ಭಟ್ಕಳ: ಮೋಟಾರ್ ಬೈಕ್ ಅಪಘಾತ: ಐವರಿಗೆ ಗಾಯ

Source: S O News Service | By I.G. Bhatkali | Published on 31st October 2020, 11:04 PM | Coastal News |

ಭಟ್ಕಳ: ಚಲಿಸುತ್ತಿದ್ದ ಎರಡು ಮೋಟಾರ್ ಬೈಕ್‍ಗಳು ನಿಯಂತ್ರಣ ತಪ್ಪಿ ಢಿಕ್ಕಿ ಹೊಡೆದ ಪರಿಣಾಮವಾಗಿ ಎರಡೂ ಬೈಕ್‍ನಲ್ಲಿದ್ದ ಐವರು ಸವಾರರು ಗಾಯಗೊಂಡು ಆಸ್ಪತ್ರೆ ಸೇರಿರುವ ಘಟನೆ ತಾಲೂಕಿನ ಕರಿಕಲ್ ಕೃಪಾಲಯ ಆಸ್ಪತ್ರೆ ಸಮೀಪ ನಡೆದಿದೆ.

ಗಾಯಗೊಂಡವರನ್ನು ತಾಲೂಕಿನ ಜಾಲಿಯ ಸುರೇಶ ಮಂಜಪ್ಪ ನಾಯ್ಕ, ಜಾನಕಿ ಸುರೇಶ ನಾಯ್ಕ, ನಿತಿನ್, ಪ್ರೀತಿ ಹಾಗೂ ಅಣ್ಣಪ್ಪ ನಾಯ್ಕ ಎಂದು ಗುರುತಿಸಲಾಗಿದೆ. ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಗಾಯಗೊಂಡವರನ್ನು ಕುಂದಾಪುರ ಚಿನ್ಮಯ ಆಸ್ಪತ್ರೆಗೆ ಸಾಗಿಸಲಾಗಿದೆ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.  

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...