ಚಾಲಕ ಪರವಾನಿಗೆ ಮತ್ತು ಇನ್ಸುರೆನ್ಸ್ ಅದಾಲತ್ ನಡೆಸಬೇಕೆಂದು ರೈತ ಸಂಘದಿಂದ ಆಗ್ರಹ

Source: sonews | By Staff Correspondent | Published on 17th September 2019, 10:34 PM | State News |

ಕೋಲಾರ : ಮೋಟರ್ ಕಾಯ್ದೆ ತಿದ್ದುಪಡಿ ಬಳಿಕ ನೂತನ ಸಂಚಾರ ನಿಯಮಗಳ ಬಗ್ಗೆ ಜನ ಸಾಮಾನ್ಯರಲ್ಲಿ ಕರಪತ್ರದ ಮುಖಾಂತರ ಜಾಗೃತಿ ಮೂಡಿಸಿ ಪ್ರತಿ ತಾಲ್ಲೂಕಿನಲ್ಲಿ 3 ದಿನಗಳ ಕಾಲ ಆರ್.ಟಿ.ಓ ಮತ್ತು ಪೊಲೀಸ್ ಇಲಾಖೆ ಸಹಯೋಗದಲ್ಲಿ ಚಾಲಕ ಪರವಾನಿಗೆ ಮತ್ತು ಇನ್ಸುರೆನ್ಸ್ ಬಗ್ಗೆ ಅದಾಲತ್ ನಡೆಸಬೇಕೆಂದು ಒತ್ತಾಯಿಸಿ ರೈತ ಸಂಘದಿಂದ ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಬಿನ್ ಆಂಟೋನಿ ರವರಿಗೆ ಮನವಿ ನೀಡಿ ಆಗ್ರಹಿಸಲಾಯಿತು.

ಮನವಿ ನೀಡಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಸರ್ಕಾರಗಳು ದಿನಕ್ಕೆ ಒಂದಂತೆ ಹೊಸ ಕಾನೂನುಗಳನ್ನು ಜಾರಿಗೆ ಮಾಡಿ ರಾತ್ರೋರಾತ್ರಿ ಆದೇಶಗಳನ್ನು ಜಾರಿ ಮಾಡಿ ಬಿಡುತ್ತಾರೆ. ಆದರೆ ಗ್ರಾಮೀಣ ಪ್ರದೇಶಗಳ ಜನ ಸಾಮಾನ್ಯರು ಇದರ ಬಗ್ಗೆ ಅರಿವಿಲ್ಲದೆ ಪೊಲೀಸರು ವಿದಿಸುವ ದಂಡಕ್ಕೆ ಬೇಸತ್ತು ಹೋಗುತ್ತಿದ್ದಾರೆ. ಒಂದು ಕಡೆ ಜೀವನ ನಿರ್ವಹಣೆ ಕಷ್ಟಕರವಾಗಿರುವ ಸನ್ನಿವೇಶದಲ್ಲಿ ದಿನ ಕೂಲಿ200 ರಿಂದ 300 ಸಂಪಾದನೆ ಮಾಡುವ ಕೂಲಿ ಕಾರ್ಮಿಕರು ಹಾಗೂ ರೈತರು ಬೆಳೆದ ತರಕಾರಿಗಳನ್ನು ಮಾರುಕಟ್ಟೆಗೆ ಸಾಗಿಸುವ ಟೆಂಪೋ ಮತ್ತಿತರ ವಾಹನಗಳನ್ನು ರಸ್ತೆಗಳಲ್ಲಿ ನಿಲ್ಲಿಸಿ, ದಾಖಲೆಗಳನ್ನು ಪರಿಶೀಲನೆ ಮಾಡುವ ಸಮಯದಲ್ಲಿ ಸಮಯಕ್ಕೆ ಸರಿಯಾಗಿಮಾರುಕಟ್ಟೆಗೆ ತರಕಾರಿ ಸರಬರಾಜು ಆಗದೆ ಬೆಲೆ ಕುಸಿತದಿಂದ ರೈತರು ಬರಗಾಲದಲ್ಲಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.

ಹಾಗೂ ಹೊಸದಾಗಿ ಜಾರಿಯಾಗಿರುವ ವಾಹನ ಕಾಯ್ದೆಯ ತಿದ್ದುಪಡಿಯ ಬಳಿಕ ಜಾರಿಗೆ ಬಂದಿರುವ ಹತ್ತಾರು ನಿಯಮಗಳು ಜನ ಸಾಮಾನ್ಯರ ಪಾಲಿಗೆ ನುಂಗಲಾರದ ತುತ್ತಾಗಿದೆ ಎಂದು ಅಸಮದಾನ ವ್ಯಕ್ತಪಡಿಸಿದರು. ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳನಿ ಮಾತನಾಡಿ ಸರ್ಕಾರದ ಕೆಲವು ಆದೇಶಗಳನ್ನು ಸ್ವಾಗತಾರ್ಹ ಮಾಡುತ್ತೇವೆ. ಆದರೆ ಚಾಲಕ ಪರವಾನಿಗೆ ಹಾಗೂ ಇನ್ಸುರೆನ್ಸ್ ಇಲ್ಲದೆ ಇದ್ದಾಗ ವಿಧಿಸುವ ದಂಡಗಳನ್ನು ಕಟ್ಟಲು ಜನ ಸಾಮಾನ್ಯರು ಹರಸಾಹಸ ಪಡುತ್ತಿದ್ದಾರೆ. ಆದರೆ ಆರ್.ಟಿ.ಓ ಕಛೇರಿಯಲ್ಲಿ ಸಂಬಂಧಪಟ್ಟ ದಾಖಲೆಗಳನ್ನು ಪಡೆಯಬೇಕಾದರೆ ಇಲಾಖೆಯ ಸುತ್ತಮುತ್ತಲು ಇರುವ ಚಾಲಕ ತರಬೇತಿ ಶಾಲೆಗಳು ಜನ ಸಾಮಾನ್ಯರ ರಕ್ತವನ್ನು ಹೀರುತ್ತಿದ್ದಾರೆ. ಯಾವುದೇ ಹೊಸ ಕಾಯ್ದೆ ಜಾರಿಗೆ ಬಂದರು ತರಬೇತಿ ಶಾಲೆಗಳಿಗೆ ಚಿನ್ನದ ಮೊಟ್ಟೆ ಇರುವ ಆದೇಶಗಳಾಗುತ್ತಿವೆ.

ಏಕೆಂದರೆ ಜನ ಸಾಮಾನ್ಯರು ನೇರವಾಗಿ ಇಲಾಖೆಯ ಸಂಪರ್ಕ ಇರುವುದಿಲ್ಲ. ದಲ್ಲಾಳಿಯ ಮುಖಾಂತರವೇ ಲೈಸನ್ಸ್ ಹಾಗೂ ಇನ್ಸುರೆನ್ಸ್ ಪಡೆಯಬೇಕಾದರೆ 2000 ರಿಂದ 5000 ಸಾವಿರ ವರೆಗೆ ಹಣ ನೀಡಿ ಸಂಬಂಧಪಟ್ಟ ದಾಖಲೆಗಳನ್ನು ಪಡೆಯಬೇಕಾಗುತ್ತದೆ. ಅದರಲ್ಲೂ ಬರುವ ಅಮಾಯಕ ಜನರಮೇಲೆ ದೌರ್ಜನ್ಯ ಹಾಗೂ ಬೇಜವಾಬ್ದಾರಿಯಿಂದ ಸಂಬಂಧಪಟ್ಟ ಕೆಲವು ದಲ್ಲಾಳಿಗಳು ಮಾಡುತ್ತಾರೆ. ಆ ನಂತರ ದಾಖಲೆ ಪಡೆಯಲು 2 ರಿಂದ 3 ತಿಂಗಳ ಕಾಲ ಅಲೆದಾಡಿ ಪಡೆಯಬೇಕಾಗುತ್ತದೆ. ಮತ್ತೊಂದಡೆ ವಾಹನ ಕಾಯ್ದೆ ನಿಯಮ ಜಾರಿಯಾದ ನಂತರ ಮತ್ತೊಂದು ಜಾರಿಗೆ ಬಂದಿರುವ ಆದೇಶವಾದ ದ್ವಿಚಕ್ರ ವಾಹನ ಚಾಲನೆ ಮಾಡುವವರು ಕಡ್ಡಾಯವಾಗಿ ಶೂವನ್ನು ಧರಿಸಬೇಕೆಂಬುದು ಅವೈಜ್ಞಾನಿಕ ಆದೇಶವಾಗಿದೆ.

ಈ ಆದೇಶದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮಾನ್ಯ ಆರ್.ಟಿ.ಓ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ಪ್ರತಿ ತಾಲ್ಲೂಕಿನಲ್ಲೂ ವಾಹನ ಕಾಯ್ದೆಯ ಸಂಚಾರಿ ನಿಯಮಗಳ ಬಗ್ಗೆ ಜನ ಸಾಮಾನ್ಯರಲ್ಲಿ ಕರ ಪತ್ರದ ಮುಖಾಂತರ ಜಾಗೃತಿ ಮೂಡಿಸಿ ಎಲ್ಲಾ ತಾಲ್ಲೂಕುಗಳಲ್ಲಿ ಪ್ರತಿ ತಾಲ್ಲೂಕಿನಲ್ಲಿ ಮೂರು ದಿನಗಳ ಕಾಲ ಚಾಲಕ ಪರವಾನಿಗೆ ಹಾಗೂ ಇನ್ಸುರೆನ್ಸ್ ಬಗ್ಗೆ ಅದಾಲತ್ನ ಡೆಸುವ ಮೂಲಕ ಜನ ಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕೆಂದು ಮಾನ್ಯರಲ್ಲಿ ಮನವಿ ಮಾಡಿದರು. ಮನವಿ ಸ್ವೀಕರಿಸಿ ಮಾತನಾಡಿದ ಆರ್.ಟಿ.ಓ ಅಧಿಕಾರಿ ಅಂತೋನಿ ಪ್ರತಿ ತಾಲ್ಲೂಕಿನಲ್ಲೂ ಅದಾಲತ್ ನಡೆಸಲು ನಮ್ಮ ಹಿರಿಯ ಅಧಿಕಾರಿಗಳ ಅನುಮತಿ ಬೇಕಾಗಿದೆ. ನಿಮ್ಮ ಮನವಿ ಜನಪರವಾಗಿರುವುದರಿಂದ ನಾವು ಹಿರಿಯ ಅಧಿಕಾರಿಗಳು ಮತ್ತು ಪೊಲೀಸ್ ಸಹಯೋಗದಲ್ಲಿ ಅದಾಲತ್ ನಡೆಸುವ ಬರವಸೆ ನೀಡುವ ಜೊತೆಗೆ ಇಲಾಖೆಯ ಸುತ್ತಲೂ ಇರುವ ದಲ್ಲಾಳಿಗಳ ಹಾವಳಿ ಬಗ್ಗೆ ಸಾರ್ವಜನಿಕರ ದೂರುಗಳು ಹೆಚ್ಚಾಗಿದ್ದು, ಇವರ ಹಾವಳಿಗೆ ಕಡಿವಾಣ ಹಾಕುವ ಭರವಸೆ ನೀಡುವ ಜೊತೆಗೆ ಜನ ಸಾಮಾನ್ಯರು ಯಾವುದೇ ದಾಖಲೆ ಪಡೆಯಬೇಕಾದರೆ ನೇರವಗಿ ನಮ್ಮನ್ನು ಸಂಪರ್ಕ ಮಾಡ ಬಹುದೆಂದು ಈ ಸಂದರ್ಭದಲ್ಲಿ ಭರವಸೆ ನೀಡಿದರು. ಮನವಿ ನೀಡುವಾಗ ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್, ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಹ.ಸೇ.ಜಿಲ್ಲಾಧ್ಯಕ್ಷ ಹುಲ್ಕೂರು ಹರಿಕುಮಾರ್, ಸುಪ್ರೀಂಚಲ, ಮಂಗಸಂದ್ರ ನಾಗೇಶ್, ತಿಮ್ಮಣ್ಣ, ವೆಂಕಟೇಶಪ್ಪ, ಪ್ರಸನ್ನಕುಮಾರ್, ಸಂತೋಷ್, ಪುರುಶೋತ್ತಮ್, ತೆರ್ನಹಳ್ಳಿ ಆಂಜಿನಪ್ಪ, ಆಂಬ್ಲಿಕಲ್ ಮಂಜುನಾಥ್, ಮುದುವಾಡಿ ಚಂದ್ರಪ್ಪ, ಮುಂತಾದವರಿದ್ದರು.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...