ಲಾಕ್ ಡೌನ್ ನಿಂದಾಗಿ ಹಣಕಾಸು ತೊಂದರೆ; ಆತ್ಮಹತ್ಯೆಗೆ ಶರಣಾದ ಮೀನುಗಾರ ಯುವಕ

Source: sonews | By Staff Correspondent | Published on 10th June 2020, 3:41 PM | Coastal News | Don't Miss |

ಮಲ್ಪೆ: ಕಳೆದ ಎರಡು ತಿಂಗಳ ಲಾಕ್ ಡೌನ್ ನಿಂದಾಗಿ ತೀರ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದ ಮೀನುಗಾರ ಯುವಕನೊಬ್ಬ ಲಂಗರು ಹಾಕಿದ ತನ್ನ ಬೋಟಿನಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳವಾರ ರಾತ್ರಿ ಮಲ್ಪೆ ಬಂದರ್ ನಲ್ಲಿ ಜರಗಿದೆ.

ಆತ್ಮಹತ್ಯೆಗೆ ಶರಣಾದ ಯುವಕನನ್ನು ಬಡನಿಡಿಯೂರಿನ ಬೈಲಕೆರೆಯ ಪಾವಂಜಿಗುಡ್ಡೆ ನಿವಾಸಿ ಭಾಗ್ಯರಾಜ್(೨೭) ಎಂದು ಗುರುತಿಲಾಗಿದೆ.

ಇತ್ತಿಚೆಗೆ ಸಾಲಾ ಮಾಡಿ ಮನೆ ಹಾಗೂ ಮೀನುಗಾರಿಕಾ ಬೋಟನ್ನು ಕೊಂಡುಕೊಂಡಿದ್ದ ಯುವಕ ತನ್ನ ತನ್ನ ಬೋಟಿನಲ್ಲಿ ರೈಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದ್ದು ಲಾಕ್ ಡೌನ್ ನಿಂದಾಗಿ ಅವರ ಕುಟುಂಬ ತುಂಬಾ ಆರ್ಥಿಕ ನಷ್ಟವನ್ನುಂಟು ಅನುಭವಿಸುತ್ತಿತ್ತು ಎನ್ನಲಾಗಿದೆ. ಮೀನು ವ್ಯಾಪಾರದಲ್ಲಿ ಕುಸಿತ ಉಂಟಾಗಿದ್ದು ಮೀನುಗಾರಿಕೆ ಕ್ಷಾಮ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮಾನಸಿಕವಾಗಿ ನೊಂದುಕೊಂಡು ಮಲ್ಲೆಯಲ್ಲಿ ಲಂಗರು ಹಾಕಿದ್ದ ತನ್ನ ಬೋಟಿನಲ್ಲೇ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದಾರೆ.

ಭಾಗ್ಯರಾಜ್ ಉತ್ತಮ ಕ್ರಿಡಾಪಟುವಾಗಿದ್ದು ತಮ್ಮ ಕಾಲೇಜು ದಿನಗಳಲ್ಲಿ ಕಬ್ಬಡ್ಡಿ ಪಂದ್ಯಾಟದಲ್ಲಿ ರಾಷ್ಟಮಟ್ಟದಲ್ಲಿ ಭಾಗಹಿಸಿದ್ದ ಎಂದು ತಿಳಿದುಬಂದಿದ್ದು ಇವರು ತೆಂಕನಿಡಿಯೂರು ಸ್ಪೋರ್ಟ್ಸ್ ಕ್ಲಬ್ ನ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ.

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...