ಮುಂಬೈ: ಅಂಬಾನಿ ನಿವಾಸದ ಹೊರಗೆ ಸ್ಫೋಟಕ ಪ್ರಕರಣ, ಹಿರೇನ್ ಸಾವಿಗೆ ಪೊಲೀಸ್ ಅಧಿಕಾರಿ ಸಚಿನ್ ವಝೇ ಕಾರಣ: ಎನ್‌ಐಎ

Source: VB | By S O News | Published on 24th March 2021, 6:36 PM | National News |

ಮುಂಬೈ: ವಾಹನಗಳ ಬಿಡಿಭಾಗಗಳ ವ್ಯಾಪಾರಿ ಮನ್‌ಸುಖ್ ಹಿರೇನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದ ಪ್ರಕರಣವನ್ನು ತಾನು ಭೇದಿಸಿರುವುದಾಗಿ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹದಳವು ತಿಳಿಸಿದೆ.

ಹಿರೇನ್ ಅವರು ಫೆಬ್ರವರಿ 25ರಂದು ರಿಲಯನ್ಸ್ ಉದ್ಯಮ ಸಮೂಹದ ವರಿಷ್ಠ ಮುಕೇಶ್ ಅಂಬಾನಿ ಅವರ ನಿವಾಸದ ಹೊರಗೆ ಪತ್ತೆಯಾದ ಸ್ಫೋಟಕ ತುಂಬಿದ ಕಾರಿನ ಮಾಲಕರಾಗಿದ್ದಾರೆ. ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿ ಸಚಿನ್ ವಝೇ ಅವರು ಪ್ರಕರಣದ ಪ್ರಮುಖ ಆರೋಪಿ ಎಂದು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹದಳವು ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದೆ. ಮಹಾರಾಷ್ಟ್ರ ಎಟಿಎಸ್‌ನ ಉಪಮಹಾನಿರೀಕ್ಷಕ ಶಿವ್‌ದೀಪ್ ಲಾಂಡೆ ತನ್ನ ಫೇಸ್‌ಬುಕ್ ಖಾತೆಯಲ್ಲೂ ಈ ವಿಷಯವನ್ನು ಪ್ರಕಟಿಸಿದ್ದಾರೆ.

ಸಚಿನ್ ವಝೇ ಕಾರಣ

ಕೋಲಾಹಲಕಾರಿ ಮನ್ ಸುಖ್ ಹಿರೇನ್ ಕೋಲೆ ' ಪ್ರಕರಣವನ್ನು ಭೇದಿಸಲಾಗಿದೆ ಎಂದು ಲಾಂಡೆ ತನ್ನ ಫೇಸ್ ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಈ ಪ್ರಕರಣವನ್ನು ಭೇದಿಸಲು ಹಗಲು,ರಾತ್ರಿ ಶ್ರಮಿಸಿದ ನನ್ನ ಎಟಿಎಸ್ ಸಹದ್ಯೋಗಿಗಳಿಗೆ ನನ್ನ ಸೆಲ್ಯೂಟ್' ಎಂದವರು ತನ್ನ ಫೇಸ್ಬುಕ್ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಹಿರೇನ್ ಶಂಕಿತ ಕೊಲೆ ಪ್ರಕರಣದ ಹಿಂದಿರುವ ಉದ್ದೇಶ ಹಾಗೂ ಹತ್ಯೆಯನ್ನು ಹೇಗೆ ನಡೆಸಲಾಯಿತು ಎಂಬ ಬಗ್ಗೆ ಯಾವುದೇ ವಿವರಗಳನ್ನು ನೀಡಲು ಎಟಿಎಸ್ ನಿರಾಕರಿಸಿದೆ.

ಮುಕೇಶ್ ಅಂಬಾನಿ ನಿವಾಸದ ಸಮೀಪ ಸ್ಪೋಟಕ ತುಂಬಿದ ಕಾರು ಪತ್ತೆಯಾದ ಪ್ರಕರಣವನ್ನು ಕೇಂದ್ರ ಗೃಹ ಸಚಿವಾಲಯವು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಹಸ್ತಾಂತರಿಸಿದ ಮರುದಿನವೇ ಲಾಂಡೆ ಈ ಹೇಳಿಕೆ ನೀಡಿದ್ದಾರೆ.

ಈ ಮಧ್ಯೆ ಹಿರೇನ್ ಸಾವಿನ ಪ್ರಕರಣದಲ್ಲಿ ಶಾಮೀಲಾಗಿದ್ದಾರೆಂಬ ಶಂಕೆಯಲ್ಲಿ ಇಬ್ಬರು ವ್ಯಕ್ತಿಗಳನ್ನು ಎಟಿಎಸ್ ಶನಿವಾರ ವಶಕ್ಕೆ ತೆಗೆದುಕೊಂಡಿದೆ. ಆರೋಪಿಗಳನ್ನು ವಿನಾಯಕ್ ಶಿಂಧೆ ಹಾಗೂ ನರೇಶ್ ಧರೆ ಎಂದು ಗುರುತಿಸಲಾಗಿದೆ. ಲಖನ್ ಭಯ್ಯಾ ನಕಲಿ ಎನ್‌ಕೌಂಟರ್‌ ಪ್ರಕರಣದಲ್ಲಿ ಶಿಂಧೆ ದೋಷಿಯಾಗಿದ್ದ. ಇನ್ನೋರ್ವ ಬಂಧಿತ ಬುಕ್ತಿ ಎನ್ನಲಾಗಿದೆ. ಥಾಣೆಯ ನ್ಯಾಯಾಲಯವೊಂದು ಶಿಂಧೆ ಹಾಗೂ ಧರೆ ಅವರನ್ನು ಮಾರ್ಚ್ 30ರವರೆಗೆ ಎನ್‌ಐಎ ಕಸ್ಟಡಿಗೆ ಒಪ್ಪಿಸಿದೆ.

ಹಿರೇನ್ ಅವರು ಮಾರ್ಚ್ 5ರಂದು ಮುಂಬೈ ಸಮೀಪದ ಕಡಲ ತೀರದ ಬಳಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸ್ಫೋಟಕ ಪತ್ತೆ ಪ್ರಕರಣದ ಮುಖ್ಯ ತನಿಖಾಧಿಕಾರಿಯಾಗಿದ್ದ ಸಚಿನ್ ವಝೇ ಅವರು ಅಂಬಾನಿ ನಿವಾಸದ ಸಮೀಪ ಪತ್ತೆಯಾದ ಕಾರನ್ನು ನಾಲ್ಕು ತಿಂಗಳ ಹಿಂದೆ ಬಳಸಿಕೊಂಡಿದ್ದರು ಹಾಗೂ ಫೆಬ್ರವರಿ 5ರಂದು ಅದನ್ನು ಹಿಂದಿರುಗಿಸಿದ್ದರು. ತನ್ನ ಪತಿಯ ಸಾವಿನಲ್ಲಿ ವಝೇ ಅವರ ಪಾತ್ರವಿರುವುದಾಗಿ ಹಿರೇನ್‌ ಅವರ ಪತ್ನಿ ಆಪಾದಿಸಿದ್ದಾರೆ.

ಈ ವಾರದ ಆರಂಭದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯು ಸಚಿನ್ ವಝೇ ಸ್ಫೋಟಕವನ್ನು ಇರಿಸಿದ ಕಾರನ್ನು ಅಂಬಾನಿ ನಿವಾಸದ ಸಮೀಪ ಪಾರ್ಕ್ ಮಾಡಿ ಅಲ್ಲಿಂದವರು ತೆರಳಿದ್ದ ಕಪ್ಪು ಮರ್ಸಿಡಿಸ್ ಬೆಂಜ್ ಕಾರು ಹಾಗೂ 5 ಲಕ್ಷ ರೂ. ನಗದು ಹಾಗೂ ನೋಟು ಎಣಿಕೆ ಯಂತ್ರವನ್ನು ವಶಪಡಿಸಿಕೊಂಡಿತ್ತು.

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...