ಡೆಹ್ರಾಡೂನ್: ಧಾರ್ಮಿಕ ಉತ್ಸವಕ್ಕೆ 5 ಕೋಟಿ ಜನ ಸೇರುವ ನಿರೀಕ್ಷೆ; ಮಹಾಕುಂಭ ಮೇಳ ಕೋವಿಡ್ ಸೂಪರ್ ಸ್ಪ್ರೆಡರ್ ಆಗುವ ಭಯ

Source: VB | By S O News | Published on 4th April 2021, 1:17 PM | National News |

ಡೆಹ್ರಾಡೂನ್: ಮಹಾಕುಂಭ ಆರಂಭದ ದಿನವಾದ ಗುರುವಾರ ಉತ್ತರಾಖಂಡದಲ್ಲಿ 500ಕ್ಕೂ ಹೆಚ್ಚು ಕೊರೋನ ಪ್ರಕರಣಗಳು ವರದಿಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ದೇಶದ ವಿವಿಧೆಡೆಗಳಿಂದ 5 ಕೋಟಿಗೂ ಅಧಿಕ ಮಂದಿ ಈ ಕುಂಭಮೇಳಕ್ಕೆ ಆಗಮಿಸಲಿದ್ದಾರೆ ಎಂಬ ನಿರೀಕ್ಷೆಯ ಹಿನ್ನೆಲೆಯಲ್ಲಿ ಕುಂಭಮೇಳದಲ್ಲಿ ಕೊರೋನ ವೈರಸ್ ಸೋಂಕು ವ್ಯಾಪಕವಾಗಿ ಹರಡುವ ಭೀತಿ ವ್ಯಕ್ತವಾಗಿದೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. ಶುಕ್ರವಾರ ರಾಜ್ಯದಲ್ಲಿ 364 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 2,404ಕ್ಕೇರಿದೆ. 

ವಿಶ್ವವಿಖ್ಯಾತ ಕುಂಭಮೇಳ ಕೊರೋನ ಸೂಪರ್ ಸ್ಪ್ರೆಡರ್  ಆಗದಂತೆ ನೋಡಿಕೊಳ್ಳುವುದು ಸರಕಾರ, ಜನತೆ ಹಾಗೂ ಮಹಾಕುಂಭಕ್ಕೆ ಆಗಮಿಸುವ ಯಾತ್ರಾರ್ಥಿಗಳ ಸಂಘಟಿತ ಹೊಣೆ. ಪರೀಕ್ಷೆ ಹೆಚ್ಚಿಸುವುದು, ಸುರಕ್ಷಾ ಕ್ರಮಗಳನ್ನು ಪಾಲಿಸುವುದು, ಸಾಧ್ಯವಾದಷ್ಟೂ ಹೆಚ್ಚು ಮಂದಿಗೆ ಲಸಿಕೆ ನೀಡುವುದು ಕೋವಿಡ್ ಸ್ಥಿತಿ ಮತ್ತಷ್ಟು ಹದಗೆಡದಂತೆ ಮಾಡಲು ಇರುವ ಮಾರ್ಗಗಳು ಎಂದು ಸೋಶಿಯಲ್ ಡೆವಲಪ್‌ಮೆಂಟ್ ಫಾರ್ ಕಮ್ಯುನಿಟೀಸ್ ಫೌಂಡೇಷನ್‌ನ ಅನೂಪ್ ನೌತಿಯಾಲ್ ಹೇಳಿದ್ದಾರೆ. ರಾಜ್ಯದಲ್ಲಿ ಮೊದಲ ಪ್ರಕರಣ 2020ರಮಾರ್ಚ್‌ನಲ್ಲಿ ಪತ್ತೆಯಾದಾಗಿನಿಂಲೂ ಅವರು ಕೋವಿಡ್ ಅಂಕಿ-ಅಂಶಗಳನ್ನು ವಿಶ್ಲೇಶಿಸುತ್ತಿದ್ದಾರೆ.

ಆದರೆ ರಾಜ್ಯ ಆರೋಗ್ಯ ಕಾರ್ಯದರ್ಶಿ ಅಮಿತ್‌ ನೇಗಿ, ಇಡೀ ದೇಶದಲ್ಲಿ ಪರೀಕ್ಷಾ ಸರಾಸರಿ 18.41 ಶೇ. ಇದ್ದರೆ ನಮ್ಮಲ್ಲಿ 24.75 ಶೇ ಇದೆ. 60 ವರ್ಷ ಮೇಲ್ಪಟ್ಟ ಶೇ.40ರಷ್ಟು ಮಂದಿಗೆ ಲಸಿಕೆ ನೀಡಲಾಗಿದೆ. ಕೋವಿಡ್ ಸೋಂಕು ಹರಡುವುದು ತಡೆಯಲು ಎಲ್ಲ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಉತ್ತರಾಖಂಡ ಹೈಕೋರ್ಟ್ ಈಗಾಗಲೇ ಹರಿದ್ವಾರದಲ್ಲಿ ಪ್ರತಿದಿನ ಕೋವಿಡ್  ಪರೀಕ್ಷೆಯನ್ನು 5 ಸಾವಿರದಿಂದ 50 ಸಾವಿರಕ್ಕೆ ಹೆಚ್ಚಿಸುವಂತೆ ಆದೇಶಿಸಿದೆ. ಎ. 11ರಿಂದ 14ರ ನಡುವೆ ಎರಡು ಕೋಟಿ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಈ ಸಂದರ್ಭದಲ್ಲಿ ಸೋಂಕು ವ್ಯಾಪಕವಾಗಿ ಹರಡುವ ಎಲ್ಲ ಸಾಧ್ಯತೆಗಳಿವೆ. ಒಂದು ತಿಂಗಳ ಅವಧಿಯ ಕುಂಭಮೇಳದಲ್ಲಿ 5 ಕೋಟಿ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ. ಮೊದಲ ರಾಜಸ್ತಾನ ಮಹಾಶಿವರಾತ್ರಿ (ಮಾ.11) ನಡೆದಿದ್ದು, ಸೋಮಾವತಿ ಅಮಾವಾಸ್ಯೆ (ಎ.12), ಬೈಸಾಕಿ ಕುಂಭಸ್ತಾನ (ಎ.14), ಚೈತ್ರ ಪೂರ್ಣಿಮೆ (ಎ.27) ಯಂದು ಕ್ರಮವಾಗಿ ಎರಡು, ಮೂರು ಹಾಗೂ ನಾಲ್ಕನೇ ಸ್ಥಾನ ನಡೆಯಲಿದೆ. ಎ. 13ರಂದು ನವ ಸಂವತ್ಸರ ಮತ್ತು ಎ. 21ರಂದು ರಾಮನವಮಿ ಸಂದರ್ಭದಲ್ಲೂ ಇದರ ಪುಣ್ಯಸ್ನಾನ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...