ಹೊಸದಿಲ್ಲಿ: ಕೇಂದ್ರದ ಕೃಷಿ ಕಾಯ್ದೆಗಳಿಗೆ ವಿರೋಧ ರೈತರಿಂದ ರಾಜಭವನಗಳಿಗೆ ಜಾಥಾ

Source: VB | By S O News | Published on 27th June 2021, 1:31 PM | National News |

ಹೊಸದಿಲ್ಲಿ: ಕೇಂದ್ರ ಸರಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ತಮ್ಮ ಪ್ರತಿಭಟನೆ ಶನಿವಾರ 7 ತಿಂಗಳು ತುಂಬಿದ ಹಿನ್ನೆಲೆಯಲ್ಲಿ ಸಾವಿರಾರು ರೈತರು ಹಲವು ರಾಜ್ಯಗಳಲ್ಲಿ ರಾಜಭವನಗಳಿಗೆ ಜಾಥಾ ನಡೆಸಿದರು ಹಾಗೂ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

1975ರಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ದಿನವಾದ ಜೂನ್ 26ನ್ನು ಸಂಯುಕ್ತ ಕಿಸಾನ್ ಮೋರ್ಚಾದ ಅಡಿಯ ರೈತರ ಒಕ್ಕೂಟ ಕೃಷಿ ರಕ್ಷಿಸಿ, ಪ್ರಜಾಪ್ರಭುತ್ವ ರಕ್ಷಿಸಿ' ದಿನವನ್ನಾಗಿ ಕೂಡ ಆಚರಿಸಿತು.

ಕಳೆದ 7 ತಿಂಗಳಿಂದ ಪ್ರತಿಭಟನೆ ನಡೆಯುತ್ತಿರುವ ದಿಲ್ಲಿಯ ಗಡಿಯಲ್ಲಿ ರೈತರ ಪ್ರತಿಭಟನೆ

ಮುಂದಿನ ತಿಂಗಳು ದಿಲ್ಲಿಯಲ್ಲಿ ಎರಡು ರ‍್ಯಾಲಿ

ಹೊಸದಿಲ್ಲಿ: ಕೃಷಿ ಕಾಯ್ದೆಗಳ ವಿರುದ್ಧದ ಚಳವಳಿಯನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ಮುಂದಿನ ತಿಂಗಳು ದಿಲ್ಲಿಯಲ್ಲಿ ಎರಡು ರ‍್ಯಾಲಿಗಳನ್ನು ನಡೆಸಲಾಗುವುದು ಎಂದು ಭಾರತೀಯ ಕಿಸಾನ್ ಒಕ್ಕೂಟ (ಬಿಕೆಯು)ದ ನಾಯಕ ರಾಕೇಶ್ ಟಿಕಾಯತ್ ಶನಿವಾರ ಹೇಳಿದ್ದಾರೆ.

ದಿಲ್ಲಿಯ ಘಾಝಿಪುರ ಗಡಿಯಲ್ಲಿ ರೈತರೊಂದಿಗೆ ಸಭೆ ನಡೆಸಿರುವ ಟಿಕಾಯತ್, ಸಭೆಯಲ್ಲಿ ಎರಡು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ರೈತರ ಒಂದು ತಂಡ ಜುಲೈ 9ರಂದು ಉತ್ತರಪ್ರದೇಶದ ಶಾಮಿ ಜಿಲ್ಲೆಯಿಂದ ಸಿಂಗು ಗಡಿಯತ್ತ ಟ್ರ್ಯಾಕ್ಟರ್ ಮೂಲಕ ರ‍್ಯಾಲಿ ಆರಂಭಿಸಲಿದೆ. ರೈತರ ಇನ್ನೊಂದು ತಂಡ ಜುಲೈ 24ರಂದು ಬಿಜನೂರಿನಿಂದ ಮೀರತ್ ಮೂಲಕ ಘಾಝಿಪುರ ಗಡಿಯತ್ತ ರ‍್ಯಾಲಿಆರಂಭಿಸಲಿದೆ ಎಂದಿದ್ದಾರೆ.

ಕನಿಷ್ಠ 4 ಲಕ್ಷ ಟ್ರ್ಯಾಕ್ಟರ್ ಹಾಗೂ 25 ಲಕ್ಷ ರೈತರು ಈ ದಿಲ್ಲಿ ಕ್ಯಾಲಿಯಲ್ಲಿ ಪಾಲ್ಗೊಳ್ಳಲು ಸಿದ್ದರಾಗಿದ್ದಾರೆ. ಕೇಂದ್ರ ಸರಕಾರದೊಂದಿಗೆ ಮಾತುಕತೆ ಆರಂಭವಾದರೆ ಈ ಜಾಥಾವನ್ನು ಸ್ಥಗಿತಗೊಳಿಸಲಾಗುವುದು ಎಂದು ರಾಕೇಶ್ ಟೀಕಾಯತ್ ಹೇಳಿದ್ದಾರೆ.

ನಡೆಸಿದರಲ್ಲದೆ, ದಿಲ್ಲಿಯ ಇತರ ಸ್ಥಳಗಳಲ್ಲಿ ಕೂಡ ಪ್ರತಿಭಟನೆ ನಡೆಸಿದರು. ಕರ್ನಾಟಕ, ಪಂಜಾಬ್, ಹರ್ಯಾಣ, ತಮಿಳುನಾಡು, ಪಶ್ಚಿಮಬಂಗಾಳ, ಬಿಹಾರ್, ಮಧ್ಯಪ್ರದೇಶ, ಒಡಿಶಾ, ಆಂಧ್ರಪ್ರದೇಶ, ಉತ್ತರಪ್ರದೇಶ, ಉತ್ತರಾಖಂಡ, ಮಹಾರಾಷ್ಟ್ರ ಹಾಗೂ ತೆಲಂಗಾಣಗಳಲ್ಲಿ ರೈತರು ರಾಜಭವನಕ್ಕೆ ಜಾಥಾ ನಡೆಸಿದರು. ಹೆಚ್ಚಿನ ಕಡೆಗಳಲ್ಲಿ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲು ಸಾಧ್ಯವಾದರೂ ಕೆಲವು ಕಡೆ ಸಾಧ್ಯವಾಗಲಿಲ್ಲ ಎಂದು ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.

ಜಾಥಾ ನಡೆಸಿದ ಪ್ರತಿಭಟನಾಕಾರರನ್ನು ಭೋಪಾಲ, ಬೆಂಗಳೂರು, ಮೈಸೂರು, ದಿಲ್ಲಿ ಹಾಗೂ ಹೈದರಾಬಾದ್‌ನಲ್ಲಿ ಪೊಲೀಸರು ವಶಕ್ಕೆ ಪಡೆದರು. ಪಂಜಾಬ್‌ನಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು ಜಲ ಫಿರಂಗಿ ಪ್ರಯೋಗಿಸಿದರು. ಭಾರತೀಯ ಕಿಸಾನ್ ಒಕ್ಕೂಟದ ಟಿಕಾಯತ್ ಗುಂಪಿನ ಪ್ರಧಾನ ಕಾರ್ಯದರ್ಶಿ ಯುದ್ಧವೀರ್ ಸಿಂಗ್ ಅವರನ್ನು ದಿಲ್ಲಿಯ ಸಿವಿಲ್ ಲೈನ್ಸ್‌ನಲ್ಲಿ ಪೊಲೀಸರು ವಶಕ್ಕೆ ಪಡೆದರು. ಭದ್ರತೆಯ ಹಿನ್ನೆಲೆಯಲ್ಲಿ ಕೇಂದ್ರ ದಿಲ್ಲಿಯ ಮೂರು ಮೆಟ್ರೋ ರೈಲು ನಿಲ್ದಾಣಗಳನ್ನು ಬೆಳಗ್ಗೆ 10ರಿಂದ ಅಪರಾಹ್ನ 2 ಗಂಟೆ ವರೆಗೆ ಮುಚ್ಚಲಾಗಿತ್ತು.

ಮನವಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ, ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ, ಎಲ್ಲಾ ರೈತರಿಗೆ ಕನಿಷ್ಠ ಬೆಂಬಲ ಬೆಲೆ ನೀಡಲು ಕಾಯ್ದೆ ಜಾರಿಗೊಳಿಸಲು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡುವಂತೆ ಆಗ್ರಹಿಸಿತು.
 

ಪ್ರತಿಭಟನೆ ನಿಲ್ಲಿಸುವಂತೆ ರೈತರಿಗೆ ಕೃಷಿ ಸಚಿವರ ಮನವಿ

ಹೊಸದಿಲ್ಲಿ: ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯು ಶನಿವಾರ ಎಂಟನೇ ತಿಂಗಳಿಗೆ ಕಾಲಿರಿಸಿದ್ದು, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಪ್ರತಿಭಟನೆಯನ್ನು ಅಂತ್ಯಗೊಳಿಸುವಂತೆ ರೈತರನ್ನು ಕೋರಿಕೊಂಡಿದ್ದಾರೆ. ಕೃಷಿ ಕಾಯ್ದೆಗಳಲ್ಲಿನ ಯಾವುದೇ ನಿಯಮದ ಬಗ್ಗೆ ಚರ್ಚಿಸಲು ಕೇಂದ್ರವು ಮುಕ್ತ ಮನಸ್ಸು ಹೊಂದಿದೆ ಎಂದು ಅವರು ಟ್ವಿಟ್‌ನಲ್ಲಿ ಪುನರುಚ್ಚರಿಸಿದ್ದಾರೆ. ತೋಮರ್‌ ಅವರು ಅಪೂರ್ಣವಾಗಿ ಅಂತ್ಯಗೊಂಡಿದ್ದ ರೈತರೊಂದಿಗೆ 11 ಸುತ್ತುಗಳ ಮಾತುಕತೆಗಳ ಅಧ್ಯಕ್ಷತೆ ವಹಿಸಿದ್ದರು.

ತಮ್ಮ ಪ್ರತಿಭಟನೆಯು ಏಳು ತಿಂಗಳುಗಳನ್ನು ಪೂರೈಸಿರುವ ಸಂದರ್ಭದಲ್ಲಿ ರೈತರು ದೇಶಾದ್ಯಂತ ಎಲ್ಲ ರಾಜ್ಯಪಾಲರಿಗೆ ಕೃಷಿ ಕಾಯ್ದೆಗಳ ವಿರುದ್ಧ ಅಹವಾಲುಗಳನ್ನು ಸಲ್ಲಿಸಿದರು.

ದಿಲ್ಲಿಯ ಸಿಂಘು, ಟಿಕ್ರಿ ಮತ್ತು ಘಾಝಿಪುರ ಗಡಿಗಳಲ್ಲಿ ಬೀಡುಬಿಟ್ಟಿರುವ ಪ್ರತಿಭಟನಾನಿರತ ರೈತರು ಶನಿವಾರ ಕೃಷಿಯನ್ನು ಉಳಿಸಿ, ಪ್ರಜಾಪ್ರಭುತ್ವ ಉಳಿಸಿ ದಿನ 'ವನ್ನಾಗಿ ಆಚರಿಸಿದರು.

ರೈತರ ನೋವು ಮತ್ತು ಆಕ್ರೋಶಗಳನ್ನು ವಿವರಿಸಿ ರಾಷ್ಟ್ರಪತಿಗಳಿಗೆ ಅಹವಾಲನ್ನು ರವಾನಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ, ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಲ್ಲಿ ಮತ್ತು ರೈತರಿಗೆ ಕನಿಷ್ಠ ಬೆಂಬಲ ಬೆಲೆಯ ಕಾನೂನಾತ್ಮಕ ಖಾತರಿಯನ್ನು ಒದಗಿಸುವಲ್ಲಿ ಅವರ ಹಕ್ಷೇಪಕ್ಕೆ ಆಗ್ರಹಿಸಿದೆ.

ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಲು ರಾಜಧಾನಿ ದಿಲ್ಲಿ ಮತ್ತು ಸುತ್ತುಮುತ್ತಲೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿ ದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಮತ್ತು ಅರೆಮಿಲಿಟರಿ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...