ದಲಿತರ ಮೇಲಿನ ದೌರ್ಜನ್ಯಗಳ ರುದ್ರನರ್ತನ

Source: sonews | By Staff Correspondent | Published on 26th June 2018, 12:02 AM | National News | Special Report | Don't Miss |

ದಲಿತರ ಮೇಲೆ ಸತತವಾಗಿ ನಡೆಯುತ್ತಿರುವ ದೌರ್ಜನ್ಯಗಳಲ್ಲಿ ಒಂದು ಸ್ಪಷ್ಟ ಮಾದರಿ ಎದ್ದುಕಾಣುತ್ತಿದೆ.

ಮಹಾರಾಷ್ಟ್ರದ ಪ್ರಭಾವಿ ಜಿಲ್ಲೆಗಳಲ್ಲಿ ಒಂದಾದ ಜಲಗಾಂವ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಇಬ್ಬರು ಹದಿಹರೆಯದ ದಲಿತ ಹುಡುಗರನ್ನು ಹೊಡೆದು, ಬೆತ್ತಲೆ ಮಾಡಿ ಮೆರವಣಿಗೆ ಮಾಡಿದ ವಿಡಿಯೋ ಒಂದು ಜೂನ್ ೧೦ರಂದು ಸಾಮಾಜಿಕ ಜಾಲತಾಣಗಳಲ್ಲಿ ಹರಡಿ ಸಂಚಲನ ಸೃಷ್ಟಿಸಿತು. ದಲಿತ ಹುಡುಗರು ಥಳಿತಕ್ಕೆ ಮತ್ತು ಅಪಮಾನಕ್ಕೆ ಗುರಿಯಾದದ್ದಕ್ಕೆ ಕಾರಣವಿಷ್ಟೆ. ಮಹಾರಾಷ್ಟ್ರದಲ್ಲಿ ಡಿನೋಟಿಫೈಡ್ ಗಿರಿಜನ ಸಮುದಾಯವೆಂದು ವರ್ಗೀಕರಿಸಲ್ಪಟ್ಟಿರುವ ಸಮುದಾಯದವರೊಬ್ಬರಿಗೆ ಸೇರಿದ  ಬಾವಿಯಲ್ಲಿ ಇಬ್ಬರು ದಲಿತ ಹುಡುಗರು ಈಜಾಡಿದ್ದರು. ದೌರ್ಜನ್ಯ ನಡೆಸಿದವರ ಸಾಮಾಜಿಕ ಹಿನ್ನೆಲೆಯಲ್ಲಿರುವ ವ್ಯತ್ಯಾಸವನ್ನು ಹೊರತುಪಡಿಸಿದರೆ ಇದು ೨೦೧೬ರಲ್ಲಿ ಮೇಲ್ಜಾತಿ ದೌರ್ಜನ್ಯಕೋರರು ಗುಜರಾತಿನ ಊನಾದಲ್ಲಿ ದಲಿತ ಯುವಕರ ಮೇಲೆ ನಡೆಸಿದ ದೌರ್ಜನ್ಯದಂತೆಯೇ ಇದೆ. ಮೇಲಿನ ಎರಡೂ ಪ್ರಕರಣಗಳಲ್ಲಿ ದಲಿತ ದೇಹಗಳನ್ನು ಅಪಮಾನದ ವಸ್ತುವನ್ನಾಗಿಸಿ ಹೀನಾಯವಾಗಿ ಅಪಮಾನಿಸಲಾಯಿತಲ್ಲದೆ ಅದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರ ಗಮನಕ್ಕೆಂದೇ ಬಿಡುಗಡೆ ಮಾಡಲಾಯಿತು. ಮೂಲಕ ಇಂಥಾ ಬರ್ಬರ ಕೃತ್ಯಗಳನ್ನು ನಡೆಸಿದ್ದರಿಂದ ಉಂಟಾಗಬಹುದಾದ ಕಾನೂನಾತ್ಮಕ ಪರಿಣಾಮಗಳ ಬಗ್ಗೆ ತಮಗೆ ಕಿಂಚಿತ್ತೂ ಹೆದರಿಕೆಯಿಲ್ಲವೆಂಬುದನ್ನು ಇನ್ನೊಮ್ಮೆ ಅವರು ಸ್ಪಷ್ಟಪಡಿಸಿದ್ದಾರೆ. ಆದರೆ ಜಲಗಾಂವ್ನಲ್ಲಿ ನಡೆದ ಘಟನೆ ಗುಜರಾತಿನಲ್ಲಿ ನಡೆದ ಘಟನೆಗಿಂತ ನಿಚ್ಚಳವಾದ ಒಂದು ಭಿನ್ನತೆಯನ್ನು ಹೊಂದಿದೆ. ಒಂದು ಸಮಾಜಶಾಸ್ತ್ರೀಯ ಹಿನ್ನೆಲೆಯಲ್ಲಿ ನೋಡುವುದಾದರೆ ಜಲಗಾಂವ್ ಪ್ರಕರಣದಲ್ಲಿ ದೌರ್ಜನ್ಯ ಎಸಗಿದವರು ಹಿಂದೂ ಜಾತಿ ಪದ್ಧತಿಗೆ ಸೇರಿದವರಲ್ಲ

ನಿರೀಕ್ಷಿಸಿದಂತೆ ಮಹಾರಾಷ್ಟ್ರ ಸರ್ಕಾರ ಮತ್ತು ಅದರ ಬೆಂಬಲಿಗರು ಜಲಗಾಂವ್ ಪ್ರಕರಣದಲ್ಲಿ ಯಾವುದೇ ಜಾತಿ ಸಂಬಂಧಿ ಅಂಶವನ್ನು ಪರಿಗಣಿಸಲು ನಿರಾಕರಿಸುತ್ತಿದ್ದಾರೆ. ಆದರೆ ಪೊಲೀಸರು ಮಾತ್ರ ದೌರ್ಜನ್ಯ ಎಸಗಿದವರ ಮೇಲೆ ೧೯೮೯ರ ದೌರ್ಜನ್ಯ ನಿಷೇಧ ಕಾಯಿದೆ (ಪಿಒಎ) ಅನ್ವಯ ಮೊಕದ್ದಮೆಯನ್ನು ದಾಖಲು ಮಾಡಿಕೊಂಡಿದ್ದಾರೆ. ವಾಸ್ತವದಲ್ಲಿ, ಸರ್ಕಾರದ ಪ್ರತಿಷ್ಟೆಗೆ ಆಗಿರುವ ಹಾನಿಯನ್ನು ಕಡಿಮೆ ಮಾಡುವ ಸಲುವಾಗಿ ಮಹಾರಾಷ್ಟ್ರ ಸರ್ಕಾರವು ಪ್ರಕರಣದಲ್ಲಿ ಜಾತಿಯ ಅಂಶವನ್ನು ಮರೆಮಾಚಲು ಎರಡು ಬಗೆಯ ತಂತ್ರಗಳನ್ನು ಅನುಸರಿಸುತ್ತಿದೆ. ಮೊದಲನೆಯದಾಗಿ ಪ್ರಕರಣದಲ್ಲಿ ದೌರ್ಜನ್ಯ ಎಸಗಿದವರಲ್ಲಿ  ಜಾತಿ ಪ್ರಜ್ನೆಗಿಂತ ಮುಖ್ಯವಾಗಿ ವಿಕೃತ ಮನೋಭಾವವೇ ದೌರ್ಜನವನ್ನು ನಡೆಲು ಪ್ರೇರೇಪಿಸಿದೆ ಎಂದು ಸರ್ಕಾರದ ಪ್ರಮುಖರು ಮತ್ತು ಕೆಲವು ಸ್ಥಳೀಯ ಪತ್ರಕರ್ತರು ವಾದಿಸಲು ಪ್ರಾರಂಭಿಸಿದ್ದಾರೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ಜಾತಿಯೆಂಬ ಸಾಮಾಜಿಕ ವ್ಯವಸ್ಥೆಯ ಕಾರಣಕ್ಕಾಗಿ ನಡೆಯುತ್ತಿರುವ ಜಾತಿ ದೌರ್ಜನ್ಯಗಳನ್ನು ಕೇವಲ ವ್ಯಕ್ತಿಗಳ ವಿಕೃತಿಯಿಂದ ಸಂಭವಿಸುತ್ತಿರುವ ವಿದ್ಯಮಾನವೆಂಬಂತೆ ಅವರು ಚಿತ್ರಿಸಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ  ಇಂಥಾ ವಾದಗಳು ಸಾಮಾಜಿಕ ಅಪರಾಧಗಳ ಬೆನ್ನ ಹಿಂದೆ ಇರುವ ಉದ್ದೇಶ ಮತ್ತು ಕಾರಣಗಳ ಸಾಧ್ಯತೆಯನ್ನೇ ನಿರಾಕರಿಸುತ್ತವೆ. ಪ್ರಕರಣದಲ್ಲಿ ದೌರ್ಜನ್ಯ ಎಸಗಿದ ಪ್ರಮುಖ ವ್ಯಕ್ತಿ  ಶ್ರೇಣೀಕೃತ ಜಾತಿ ವ್ಯವಸ್ಥೆಯ ಭಾಗವಲ್ಲವಾದರೂ ಆತ ಜಾತಿ ಪ್ರಜ್ನೆಯನ್ನು ಹೊರಗಿನಿಂದಲೇ ಪಡೆದುಕೊಳ್ಳುತ್ತಾನೆ. ಏಕೆಂದರೆ ಅದು ತಮ್ಮ  ದಲಿತ ವಿರೋಧಿ ಅಸಹನೆಯನ್ನು ಶಿಕ್ಷೆ ವಿಧಿಸುವ ಮೂಲಕ ಜಾರಿ ಮಾಡಲು ಬೇಕಾದ ತೀವ್ರತರವಾದ ದಲಿತ ವಿರೋಧಿ ಪ್ರಜ್ನೆಯನ್ನು ಒದಗಿಸುತ್ತದೆ. ಇದು ಹುಡುಗರಿಗೆ ದೌರ್ಜನ್ಯಕೋರರು ಅಮಾನುಷವಾಗಿ ಥಳಿಸಿರುವ ರೀತಿಯಲ್ಲೇ ವ್ಯಕ್ತಗೊಂಡಿದೆ.

ಪ್ರಕರಣದಿಂದ ತಮ್ಮ ಸರ್ಕಾರದ ಮೇಲೆ ಮತ್ತಷ್ಟು ಟೀಕೆಗಳು ಬರದಂತೆ ತಡೆಗಟ್ಟಲು ಮಹರಾಷ್ಟ್ರ ಸರ್ಕಾರ ಅನುಸರಿಸುತ್ತಿರುವ ಮತ್ತೊಂದು ತಂತ್ರ ಎಲ್ಲರಿಗೂ ಗೊತ್ತಿರುವುದೇ. ಮಹಾರಾಷ್ಟ್ರ ಸರ್ಕಾರವೇ ಆಗಲೀ ಅಥವಾ ಇನ್ಯಾವುದೇ ಸರ್ಕಾರವೇ ಆಗಲೀ, ಊನಾ ಅಥವಾ ಜಲಗಾಂವ್ನಂಥ ಘಟನೆಗಳು ನಡೆದಾಗ ಸಾಂಪ್ರದಾಯಿಕವಾದ ಕೆಲವು ಶಿಷ್ಟಾಚಾರಗಳನ್ನು ಅನುಸರಿಸುತ್ತವೆ. ಅವುಗಳಲ್ಲಿ ತಮ್ಮ ಸರ್ಕಾರವು ದಲಿತರನ್ನೂ ಒಳಗೊಂಡಂತೆ ಸಮಾಜದ ಅಲಕ್ಷಿತ ಸಮುದಾಯಗಳ ಏಳಿಗೆಯನ್ನು ಸಾಧಿಸಲು ಮತ್ತು ಸಾಮಾಜಿಕ ನ್ಯಾಯವನ್ನು ಒದಗಿಸಲು ಪ್ರಾಮಣಿಕ ಪ್ರಯತ್ನಗಳನ್ನು ಮಾಡುತ್ತಿದೆಯೆಂದೂ ಹೇಳುವುದು ಒಂದು. ಮಹಾರಾಷ್ಟ್ರದ ಬಿಜೆಪಿ-ಶಿವಸೇನಾ ಸರ್ಕಾರವೂ ಶಿಷ್ಟಾಚಾರದ ಹೇಳಿಕೆಯನ್ನು ನೀಡಿತು. ಒಂದು ನಿರ್ದಿಷ್ಟ ಟಿವಿ ವಾಹಿನಿಯಲ್ಲಂತೂ ಮಹಾರಾಷ್ಟ್ರದ ಸಮಾಜ ಕಲ್ಯಾಣ ಮಂತ್ರಿಯು ತಮ್ಮ ಸರ್ಕಾರವು ದಲಿತರ ಏಳಿಗೆಗೆ ತೆಗೆದುಕೊಂಡಿರುವ ಅತ್ಯದ್ಭುತ ಕಾರ್ಯಕ್ರಮಗಳ ಪಟ್ಟಿಯನ್ನು ನೀಡುತ್ತಲೇ ಹೋದರು. ಕುತೂಹಲಕಾರಿ ಅಂಶವೆಂದರೆ ಸರ್ಕಾರದ ಪ್ರತಿಷ್ಟೆಗಾದ ಹಾನಿಯನ್ನು ಸರಿಪಡಿಸುವ ಕ್ರಮಗಳಲ್ಲಿ ದಲಿತ ಸಮುದಾಯದ ಸದಸ್ಯರೂ ಕೈಜೋಡಿಸಿದ್ದಾರೆ.

ಮೇಲ್ಜಾತಿಗಳಲ್ಲಿ ದಲಿತರ ಬಗ್ಗೆ ಅಸಹನೆ ಮತ್ತು ತಿರಸ್ಕಾರಗಳು ಮಡುಗಟ್ಟುತ್ತಿದೆಯೆಂಬುದನ್ನು ಸರ್ಕಾರ ಮತ್ತದರ ವಿವಿಧ ಇಲಾಖೆಗಳು ಅರ್ಥಮಾಡಿಕೊಳ್ಳಲು ವಿಫಲವಾಗುತ್ತಿವೆ. ಸರ್ಕಾರವು ದಲಿತರ ಕಲ್ಯಾಣಕ್ಕಾಗಿ ಜಾರಿ ಮಾಡುತ್ತಿರುವ ಯೋಜನೆಗಳ ಬಗ್ಗೆ ಕೊಚ್ಚಿಕೊಳ್ಳುವುದರಿಂದ ಮೇಲ್ಜಾತಿಗಳಲ್ಲಿ ಮಡುಗಟ್ಟಿ ನಿಂತಿರುವ ದಲಿತರ ಬಗೆಗಿನ ಅಸಹನೆ ಕಡಿಮೆಯಾಗುವುದಿಲ್ಲ. ಅದಕ್ಕೆ ತದ್ವಿರುದ್ಧವಾಗಿ ದಲಿತ ಕಲ್ಯಾಣ ಯೋಜನೆಗಳ ಬಗ್ಗೆ ಸರ್ಕಾರ ನಡೆಸುವ ಅತಿರಂಜಿತ ಪ್ರಚಾರಗಳು ದಲಿತರ ಬಗೆಗಿನ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಬಹುದು. ಮೇಲ್ಜಾತಿಗಳು ದಲಿತರ ವಿರುದ್ಧ ತಾವೇ ಒಂದು ಪರ್ಯಾಯ ಪ್ರಭುತ್ವವಾಗಿ ವರ್ತಿಸುತ್ತಾರೆ ಮತ್ತು  ಸಂವಿಧಾನಿಕ ಕಾನೂನುಗಳಿಗೆ ತದ್ವಿರುದ್ಧವಾದ ಕಾನೂನುಗಳನ್ನು ಹೇರುತ್ತಾರೆ. ಸರ್ಕಾರಗಳು ತೆಗೆದುಕೊಳ್ಳುವ ಕ್ರಮಗಳು ಇವುಗಳನ್ನು ಸ್ವಲ್ಪವೂ ನಿಯಂತ್ರಿಸುವುದಿಲ್ಲ.

ಇಂಥಾ ಅರಾಜಕತೆ ತಾಂಡವವಾಡುತ್ತಿರುವ ಸನ್ನಿವೇಶದಲ್ಲಿ ಅತ್ಯಾಚಾರ ಹಾಗೂ ದೌರ್ಜನ್ಯಗಳಿಗೆ ಗುರಿಯಾದವರ ಘನತೆಯನ್ನು ಕೇವಲ ಕಾನೂನು ಜಾರಿಯನ್ನು ಸಾಂಸ್ಥಿಕರಣಗೊಳಿಸುವುದರಿಂದ ಮಾತ್ರ ಕಾಪಾಡಲು ಸಾಧ್ಯವಾಗುವುದಿಲ್ಲ. ಬದಲಿಗೆ ಅಂಥಾ ಕಾನೂನುಗಳನ್ನು ಬಲವಾಗಿ ನಿಯಂತ್ರಿಸಬಲ್ಲ ಪ್ರಭುತ್ವ ಮತ್ತು ಸಾಮಾಜಿಕವಾಗಿ ಎಚ್ಚೆತ್ತ ಹಾಗೂ ನೈತಿಕವಾಗಿ ಪ್ರೇರಿತವಾದ ಸಮುದಾಯಗಳ ಅಗತ್ಯ ಇಲ್ಲಿ ಇನ್ನೂ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆಯುತ್ತವೆ. ಎರಡನೆಯದು ಅಸ್ಥಿತ್ವದಲ್ಲಿದ್ದಾಗ ಮಾತ್ರ ದೌರ್ಜನ್ಯಕ್ಕೊಳಗಾದ ಹುಡುಗರ ಪೋಷಕರಂಥವರು ತಮಗಾದ ಅನ್ಯಾಯದ ವಿರುದ್ಧ ನ್ಯಾಯಾಂಗದ ಮೊರೆ ಹೋಗಲು ಸಾಧ್ಯವಾಗುತ್ತದೆ.

ಸಾಮಾಜಿಕ ಜಾಗೃತಿಯ ಕೊರತೆ ಮತ್ತು ಮೇಲ್ಜಾತಿಗಳ ಸಾಮಾಜಿಕ ಭಯೋತ್ಪಾದನೆಗಳಿಂದಾಗಿ ಇಬ್ಬರು ಬಾಲಕರ ಮೇಲೆ ನಡೆಸಲಾದ ದೌರ್ಜನ್ಯವನ್ನು ಜಾತಿ ದೌರ್ಜನ್ಯವೆಂvಲ್ಲದೆ ಒಂದು ಹಿಂಸಾಚಾರದ ಘಟನೆ ಮಾತ್ರವೆಂದು ಅವರ ಪೋಷಕರು ಪರಿಭಾವಿಸಲು ಕಾರಣವಾಗಿರಬೇಕು. ಹಳ್ಳಿಯಲ್ಲೂ ಮತ್ತು ಇತರ ಹಳ್ಳಿಗಳಲ್ಲೂ ದಲಿತರ ವಿರುದ್ಧ ಅಸ್ಥಿತ್ವದಲ್ಲಿರುವ ಶೀತಲ ಅಸಹನೆ ಮತ್ತು ತಿರಸ್ಕಾರಗಳಿಂದಾಗಿಯೇ ದಲಿತರು ಜಾತಿಯ ಕಾನೂನು ಬಾಹಿರ ಅರಾಜಕತೆಯಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಹಕ್ಕನ್ನು ಸಂವಿಧಾನವು ನೀಡಿದ್ದರೂ ಅದನ್ನು ಬಳಸಲಾಗದ ಪರಿಸ್ಥಿಯಲ್ಲಿದ್ದಾರೆ. ಸಾಂವಿಧಾನಿಕ ಹಕ್ಕುಗಳು ತಮ್ಮಷ್ಟಕ್ಕೆ ತಾವೇ ಜೀವ ಪಡೆಯುವುದಿಲ್ಲಅವು ಸಂತ್ರಸ್ತರಿಗೆ ತಮ್ಮಂತೆ ತಾವೇ ಸ್ವಯಂ ಚಾಲಿತವಾಗಿ ಪರಿಹಾರವನ್ನು ಒದಗಿಸುವುದಿಲ್ಲ. ಹಕ್ಕುಗಳ ಜಾರಿಗಾಗಿ ನೈತಿಕ ಚಾಲನೆ ಸಿಗುವ ಸಂದರ್ಭಗಳಲ್ಲಿ  ಮಾತ್ರ ಅವು ಅರ್ಥವನ್ನು ಪಡೆದುಕೊಳ್ಳುತ್ತವೆ. ನಿರ್ದಿಷ್ಟ ಪ್ರಕರಣದಲ್ಲಿ ಪ್ರಚಲಿತವಾದ ವಿಡಿಯೋ ಚಿತ್ರವು ದೌರ್ಜನ್ಯ ಎಸಗಿದವರ ಪತ್ತೆಗೆ ಪೊಲೀಸರಿಗೆ ಸಹಾಯ ಮಾಡಿದ್ದರಿಂದ ಅಪರಾಧಿಗಳ ಬಂಧನವಾಯಿತಷ್ಟೆ. ಜಾತಿಯ ಅರಾಜಕತೆಯು ಕಾನೂನಿನ ಆಡಳಿತವನ್ನು ಹೊಡೆದುರುಳಿಸುವ ಮುನ್ನ ನಾವು ಕಾನೂನಿನ ಆಡಳಿತವನ್ನು ರಕ್ಷಿಸಿಕೊಳ್ಳಬೇಕಿದೆ. ಪ್ರಭುತ್ವವು ಇಂಥಾ ಅರಾಜಕತೆಗೆ ಪ್ರೇರಣೆ ನೀಡುತ್ತಿದೆಯೋ ಇಲ್ಲವೋ, ಆದರೆ ಅದು ಮೂಕ ಪ್ರೇಕ್ಷಕನಾಗಿ ಮಾತ್ರ ಉಳಿಯದಂತೆಯೂ ನೋಡಿಕೊಳ್ಳಬೇಕಿದೆ.

ಕೃಪೆ: Economic and Political Weekly    ಅನು: ಶಿವಸುಂದರ್ 

                                    

 

Read These Next

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...