ಕ್ಷೇತ್ರದ ಜನರನ್ನು ಮರೆತ ಶಾಸಕನ ಮನೆ ಎದುರೇ ರೈತಸಂಘದಿಂದ ಪ್ರತಿಭಟನೆ

Source: sonews | By Staff Correspondent | Published on 13th September 2019, 11:21 PM | State News |

ಕೋಲಾರ: ಕ್ಷೇತ್ರವನ್ನು ಮರೆತು ಭ್ರಷ್ಟಚಾರಕ್ಕೆ ಆದ್ಯತೆ ನೀಡಿ ನಗರದ ರಸ್ತೆಗಳನ್ನು ಸರಿಪಡಿಸದ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲು ವಿಪಲವಾಗಿರುವ ಕ್ಷೆತ್ರದ  ಶಾಸಕರಾದ ಕೆ.ಶ್ರೀನಿವಾಸಗೌಡರ ಜನ ವಿರೋದಿ ದೋರಣೆಯನ್ನು ಖಂಡಿಸಿ ರೈತ ಸಂಘದಿಂಧ ಶಾಸಕರ ಮನೆ ಮುಂದೆ ಹೋರಾಟ ಮಾಡಿ ಅಭಿವೃದ್ದಿಯ ಕಡೆ ಗಮನ ಹರಿಸುವಂತೆ ಮನವಿ ನೀಡಿ ಒತ್ತಾಯಿಸಲಾಯಿತು.

ಹೋರಾಟದ ನೆತೃತ್ವ ವಹಿಸಿ ಮಾತನಾಡಿದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ     ಜನರಿಂದ ಆಯ್ಕೆಯಾಗಿ ಜನರ ಮದ್ಯೆಯಿದ್ದು ಜಲ್ವಂತ ಸಮಸ್ಯೆಗಳನ್ನು ಬಗೆಹರಿಸಬೇಕಾದ ಶಾಸಕರು ಇಂದು ಕಾಣೆಯಾಗಿದ್ದಾರೆ. ಹುಡುಕಿಕೊಡಿ ಇಲ್ಲವೇ ಶಾಸಕರೇ ಎಲ್ಲೀದ್ದೀರಾ ಎಂದು ಮತ ಹಾಕಿದ ಕ್ಷೇತ್ರದ ಜನರು ಕೇಳುವಂತಹ ಪರಿಸ್ಥಿತಿ ಇದೆ. ತಮ್ಮ ನಿವಾಸದ ರಸ್ತೆಗಳೇ  ಸಂಪೂರ್ಣವಾಗಿ ಹದಗೆಡುವ ಜೊತೆಗೆ ನಗರ ದೂಳಿನ ನಗರವಾಗಿದೆ. ಜೊತೆಗೆ ನಗರದ ರಸ್ತೆಗಳು ವಾಹನ ಸವಾರರಿಗೆ ಮೃತ್ಯು ಕೂಪಗಳಾಗುವ ಜೊತೆಗೆ ಅಪಘಾತಗಳಾಗಿ ಕೈಕಾಲು ಮುರಿದುಕೊಂಡು ಶಾಶ್ವತವಾಗಿ ಅಂಗವಿಕಲರಾಗುತ್ತಿದ್ದು, ಜನ ಸಾಮಾನ್ಯರು ನಗರದ ಪರಿಸ್ಥಿತಿಯೇ ಈ ರೀತಿ ಇದ್ದರೆ ಇನ್ನೂ ಗ್ರಾಮೀಣ ಪ್ರದೇಶಗಳ ಅಭಿವೃದ್ದಿ ಯಾವ ಮಟ್ಟಕ್ಕೆ ಇರುತ್ತದೆಂದು ಊಹೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಜೊತೆಗೆ ರೈತರ ಒಡನಾಡಿಯಾಗಿರುವ ತಾಲ್ಲೂಕು ಕಚೇರಿ ಸರ್ವೇ ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆ ರೈತರ ಪಾಲಿಗೆ ಮರಣ ಶಾಸನ ಬರೆಯುವ ಇಲಾಖೆಗಳಾಗಿವೆ ಲಂಚವಿಲ್ಲದೆ ದಲ್ಲಾಳಿಗಳ ಸಹಾಯವಿಲ್ಲದೆ. ಯಾವುದೇ ಜನ ಸಾಮಾನ್ಯರ ಕೆಲಸವಾಗುತ್ತಿಲ್ಲ. ದೊಡ್ಡ ದೊಡ್ಡ ಕಾರ್ಪೋರೇಟ್, ರಿಯಲ್ ಎಸ್ಟೇಟ್ ಮಾಪೀಯಾ ಮಾಲೀಕರಿಗೆ ತಾಲ್ಲೂಕು ಕಚೇರಿ ಮತ್ತು ಸರ್ವೇ ಇಲಾಖೆಯನ್ನು ಅಡವಿಟ್ಟು, ಕೆರೆ ಗುಂಡುತೋಪು ಗೋಮಾಳ ಜಮೀನುಗಳಿಗೆ ನಕಲಿ ದಾಖಲೆಗಳನ್ನು ಸೃಷ್ಠಿ ಮಾಡುವ ದೊಡ್ಡ ಜಾಲವೇ ಇಲಾಖೆಯಲ್ಲಿ ಕೆಲಸ ಮಾಡುತ್ತಿದೆ. ಮತ್ತೊಂದೆಡೆ  ಕ್ಷೇತ್ರಾದ್ಯಾಂತ ನಡೆಯುತ್ತಿರುವ ಚೆಕ್‍ಡ್ಯಾಂ ಗಳು, ರಸ್ತೆಗಳ ಗುಣಮಟ್ಟವನ್ನು ಪ್ರಶ್ನೆ ಮಾಡುವಂತಿಲ್ಲದಾಗಿದೆ.  ಇನ್ನೂ ಬೇರೆ ಇಲಾಖೆಗಳನ್ನು ಶಾಸಕರ ಹಿಂಬಾಲಕರು ವಿಭಾಗ ಮಾಡಿಕೊಂಡಿದ್ದಾರೆಂದು ಆರೋಪ ಮಾಡಿದರು.

ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿ ಮಾತನಾಡಿ ಮತ ಹಾಕಿದ ತಪ್ಪಿಗೆ ನಮ್ಮ ಸಮಸ್ಯೆಗಳನ್ನು ಬಗೆಹರಿಸಿ ಎಂದು ಕೈ ಮುಗಿದು ಬೇಡಿಕೊಳ್ಳುವ ಪರಿಸ್ಥಿತಿ ಬಂದಿದೆ. ತಾಲ್ಲೂಕು ಕಚೇರಿ ಮತ್ತು  ಸರ್ವೇ ಇಲಾಖೆಯಲ್ಲಿ ಜನ ಸಾಮಾನ್ಯರ ಕೆಲಸಗಳು ಆಗುತ್ತಿಲ್ಲ.ಮತ್ತು ರೈತನ ಜಮೀನಿನಲ್ಲಿ 1 ಗುಂಟೆ ಬಿ.ಖರಾಬಿದ್ದರೆ ತಿದ್ದುಪಡಿಗಾಗಿ  ವರ್ಷಾನುಗಟ್ಟಲೆ ಅಲೆಯಬೇಕು, ಜೊತೆಗೆ  ಹಣವಿಲ್ಲದೆ 1 ಗುಂಟೆ ಜಮೀನನ್ನು ಸಹ  ಅಳತೆ ಮಾಡುವುದಿಲ್ಲ. ಆದರೆ ರಾತ್ರೋರಾತ್ರಿ ನಕಲಿ ದಾಖಲೆಗಳನ್ನು ಸೃಷ್ಠಿಸಿ ಕೆರೆ, ಗುಂಡು ತೋಪುಗಳನ್ನೇ ಮಾಯ ಮಾಡುತ್ತಿದ್ದಾರೆ.  ಜನ ಸಾಮಾನ್ಯರಿಗೆ ಇನ್ನೂ ರೈತರ ಒಡನಾಡಿಯಾಗಿರುವ ಕೃಷಿ ಉತ್ಪನ್ನ ಮಾರುಕಟ್ಟೆಯ ಅವ್ಯವಸ್ಥೆಯ ಬಗ್ಗೆ ದ್ವನಿಯೆತ್ತುವಂತಿಲ್ಲ, ಸತತವಾಗಿ ಹತ್ತು ವರ್ಷಗಳಿಂದ ಜಾಗದ ಸಮಸ್ಯೆಗೆ ಹೋರಾಟ ಮಾಡಿದರೂ ಸ್ಪಂದನೆ ಮಾಡುವ ತಾಕತ್ತು ಜನ ಪ್ರತಿನಿದಿಗಳಿಗಿಲ್ಲ. ಜೊತೆಗೆ ಮಾರುಕಟ್ಟೆಯೆಂಬುದು ರೈತರನ್ನು ಶೋಷಣೆ ಮಾಡುವ ಇಲಾಖೆಯಾಗಿದೆ. ಅದರ ಜೊತೆಗೆ ರೈತರನ್ನು ಕಾಡುವ ನಕಲಿ ಕೀಟನಾಶಕಗಳು ನಕಲಿ ಬಿತ್ತನೆ ಬೀಜಗಳ ಹಾವಳಿಯ ಜೊತೆಗೆ ಬೆಳೆದ ಬೆಳೆಗೆ ಸೂಕ್ತವಾದ ಬೆಲೆ ಇಲ್ಲದೆ ಖಾಸಗಿ ಸಾಲಕ್ಕೆ ಸಿಲುಕಿ ಆತ್ಮಹತ್ಯೆಯತ್ತ ರೈತ ಮುಖ ಮಾಡುತ್ತಿದ್ದಾನೆ . ಹಾಗೂ ನಗರದ ಕುಡಿಯುವ ನೀರಿನ ಕೆರೆಯಾದ ಅಮ್ಮೇರಹಳ್ಳಿ ಕೆರೆ ಹಾಗೂ ಕ್ಷೇತ್ರದ್ಯಾಂತ ಶಾಸಕರ ಹೆಸರೇಳಿಕೊಂಡು ರಾಜಾರೋಷವಾಗಿ ಆಕ್ರಮ ಮರಳು ಗಾರಿಕೆ ನಡೆಯುತ್ತಿದೆ. ಇಷ್ಟೇಲ್ಲಾ ಅವ್ಯವಸ್ಥೆ ಕ್ಷೇತ್ರದಲ್ಲಿದ್ದರು ಮತ ಪಡೆದು ಅಧಿಕಾರ ಹಿಡಿದಿರುವ ಶಾಸಕರು ಸ್ಪಂದಿಸುತ್ತಿಲ್ಲಾ ಎಂದು ಜನ ಸಾಮಾನ್ಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ಮಾನ್ಯ ಶಾಸಕರು ಕೂಡಲೆ ಪಂಚಾಯಿತಿ ವ್ಯಾಪ್ತಿಯಲ್ಲಿ ಸಭೆ ನಡೆಸಿ ಜನರ ಸಮಸ್ಯೆಯನ್ನು ಬಗೆಹರಿಸಬೇಕು ಹಾಗೂ ಒಂದು ವಾರದೊಳಗೆ ತಮ್ಮ ಕ್ಷೇತ್ರದ ಎಲ್ಲಾ ಅಧಿಕಾರಿಗಳನ್ನು ಸಭೆ ಕರೆದು ಇಲಾಖೇಗಳಲ್ಲಿನ ಅವ್ಯವಸ್ಥೆಗಳನ್ನು ಸರಿಪಡಿಸಿ, ಕಳಪೆ ಕಾಮಗಾರಿಗಳನ್ನು ಮಾಡುತ್ತಿರುವ ಟೆಂಡರ್‍ದಾರರು ಮತ್ತು ಅಧಿಕಾರಿಗಳ ವಿರುದ್ದ ಕ್ರಮ ಕೈಗೊಂಡು ರೈತರ ಒಡನಾಡಿ ಕೃಷಿ ಉತ್ಪನ್ನ ಮಾರುಕಟ್ಟೆಯ ಜಾಗದ ಸಮಸ್ಯೆಯನ್ನು ಬಗೆÀಹರಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಹಾಗೂ ಹದಗೆಟ್ಟಿರುವ ನಗರ ಹಾಗೂ ಗ್ರಾಮೀಣ ಪ್ರದೇಶದ ರಸ್ತೆಗಳನ್ನು ಸರಿಪಡಿಸಿ ಸಾರಿಗೆ ಇಲಾಖೆ ಜಾರಿಗೆ ತಂದಿರುವ ಅವೈಜ್ಞಾನಿಕ ಆದೇಶದ ವಿರುದ್ದ ದ್ವನಿಯೆತ್ತಿ ದಂಡದ ಹೆಸರಿನಲ್ಲಿ ರೈತರ ತರಕಾರಿ ವಾಹನಗಳಿಗೆ ತೊಂದರೆ ಕೊಡುವುದನ್ನು ನಿಲ್ಲಿಸುವಂತೆ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸುವಂತೆ ಮನವಿ ಮಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಶಾಸಕರಾದ ಕೆ,ಶ್ರೀನಿವಾಸಗೌಡರು ಕ್ಷೇತ್ರವನ್ನು ನಾನು ಮರೆತಿಲ್ಲ, ಹತ್ತು ವರ್ಷ ನನ್ನನ್ನು ಹಿಂದಕ್ಕೆ ಹಾಕಿದ್ದೀರಿ ಅದರೆ ಈಗ ಅವಕಾಶ ಸಿಕ್ಕಿದೆ  ಆಡಳಿತ ಪಕ್ಷ ನಮಗೆ ಸ್ಪಂದಿಸುತ್ತಿಲ್ಲ ಅಭಿವೃದ್ದಿಗೆ ಬೇಕಾದ ಅನುಧಾನವನ್ನು ಬಿಡುಗಡೆ ಮಾಡುತ್ತಿಲ್ಲ. ಜೊತೆಗೆ ಸರ್ಕಾರಿ ಇಲಾಖೆಗಳಲ್ಲಿ ಜನ ಸಾಮಾನ್ಯರ ಕೆಲಸ ಮಾಡಲು ಅಧಿಕಾರಿಗಳು ಹಣ ಹಾಗೂ ದಲ್ಲಾಳಿಗಳ ಹಾವಳಿಯಿರುವುದು ನನ್ನ ಗಮನಕ್ಕೂ ಬಂದಿದೆ. ಮತ್ತು ಮಾರುಕಟ್ಟೆ ಜಾಗದ ಸಮಸ್ಯೆ ಒಂದು ತಿಂಗಳಲ್ಲಿ ಬಗೆಹರಿಸುವ ಜೊತೆಗೆ ಕಾಮಗಾರಿಗಳಲ್ಲಿನ ಕಳಪೆ ಗುಣಮಟ್ಟದ ಬಗ್ಗೆ ಸೂಕ್ತ ಅಧಿಕಾರಿಗಳಿಂದ ವರದಿ ತರಿಸಿಕೊಳ್ಳುವ ಜೊತೆಗೆ ನಾನೇ ಖುದ್ದಾಗಿ ಪರೀಶೀಲನೆ ಮಾಡುತ್ತೇನೆ. ಹಾಗೂ ನಗರದ ರಸ್ತೆಗಳ ಅವ್ಯವಸ್ಥೆ ಸರಿಪಡಿಸುವ ಭರವಸೆಯನ್ನು ನೀಡಿದರು.

ಹೋರಾಟದಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಈಕಂಬಳ್ಳಿ ಮಂಜುನಾಥ್, ಜಿಲ್ಲಾದ್ಯಕ್ಷ ಮರಗಲ್ ಶ್ರೀನಿವಾಸ್, ಮಂಗಸಂದ್ರ ನಾಗೇಶ್, ತಿಮ್ಮಣ್ಣ, ವೆಂಕಟೇಶಪ್ಪ, ಸಹದೇವಪ್ಪ, ಮೂರ್ತಿ, ಪುರುಷೋತ್ತಮ್, ಕೊಮ್ಮರಹಳ್ಳಿ ನವೀನ್, ಸುಪ್ರೀಂಚಲ, ನಲ್ಲಾಂಡಹಳ್ಳಿ ಕೇಶವ, ಶಿವು, ಸಾಗರ್,ನವೀನ್, ಮೀಸೆ ವೆಂಕಟೇಶಪ್ಪ, ತೆರ್ನಹಳ್ಳಿ ಆಂಜಿನಪ್ಪ,, ಚಂದ್ರಪ್ಪ, ಕ್ಯಾಸಂಬಳ್ಳಿ ಪ್ರತಾಪ್, ಪ್ರಕಾಶ್,  ಪುತ್ತೇರಿ ರಾಜು, ಮೊಂತಾದವರಿದ್ದರು.


 
 

Read These Next