ಸಿ.ಎಸ್.ಆರ್ ಯೋಜನೆಯಡಿ ಕೆರೆ ಮತ್ತು ಹಳ್ಳಿಗಳನ್ನು ಅಭಿವೃದ್ದಿಪಡಿಸುವಂತೆ ರೈತರ ಆಗ್ರಹ

Source: sonews | By Staff Correspondent | Published on 10th July 2019, 11:21 PM | State News |

ಕೋಲಾರ:    ವೇಮಗಲ್ ಕೈಗಾರಿಕೆಗಳಲ್ಲಿ  ಸ್ಥಳಿಯ ಕಾರ್ಮಿಕರನ್ನು ಹಾಗೂ ಭೂಮಿ ಕಳೆದುಕೊಂಡ ರೈತ ಮಕ್ಕಳನ್ನು ನಿರ್ಲಕ್ಷ ಮಾಡುವ ಜೊತೆಗೆ ಉದ್ಯೋಗವನ್ನು ಹಣಕ್ಕಾಗಿ ಹೊರ ರಾಜ್ಯದ ಕಾರ್ಮಿಕರಿಗೆ ಮಾರಾಟ ಮಾಡುತ್ತಿರುವ ಕಾರ್ಖಾನೆಗಳ ವಿರುದ್ದ ಕ್ರಮ ಕೈಗೊಂಡು ಕೂಡಲೇ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಸಂದರ್ಶನ ನಡೆಸಬೇಕೆಂಧು ಹಾಗೂ ಸಿ.ಎಸ್.ಆರ್ ಯೋಜನೆಯಲ್ಲಿ ಕೆರೆ ಮತ್ತು ಹಳ್ಳಿಗಳನ್ನು ಅಭಿವೃದ್ದಿಪಡಿಸಬೇಕೆಂದು ಒತ್ತಾಯಿಸಿ ರೈತ ಸಂಘದಿಂದ ಚಿಕ್ಕಬಳ್ಳಾಪುರ ಮುಖ್ಯರಸ್ತೆ ಶಿವು ಕಾರ್ಖಾನೆ ಮುಂದೆ ರಸ್ತೆ ತಡೆ  ಮಾಡಿ ಎಸ್, ಐ ಕೇಶವ ಮೂರ್ತಿ ರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.                            

ರಾಜ್ಯ ಉಪಾದ್ಯಕ್ಷ ಕೆ,ನಾರಾಯಣಗೌಡ ಮಾತನಾಡಿ ಜಿಲ್ಲೆಯಲ್ಲಿ ಸಾವಿರಾರು ಜನ ಐ.ಟಿಐ , ಡಿಪ್ಲೋಮೋ, ಬಿ.ಇ, ಮತ್ತಿತರಪ್ರತಿಭಾವಂತ  ಉದ್ಯೋಗ ಆಕಾಂಕ್ಷಿಗಳಿದ್ದರೂ ಸ್ಥಳಿಯ ಕಾರ್ಖಾನೆಗಳಲ್ಲಿ ಸ್ಥಳಿಯ ಕಾರ್ಮಿಕರನ್ನು ಸಂಪೂರ್ಣವಾಗಿ ನಿರ್ಲಕ್ಷೆ ಮಾಡುತ್ತಿರುವುದರಿಂದ ಕೆಲಸಕ್ಕಾಗಿ ನಗರಗಳತ್ತ ವಲಸೆ ಹೋಗಿ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಾಗೂ ಸರ್ಕಾರ ಜಿಲ್ಲೆಯ ಅಭಿವೃದ್ದಿ ಹಾಗೂ ಸ್ಥಳಿಯ ನಿರುದ್ಯೋಗ ಸಮಸ್ಯೆ ನಿವಾರಣೆ ಹೆಸರಿನಲ್ಲಿ ರೈತರ ಕೃಷಿ ಜಮೀನನ್ನಯ ವಶಪಡಿಸಕೊಂಡು ಕಾರ್ಖಾನೆಗಳ ಸ್ಥಾಪನೆಗೆ ನೀಡುತ್ತಿರುವುದುಸ್ವಾಗತಾರ್ಹ  ಹಾಗೂ ಅಭಿಂದನೆಗಳ ಅದರೆ ಕಾರ್ಖಾನೆ ಸ್ಥಾಪನೆ ಮಾಡುವಾಗ ಮಾಲೀಕರು ನೀಡಿರುವ ಭರವಸೆ ಯಾವುದು ಈಡೇರುತ್ತಿಲ್ಲ. ಕಾರ್ಖಾನೆ ಸ್ಥಾಪನೆ ನಂತರ ಸ್ಥಳಿಯ ಕಾರ್ಮಿಕರನ್ನು ಕಾಲ ಕಸದಂತೆ ಕಾಣುವ ಜೊತೆಗೆ ಸ್ಥಳಿಯ ಎಂದರೆ ಕಡೆಗಣಿನೆಯಿಂದ ನೋಡುವ ಎಲ್ಲಾ ಕಾರ್ಖಾನೆಗಳ  ಎಲ್ಲಾ ಹೆಚ್.ಆರ್ ಗಳು ಉದ್ಯೋಗವನ್ನು ಹೊರ ರಾಜ್ಯದ ಕಾರ್ಮಿಕರಿಗೆ ಮಾರಾಟ ಮಾಡುತ್ತಿದ್ದಾರೆ. ಜೊತೆಗೆ ಭೂಮಿ ಕಳೆದುಕೊಂಡ ರೈತರ ಕುಟುಂಬದ ಮಕ್ಕಳಿಗೂ ಉದ್ಯೋಗ ನೀಡುತ್ತಿಲ್ಲ ಹಾಗೂ ಸಿ.ಎಸ್.ಆರ್ ಅನುಧಾನವನ್ನು ಯಾವುದೇ ಹಳ್ಳಿಗಳನ್ನು ಅಭಿವೃದ್ದಿ ಪಡಿಸುತ್ತಿಲ್ಲ. ಇಷ್ಟೇಲ್ಲಾ ಅವ್ಯವಸ್ಥೆಗಳಿದ್ದರೂ ಜನ ಪ್ರತಿನಿದಿಗಳಾಗಲಿ ಜಿಲ್ಲಾಡಳಿತವಾಗಲಿ ಇದರ ಬಗ್ಗೆ ದ್ವನಿ ಎತ್ತದ ಕಾರಣ ಸಂಬಂದ ಪಟ್ಟ ಅಧಿಕಾರಿಗಳ ಮೇಲೆ ನೊಂದ  ರೈತರು ಹಾಗೂ ವಿದ್ಯಾಂತ ನಮ್ಮ ಭೂಮಿ ನಮ್ಮ ನೀರು ಎಲ್ಲಾ ನಮ್ಮದು ಪಡೆದುಕೊಂಡು ನಮ್ಮ ಮಕ್ಕಳು ಹೇಗೆ ಉದ್ಯೋಗ ನೀಡದೆ ವಂಚನೆ ಮಾಡುತ್ತಿದ್ದಾರೆ ಜೊತೆಗೆ ನೆಪ ಮಾತ್ರಕ್ಕೆ ಸ್ತಳಿಯರಿಗೆ ಉದ್ಯೋಗ ನೀಡುತ್ತೇವೆ ಎಂದು ಹರಿಕಥೆ ಹೇಳಿ ಸ್ಥಳಿಯರನ್ನು ಯಾಮಾರಿಸಿ ಬೆಂಗಳೂರು ಪ್ರತಿಷ್ಠಿತ ಹೋಟೆಲ್, ರೆಸಾರ್ಟ್‍ಗಳಲ್ಲಿ ಸಂದರ್ಶನ ಮಾಡುತ್ತಿರುವುದು ಹಾಗೂ ಸ್ಥಳಿಯ ಕಾರ್ಮಿಕ ಮತ್ತು ರೈತ  ವಿರೋದಿನೀತಿ ಅನುಸರಿಸುತ್ತಿರುವ ಎಲ್ಲಾ ಕಾರ್ಖಾನೆಗಳ  ಹೆಚ್.ಆರ್‍ಗಳನ್ನು ವಿರುದ್ದ  ಕ್ರಮ ಕೈಗೊಂಡು ಸ್ಥಳಿಯರಿಗೆ ಹೆಚ್ಚಿನ ಆದ್ಯತೆ ಜೊತೆಗೆ ಸಿ,ಎಸ್.ಆರ್ ಅನುಧಾನದಲ್ಲಿ ಹಳ್ಳಿಗಳನ್ನು ಅಭಿವೃದ್ದಿ ಪಡಿಸಬೇಕು. ಹಾಗೂ ಭೂಮಿ ಕಳೆದಕೊಂಡ ರೈತ ಮಕ್ಕಳಿಗೆ ಉದ್ಯೋಗ ನೀಡಬೇಕೆಂದು ಹಾಗೂ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂಡಂತೆ ಎಲ್ಲಾ ಕಾರ್ಖಾನೆಗಳಲ್ಲಿ ಸ್ಥಳಿಯವಾಗಿ ಸಂದರ್ಶನ ನಡೆಸಿ, ಸ್ಥಳಿಯ ಕಾರ್ಮಿಕರಿಗೆ ಉದ್ಯೋಗ ಒದಗಿಸಬೇಕು ಹಾಗೂ ಸ್ಥಳಿಯರನ್ನು ನಿರ್ಲಕ್ಷೆ ಮಾಡುತ್ತಿರುವ ಕಾರ್ಖಾನೆಯ ಮಾಲೀಕರ ವಿರುದ್ದ ಕ್ರಮ ಕೈಗೊಳ್ಳಬೇಕೆಂಧು ಅಗ್ರಹಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಎಸ್.ಐ ಕೇಶವ ಮೂರ್ತಿರವರು ನಿಮ್ಮ ಈ ಬೆಡಿಕೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ,ಮತ್ತು ಎಲ್ಲಾ ಕಾರ್ಖಾನೆಗಳ  ಸಿ.ಎಸ್.ಆರ್ ಯೋಜನೆಯಲ್ಲಿ ಹಳ್ಳಿಗಳಿಗೆ ಅಧ್ಯತೆ ನೀಡುವಂತೆ ಸಭೆಯನ್ನು ಕರೆದು ತಿಳಿಸುವ ಭರವಸೆಯನ್ನು  ನೀಡಿದರು 

ಈ ಹೋರಾಟದಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಮಂಗಸಂದ್ರ ತಿಮ್ಮಣ್ಣ, ನಾಗೇಶ್, ವೆಂಕಟೇಶ್‍ಪ್ಪ, ನರಸಾಪುರ ಪುರುಷೋತ್ತಮ್, ಈಕಂಬಳ್ಳಿ ಮಂಜುನಾಥ್, ಪುತ್ತೇರಿ ರಾಜು, ವೇಮಗಲ್ ಅಮರನಾರಾಯಣಸ್ವಾಮಿ, ಗಣೇಶ್, ನಟರಾಜ್, ಬೂದಿಕೋಟೆ ಹರೀಶ್,  ಮುಂತಾದವರಿದ್ದರು,
 

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!