ಜನತಾ ಪತ್ತಿನ ಸಹಕಾರಿ ಸಂಘದಲ್ಲಿ ಪ್ರಧಾನ ವ್ಯವಸ್ಥಾಪಕರಿಗೆ ಬೀಳ್ಕೊಡುಗೆ

Source: sonews | By Staff Correspondent | Published on 2nd August 2020, 2:19 PM | Coastal News |

ಭಟ್ಕಳ: ಇಲ್ಲಿನ ಜನತಾ ಪತ್ತಿನ ಸಹಕಾರಿ ಸಂಘದಲ್ಲಿ ಪ್ರಧಾನ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಿ.ಎಲ್.ನಾಯ್ಕ ಅವರು ಸೇವಾ ನಿವೃತ್ತಿ ಹೊಂದಿದ ಪ್ರಯುಕ್ತ ಅವರನ್ನು ಸಂಘದ ಸಭಾಂಗಣದಲ್ಲಿ ಅಧ್ಯಕ್ಷ ಮಂಕಾಳ ವೈದ್ಯ ಹಾಗೂ ನಿರ್ದೇಶಕರುಗಳು ಆಡಳಿತ ಮಂಡಳಿಯ ಪರವಾಗಿ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಟ್ಟರು. 

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಮಂಕಾಳ ವೈದ್ಯ ಅವರು ಡಿ. ಎಲ್. ನಾಯ್ಕ ಅವರು ನಮ್ಮ ಸಂಘದ ಆರಂಭದಿಂದ ಇಲ್ಲಿಯ ತನಕ 35 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತಿಯಾಗುತ್ತಿದ್ದು ಅವರ ನಿವೃತ್ತಿಯ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.  ಸಂಘದ ಆರಂಭದಲ್ಲಿ ಗುಮಾಸ್ತರಾಗಿ ಸೇರಿದ ಅವರು ನಂತರ ಒಂದೊಂದೇ ಹುದ್ದೆಯಲ್ಲಿ ಭಡ್ತಿಯನ್ನು ಪಡೆದು ಪ್ರಧಾನ ವ್ಯವಸ್ಥಾಪಕರ ಹುದ್ದೆಯ ತನಕ ಸಂಘದ ಅಭಿವೃದ್ಧಿಗಾಗಿ ಉತ್ತಮ ಕೆಲಸ ಮಾಡಿದ್ದಾರೆ. ಅವರು ನಿವೃತ್ತಿಯಾಗುವ ದಿನವೂ ಕೂಡಾ ತುಂಬಾ ಉತ್ತಮವಾದ ದಿನವಾಗಿದ್ದು ಶ್ರಾವಣ ಮಾಸದ ಶುಕ್ರವಾರ ಎಲ್ಲರಿಗೂ ಶುಭವನ್ನುಂಟು ಮಾಡಲಿ ಎಂದೂ ಹಾರೈಸಿದರು. 

ಉಪಾಧ್ಯಕ್ಷ ಪರಮೇಶ್ವರ ದೇವಡಿಗ ಅವರು ಮಾತನಾಡಿ ಡಿ.ಎಲ್.ನಾಯ್ಕ ಅವರ ಸುಧೀರ್ಘ ಸೇವೆಯನ್ನು ಪ್ರಶಂಶಿದರಲ್ಲದೇ ಅವರ ನಿವೃತ್ತಿಯಾದ ನಂತರವೂ ಕೂಡಾ ಅವರ ಜೊತೆಗೆ ತಮ್ಮ ಸಂಘ ಹಾಗೂ ನಿರ್ದೇಶಕರಿದ್ದೇವೆ ಎಂದು ಭರವಸೆ ನೀಡಿದರು. 

ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಧಾನ ವ್ಯವಸ್ಥಾಪಕ ದುರ್ಗಪ್ಪ ಎಲ್. ನಾಯ್ಕ ಅವರು ತಮ್ಮ ಸೇವಾ ಅವಧಿಯಲ್ಲಿ ಸಹಕಾರ ನೀಡಿದ ಎಲ್ಲಾ ನಿರ್ದೇಶಕರುಗಳಿಗೆ, ಹಾಗೂ ತಾವು 2 ವರ್ಷ 7 ತಿಂಗಳುಗಳ ಕಾಲ ಪ್ರಧಾನ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುವ ಸಮಯದಲ್ಲಿ ಅಧ್ಯಕ್ಷರು ಹಾಗೂ ಎಲ್ಲಾ ನಿರ್ದೇಶಕರುಗಳು ನೀಡಿದ ಸಹಕಾರ ಸ್ಮರಿಸಿದರಲ್ಲದೇ ತಮ್ಮ ಸಿಬ್ಬಂದಿಗಳ ಸಹಕಾರ ಕೂಡಾ ಉತ್ತಮವಾಗಿದ್ದು ಕಾರ್ಯ ನಿರ್ವಹಣೆ ಸುಗಮವಾಯಿತು ಎಂದರು. ತಮಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದ ಅವರು ಸಂಘ ಉತ್ತಮವಾಗಿ ಬೆಳೆಯಲಿ ಎಂದೂ ಶುಭ ಹಾರೈಸಿದರು. 

ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರುಗಳಾದ ನಾಗಪ್ಪ ಪೊಮ್ಮ ನಾಯ್ಕ, ಕೃಷ್ಣ ನಾಯ್ಕ ಆಸರಕೇರಿ, ಕೃಷ್ಣಾನಂದ ಪೈ, ಬಾಬುರಾಯ ಕುಬಾಲ, ತಿಮ್ಮಣ್ಣ ಜಟ್ಟ ನಾಯ್ಕ, ಪರಮೇಶ್ವರ ಹೊನ್ನಪ್ಪ ನಾಯ್ಕ, ವೆಂಕಟ್ರಮಣ ಮೊಗೇರ, ತಿಮ್ಮಪ್ಪ ಜಟ್ಟ ನಾಯ್ಕ, ಗೊಯ್ದ ಮಂಗಳ ಗೊಂಡ, ರಾಮಚಂದ್ರ ಕಿಣಿ, ಗೀತಾ ನಾರಾಯಣ ನಾಯ್ಕ, ಲಕ್ಷ್ಮೀ ಮಾದೇವ ನಾಯ್ಕ, ಪ್ರಭಾರ ಪ್ರಧಾನ ವ್ಯವಸ್ಥಾಪಕರಾಗಿ ಅಧಿಕಾರ ವಹಿಸಿಕೊಂಡ ಶಾಖಾ ವ್ಯವಸ್ಥಾಪಕ ಎಂ.ಎಸ್. ನಾಯ್ಕ, ಸಿಬ್ಬಂದಿಗಳು ಉಪಸ್ಥಿತರಿದ್ದರು. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...