್ ಮತ್ತು ಎಸ್.ರವೀಂದ್ರ ಭಟ್ ಅವರಿದ್ದ ನ್ಯಾಯಪೀಠ ಹೇಳಿದೆ.


 

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...