ಗರಿಷ್ಠ ಅಂಕ ಪಡೆದ ಬೈಂದೂರು ತಾಲೂಕಿನ ವಿದ್ಯಾರ್ಥಿಗಳಿಗೆ ನಮ್ಮ ನಾಡ ಒಕ್ಕೂಟ ಬೈಂದೂರು ತಾಲೂಕು ಘಟಕದ ವತಿಯಿಂದ ಸನ್ಮಾನ

Source: SO News | By Laxmi Tanaya | Published on 25th August 2021, 3:33 PM | Coastal News | Don't Miss |

ಶಿರೂರು : ಬೈಂದೂರು ತಾಲೂಕಿನ   ಶಿರೂರಿನ ಸಭಾಂಗಣದಲ್ಲಿ  ನಾಖುದಾ ವೆಲ್ಫೇರ್ ಅಸೋಸಿಯೇಷನ್ ಶಿರೂರು ಇವರ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ನಡೆಯಿತು. 

ನಮ್ಮ ನಾಡ ಒಕ್ಕೂಟ ಬೈಂದೂರು ತಾಲೂಕು ಅಧ್ಯಕ್ಷರಾದ ಅಬ್ದುಲ್ ಸಮೀ ಹಳಗೇರಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕಿನ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ 19 ವಿದ್ಯಾರ್ಥಿಗಳನ್ನು ನಮ್ಮ ನಾಡ ಒಕ್ಕೂಟ ಬೈಂದೂರು ತಾಲೂಕು ಘಟಕದ ವತಿಯಿಂದ ಸನ್ಮಾನಿಸಲಾಯಿತು.

ಕುರಾನ್ ಪಠಣದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ತಾಲೂಕು ಉಪಾಧ್ಯಕ್ಷರಾದ ಮಮ್ದು ಇಬ್ರಾಹಿಮ್ ಸಾಹೇಬ್ ಸ್ವಾಗತ ಮತ್ತು ನಿರೂಪಣೆಯನ್ನು ಮಾಡಿದರು. 

ಸೆಂಟ್ರಲ್ ಕಮಿಟಿ ಸಂಘಟನಾ ಕಾರ್ಯದರ್ಶಿ ಹುಸೇನ್ ಹೈಕಾಡಿ, ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೌಲಾನಾ ಝಮೀರ್ ಅಹ್ಮದ್ ರಶಾದಿ, ಬೈಂದೂರು ತಾಲೂಕು ಅಧ್ಯಕ್ಷರಾದ ಅಬ್ದುಲ್ ಸಮೀ ಹಳಗೇರಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾಧ್ಯಕ್ಷರಾದ ಜನಾಬ್ ಮುಷ್ತಾಕ್ ಅಹ್ಮದ್ ಬೆಳ್ವೆ, ಜಿಲ್ಲಾ ಉಪಾಧ್ಯಕ್ಷರಾದ ಮುಜಾವರ್ ಅಬು ಮುಹಮ್ಮದ್ ಕುಂದಾಪುರ, ಜಿಲ್ಲಾ ಜೊತೆ ಕಾರ್ಯದರ್ಶಿ ಸಯ್ಯದ್ ಅಜ್ಮಲ್ ಶಿರೂರು, ಜಿಲ್ಲಾ ಸಮಿತಿ ಸದಸ್ಯರಾದ ಶಾಬಾನ್ ಹಂಗಳೂರು, ಝಕ್ರಿಯಾ ಅಂಬಾಗಿಲು, ತಾಲೂಕು ಕಾರ್ಯದರ್ಶಿ ಅಲ್ತಾಫ್ ಮುಕ್ರಿ ಶಿರೂರು, ತಾಲೂಕು ಸಂಚಾಲಕರಾದ ಮುಹಮ್ಮದ್ ಹುಸೇನ್ ಪರಿ ಶಿರೂರು, ಮಸ್ಜಿದ್ ಎ  ಅಬ್ದುಲ್ಲಾ ತಲಾಯಿ ಶಿರೂರು ಅಧ್ಯಕ್ಷರಾದ ಅಬೂಬಕರ್ ಸಾಹೇಬ್ ಹಾಗೂ ಇತರರು ಉಪಸ್ಥಿತರಿದ್ದರು.

 ಸನ್ಮಾನಿಸಲ್ಪಟ್ಟ ಪಿಯುಸಿ ವಿಧ್ಯಾರ್ಥಿಗಳು:  ಮುಹಮ್ಮದ್ ಸಮಾನ್ ಶೇಖ್ಜಿ, ಶಿರೂರು (98%), ಮುಹಮ್ಮದ್ ಉವೇಝ್ ಕೆ. ಹಳಗೇರಿ (97%), ಹಮ್ದಾನ್ ಕಾರಾನಿ ಶಿರೂರು (97%), ಅಲ್ ರಿಫಾ  (96%),  ಮುಹಮ್ಮದ್ ಸುಲೈಮ್ ತಾರಾಪತಿ ಬೈಂದೂರು (94.5%),  ಬಿ.ಬಿ. ನಮೀರಾ, ಶಿರೂರು (94%), ಕಾಪ್ಸಿ ಮುಹಮ್ಮದ್ ಇರ್ಬಾಝ್, ಶಿರೂರು (93%),  ಮಫೂಝಾ, (90.3%), ಗಂಗೊಳ್ಳಿ ಮುಹಮ್ಮದ್ ಫಾಹಿಕ್ (90%), ಶಮೀಮ್ ಬಾನು (89.3%).

ಸನ್ಮಾನಿಸಲ್ಪಟ್ಟ ಎಸ್ ಎಸ್ ಎಲ್ ಸಿ ವಿಧ್ಯಾರ್ಥಿಗಳು: ರಮೀನ್ ಕಾರಾನಿ, ಶಿರೂರು (98.2%), ನಮೀರಾ ಸಾನಿಯಾ, (96.2%), ಚೌ ನಹ್ರೀನ್, (93%), ಟಿ. ಅಬ್ದುಲ್ ಸಿಮಾನ್, ಬೈಂದೂರು (92%), ಮುಸ್ಕಾನ್ ಪರಿ, ಶಿರೂರು (90%),  ಸೌಹಾ ಫಾತಿಮಾ, ಶಿರೂರು (89.2%),  ಶೇಖ್ ಮುಹಮ್ಮದ್ ಅಫ್ನಾನ್, ಗೊಳಿಹೊಳೆ (89%), ಆಯಿಷಾ ನೌರಿನ್, ನಾಗೂರು (89%), ಝಾಯಿಗದ್ಕಾರ್ ಫಿಝಾ ಅಂಬರ್, ಶಿರೂರು (89%).

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...