ಆರ್.ಎ.ಎಫ್ ಘಟಕ ಬೇರೆ ಜಿಲ್ಲೆಗೆ ಹೋದರೂ ಬಿಜೆಪಿ ಶಾಸಕರು, ಸಂಸದರ ಮೌನವೇಕೆ : ಯುಥ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಪ್ರಶ್ನೆ.

Source: SO News | By Laxmi Tanaya | Published on 18th January 2021, 10:11 PM | Coastal News |

ಮಂಗಳೂರು : ಆರ್.ಎ.ಎಪ್ ಘಟಕ ನಿರ್ಮಾಣದ ವಿಚಾರದಲ್ಲಿ
ಬಿಜೆಪಿ ಪಕ್ಷಕ್ಕೆ ದ.ಕ ಜಿಲ್ಲೆಯ ಮೇಲೆ ಅಸಮಾಧಾನವಿದೆ ಎಂದು ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಹೇಳಿದ್ದಾರೆ. 

ಮಂಗಳೂರಿನಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಆರ್.ಎ.ಎಪ್.ಘಟಕ ನಿರ್ಮಾಣಕ್ಕೆ ಜಿಲ್ಲೆಯಲ್ಲಿ ಸ್ಥಳ ನಿಗದಿಯಾಗಿತ್ತು.
ಮೂಲ್ಕಿ- ಮೂಡಬಿದಿರೆ ಕ್ಷೇತ್ರದಲ್ಲಿ ಆರ್.ಎ.ಎಪ್. ಘಟಕಕ್ಕೆ ಜಾಗ ನಿಗದಿಯಾಗಿ ಸುಮಾರು 48 ಎಕ್ರರೆ ಭೂಮಿಯನ್ನ ಬಡಗ ಎಕ್ಕೂರಿನಲ್ಲಿ ಮೀಸಲಿರಿಸಲಾಗಿತ್ತು.

ಆದರೆ ಈ ಯೋಜನೆ ಶಿವಮೊಗ್ಗ ಜಿಲ್ಲೆಗೆ ಸ್ಥಳಾಂತರವಾಗಿದೆ. ಎಲ್ಲಾ ರೀತಿಯ ಸಾರಿಗೆ - ಸಂಪರ್ಕ ಹೊಂದಿರುವ ಜಿಲ್ಲೆ ದಕ್ಷಿಣಕನ್ನಡ.

ದ‌‌.ಕ ಜಿಲ್ಲೆ ಕೋಮು- ಸೂಕ್ಷ್ಮ ಆಡಳಿತ ಪ್ರದೇಶವಾಗಿದೆ. ಬಿಜೆಪಿಯವರು ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಹಚ್ಚುತ್ತಿರುವುದು ಸ್ಪಷ್ಟವಾಗಿದೆ.
ಇಲ್ಲಿನ ಯೋಜನೆ ಬೇರೆ ಜಿಲ್ಲೆಗೆ ಹೋಗುವರೆಗೂ ಸಂಸದರು ಯಾಕೆ ಮೌನವಾಗಿದ್ದಾರೆ ಎಂದು ರೈ ಪ್ರಶ್ನಿಸಿದ್ದಾರೆ.

ಶಾಸಕರು ಸಂಸದರು ಈ ಯೋಜನೆ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ಈ ಯೋಜನೆಯಿಂದ ಎಲ್ಲರಲ್ಲೂ ಸೌಹಾರ್ದತೆ ಮೂಡಿಬರುತ್ತಿತ್ತು
ಬಿಜೆಪಿ ಶಾಸಕರ ಮತ್ತು ಸಂಸದರಿಗೆ ಸೌಹಾರ್ದತೆ  ಬೇಡವಾಗಿದೆ ಎಂದು‌ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಹೇಳಿದ್ದಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...