ಹರ್ಷ ಶುಗರ್ಸ್ ನಿಂದ ರೈತರಿಗೆ ಹಬ್ಬದ ಬಂಪರ್ ಕೊಡುಗೆ

Source: S O News Service | By I.G. Bhatkali | Published on 3rd September 2019, 12:01 PM | State News |

ಬೆಳಗಾವಿ - ನೂತನವಾಗಿ ಆರಂಭವಾಗಿರುವ ಹರ್ಷ ಶುಗರ್ಸ್ ಫ್ಯಾಕ್ಟರಿ ಕಬ್ಬು ಬೆಳೆಗಾರರಿಗೆ ಗೌರಿ -ಗಣೇಶ ಹಬ್ಬದ ಸಂದರ್ಭದಲ್ಲಿ ಬಂಪರ್ ಕೊಡುಗೆ ನೀಡಿದೆ.

ಪ್ರವಾಹದಿಂದ ತತ್ತರಿಸಿದ್ದ ರೈತರಿಗೆ ಕಾರ್ಖಾನೆಯ ಈ ಕೊಡುಗೆ ತುಸು ನೆಮ್ಮದಿ ನೀಡಿದಂತಾಗಿದೆ. 

ಈಗಾಗಲೆ ನೀಡಿರು ಕಬ್ಬಿನ ಬಿಲ್ ಜೊತೆಗೆ ಪ್ರತಿ ಟನ್ ಕಬ್ಬಿಗೆ ಹೆಚ್ಚುವರಿಯಾಗಿ 100 ರೂ. ನೀಡುವುದಾಗಿ ಹರ್ಷ ಶುಗರ್ಸ್ ಚೇರಮನ್ ಮತ್ತು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಘೋಷಿಸಿದ್ದಾರೆ. ಅಲ್ಲದೆ ರೈತರ ಖಾತೆಗಳಿಗೆ ಈಗಾಗಲೆ ಹಣವನ್ನು ಜಮಾ ಮಾಡಿದ್ದಾರೆ.

ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರಿಗೆ ಈಗಾಗಲೆ ಎಫ್‍ಆರ್ ಪಿ ದರದಂತೆ ಪ್ರತಿ ಟನ್ ಗೆ 2,612.50 ರೂ. ಜೊತೆಗೆ ಹರ್ಷ ಶುಗರ್ಸ್ 2808 ರೂ.ಗಳನ್ನು ನೀಡಿದೆ. ಅಂದರೆ, 195 ರೂ.ಗಳನ್ನು ಹೆಚ್ಚುವರಿಯಾಗಿ ಕಾರ್ಖಾನೆ ನೀಡಿದಂತಾಗಿದೆ. 

2018-19ನೇ ಸಾಲಿನಲ್ಲಿ ಕಾರ್ಖಾನೆ ಪ್ರಾಯೋಗಿಕವಾಗಿ ಕಬ್ಬು ನುರಿಸಿತ್ತು. ಈ ಹಂಗಾಮು ಯಶಸ್ವಿಯಾಗಲು ಸಹಕರಿಸಿದ ಎಲ್ಲ ರೈತರಿಗೆ ಧನ್ಯವಾದ ಸಲ್ಲಿಸಿರುವ ಅವರು, ಎಲ್ಲರಿಗೂ ಗೌರಿ -ಗಣೇಶ ಹಬ್ಬದ ಶುಭಾಷಯ ಕೋರಿದ್ದಾರೆ.

2019-20ರ ಹಂಗಾಮಿಗೆ ಹತ್ತಿರದ ಕಾರ್ಖಾನೆಗಳು ನಿಗದಿಪಡಿಸುವ ದರ ಮತ್ತು ಕೇಂದ್ರ ಸರಕಾರ ನಿಗದಿಮಾಡುವ ದರವನ್ನವಲಂಬಿಸಿ ಬಿಲ್ ಪಾವತಿ ಮಾಡಲಾಗುವುದು. ಎಲ್ಲ ಕಬ್ಬು ಬೆಳಗಾರರು ಉತ್ತಮ ಕಬ್ಬು ಪೂರೈಸಿ ಕಾರ್ಖಾನೆ ಯಶಸ್ವಿಯಾಗಿ ನಡೆಯುವಂತೆ ಸಹಕರಿಸಬೇಕೆಂದು ಲಕ್ಷ್ಮಿ ಹೆಬ್ಬಾಳಕರ್ ವಿನಂತಿಸಿದ್ದಾರೆ. 

Read These Next

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...