ಜನವರಿ 24ರಿಂದ ಫಲ-ಪುಷ್ಪ, ಹಣ್ಣುಗಳ ಪ್ರದರ್ಶನ : ಶ್ರೀಮತಿ ಎಂ.ಎಲ್.ವೈಶಾಲಿ

Source: so news | Published on 23rd January 2020, 12:19 AM | State News | Don't Miss |


ಶಿವಮೊಗ್ಗ: ತೋಟಗಾರಿಕೆ ಇಲಾಖೆಯು ಜಿಲ್ಲಾ ಉದ್ಯಾನ ಕಲಾಸಂಘ, ಹಾಪ್‍ಕಾಮ್ಸ್ ಮತ್ತು ಕೃಷಿ ಸಂಬಂಧಿತ ಅಭಿವೃದ್ಧಿ ಇಲಾಖೆಗಳ ಸಹಯೋಗದೊಂದಿಗೆ ಗಣರಾಜ್ಯೋತ್ಸವದ ಅಂಗವಾಗಿ ಜನವರಿ 24ರಿಂದ 27ರವರೆಗೆ ತೋಟಗಾರಿಕೆ ಇಲಾಖೆ ಆವರಣದಲ್ಲಿ(ಡಾ.ಬಿ.ಆರ್.ಅಂಬೇಡ್ಕರ್ ಭವನದ ಆವರಣದಲ್ಲಿ) 60ನೇ ಫಲ-ಪುಷ್ಪ ಮತ್ತು ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಎಂ.ಎಲ್.ವೈಶಾಲಿ ಅವರು ಹೇಳಿದರು.
ಈ ಫಲ-ಪುಷ್ಪ ಪ್ರದರ್ಶನದ ವಿಶೇಷ ಆಕರ್ಷಣೆಯಾಗಿ ವಿವಿಧ ಜಾತಿಯ ಹೂವುಗಳಿಂದ ಅಲಂಕೃತವಾದ ಬಸವಣ್ಣನವರ ಪ್ರತಿಮೆ, ಡಾ||ಮರಿಗೌಡರ ಸಿರಿಧಾನ್ಯ ಪ್ರತಿಕೃತಿ, ರೈತಬಂಧು, ನೇಗಿಲಯೋಗಿ(ಉಳುವ ರೈತ)ಯ ಪ್ರತಿಕೃತಿ, ಮಕ್ಕಳ ಆಕರ್ಷಣೀಯ ಹೂವಿನ ಕಲಾಕೃತಿಗಳು, ವಿವಿಧ ಹೂವಿನ ಆಕೃತಿಯ ಫೋಟೋ ಫ್ರೇಮ್‍ಗಳು, ಮಹಿಳಾ ಸಬಲೀಕರಣದ ಬಗ್ಗೆ ರಂಗೋಲಿಯಲ್ಲಿ ಆಕೃತಿಗಳು ಮತ್ತು ಹೆಣ್ಣು ಮಗುವಿನ ಪ್ರಾಮುಖ್ಯತೆ ಸಾರುವ ಭೇಟಿ ಪಡಾವೋ - ಭೇಟಿ ಚಚಾವೋ ಯೋಜನೆಯ ಪುಷ್ಪಾಲಂಕೃತ ಪ್ರತಿಕೃತಿಗಳ ಪ್ರದರ್ಶನಗಳು, ಕೈತೋಟ ಮತ್ತು ತಾರಸಿ ತೋಟದ ಪ್ರಾತ್ಯಕ್ಷಿತೆ, ವಿವಿಧ ತರಕಾರಿ ಕೆತ್ತನೆಗಳು, ಕುಬ್ಜಗಿಡಗಳು, ಅಣಬೆ ಪ್ರಾತ್ಯಕ್ಷಿತೆ, ವಿವಿಧ ತರಕಾರಿಗಳಿಂದ ಮಾಡಿದ ಆಕೃತಿಗಳು ಪ್ರದರ್ಶನಗೊಳ್ಳುತ್ತಿದ್ದು ವೀಕ್ಷಕರ ಕಣ್ಮನ ಸೆಳೆಯಲಿವೆ ಎಂದರು.
ಈ ಪ್ರದರ್ಶನದಲ್ಲಿ ಮಹಾನಗರಪಾಲಿಕೆಯ ಸಹಯೋಗದೊಂದಿಗೆ ಶಾಲಾ ಮಕ್ಕಳಿಗಾಗಿ ‘ಸ್ವಚ್ಛ ಭಾರತ’ ಯೋಜನೆಯ ಸಂದೇಶ ಸಾರುವ ‘ನನ್ನೂರಿನ ಸ್ವಚ್ಚ ಪರಿಸರಕ್ಕೆ ನನ್ನ ಪುಟ್ಟ ಪ್ರಯತ್ನ’ ಎಂಬ ವಿಷಯದ ಕುರಿತು ಚಿತ್ರಕಲಾ ಸ್ಪರ್ಧೆ, ಮಹಿಳೆಯರಿಗಾಗಿ ವಿವಿಧ ಸಸ್ಯ ಭಾಗಗಗಳನ್ನು ಬಳಸಿದ, ಹೂ, ಎಲೆ, ಬೀಜ, ಧಾನ್ಯಗಳನ್ನು ಬಳಸಿ ಚಿತ್ರಿಸಿದ ರಂಗೋಲಿ ಸ್ಪರ್ಧೆ, ರೈತರಿಗಾಗಿ ತೋಟಗಾರಿಕಾ ಉತ್ಪನ್ನಗಳ ಪ್ರದರ್ಶನ ಮತ್ತು ಸ್ಪರ್ಧೆ, ಮನೆ, ಶಾಲೆ, ಅಂಗನವಾಡಿ, ಕಚೇರಿ, ಖಾಸಗಿ ಸಂಸ್ಥೆಗಳಿಗೆ ಸೇರಿದ ಕೈತೋಟ, ತಾರಸಿ ತೋಟ ಮತ್ತು ಉದ್ಯಾನವನಗಳ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಹಾಪ್‍ಕಾಮ್ಸ್ ಸಹಯೋಗದಲ್ಲಿ ಬೆಳೆಗಾರರಿಂದ ಬಳಕೆದಾರರಿಗಾಗಿ ಕಾರ್ಯಕ್ರಮದಡಿಯಲ್ಲಿ ಜಿಲ್ಲೆಯ ಮತ್ತು ಅಂತರ ಜಿಲ್ಲೆಯ ಹಣ್ಣು ಬೆಳೆಗಾರ ರೈತರಿಗೆ ಮಾರುಕಟ್ಟೆ ದೊರಕಿಸಿಕೊಡುವ ಉದ್ದೇಶದಿಂದ ಮೇಳದಲ್ಲಿ ವಿವಿಧ ರೀತಿಯ ಹಣ್ಣಿನ ಮಳಿಗೆಗಳನ್ನು ತೆರೆದು ಹಣ್ಣುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದರು.
ರೈತರಿಗಾಗಿ ಜಿಲ್ಲೆಯ ಎಲ್ಲಾ ತಾಲೂಕುಗಳ ರೈತರು ಬೆಳೆದ ವಿವಿಧ ತೋಟಗಾರಿಕೆ ಉತ್ಪನ್ನಗಳ ಪ್ರದರ್ಶನ ಮತ್ತು ಸ್ಪರ್ಧೆ, ರೈತರಿಗಾಗಿ ಹಾಗೂ ಮಹಿಳೆಯರಿಗಾಗಿ ಅಣಬೆ ಕೃಷಿ, ಕೈತೋಟ ಮತ್ತು ತಾರಸಿ ತೋಟ ಸೇರಿದಂತೆ ವಿವಿಧ ತೋಟಗಾರಿಕೆ ವಿಷಯಗಳ ಕುರಿತು ತಾಂತ್ರಿಕ ಕಾರ್ಯಾಗಾರವನ್ನು ಏರ್ಪಡಿಸಲಾಗುವುದು ಎಂದವರು ತಿಳಿಸಿದರು.
ಈ ಮೇಳದಲ್ಲಿ ಸುಮಾರು 80ಕ್ಕೂ ಹೆಚ್ಚಿನ ಮಳಿಗೆಗಳನ್ನು ಸೃಜಿಸಲಾಗುತ್ತಿದ್ದು, ಇವುಗಳಲ್ಲಿ ಕೃಷಿ, ಪಶುಸಂಗೋಪನೆ, ರೇಷ್ಮೇ, ಮೀನುಗಾರಿಕೆ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಹಾನಗರಪಾಲಿಕೆ, ಸ್ತ್ರೀ_ಶಕ್ತಿ ಸಂಘಗಳು, ಕೃಷಿ ಮತ್ತು ತೋಟಗಾರಿಕೆ ಯಂತ್ರೋಪಕರಣಗಳು, ಹನಿ ನೀರಾವರಿ ಉಪಕರಣಗಳು, ಅಲಂಕಾರಿಕ ಹೂ-ಗಿಡಗಳ ನರ್ಸರಿ ಇತ್ಯಾದಿಗಳು ಇರಲಿವೆ ಎಂದವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ವಿಶೇಷವಾಗಿ. ಫಲ-ಪುಷ್ಪ ಪ್ರದರ್ಶನದ ವೀಕ್ಷಣೆಗೆ ಬರುವ ಸಾರ್ವಜನಿಕರ ಅನುಕೂಲಕ್ಕಾಗಿ ಶುಚಿ-ರುಚಿಯಾದ ಆಹಾರೋತ್ಪನ್ನಗಳ ಆಹಾರ ಮೇಳವನ್ನು ಆರಂಭಿಸಲಾಗುವುದು. ಪ್ರದರ್ಶನಕ್ಕೆ ಪೋಷಕರೊಂದಿಗೆ ಆಗಮಿಸುವ ಮಕ್ಕಳ ಆಕರ್ಷಣೆಗಾಗಿ ವಿವಿಧ ಆಟಿಕೆಗಳನ್ನೊಳಗೊಂಡ ಅಮ್ಯೂಸ್‍ಮೆಂಟ್ ಪಾರ್ಕ್‍ನ್ನು ಆರಂಭಿಸಲಾಗುವುದು. ಫಲ-ಪುಷ್ಪ ಪ್ರದರ್ಶನದ ಅಂಗವಾಗಿ ಜನವರಿ 24 ರಿಂದ 26ರವರೆಗೆ ಪ್ರತಿದಿನ ಸಂಜೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದರು.
ಪ್ರದರ್ಶನದ 5ದಿನಗಳ ಅವಧಿಯಲ್ಲಿ ಪ್ರತಿದಿನ ಸಂಜೆ ಆಹ್ವಾನಿತರಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲು ಉದ್ದೇಶಿಸಲಾಗಿದೆ ಎಂದರು.
ಪ್ರದರ್ಶನ ಪ್ರವೇಶಕ್ಕೆ ಮಕ್ಕಳಿಗೆ ರೂ.5/- ಮತ್ತು ವಯಸ್ಕರಿಗೆ ರೂ.10/-ಗಳ ಪ್ರವೇಶ ಶುಲ್ಕ ನಿಗಧಿಪಡಿಸಲಾಗಿದೆ. ಶಾಲಾ ಅವಧಿಯಲ್ಲಿ ಶಾಲಾ ಶಿಕ್ಷಕರೊಂದಿಗೆ ಶಾಲಾ ಸಮವಸ್ತ್ರದೊಂದಿಗೆ ಆಗಮಿಸುವ ಮಕ್ಕಳಿಗೆ ಉಚಿತ ಪ್ರವೇಶ ನೀಡಲು ನಿರ್ಣಯಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಡಾ.ಯೋಗೀಶ್, ಹಾಪ್‍ಕಾಮ್ಸ್‍ನ ಅಧ್ಯಕ್ಷ ಕೃಷ್ಣಮೂರ್ತಿ, ಉದ್ಯಾನ ಕಲಾಸಂಘದ ಉಪಾಧ್ಯಕ್ಷ ಸಿದ್ದಪ್ಪ, ಕಡಿದಾಳ್‍ಗೋಪಾಲ್, ಶ್ರೀಮತಿ ಚಂದ್ರಕಲಾ, ಲೋಕೇಶ್ವರಿ ಚೋಳಕೆ, ಜಿ.ಎಂ.ರಘು, ಸೋಮಣ್ಣ, ಮೋಹನ್ ಮುಂತಾದವರು ಉಪಸ್ಥಿತರಿದ್ದರು.

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...