14 ಎಕರೆಯಲ್ಲಿ ಐಟಿ ಪಾರ್ಕ್ ಸ್ಥಾಪನೆ : 200 ಕೋಟಿ ವಿನಿಯೋಗ

Source: SO News | By Laxmi Tanaya | Published on 25th January 2021, 10:56 PM | State News |

ಹಾಸನ : ನಗರದ ಡೈರಿ ಸಮೀಪದ ಕೈಗಾರಿಕಾ ಪ್ರದೇಶದಲ್ಲಿನ ಮೈಸೂರು   ಮಿನರಲ್ಸ್ಗೆ ಸೇರಿದ  14 ಎಕರೆ ಜಾಗವಿದ್ದು ಇಲ್ಲಿ ಐಟಿ ಪಾರ್ಕ್ ಹಾಗೂ ವಾಣಿಜ್ಯ ಉದ್ದೇಶಕ್ಕೆ ಮಳಿಗೆಗಳನ್ನು ಸ್ಥಾಪಿಸಲಾಗುವುದು ಎಂದು ಕರ್ನಾಟಕ ರಾಜ್ಯ ಖನಿಜ ನಿಗಮದ ಅದ್ಯಕ್ಷ ಲಿಂಗಮೂರ್ತಿ ತಿಳಿಸಿದ್ದಾರೆ.

   ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಪ್ರದೇಶದಲ್ಲಿ ಗ್ರಾನೈಟ್ ಉದ್ಯಮವೂ ಸ್ಥಗಿತವಾಗಿದ್ದು ವಾಣಿಜ್ಯ ಕ್ಷೇತ್ರಕ್ಕೆ ಪುನಶ್ಚೇತನ ನೀಡುವ ಉದ್ದೇಶದಿಂದ ಹಾಗೂ ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ಮಾಡುವ ಹಿನ್ನೆಲೆಯಲ್ಲಿ ಈ ಯೋಜನೆ ರೂಪಿಸಲಾಗಿದೆ ಎಂದರು.

ಈ ಯೋಜನೆಗೆ ಸುಮಾರು 200 ಕೋಟಿ ವೆಚ್ಚವಾಗಲಿದ್ದು ಮೊದಲ ಹಂತವಾಗಿ 60 ಕೋಟಿ ಬಿಡುಗಡೆಗೊಳಿಸಲಾಗುವುದು ಮುಂದಿನ ಕೆಲ ವರ್ಷದಲ್ಲಿ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ವಾಗಲಿದೆ ಎಂದರು. ಇದರಿಂದ ಸ್ಥಳೀಯವಾಗಿ ಐಟಿಐ, ಎಂಜಿನಿಯರಿಂಗ್ ಪದವಿ ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗ ಪಡೆಯಲು ಸಹಕಾರಿಯಾಗಲಿದೆ ಎಂದರು.

    ಗ್ರಾನೈಟ್ ಉದ್ಯಮ ಸ್ಥಗಿತವಾಗಿದ್ದು ವಹಿವಾಟಾಗದೆ ಉಳಿದ 14 ಸಾವಿರ ಚ.ಮೀ ಗ್ರಾನೈಟ್ ಅನ್ನು ಹರಾಜು ಹಾಕಲಾಗುವುದು ಹಾಗೂ 280 ಎಕರೆ ವಿಶೇಷ ಅರ್ಥಿಕ ವಲಯದಲ್ಲಿ ಕೈಗಾರಿಕೆ ಸ್ಥಾಪನೆಗೆ ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.

 ಶಾಸಕರಾದ ಪ್ರೀತಂ ಜೆ ಗೌಡ ಅವರು ಮಾತನಾಡಿ  ನಗರದ ಹೊರವಲಯದಲ್ಲಿ 
ಮೈಸೂರು ಮಿನರಲ್ಸ್ ನ ಜಾಗದಲ್ಲಿ ಐ.ಟಿ ಪಾರ್ಕ್ ಮಾಡಲಾಗುವುದು.ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಮಾಡಿ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಲು ಆಧ್ಯತೆ ನೀಡಲಾಗುವುದು .ಹೊಸದಾಗಿ ಪ್ರಾರಂಭಿಸುವ ಕಂಪನಿಗಳಿಗೆ  ಈ ಕಟ್ಟಡದಲ್ಲಿ ಬಾಡಿಗೆ ಆಧಾರದಲ್ಲಿ ಜಾಗ ಒದಗಿಸಲಾಗುವುದು ಎಂದರು.

ಎಸ್.ಇ.ಜೆಡ್ ಯೋಜನೆಯಡಿಯಲ್ಲಿರುವ 280ಎಕರೆ ಜಮೀನನ್ನು ಹಿಂಪಡೆದು ಇತರ ಕೈಕಾರಿಕೆಗಳ ಸ್ಥಾಪನೆಗೆ ಒದಗಿಸಲು ಕ್ರಮ ವಹಿಸಲಾಗುತ್ತಿದೆ. ಕೈಗಾರಿಕಾ ಸಚಿವರ ನೇತೃತ್ವದಲ್ಲಿ ನಿಯಮಗಳ ರಚನೆಯಾಗುತ್ತಿದೆ .ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯೂ ಸಲ್ಲಿಕೆಯಾಗಿದೆ ಎಂದರು.

 ಕೈಗಾರಿಕಾ ಬಡಾವಣೆಯಲ್ಲಿ ಜಾಗ ಪಡೆದು ಹಲವು ವರ್ಷಗಳಾದರೂ ಯಾವುದೇ ಚಟುವಟಿಕೆಗಳನ್ನು ನಡೆಸದೇ ಇರುವವರನ್ನು ಗುರುತಿಸಿ ನೋಟೀಸ್ ನೀಡಿ  ಜಮೀನು ಹಿಂಪಡೆದು ನಿಜವಾಗಿಯೂ ಕೈಗಾರಿಕೆ  ಪ್ರಾರಂಭ ಮಾಡುವವರಿಗೆ ಮಂಜೂರು ಮಾಡಲಾಗುವುದು ಎಂದು ಪ್ರೀತಂ ಗೌಡ ಹೇಳಿದರು.

ಏ ಗ್ರೇಡ್ ನಲ್ಲಿರುವ ಹಾಸನಾಂಬ ದೇವಾಲಯದ ಆದಾಯದಿಂದ ಸುಮಾರು 48 ಲಕ್ಷ ರೂಪಾಯಿಗಳನ್ನು  ಬಿ ಗ್ರೇಡ್ ನಲ್ಲಿರುವ  ತಾಲ್ಲೂಕಿನ   ಕೊಂಡಜ್ಜಿ ದೇವಾಲಯದ ದುರಸ್ತಿ ಕಾರ್ಯ ಕ್ಕೆ ಬಳಸಲಾಗುವುದು.
ಅಲ್ಲದೆ ರಾಜ್ಯ ಖನಿಜ ನಿಗಮದ  ವತಿಯಿಂದ 25 ಲಕ್ಷ ನೀಡಲಾಗುತ್ತಿದ್ದು ಇತರ ದಾನಿಗಳ ಹಣವನ್ನೂ ಬಳಸಿ ದೇವಾಲಯವನ್ನು ಉತ್ತಮವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದರು.
ಜಿಲ್ಲಾಧಿಕಾರಿ ಆರ್ ಗಿರೀಶ್ ಅವರು ಈ ಸಂದರ್ಭದಲ್ಲಿ ಹಾಜರಿದ್ದರು

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...