ಹೊಸದಿಲ್ಲಿ: ರೈತ ಪ್ರತಿಭಟನೆ 100ನೇ ದಿನಕ್ಕೆ ಇಂದು ದಿಲ್ಲಿಯ ಪ್ರಮುಖ ಎಕ್ಸ್‌ಪ್ರೆಸ್‌ವೇ ಬಂದ್

Source: VB | By JD Bhatkali | Published on 6th March 2021, 1:21 PM | National News |

ಹೊಸದಿಲ್ಲಿ: ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ಕಳೆದ ಕೆಲವು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರು ತಮ್ಮ ಪ್ರತಿಭಟನೆಯ 100ನೇ ದಿನವಾದ ಶನಿವಾರ ಹೊಸದಿಲ್ಲಿಯ ಹೊರವಲಯದ ಪ್ರಮುಖ ಎಕ್ಸ್ ಪ್ರೆಸ್ ವೇಯನ್ನು ತಡೆಯಲು ನಿರ್ಧರಿಸಿದ್ದಾರೆ.

ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿ ದಿಲ್ಲಿಯ ಹೊರವಲಯದಲ್ಲಿ ಕಳೆದ ಡಿಸೆಂಬರ್‌ನಿಂದ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ದಿಲ್ಲಿಯ ಹೊರವಲಯದ ವರ್ತುಲವಾಗಿ ರೂಪುಗೊಂಡಿರುವ ಪಶ್ಚಿಮ ಹೊರ ಎಕ್ಸ್‌ಪ್ರೆಸ್‌ ವೇಯ 6 ರಸ್ತೆಗಳಲ್ಲಿ ಎಲ್ಲಾ ಸಂಚಾರವನ್ನು 6 ಗಂಟೆಗಳ ಕಾಲ ತಡೆಯಲು ಉತ್ತರದ ರಾಜ್ಯಗಳಾದ ಪಂಜಾಬ್, ಹರ್ಯಾಣ ಹಾಗೂ ಉತ್ತರಪ್ರದೇಶದ ರೈತರು ನಿರ್ಧರಿಸಿದ್ದಾರೆ ಎಂದು ರೈತ ಒಕ್ಕೂಟದ ನಾಯಕರು ಶುಕ್ರವಾರ ತಿಳಿಸಿದ್ದಾರೆ.

“ಹವಾಮಾನ ಕೂಡ ಹದಗೆಡುತ್ತಿದ್ದು, 100 ದಿನಗಳಿಂದ ನಿರಂತರ ಚಳವಳಿ ನಡೆಸುತ್ತಿರುವ ನಮ್ಮ ಬೇಡಿಕೆಯನ್ನು ಒಪ್ಪಿಕೊಳ್ಳುವಂತೆ ಕೇಂದ್ರ ಸರಕಾರದ ಮೇಲೆ ನೈತಿಕ ಒತ್ತಡ ಹೇರಬೇಕು ಎಂಬುದು ನಮ್ಮ ಭಾವನೆ” ಎಂದು ರೈತರ ಒಕ್ಕೂಟದ ವಕ್ತಾರ ದರ್ಶನ್ ಪಾಲ್ ಹೇಳಿದ್ದಾರೆ.

ಇದು ಸರಕಾರವನ್ನು ದರ್ಬಲಗೊಳಿಸಲಿದೆ ಹಾಗೂ ಕೇಂದ್ರ ಸರಕಾರ ನಮ್ಮೊಂದಿಗೆ ಮತ್ತೊಮ್ಮೆ ಮಾತುಕತೆಗೆ ಕುಳಿತುಕೊಳ್ಳುವಂತೆ ಮಾಡಲಿದೆ ಎಂದು ಅವರು ಹೇಳಿದ್ದಾರೆ.

ಈ ತಿಂಗಳು ಕೊಯ್ಲು ಆರಂಭವಾಗುತ್ತಿದ್ದಂತೆ ಗೆಳೆಯರು ಹಾಗೂ ನೆರೆಯವರು ಗ್ರಾಮಕ್ಕೆ ಹಿಂದಿರುಗಿ ಹೊಲದಲ್ಲಿ ಕೊಯ್ಲಿಗೆ ನರೆವಾಗಲಿದ್ದಾರೆ. ತಾನು ಹಾಗೂ ಇತರ ರೈತರು ಪ್ರತಿಭಟನೆ ಮುಂದುವರಿಸಲಿದ್ದೇವೆ ಎಂದು ಪಾಲ್ ತಿಳಿಸಿದ್ದಾರೆ.

ದಿಲ್ಲಿಯಲ್ಲಿ ಬೇಸಗೆಯಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಲಿದೆ. ಆದರೆ, ಇದು ನಮ್ಮ ಚಳವಳಿಗೆ ಅಡ್ಡಿಯಾಗದು ಎಂದು ಅವರು ಹೇಳಿದ್ದಾರೆ.

''ಈ ಕಾನೂನು ನಮಗೆ ಡೆತ್ ವಾರಂಟ್ ನಂತೆ. ನಾವು ದೀರ್ಘ ಕಾಲ ಪ್ರತಿಭಟನೆ ಮುಂದುವರಿಸಲು ಸಿದ್ಧರಾಗಿದ್ದೇವೆ' ಎಂದು ದರ್ಶನ್ ಪಾಲ್ ತಿಳಿಸಿದ್ದಾರೆ.

Read These Next

ಗೋಕರ್ಣ ಮಹಾಬಲೇಶ್ವರ ದೇವಾಲಯದ ಹೊಣೆ ಇನ್ಮುಂದೆ ನಿವೃತ್ತ ನ್ಯಾಯಾಧೀಶ ಬಿ.ಎನ್.ಶ್ರೀಕೃಷ್ಣ ನೇತೃತ್ವದ ಸಮಿತಿಗೆ. ರಾಮಚಂದ್ರಪುರ ಮಠಕ್ಕೆ ಹಿನ್ನಡೆ.

ನವದೆಹಲಿ : ‌ಉತ್ತರಕನ್ನಡ ಜಿಲ್ಲೆಯ ಕುಮಟಾದ ಗೋಕರ್ಣದ ಪುರಾಣ ಪ್ರಸಿದ್ದ ಶ್ರೀ ಮಹಾಬಲೇಶ್ವರ ದೇವಾಲಯವನ್ನ ಸುಪ್ರೀಂಕೋರ್ಟ್ ನಿವೃತ್ತ ...

ಪಶ್ಚಿಮಬಂಗಾಳ: ರೋಡ್‌ ಶೋನಲ್ಲಿ ಸೇರಿದ ಭಾರೀ ಜನಸ್ತೋಮ; ಇಷ್ಟೊಂದು ಜನ ಸೇರಿದ್ದು ನೋಡಿರಲೇ ಇಲ್ಲ; ಮೋದಿ

ಪಶ್ಚಿಮಬಂಗಾಳದ ಅಸ್ಸನ್‌ಸೋಲ್‌ನಲ್ಲಿ ಶನಿವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಜನಸಂದಣಿಗೆ ಶ್ಲಾಘನೆ ...