ಪಿ.ಡಿ.ಓ ಮತ್ತು ಗ್ರಾ.ಪಂ. ಅಧ್ಯಕ್ಷೆ ವಿರುದ್ಧ  ಭ್ರಷ್ಟಚಾರ ನಿಗ್ರಹ ದಳ ಪ್ರಕರಣ ದಾಖಲು 

Source: sonews | By Staff Correspondent | Published on 5th July 2020, 6:23 PM | State News |

ಕೋಲಾರ : ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆದೇಶದಂತೆ ಬಂಗಾರಪೇಟೆ ತಾಲ್ಲೂಕು ಐನೋರಹೊಸಹಳ್ಳಿ ಗ್ರಾಮ ಪಂಚಾಯಿತಿಯ ಪಿ.ಡಿ.ಓ , ಎಂ.ರಾಮಕೃಷ್ಣ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಧಾರಾಣಿ ವಿರುದ್ಧ ಕೋಲಾರ ಭ್ರಷ್ಟಚಾರ ನಿಗ್ರಹ ದಳ ಪ್ರಕರಣ ದಾಖಲು ಮಾಡಿಕೊಂಡಿದೆ.

ಐನೋರಹೊಸಹಳ್ಳಿಯ ಗ್ರಾಮ ಪಂಚಾಯಿತಿಯಲ್ಲಿ 2016-17 ನೇ ಸಾಲಿನಲ್ಲಿ ನಡೆದಿರುವ ಭ್ರಷ್ಟಚಾರ , ಅವ್ಯವಹಾರ ಅಧಿಕಾರ ದುರುಪಯೋಗದ ಬಗ್ಗೆ ಸಾಮಾಜಿಕ ಕಾರ್ಯಕರ್ತ ನಿರ್ಣಯ ಎಸ್ ನಾರಾಯಣಸ್ವಾಮಿ ದಿ : 05-09-2018 ರಂದು ಸರ್ಕಾರದ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಗೆ ದಾಖಲೆಗಳೊಂದಿಗೆ ದೂರನ್ನು ನೀಡಿ ತನಿಖೆ ನಡೆಸಲು ಕೋರಿದ್ದರು.

ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಪತ್ರ ಸಂಖ್ಯೆ : ಗ್ರಾಅಪ / 493 / ಗ್ರಾಪಂಕ / 2018 ದಿನಾಂಕ : 09-11-2018 ರಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಅಗತ್ಯ ಕ್ರಮ ತೆಗೆದುಕೊಳ್ಳಲು ಹಾಗೂ ಸರ್ಕಾರಕ್ಕೆ ವರದಿ ನೀಡಲು ಆದೇಶಿಸಿತ್ತು . 
ಆದರೆ, ಇದುವರೆಗೂ ಕ್ರಮ ತೆಗೆದುಕೊಳ್ಳಲು ಜಿಲ್ಲಾ ಪಂಚಾಯಿತಿಯು ವಿಫಲವಾದ ಹಿನ್ನಲೆಯಲ್ಲಿ ದಿ : 07-09-2019 ರಂದು ಕೋಲಾರದ ಭ್ರಷ್ಟಾಚಾರ ನಿಗ್ರಹದಳಕ್ಕೆ ಎಸ್.ನಾರಾಯಣಸ್ವಾಮಿ ದೂರನ್ನು ದಾಖಲಿಸಿ 2016-17 ನೇ ಸಾಲಿನಲ್ಲಿ ರೂ .3,96,195 / - ಗಳ ದುರುಪಯೋಗ ರೂ .1,82,635 / - ಗಳ ಆಕ್ಷೇಪಣೆ ಮೊತ್ತಕ್ಕೆ ಹಾಗೂ ಇತರೆ ಗಂಭೀರವಾದ 4 ಅಂಶಗಳಾದ ( 1 ) ಆಯವ್ಯಯ ( budget ) ತಯಾರಿಸದೆ ಅಧಿಕಾರ ದುರುಪಯೋಗಪಡಿಸಿಕೊಂಡು ಖರ್ಚು ಮಾಡಿರುವುದು.( 2 ) ಸರ್ಕಾರದ ತೆರಿಗೆ ( Tax ) ಕಡಿತ ಮಾಡದಿರುವುದು . ( 3 ) ಸರ್ಕಾರಕ್ಕೆ ಸೆಸ್‌ಗಳನ್ನು ಕಟ್ಟದೆ ದುರುಪಯೋಗಪಡಿಸಿರುವುದು. ( 4 ) ಕೊಟೇಷನ್ ಪಡೆಯದೆ ಖರೀದಿಸಿರುವುದಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಕೋರಲಾಗಿತ್ತು. 

ತನಿಖೆಯು ಆಮೆಗತಿಯಲ್ಲಿ ನಡೆಯುತ್ತಿದ್ದ ಹಿನ್ನಲೆಯಲ್ಲಿ ಎಸ್.ನಾರಾಯಣಸ್ವಾಮಿ ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ತ್ವರಿತಗತಿಯಲ್ಲಿ ತನಿಖೆ ನಡೆಸಲು ಎ.ಸಿ.ಬಿ. ಗೆ ನಿರ್ದೇಶನ ನೀಡಲು ಖ್ಯಾತ ವಕೀಲರಾದ ಬಿ.ಎನ್.ಶ್ರೀನಿವಾಸ್ ರವರ ಮೂಲಕ ಮನವಿ ಮಾಡಿಕೊಂಡರು. 

ಇದನ್ನು ಪುರಸ್ಕರಿಸಿದ ನ್ಯಾಯಾಲಯವು ತನಿಖೆ ನಡೆಸಿ 2 ತಿಂಗಳ ಒಳಗೆ ವರದಿ ನೀಡಲು ಆದೇಶಿಸಿದೆ. ಇದರನ್ವಯ ಕೋಲಾರ ಭ್ರಷ್ಟಾಚಾರ ನಿಗ್ರಹದಳ ಪ್ರಕರಣದ ಸಂಖ್ಯೆ : 4/2020 ರಂತೆ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988 ರಂತೆ ಕಲಂ 13 ( 1 ) ( 2 ) ಐ.ಪಿ.ಸಿ. ಕಲಂ 465 , 466 , 467, 468, 471 ರ ಅನ್ವಯ ಪಿ.ಡಿ.ಒ, ಎಂ.ರಾಮಕೃಷ್ಣ, ಹಾಲಿ ಹರಟಿ ಗ್ರಾಮ ಪಂಚಾಯಿತಿ, ಸುಧಾರಾಣಿ, ಅಧ್ಯಕ್ಷರು, ಐನೋರಹೊಸಹಳ್ಳಿ ಗ್ರಾಮ ಪಂಚಾಯಿತಿ ಇವರ ವಿರುದ್ಧ ಎ.ಸಿ.ಬಿ, ಪೊಲೀಸ್ ಉಪಾಧೀಕ್ಷಕರಾದ ಎಂ.ಎಲ್.ಪುರುಷೋತ್ತಮ್ ಪ್ರಕರಣ ದಾಖಲಿಸಿಕೊಂಡು ಜಿ.ಎನ್.ವೆಂಕಟಾಚಲಪತಿ, ಪೊಲೀಸ್ ನಿರೀಕ್ಷಕರು ಇವರನ್ನು ತನಿಖಾಧಿಕಾರಿಯಾಗಿ ನೇಮಿಸಿದ್ದಾರೆ. ಹೈಕೋರ್ಟ್‌ನಲ್ಲಿ ಪ್ರಕರಣ: ಸದರಿ ಪಿ.ಡಿ.ಒ, ಎಂ.ರಾಮಕೃಷ್ಣ ಮತ್ತಿತರರ ವಿರುದ್ಧ ಬಂಗಾರಪೇಟೆ ತಾಲ್ಲೂಕು ಟಿ.ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ನಿರ್ವಹಿಸುವಾಗ ನಡೆದಿರುವ 2.00 ಕೋಟಿ ರೂಪಾಯಿಗಳಿಗೂ ಮೇಲ್ಪಟ್ಟ ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ನಿರ್ಣಯ ನಾರಾಯಣಸ್ವಾಮಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಿದ್ದು W.P. No.11018 / 2019 ವಿಚಾರಣಾ ಹಂತದಲ್ಲಿರುತ್ತದೆ .

ಪಿ.ಡಿ.ಒ. ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲು : ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಮೀಸಲಾಗಿದ್ದಂತಹ ಜಮೀನನ್ನು ಸದರಿ ಪಿ.ಡಿ.ಒ, ಎಂ.ರಾಮಕೃಷ್ಣ ಬಂಗಾರಪೇಟೆ ತಾಲ್ಲೂಕು ಡಿ.ಕೆ.ಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ನಿರ್ವಹಿಸುವಾಗ ಸುಮಾರು 175 ನಿವೇಶನಗಳನ್ನು ಅಕ್ರಮವಾಗಿ ಖಾತೆ ಮಾಡಿರುವ ಸಂಬಂಧ ವಿ.ಕೃಷ್ಣಮೂರ್ತಿ ಡಿ.ಕೆ.ಹಳ್ಳಿ ಇವರು ದೂರು ನೀಡಿ ಲೋಕಾಯುಕ್ತದಲ್ಲಿ Complaint Number - LOK / BD / 10215 / 2019 ದಾಖಲಾಗಿರುತ್ತದೆ.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...