ಕಣ್ಣುಕಣ್ಣು ಕಲೇತ ವಿಚ್ಚೆದಿತೆ ಹಾಗೂ ವಿಧುರ ಜೋಡಿಗೆ ಮದುವೆ ಮಾಡಿಸಿದ ಸಾಧನ ಮಹಿಳಾ ಸಾಂತ್ವನ ಸಂಸ್ಥೆ

Source: S.O. News Service | By Manju Naik | Published on 17th July 2019, 7:03 PM | Coastal News | Don't Miss |

ಮುಂಡಗೋಡ : ಪಾಲಕರ ಮಾತನ್ನು ದಿಕ್ಕರಿಸಿ ಮೂರು ಮಕ್ಕಳ ವಿದುರನನ್ನು ವಿಚ್ಚೇದಿತೆ ಮಹಿಳೆ  ಸಾಧನ ಸಾಂತ್ವನ ಕೇಂದ್ರದ ಸಹಕಾರದಿಂದ ಮದುವೆಯಾದ ಘಟನೆ ನಡೆದಿದೆ
ವಿಚ್ಚೇದಿತ ಮಹಿಳೆಯನ್ನು ಜಿಲ್ಲೆಯ ಯಲ್ಲಾಪುರ ಪಟ್ಟಣದ ರಜೀಯಾ(ಅಫ್ಸಾನ) ಮಹ್ಮದ ಶೇಖ(28) ಎಂದು ಹೇಳಲಾಗಿದೆ ಹಾಗೂ ವಿದುರನನ್ನು ಧಾರವಾಡ ಪಟ್ಟಣದ ಮಾದರಮಡ್ಡಿ ತಲವಾರ ಓಣಿಯ ಅಯ್ಯೂಬ ತಡಕೋಡ(35) ಎಂದು ತಿಳಿದು ಬಂದಿದೆ. ವಿಚ್ಚೇದಿತೆ ರಜೀಯಾ ಗೆ ಮಕ್ಕಳಾಗಿರಲಿಲ್ಲ ಎಂದು ಹೇಳಲಾಗಿದೆ
ರಜೀಯಾ ಶೇಖ ಈ ಮೊದಲು ಬೆಳಗಾಂವ ಗೆ ಮದುವೆ ಮಾಡಿಕೊಡಲಾಗಿತ್ತು ನಂತರ ವಿಚ್ಚೇದನ ಪಡೆದು ತವರು ಮನೆಯಲ್ಲಿದ್ದಳು ಅಯ್ಯೂಬ ನಿಗೆ ಹೆಂಡತಿ ಮೃತಪಟ್ಟ ಕಾರಣ ಪಾಲಕರು ಮತ್ತೊಂದು ಮದುವೆ ಮಾಡಲು ವಧುವಿನ ಹುಡಕಾಟದಲ್ಲಿದ್ದರು. ಯಲ್ಲಾಪುರದಲ್ಲಿರುವ ರಜೀಯಾ ಮನೆಗೆ ಬಂದು ತಮ್ಮ ಹುಡುಗಿ ಒಪ್ಪಿಗೆ ಸೂಚಿಸಿದ್ದರು. ಆದರೆ ರಜೀಯಾ ಮನೆಯವರು ಹುಡುಗ ಬಡವನಿದ್ದಾನೆ ಎಂದು ವಿರೋಧ ವ್ಯಕ್ತವಾಗಿತ್ತು. ರಜೀಯಾ ಮನೆಯವರು ಮತ್ತೆ ಬೇರೆ ವರನನ್ನು ಮದುವೆ ಮಾಡಿಕೊಡಬೇಕು ಎಂದು ವರನ ತಲಾಶ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಆದರೆ ರಜೀಯಾಗೆ ಅಯ್ಯೂಬನನ್ನೆ ಮದುವೆ ಮಾಡಿಕೊಳ್ಳಬೇಕು ಮನಸ್ಸು ಮಾಡಿ ಪಾಲಕರ ವಿರೋಧ ನಡುವಿಯೇ ರಜೀಯಾ ಮನೆಯಿಂದ ಹೊರಟು ಅಯ್ಯೂಬನನ್ನು ಹುಡುಕುತ್ತಾ ಧಾರವಾಡಕ್ಕೆ ಹೋಗುವಾಗ ಪೊಲೀಸರ ಸಹಾಯ ಪಡೆದು ಸಾಧನಾ  ಮಹಿಳಾ ಸಾಂತ್ವನ ಕೇಂದ್ರಕ್ಕೆ ಬಂದಿದ್ದು ಸಾಂತ್ವನ ಕೇಂದ್ರದ ಮುಖ್ಯಸ್ಥೆ ಡಾ.ಇಸಬೇಲ್ಲ ಜೇವಿಯರ್  ರಜೀಯಾಳನ್ನು ವಿಚಾರಿಸಿ ನಂತರ ಧಾರವಾಡದ ಅಯ್ಯೂಬ ನನ್ನು ವಿಚಾರಣೆ ಮಾಡಿದ್ದು ಇಬ್ಬರೂ ಮದುವೆಗೆ ಒಪ್ಪಿಗೆ ಸೂಚಿಸಿದ ಕಾರಣ ಮಂಗಳವಾರ ಮುಂಡಗೋಡಿನ ಸಾಧನಾ ಸಂಸ್ಥೆಯಲ್ಲಿ ಅಯ್ಯೂಬನ ಕುಟುಂಬಸ್ಥರ ಮಧ್ಯಯೇ ಮದುವೆ ಮಾಡಿಸಲಾಯಿತು ತದನಂತರ ಧಾರವಾಡದ ಸಂಗೋಳ್ಳಿ ರಾಯಣ್ಣ ಜಮಾತಿನಲ್ಲಿ ಇಸ್ಲಾಂ ಧರ್ಮದ ಪ್ರಕಾರ  ಮದುವೆಯಾಗಿದೆ.

 

Read These Next

ಸರಳ ವ್ಯಕ್ತಿಗೆ ಒಲಿದು ಬಂದ ಪಕ್ಷದ ದೊಡ್ಡ ಹುದ್ದೆ; ನೂತನ ಅಧ್ಯಕ್ಷರ ಮುಂದಿದೆ ಹಲವಾರು ಸವಾಲುಗಳು ಜಿಲ್ಲಾ ಬಿಜೆಪಿಗೆ ‘ನಾಯಕ’ರಾದ ‘ವೆಂಕಟೇಶ’

ತೀವ್ರ ಕುತೂಹಲ ಕೆರಳಿಸಿದ್ದ ಉತ್ತರ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಕೊನೆಗೂ ಹೆಸರನ್ನು ಪ್ರಕಟಿಸಲಾಗಿದೆ. ಕುಮಟಾದ ...

ಜ.30ರಿಂದ ವಿವಿಧ ಸ್ಪರ್ಧಾ ಕಾರ್ಯಕ್ರಮಗಳ ಆಯೋಜನೆ: ಮಾಜಿ ಶಾಸಕ ಸತೀಶ್ ಸೈಲ್ ಮಾಹಿತಿ; ಫೆ.6ರಿಂದ ಕಾರವಾರದಲ್ಲಿ ಕರುನಾಡ ಕರಾವಳಿ ಉತ್ಸವ

‘ಫೆಬ್ರುವರಿ 6, 7, 8 ಹಾಗೂ 9ರಂದು ಕರುನಾಡ ಕರಾವಳಿ ಉತ್ಸವವನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಅಂಗವಾಗಿ ವಿವಿಧ ಸ್ಪರ್ಧಾ ...

ಶಾಹೀನ್ ಬಾಗ್ ಪ್ರತಿಭಟನಾಕಾರರ ಕುರಿತಂತೆ ಬಿಜೆಪಿ ಸಂಸದನಿಂದ ಅವಹೇಳನಕಾರಿ ಹೇಳಿಕೆ

ಹೊಸದಿಲ್ಲಿ: ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದದ್ದೇ ಆದಲ್ಲಿ ಶಹೀನ್ ಬಾಗ್ ಪ್ರದೇಶದಲ್ಲಿ ಕಳೆದ ಹಲವಾರು ...