ಬಾಡಿಗೆ ಆಧಾರಿತ ಕೃಷಿ ಯಂತ್ರೋಪಕರಣಗಳ ಬಳಸಿ ಕಡಿಮೆ ವೆಚ್ಚದಲ್ಲಿ ಸುಧಾರಿತ ಕೃಷಿ ಮಾಡಿ ಆದಾಯ ಹೆಚ್ಚಿಸಿಕೊಳ್ಳಲು ರೈತರು ಶ್ರಮಿಸಬೇಕು : ಶಾಸಕ ಅಮೃತ ದೇಸಾಯಿ

Source: SO News | By Laxmi Tanaya | Published on 3rd August 2021, 11:00 PM | State News | Don't Miss |

ಧಾರವಾಡ  : ರೈತರ ಕೃಷಿ ಉತ್ಪನ್ನಗಳನ್ನು ದ್ವಿಗುಣಗೊಳಿಸಿ ಆದಾಯ ಹೆಚ್ಚಿಸಲು ರಾಜ್ಯ ಸರ್ಕಾರವು ರೈತರಿಗೆ ಕೃಷಿ ಕಾರ್ಯಗಳಿಗಾಗಿ ಕಡಿಮೆ ಬಾಡಿಗೆ ದರದಲ್ಲಿ ಕೃಷಿ ಉಪಕರಣಗಳು ಲಭಿಸುವಂತೆ ಸೇವಾ ಕೇಂದ್ರಗಳನ್ನು ಪ್ರತಿ ಹೋಬಳಿ ಮಟ್ಟದಲ್ಲಿ ಸ್ಥಾಪಿಸಲು ಕ್ರಮ ಕೈಗೊಂಡಿದ್ದು, ರೈತರು ಸದುಪಯೋಗ ಮಾಡಿಕೊಳ್ಳಬೇಕೆಂದು ಶಾಸಕ ಅಮೃತ ದೇಸಾಯಿ ಅವರು ಹೇಳಿದರು.

 ಅವರು ಮಂಗಳವಾರ ಬೆಳಿಗ್ಗೆ ಗರಗ ಗ್ರಾಮದಲ್ಲಿ 2021-2022 ನೇ ಸಾಲಿನ ಗರಗ ಹೋಬಳಿ ಮಟ್ಟದ ಬಾಡಿಗೆ ಆಧಾರಿತ ಕೃಷಿ ಯಂತ್ರೋಪಕರಣಗಳ ರೈತ ಸೇವಾ ಕೇಂದ್ರವನ್ನು ಉದ್ಘಾಟಿಸಿ, ಮಾತನಾಡಿದರು.

  ಗರಗ ಗ್ರಾಮದಲ್ಲಿ ಬಾಡಿಗೆ ಆಧಾರಿತ ಕೃಷಿ ಯಂತ್ರೋಪಕರಣಗಳ ರೈತ ಸೇವಾ ಕೇಂದವನ್ನು ಒಂದು  ಕೋಟಿ ರೂ.ಗಳ ವೆಚ್ಚದಲ್ಲಿ ಸ್ಠಾಪಿಸಲಾಗಿದ್ದು, ಇದರಲ್ಲಿ 70 ಲಕ್ಷ ಸರ್ಕಾರದ ವತಿಯಿಂದ ಹಾಗು 30 ಲಕ್ಷ ರೂಗಳನ್ನು ಚಿತ್ರದುರ್ಗದ ವರ್ಷ ಅಸೋಸಿಯೇಟ್ಸ ಸಹಭಾಗಿತ್ವದಲ್ಲಿ ಹೂಡಿಕೆ ಮಾಡಲಾಗಿದೆ. ಬಾಡಿಗೆ ಆಧಾರಿತ ಯಂತ್ರೋಪಕರಣಗಳ ರೈತ ಸೇವಾ ಕೇಂದ್ರದ ಸದುಪಯೋಗವನ್ನು ಪಡೆದುಕೊಳ್ಳಲು ಮತ್ತು ಕೃಷಿ ಆಧಾಯವನ್ನು  ದ್ವಿಗುಣಗೊಳಿಸಲು ರೈತರಿಗೆ ತಿಳಿಸಿದರು.

 ಬಾಡಿಗೆ ಆಧಾರಿತ ಯಂತ್ರೋಪಕರಣಗಳ ರೈತ ಸೇವಾ ಕೇಂದ್ರದಲ್ಲಿ ವಿವಿಧ 44 ಕೃಷಿ ಯಂತ್ರೋಪಕರಣಗಳನ್ನು  ಇಡಲಾಗಿದ್ದು, ಅದರಲ್ಲಿ ಮುಖ್ಯವಾಗಿ ಬಹು ಬೆಳೆ ಒಕ್ಕಣಿ ಯಂತ್ರ, ರೋಟೋವೇಟರ್, ಬಿತ್ತನೆ ಕೂರಿಗೆ, ಕಸ ತೆಗೆಯುವ ಯಂತ್ರ, ನೇಗಿಲು, ಕುಂಟೆ, 4 ಟ್ರಾಕ್ಟರ್‍ಗಳನ್ನು ಇಡಲಾಗಿದೆ. ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ವಿವಿದ ಸೌಲತ್ತುಗಳನ್ನು ಪಡೆಯಲು ರೈತರಿಗೆ ಶಾಸಕರು ವಿನಂತಿಸಿದರು.

  ಧಾರವಾಡ ತಾಲೂಕಿನ ತುಪ್ಪರಿಹಳ್ಳದ ನೀರಾವರಿ ಯೋಜನೆಯನ್ನು  ಕಾರ್ಯರೂಪಕ್ಕೆ ತರಲು ಶ್ರಮಿಸುತ್ತಿರುವುದಾಗಿ ಹೇಳಿದ ಅವರು ಶೀಘ್ರದಲ್ಲಿ ಯೋಜನೆ ಅನುಷ್ಠಾನಗೊಳಿಸಲು ಕ್ರಮ ವಹಿಸಲಾಗುವುದೆಂದು ಶಾಸಕ ಅಮೃತ ದೇಸಾಯಿ ಹೇಳಿದರು.

 ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೆಶಕ ರಾಜಶೇಖರ ಬಿಜಾಪುರ ಅವರು ಮಾತನಾಡಿ, ಬಾಡಿಗೆ ಆಧಾರಿತ ಕೃಷಿ ಯಂತ್ರೋಪಕರಣಗಳ ಸೇವಾ ಕೇಂದ್ರದ ಪ್ರಮುಖ ಉದ್ದೇಶ, ಕಾರ್ಯವೈಖರಿ, ಸೇವಾ ಕೇಂದ್ರದಿಂದ ಆಗುವ ಉಪಯೋಗಗಳು ಕುರಿತು ಮಾಹಿತಿ ನೀಡಿದರು. ಮತ್ತು ಸೇವಾ ಕೇಂದ್ರದ ಸದುಪಯೋಗ ಪಡೆದುಕೊಳ್ಳುಲು ರೈತರಿಗೆ ಮಾಹಿತಿ ತಿಳಿಸಿದರು. 

 ಸಹಾಯಕ ಕೃಷಿ ನಿರ್ದೇಶಕ ಸಿ.ಜಿ. ಮೇತ್ರಿ ಅವರು ಮಾತನಾಡಿ, ಬಾಡಿಗೆ ಆಧಾರಿತ ಯಂತ್ರೋಪಕರಣಗಳ ರೈತ ಸೇವಾ ಕೇಂದ್ರವು ರೈತರಿಗೆ ರಿಯಾಯಿತಿ ದರದಲ್ಲಿ ನೀಡುವ ಸೇವೆಗಳ ಬಗ್ಗೆ ಹಾಗೂ ಸೇವಾ ಕೇಂದ್ರದಲ್ಲಿ ಲಭ್ಯವಿರುವ ಕೃಷಿ ಉಪಕರಣಗಳ ಕುರಿತು ರೈತರಿಗೆ ವಿವರಿಸಿದರು.

   ಕಾರ್ಯಕ್ರಮದಲ್ಲಿ ಗರಗ ಗ್ರಾಮದಲ್ಲಿ ಹೊಸದಾಗಿ ಸ್ಠಾಪಿಸಿದ ಶ್ರೀ ಗುರುಮಡಿವಾಳೇಶ್ವರ  ರೈತ  ಉತ್ಪಾದಕ  ಸಂಘದ ಕಂಪನಿಗೆ ಸರ್ಕಾರಿ ಸಹಾಯಧನ ರೂ,5.00 ಲಕ್ಷ ಗಳ ಚೆಕ್ಕನ್ನು  ಸಂಸ್ಥೆಯ ಅಧ್ಯಕ್ಷ ಅಶೋಕ ದೇಸಾಯಿ ಅವರಿಗೆ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಎಸ್.ಸಿ,ಎಸ್.ಟಿ ಫಲಾನುಭವಿಗಳಿಗೆ ರಿಯಾಯತಿ ದರದಲ್ಲಿ ಕೊಡುವ ತಾಡಪತ್ರಿಗಳನ್ನು ಹಾಗೂ ಸ್ಪೇಯರ್‍ಗಳನ್ನು ಶಾಸಕರು ವಿತರಿಸಿದರು.

 ಗರಗ ಗ್ರಾಮ ಪಂಚಾಯತ ಅಧ್ಯಕ್ಷೆ ಲಕ್ಷ್ಮೀ ನಾಗಪ್ಪ ಕಾಶಿದಾರ, ಪಾಲುದಾರ ಸಂಸ್ಠೆಯಾದ ಚಿತ್ರದುರ್ಗದ ವರ್ಷ ಅಸೋಸಿಯೇಟ್ಸ ಪ್ರತಿನಿಧಿ ನಾಗಾರೆಡ್ಡಿ, ರೈತ ಪ್ರಮುಖರಾದ ಬಸವರಾಜ ಜೀವಣ್ಣವರ, ಮಹೇಶ ಯಲಿಗಾರ, ಕೃಷಿ ಇಲಾಖೆಯ ಅಧಿಕಾರಿಗಳು, ಗರಗ ಹೋಬಳಿಯ ವಿವಿಧ ಗ್ರಾಮಗಳ ರೈತರು, ವಿವಿಧ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
 ಗರಗ ಹೋಬಳಿಯ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸೋಮಲಿಂಗಪ್ಪ  ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...