ಕಾರವಾರ: ನಿಷೇಧಿಸಿದ ಪ್ಲಾಸ್ಟಿಕ್ ಬಳಸಿದರೆ ದಂಡ
ಕಾರವಾರ: ಕಾರವಾರ ನಗರಸಭೆ ವ್ಯಾಪ್ತಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಸಾಮಗ್ರಿಗಳ ಮಾರಾಟ, ದಾಸ್ತಾನು ಅಕ್ರಮ ಬಳಕೆ ಈಗಾಗಲೇ ನಿಷೇಧಿಸಲಾಗಿದ್ದು, ಉದ್ದಿಮೆದಾರರು ಪದೇ ಪದೇ ನಿಷೇಧಿತ ಪ್ಲಾಸ್ಟಿಕ್ ಬಳಕೆಯ ಕೃತ್ಯ ಎಸಗಿದ್ದೇ ಆದಲ್ಲಿ ಸೂಕ್ತ ದಂಡ ವಿಧಿಸುವ ಅಥವಾ ಉದ್ದಿಮೆ ಪರವಾನಿಗೆಯನ್ನು ರದ್ದುಗೊಳಿಸುವ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಕರ್ನಾಟಕ ಪೌರಸಭೆಗಳ ಘನತ್ಯಾಜ್ಯ ನಿರ್ವಹಣಾ ಮಾದರಿ ಉಪನಿಯಮಗಳು-2019 ರ ಅನುಸೂಚಿ 8 ಪ್ರಕಾರ, ನಿಷೇಧಿತ ಪ್ಲಾಸ್ಟಿಕ್ ಸಾಮಗ್ರಿಗಳ ಮಾರಾಟ ಅಪರಾಧಕ್ಕೆ ರೂ.100 ರಿಂದ 200 ವರೆಗೆ, ಸಾಮಗ್ರಿಗಳ ಅಕ್ರಮ ದಾಸ್ತಾನಿಗೆ 200 ರಿಂದ 500 ರೂ ವರೆಗೆ, ನಿಷೇಧಿತ ಪ್ಲಾಸ್ಟಿಕ್ ಸಾಮಗ್ರಿಗಳ ಅಕ್ರಮ ಬಳಕೆ ಅಪರಾಧಕ್ಕೆ ರೂ 15 ರಿಂದ 50 ವರೆಗೆ ದಂಡ ವಿರುತ್ತದೆ.
ಸಾರ್ವಜನಿಕರು ನಿಷೇಧಿತ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ, ಸಹಕರಿಸಬೇಕೆಂದು ಎಂದು ಪೌರಾಯುಕ್ತ ಆರ್ ಪಿ ನಾಯ್ಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.