ಹೊಸದಿಲ್ಲಿ: 'ನಾವು ಹೋರಾಡುವೆವು, ನಾವು ಗೆಲ್ಲುವೆವು' ದೇಶಾದ್ಯಂತ ರೈತರಿಂದ ಮೊಳಗಿದ ಘೋಷಣೆ; ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆಗೆ 6 ತಿಂಗಳು ಪೂರ್ಣ

Source: VB | By S O News | Published on 27th May 2021, 12:58 PM | National News |

ಹೊಸದಿಲ್ಲಿ: ಕೇಂದ್ರ ಸರಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಚಳವಳಿ 6 ತಿಂಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ರೈತರು ಬುಧವಾರ 'ಕರಾಳ ದಿನ' ಆಚರಿಸಿದ್ದು, ಕರಿ ಪತಾಕೆ ಹಿಡಿದುಕೊಂಡು ದೇಶಾದ್ಯಂತ ಪ್ರತಿಭಟನಾ ರಾಲಿ ನಡೆಸಿದರು ಮತ್ತು ಪ್ರಧಾನ ಮಂತ್ರಿ, , ಇತರ ನಾಯಕರ ಪ್ರತಿಕೃತಿ ದಹಿಸಿ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಕೊರೋನ ಸಾಂಕ್ರಾಮಿಕ ರೋಗದ ನಡುವೆಯೂ ರೈತರ ಒಕ್ಕೂಟ ನೀಡಿದ ಕರೆಗೆ ಬೆಂಬಲ ವ್ಯಕ್ತಪಡಿಸಿ ಪಂಜಾಬ್, ಹರ್ಯಾಣದ ವಿವಿಧ ನಗರ ಹಾಗೂ ಗ್ರಾಮಗಳಲ್ಲಿ, ದಿಲ್ಲಿ ಗಡಿಯಲ್ಲಿ ರೈತ ಪ್ರತಿಭಟನಾಕಾರರು ಕರಿ ಮುಂಡಾಸು ಧರಿಸಿ, ಕರಿ ಪತಾಕೆ ಹಿಡಿದುಕೊಂಡು ಪ್ರತಿಭಟನಾ ರಾಲಿ ನಡೆಸಿ “ನಾವು ಹೋರಾಡುವೆವು ನಾವು ಗೆಲ್ಲುವೆವು' ಎಂದು ಘೋಷಣೆಗಳನ್ನು ಕೂಗಿದರು.

ಹೊಸದಿಲ್ಲಿ ಗಡಿಯ ಸಿಂಘು, ಘಾಝಿಪುರ ಹಾಗೂ ಟಿಕ್ರಿಯಲ್ಲಿ ರೈತ ಪ್ರತಿಭಟನಾಕಾರರು ಕರಿ ತಾಕೆ ಹಾರಿಸಿದರು ಹಾಗೂ ಕೇಂದ್ರ ಸರಕಾರದ ನಾಯಕರ ಪ್ರತಿಕೃತಿ ದಹಿಸಿ ಕೇಂದ್ರ ಸರಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧದ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದರು. ಪಂಜಾಬ್‌ನ ವಿವಿಧ ಪ್ರದೇಶಗಳಲ್ಲಿ ರೈತರು ತಮ್ಮ ಮನೆಗಳ ಮೇಲೆ ಕರಿ ಪತಾಕೆ ಪ್ರದರ್ಶಿಸಿದರು ಮತ್ತು ಪ್ರತಿಕೃತಿಗಳನ್ನು ದಹಿಸಿದರು.

ಕರಿ ಪತಾಕೆಯನ್ನು ಪ್ರತಿಭಟನಾ ಸ್ಥಳಗಳಲ್ಲಿ ಮಾತ್ರ ಆರೋಹಣ ಮಾಡಿರುವುದಲ್ಲ. ಬದಲಾಗಿ ಹರ್ಯಾಣ, ಪಂಜಾಬ್ ಹಾಗೂ ಉತ್ತರಪ್ರದೇಶದ ಗ್ರಾಮಗಳಲ್ಲಿರುವ ಮನೆಗಳಲ್ಲಿ ಹಾಗೂ ವಾಹನಗಳಲ್ಲಿ ಕೂಡ ಆರೋಹಣ ಮಾಡಲಾಗಿದೆ ಎಂದು ಹಿರಿಯ ರೈತ ನಾಯಕ ಅವತಾರ್ ಸಿಂಗ್ ಮೆಹ್ಮಾ ಹೇಳಿದ್ದಾರೆ. "ಕೇಂದ್ರ ಸರಕಾರದ ನಾಯಕರ ಪ್ರತಿಕೃತಿ ದಹಿಸಲಾಗಿದೆ. ನಾವು ಪ್ರತಿಭಟನೆ ಆರಂಭಿಸಿ 6 ತಿಂಗಳು ಆಯಿತು. ಅಧಿಕಾರಾವಧಿಯ 7 ವರ್ಷಗಳನ್ನು ಪೂರೈಸಿದ ಕೇಂದ್ರ ಸರಕಾರ ತಮ್ಮ ಬೇಡಿಕೆಗಳನ್ನು ಆಲಿಸುತ್ತಿಲ್ಲ ಎಂಬ ಸತ್ಯವನ್ನು ನೆನಪಿಸಲು ನಾವು ಕರಾಳ ದಿನ ಆಚರಿಸಿದ್ದೇವೆ" ಎಂದು ಮೆಹ್ಮಾ ಹೇಳಿದ್ದಾರೆ.

ಸಿಂಘು, ಟಿಕ್ರಿ ಹಾಗೂ ಘಾಝಿಪುರ ಸೇರಿದಂತೆ ಎಲ್ಲ ಪ್ರತಿಭಟನಾ ಸ್ಥಳದ ಗಡಿಯಲ್ಲಿ ಮಂಗಳವಾರದಿಂದ ದಿಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ದಿಲ್ಲಿ ಹಾಗೂ ಉತ್ತರಪ್ರದೇಶದ ಗಡಿಯ ಘಾಝಿಪುರದಲ್ಲಿ ಭಾರತೀಯ ಕಿಸಾನ್ ಒಕ್ಕೂಟ (ಬಿಕೆಯು)ದ ನಾಯಕ ರಾಕೇಶ್ ಟಿಕಾಯತ್ ಅವರ ನೇತೃತ್ವದಲ್ಲಿ ನೂರಾರು ರೈತರು ಸೇರಿ ಪ್ರತಿಭಟನೆ ನಡೆಸಿ ಕೇಂದ್ರ ಸರಕಾರದ ಪ್ರತಿಕೃತಿ ದಹಿಸಿದರು. ಯುಪಿ ಗೇಟ್ ಕೆಳಗೆ ಇರುವ ದಿಲ್ಲಿ-ಮೀರತ್ ಎಕ್ಸ್‌ಪ್ರೆಸ್‌ವೇಯಲ್ಲಿ ಕೂಡ ಪ್ರತಿಭಟನಾಕಾರರು ಪ್ರತಿಕೃತಿ ದಹಿಸಿದರು. ಇದನ್ನು ತಡೆಯಲು ಪೊಲೀಸರು ಮುಂದಾದರು. ಈ ಸಂದರ್ಭ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಹೊ ಕೈ ನಡೆಯಿತು.

ಬಿಕೆಯು ಕೆಲವು ಬೆಂಬಲಿಗರು ಕೈಯಲ್ಲಿ ಕರಿಪತಾಕೆ ಹಾಗೂ ಪ್ರದರ್ಶನಾ ಫಲಕವನ್ನು ಹಿಡಿದುಕೊಂಡಿದ್ದರು. ಅಲ್ಲದೆ, ವಿವಾದಾತ್ಮಕ ಕೃಷಿ ಕಾಯ್ದೆಯನ್ನು ಹಿಂಪಡೆಯುವಂತೆ ಆಗ್ರಹಿಸಿದರು.

ಲೂಧಿಯಾನ ಜಿಲ್ಲೆಯ ಸಿಧ್ವಾನ್ ಕಲನ್‌ನಲ್ಲಿ ಮಹಿಳೆಯರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ತರ್ ಹಾಗೂ ಅಮೃತಸರ ಜಿಲ್ಲೆಯಲ್ಲಿ ನಾವು ಹೋರಾಡುತ್ತೇವೆ. ನಾವು ಗೆಲ್ಲುತ್ತೇವೆ" ಎಂದು ಘೋಷಣೆಗಳನ್ನು ಕೂಗುತ್ತಾ ರೈತರ ತಂಡ ಕರಿ ಪತಾಕೆ ಹಿಡಿದು #ರಾಲಿ ನಡೆಸಿತು.

ಬುಧವಾರ ಬಿಡುಗಡೆ ಮಾಡಲಾದ ವೀಡಿಯೊ ಸಂದೇಶದಲ್ಲಿ ಹರ್ಯಾಣ ಭಾರತೀಯ ಕಿಸಾನ್ ಒಕ್ಕೂಟ (ಬಿಕೆಯು) ಅಧ್ಯಕ್ಷ ಗುರುನಾಮ್ ಸಿಂಗ್ ಛದೌನಿ, “ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿರೋಧಿಸಲು ನಾವು ಈ ದಿನವನ್ನು ಆಚರಿಸುತ್ತಿದ್ದೇವೆ. ಇಂದು ನೀವು ಹಾಗೂ ನಿಮ್ಮ ಕುಟುಂಬ ವಿರೋಧ ದಾಖಲಿಸುವ ದಿನ, ನಿಮ್ಮ ಮನೆಯ ಮೇಲೆ, ವಾಹನಗಳಲ್ಲಿ ಕರಿ ಪತಾಕೆ ಹಾರಿಸಿ, ಪ್ರಧಾನಿ ಅವರ ಪ್ರತಿಕೃತಿ ದಹಿಸಿ, ಇದು ನಮ್ಮ ಆರ್ಥಿಕ ಸ್ವಾತಂತ್ರಕ್ಕಾಗಿ ನಡೆಸುತ್ತಿರುವ ಹೋರಾಟ” ಎಂದಿದ್ದಾರೆ.

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...