ಉಡುಪಿ ಆಸ್ಪತ್ರೆಯ ಎಡವಟ್ಟು, ತಂದೆಯ ಮೃತದೇಹ ಬದಲಿಗೆ ಯುವಕನ ಮೃತದೇಹ ಕೊಟ್ಟ ಸಿಬ್ಬಂದಿ

Source: S.O. News Service | Published on 23rd August 2020, 6:23 PM | Coastal News | Don't Miss |

ಕುಂದಾಪುರ:  ಉಡುಪಿ ಜಿಲ್ಲಾಸ್ಪತ್ರೆಯ ಆರೋಗ್ಯ ಸಿಬ್ಬಂದಿಗಳ ಎಡವಟ್ಟಿನಿಂದ ಕೊರೋನಾ ಸೋಂಕಿತ ವ್ಯಕ್ತಿಯ ಮೃತದೇಹದ ಬದಲು, ಬೇರೆ ಯುವಕನ ಮೃತದೇಹವನ್ನು ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲು ಮುಂದಾಗಿರುವ ವಿಚಿತ್ರ ಘಟನೆ ಕುಂದಾಪುರದಲ್ಲಿ ರವಿವಾರ ನಡೆದಿದೆ.

ಕೋಟೇಶ್ವರ ಸಮೀಪದ ನೇರಂಬಳ್ಳಿಯ 60 ವರ್ಷ ಪ್ರಾಯದ ವ್ಯಕ್ತಿ, ಬೆನ್ನು ನೋವಿನ ಚಿಕಿತ್ಸೆಗಾಗಿ ಕುಂದಾಪುರ ಆಸ್ಪತ್ರೆಗೆ ದಾಖಲಾಗಿದ್ದರು. ಜು.30ರಂದು ಕೊರೋನಾ ಪಾಸಿಟಿವ್ ದೃಢ ಪಟ್ಟ ಹಿನ್ನೆಲೆಯಲ್ಲಿ ಆ ವ್ಯಕ್ತಿಯನ್ನು ಉಡುಪಿ ಕೋವಿಡ್ ಆಸ್ಪತ್ರೆಗೆ ವರ್ಗಾಯಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆ ವ್ಯಕ್ತಿ ಇಂದು ಬೆಳಗ್ಗೆ ಮೃತಪಟ್ಟರು ಎಂದು ತಿಳಿದು ಬಂದಿದೆ.
ಮನೆಯವರ ಒತ್ತಾಯದಂತೆ ಮೃತದೇಹವನ್ನು ಅಂತ್ಯಕ್ರಿಯೆ ನಡೆಸಲು ಕುಂದಾಪುರ ಸಂಗಮ್ ಸಮೀಪದ ಸ್ಮಶಾನಕ್ಕೆ ತರ ಲಾಗಿತ್ತು. ಸ್ಮಶಾನದಲ್ಲಿ ಮೃತದೇಹದ ಅಂತಿಮ ದರ್ಶನ ಪಡೆಯಲು ಅವಕಾಶ ನೀಡುವಂತೆ ಮನೆ ಯವರು ಒತ್ತಾಯಿಸಿದರು. ಅದರಂತೆ ಐದು ಮಂದಿಗೆ ಮೃತದೇಹ ನೋಡಲು ಅವಕಾಶ ಕಲ್ಪಿಸಲಾಯಿತು. ಆಗ ಮೃತದೇಹ ಅದಲು ಬದಲು ಆಗಿರುವುದು ಬೆಳಕಿಗೆ ಬಂತು. ಅಲ್ಲಿ 60ವರ್ಷ ಪ್ರಾಯದ ವ್ಯಕ್ತಿಯ ಬದಲು ಯುವಕನ ಮೃತದೇಹವನ್ನು ತರಲಾಗಿತ್ತು.

ಸ್ಮಶಾನದಲ್ಲಿಯೇ ಪ್ರತಿಭಟನೆ: ಆಸ್ಪತ್ರೆಯ ಬೇಜಾವಬ್ದಾರಿತನದ ವಿರುದ್ಧ ಮೃತರ ಮನೆಯವರು ಹಾಗೂ ಸಾರ್ವಜನಿಕರು ಸ್ಮಶಾನದಲ್ಲಿಯೇ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
‘ನಮ್ಮ ತಂದೆ ಆರೋಗ್ಯವಾಗಿದ್ದರು. ಅವರನ್ನು ಕರೆದುಕೊಂಡು ಹೋಗಿ ಇವರು ಕೊಂದು ಹಾಕಿದ್ದಾರೆ. ಈಗ ಯಾರದ್ದೋ ಮೃತದೇಹ ತಂದು ನಮ್ಮನ್ನು ಮೋಸ ಮಾಡುತ್ತಿದ್ದಾರೆ. ಕೊರೋನ ವಿಷಯದಲ್ಲಿ ಎಲ್ಲರೂ ಗೋಲ್ ಮಾಲ್ ಮಾಡುತ್ತಿದ್ದಾರೆ. ಈ ರೀತಿ ಮೃತದೇಹವನ್ನು ಅದಲು ಬದಲು ಮಾಡಿದವರು ಯಾವ ರೀತಿ ಚಿಕಿತ್ಸೆ ನೀಡಿರಬಹುದು’ ಎಂದು ಮನೆಯವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ದಿಕ್ಕಾರ ಘೋಷಣೆ ಕೂಗುತ್ತ ನ್ಯಾಯ ದೊರಕಿಸುವಂತೆ ಒತ್ತಾಯಿಸಿದ ಪ್ರತಿ ಭಟನಕಾರರು, ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವಂತೆ ಆಗ್ರಹಿಸಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಕುಂದಾಪುರ ಸಹಾಯಕ ಆಯುಕ್ತ ರಾಜು, ತಾಲೂಕು ಆರೋಗ್ಯಾಧಿಕಾರಿ ನಾಗಭೂಷಣ್ ಉಡುಪ ಪ್ರತಿಭಟನಕಾರರನ್ನು ಸಮಾಧಾನ ಪಡಿಸಿದರು. ನಂತರ ನೇರಂಬಳ್ಳಿ ವ್ಯಕ್ತಿಯ ಮೃತದೇಹವನ್ನು ಸ್ಮಶಾನಕ್ಕೆ ತರಲಾಯಿತು. ಅಲ್ಲಿ ಮನೆಯವರ ಎದುರಿಗೆ ಮೃತದೇಹವನ್ನು ಪರೀಕ್ಷಿಸಿ ನಂತರ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಕಾರ್ಕಳದ ಯುವಕನ ಮೃತದೇಹ !

ಬೇರೆ ಕಾಯಿಲೆಯಿಂದ ಮೃತಪಟ್ಟ ಕಾರ್ಕಳದ ಯುವಕ ಹಾಗೂ ಕೊರೋನ ದಿಂದ ಮೃತಪಟ್ಟ ಕುಂದಾಪುರದ ವೃದ್ಧರ ಮೃತದೇಹ ಅದಲು ಬದಲಾಗಿದೆ. ಕಾರ್ಕಳಕ್ಕೆ ಹೋಗಬೇಕಾಗಿದ್ದ ಮೃತದೇಹ ಕುಂದಾಪುರಕ್ಕೆ ಕಳುಹಿಸಿಕೊಡಲಾಗಿದೆ ಎಂದು ಜಿಲ್ಲಾಸ್ಪತ್ರೆಯ ಸರ್ಜನ್ ಡಾ.ಮದುಸೂಧನ್ ನಾಯಕ್ ತಿಳಿಸಿದ್ದಾರೆ.

ವೃದ್ಧ ಉಡುಪಿ ಟಿ.ಎಂ.ಎ. ಪೈ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಆ ಆಸ್ಪತ್ರೆಯಲ್ಲಿ ಶವಗಾರ ಇಲ್ಲದ ಕಾರಣ ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ಮೃತದೇಹ ವನ್ನು ಇಂದು ಬೆಳಗ್ಗೆ ತಂದು ಇಡಲಾಗಿತ್ತು. ಇದೇ ಶವಗಾರದಲ್ಲಿ ಕಾರ್ಕಳದ ಯುವಕನ ಮೃತದೇಹ ಕೂಡ ಇತ್ತು. ನಮ್ಮ ಸಿಬ್ಬಂದಿಗಳಿಗೆ ಕೊರೋನದಿಂದ ಮೃತಪಟ್ಟ ಮೃತದೇಹ ಯಾವುದು ಎಂಬುದಾಗಿ ತಿಳಿಯದೆ ಯುವಕನ ಮೃತ ದೇಹವನ್ನು ಕುಂದಾಪುರಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ

 

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...