ಎಂಎಸ್‌ಪಿ ಕುರಿತು ಚರ್ಚೆಯಾಗದೆ ಪ್ರತಿಭಟನಾ ಸ್ಥಳ ತ್ಯಜಿಸಲಾರೆವು: ರಾಕೇಶ್ ಟೆಕಾಯತ್

Source: VB News | By I.G. Bhatkali | Published on 30th November 2021, 3:13 PM | National News |

ಹೊಸದಿಲ್ಲಿ: ಕನಿಷ್ಠ ಬೆಂಬಲ ಬೆಲೆ ಹಾಗೂ ಇತರ ವಿಷಯಗಳ ಕುರಿತು ಚರ್ಚೆ ನಡೆಸದೇ ಇದ್ದರೆ, ಪ್ರತಿಭಟನಾ ಸ್ಥಳವನ್ನು ರೈತರು ತ್ಯಜಿಸಲಾರರು ಎಂದು ಭಾರತೀಯ ಕಿಸಾನ್ ಒಕ್ಕೂಟ (ಬಿಕೆಯು)ದ ನಾಯಕ ರಾಕೇಶ್ ಟಿಕಾಯತ್ ಸೋಮವಾರ ಹೇಳಿದ್ದಾರೆ.

ದೇಶದಲ್ಲಿ ಯಾವುದೇ ಪ್ರತಿಭಟನೆ ನಡೆಯಬಾರದು ಎಂದು ಕೇಂದ್ರ ಸರಕಾರ ಬಯಸುತ್ತಿದೆ. ಆದರೆ, ಇತರ ವಿಷಯಗಳು ಸೇರಿದಂತೆ ಕನಿಷ್ಠ ಬೆಂಬಲ ಬೆಲೆಯ ಬಗ್ಗೆ ಯಾವುದೇ ಚರ್ಚೆ ನಡೆಯದೆ ನಾವು ಪ್ರತಿಭಟನಾ ಸ್ಥಳ ತ್ಯಜಿಸಲಾರೆವು ಎಂದು ಟಿಕಾಯತ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವ ಮಸೂದೆ-2021 ಅನ್ನು ಅಂಗೀಕರಿಸಿದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದು ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆ ಸಂದರ್ಭ ಮೃತಪಟ್ಟ ಎಲ್ಲ 750 ರೈತರಿಗೆ ಸಲ್ಲಬೇಕಾದ ಗೌರವ ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ಇತರ ವಿಷಯಗಳು ಈಗಲೂ ಪರಿಹಾರವಾಗದೇ ಬಾಕಿ ಇರುವುದರಿಂದ ಪ್ರತಿಭಟನೆ ಮುಂದುವರಿಯಲಿದೆ ಎಂದರು.

Read These Next

ಬರ್ಮಿಂಗ್ ಹ್ಯಾಮ್ ಕಾಮನ್ ವೆಲ್ತ್ ಗೇಮ್ಸ್ ಗೆ ವರ್ಣರಂಜಿತ ತೆರೆ: 22 ಚಿನ್ನ, 16 ಬೆಳ್ಳಿ, 23 ಕಂಚಿನ ಪದಕದೊಂದಿಗೆ ಭಾರತಕ್ಕೆ ನಾಲ್ಕನೇ ಸ್ಥಾನ

ಬರ್ಮಿಂಗ್ ಹ್ಯಾಮ್ ಕಾಮನ್ ವೆಲ್ತ್ ಗೇಮ್ಸ್ ಗೆ ವರ್ಣರಂಜಿತ ತೆರೆ: 22 ಚಿನ್ನ, 16 ಬೆಳ್ಳಿ, 23 ಕಂಚಿನ ಪದಕದೊಂದಿಗೆ ಭಾರತಕ್ಕೆ ನಾಲ್ಕನೇ ...

ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಗೂ ಮಾತನಾಡಲು ಬಿಡಿ, ನಿಮ್ಮಲ್ಲಿ ತಾಳ್ಮೆಯಿಲ್ಲದಿದ್ದರೆ ರೋಗಿಗಳಾಗಿಬಿಡುತ್ತೀರಿ': ನಿರ್ಗಮಿತ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು

ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಗೂ ಮಾತನಾಡಲು ಬಿಡಿ, ನಿಮ್ಮಲ್ಲಿ ತಾಳ್ಮೆಯಿಲ್ಲದಿದ್ದರೆ ರೋಗಿಗಳಾಗಿಬಿಡುತ್ತೀರಿ': ನಿರ್ಗಮಿತ ಉಪ ...