ಜಮೀನಿಗೆ ತೆರಳಿದ ಕೃಷಿಕ ಸಾವು

Source: sonews | Published on 22nd July 2019, 8:08 PM | Coastal News | Don't Miss |

ಭಟ್ಕಳ: ಇಲ್ಲಿನ ಮುರ್ಡೇಶ್ವರದ ಮಾವಳ್ಳಿ-1 ಬಸ್ತಿಮಕ್ಕಿ ಪಟ್ರುಗದ್ದೆಯಲ್ಲಿ ಕೃಷಿಕನೋರ್ವ ಜಮೀನಿಗೆ ಹೋದ ವೇಳೆ ಅಸ್ವಾಭಾವಿಕ ರೀತಿಯಲ್ಲಿ ಬಿದ್ದು ಮೃತಪಟ್ಟಿರುವ ಬಗ್ಗೆ ಮುರ್ಡೇಶ್ವರ ಠಾಣೆಯಲ್ಲಿ ಶನಿವಾರದಂದು ರಾತ್ರಿ ದಾಖಲಾಗಿದೆ. ಮೃತ ಕೃಷಿಕ ಸುಕ್ರಾ ನಾಯ್ಕ(65) ಮಾವಳ್ಳಿ-1 ಬಸ್ತಿಮಕ್ಕಿ ಪಟ್ರುಗದ್ದೆ ಎಂದು ತಿಳಿದು ಬಂದಿದೆ. ಮುರ್ಡೇಶ್ವರ ಠಾಣೆಯಲ್ಲಿ ಮೃತನ ಸೊಸೆ ಭಾರತಿ ಉಮೇಶ ನಾಯ್ಕ ನೀಡಿದ ಮಾಹಿತಿಯಂತೆ ಮೃತನು ಮನೆಯಿಂದ ಜಮೀನು ಕೆಲಸಕ್ಕೆ ಹೋದವರು ಮರಳಿ ಬರದೆ ಇದ್ದುದ್ದರಿಂದ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಭಾರತಿಯ ಮೈದುನನ ಹೆಂಡತಿ ಕಲ್ಪನಾ ಸದಾನಂದ ನಾಯ್ಕ ಇವರು ಗದ್ದೆ ಹತ್ತಿರ ಹೋಗಿ ನೋಡಿದಾಗ ಕಲ್ಲು ಧರೆಯ ಮೇಲೆ ಮೃತ ಬಿದ್ದಿರುವದು ನೋಡಿದ್ದಾರೆ. ತಕ್ಷಣಕ್ಕೆ ಆರ್.ಎನ್.ಎಸ್. ಆಸ್ಪತ್ರೆಗೆ ತಂದು ವೈದ್ಯಾಧಿಕಾರಿಗಳಿಂದ ಪರೀಕ್ಷಿಸಿದಾಗ ಮೃತ ಪಟ್ಟಿರುವದು ದೃಢಪಡಿಸಿದ್ದಾರೆ. 
ಈ ಬಗ್ಗೆ ಮುರ್ಡೇಶ್ವರ ಠಾಣೆಯಲ್ಲಿ ಮೃತನ ಸೊಸೆ ಭಾರತಿ ಉಮೇಶ ನಾಯ್ಕ ದೂರು ನೀಡಿದ್ದು, ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಳ್ಳಲಾಗಿದೆ.

Read These Next

ನದಿಗೆ ಕೊಳಚೆ ನೀರು ಸೇರ್ಪಡೆ: ಮಣ್ಕುಳಿ ಮತ್ತು ಮಾರುತಿ ನಗರ ಅಭಿವೃದ್ಧಿ ಸಮಿತಿಯಿಂದ ಪಂಚಾಯತಗೆ ಮನವಿ ಸಲ್ಲಿಕೆ’

ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು - ಸಚಿವ ಜಗದೀಶ ಶೆಟ್ಟರ್

ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು - ಸಚಿವ ಜಗದೀಶ ಶೆಟ್ಟರ್