ವ್ಯಭಿಚಾರವು ಸಮಷ್ಟಿ ಹಿತಕ್ಕೆ ವಿರುದ್ಧವಾದದ್ದೇ?

Source: sonews | By Staff Correspondent | Published on 20th August 2018, 11:31 PM | State News | National News | Special Report | Don't Miss |

ಸಮಾಜದ ಒಳಿತಿನ ಹೆಸರಿನಲ್ಲಿ ಪ್ರಭುತ್ವವು ಸಮಾಜದ ಪುರುಷಪ್ರಧಾನ ಮೌಲ್ಯಗಳನ್ನು ಎತ್ತಿಹಿಡಿಯುತ್ತಿದೆ.

 ಒಂದು ವ್ಯಭಿಚಾರ ವಿರೋಧೀ ಕಾನೂನಿನ ರಚನೆಗೆ ಅವಕಾಶ ಒದಗಿಸುವ ಭಾರತೀಯ ದಂಡ ಸಂಹಿತೆಯ ೪೯೭ನೇ ಕಲಮಿನ ಸಾಂವಿಧಾನಿಕ ಮಾನ್ಯತೆಯ ಬಗ್ಗೆ ಸುಪ್ರೀಂಕೋರ್ಟಿನಲ್ಲಿ ಇತ್ತೀಚೆಗೆ ವಿಚಾರಣೆಯು ನಡೆಯುತ್ತಿದ್ದ ಸಂದರ್ಭದಲ್ಲಿ ವೈವಾಹಿಕ ಚೌಕಟ್ಟಿನಲ್ಲಿ ಮಹಿಳೆಗಿರುವ ಹಕ್ಕಿನ ಪ್ರಶ್ನೆಗಳು ಚರ್ಚೆಗೊಳಗಾಗಿವೆ. ಬಗ್ಗೆ  ಸುಪ್ರೀಂಕೋರ್ಟು ಕೇಂದ್ರ ಸರ್ಕಾರಕ್ಕೆ ಒಂದು ಸಹಜ-ಸಾಧಾರಣ ಪ್ರಶ್ನೆಯನ್ನು ಕೇಳಿತು: ವ್ಯಭಿಚಾರವನ್ನು ಒಂದು ಶಿಕ್ಷಾರ್ಹ ಅಪರಾಧವನ್ನಾಗಿ ಮಾಡುವುದರಲ್ಲಿ ಇರುವ ಸಮಷ್ಟಿ ಹಿತವೇನು?. ಅದಕ್ಕೆ ಕೇಂದ್ರ ಸರ್ಕಾರವು ಅತ್ಯಂತ ಪ್ರತಿಗಾಮಿ ಉತ್ತರವನ್ನು ನೀಡಿದೆ. ೪೯೭ನೇ ಕಲಮು ವಿವಾಹವೆಂಬ ಸಂಸ್ಥೆಯನ್ನು ಬೆಂಬಲಿಸಿ, ಪರಿರಕ್ಷಿಸಿ, ಕಾಯುತ್ತದೆಂಬ ಕಾರಣವನ್ನೊಡ್ಡಿ ಅದನ್ನು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ. ೪೯೭ನೇ ಕಲಮನ್ನು ರದ್ದುಮಾಡುವುದರಿಂದ ವಿವಾಹವೆಂಬ ಸಂಸ್ಥೆಯನ್ನು ಮತ್ತದರ ಪಾವಿತ್ರ್ಯವನ್ನು ಎತ್ತಿಹಿಡಿಯುವ ಭಾರತೀಯರ ಅಂತರ್ಗತ ಸಾಂಸ್ಕೃತಿಕ ಮೌಲ್ಯಗಳಿಗೆ ಹಾನಿಯುಂಟಾಗುತ್ತದೆಂದು ಅದು ಪ್ರತಿಪಾದಿಸಿದೆ

ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೪೯೭ರ ಪ್ರಕಾರ ಯಾವುದೇ ಪುರುಷನು ಮತ್ತೊಬ್ಬ ಪುರುಷನ ಅನುಮತಿಯಿಲ್ಲದೆ ಆತನ ಹೆಂಡತಿಯೊಂದಿಗೆ ಲೈಂಗಿಕ ಸಂಭೋಗ ಮಾಡುವುದು ಅಪರಾಧ. ಆದರೆ ಬೇರೆ ಹಣ್ಣಿನೊಂದಿಗೆ ಲೈಂಗಿಕ ಸಂಭೋಗದಲ್ಲಿ ತೊಡಗಿರುವ ತನ್ನ ಗಂಡನ ಅಥವಾ ಹೆಣ್ಣಿನ ವಿರುದ್ಧ ಕಾನೂನು ಕ್ರಮ ಜರುಗಿಸುವುದಕ್ಕೆ ಕಾನೂನು ಮಹಿಳೆಗೆ ಅನುಮತಿಸುವುದಿಲ್ಲ. ಹೀಗಾಗಿ ವ್ಯಭಿಚಾರಿ ಹೆಣ್ಣಿನ ಗಂಡನಿಗೆ ಮಾತ್ರ ವ್ಯಭಿಚಾರಿಯ ವಿರುದ್ಧ ಕಾನೂನು ಕ್ರಮ ಜರುಗಿಸುವ ಅವಕಾಶವಿರುತ್ತದೆ.

ಕಾನೂನಿನಡಿ ಕೇವಲ ಪುರುಷನನ್ನು ಶಿಕ್ಷೆಗೊಳಪಡಿಸುವ ಅವಕಾಶವಿದೆಯೇ ವಿನಃ ಮಹಿಳೆಯನ್ನಲ್ಲ. ಇದನ್ನು ಪ್ರಶ್ನಿಸಿ ಈಗಾಗಲೇ ಹಲವಾರು ಅಹವಾಲುಗಳು ದಾಖಲಾಗಿವೆ. ಮಹಿಳೆಗೆ ಲೈಂಗಿಕ ಸ್ವಾತಂತ್ರ್ಯದ ಹಕ್ಕಿದೆ ಎಂಬ ಕಾರಣದಿಂದಾಗಿ ಕಾನೂನಿನಲ್ಲಿ ಮಹಿಳೆಯರ ವಿರುದ್ಧ ಕಾನೂನು ಕ್ರಮ ಜರುಗಿಸುವ ಅವಕಾಶವಿಲ್ಲ ಎಂದು ಭಾವಿಸಿಕೊಳ್ಳುವುದು ತಪ್ಪಾಗುತ್ತದೆ. ಮಹಿಳೆಗೆ ಒಂದು ಸ್ವತಂತ್ರ ಅಭಿಲಾಷೆ ಅಥವಾ ಸ್ವ ಇಚ್ಚೆ ಇರುತ್ತದೆಂದು ಎಂದು ಪರಿಗಣಿಸಲಾಗದ ಪುರುಷಪ್ರಧಾನ ಮನಸ್ಥಿತಿಯೇ ವಾಸ್ತವವಾಗಿ ವ್ಯಭಿಚಾರದಲ್ಲಿ ತೊಡಗಿರುವ ಮಹಿಳೆಂi ವಿರುದ್ಧ ಕಾನೂನುಕ್ರಮ ಜರುಗಿಸದಿರುವುದಕ್ಕೆ ಕಾರಣವೆಂದು ಹಿಂದಿನ ನ್ಯಾಯಾಲಯದ ತೀರ್ಪುಗಳು ಸ್ಪಷ್ಟಪಡಿಸಿವೆ. ಮಹಿಳೆಯನ್ನು ಯಾವಾಗಲೂ ಪುರುಷನ ಲಾಲಸೆಗೆ ಬಲಿಯಾಗುವ ಮತ್ತು  ಸಾಮಾಜಿಕ ಅತಂತ್ರತೆಗೆ ತುತ್ತಾಗಿರುವ ಅಬಲೆಯೆಂದೇ ಪರಿಗಣಿಸಲಾಗುತ್ತದೆ.

ಕೇಂದ್ರ ಸರ್ಕಾರವು ನ್ಯಾಯಾಲಯ ಕೇಳಿದ ಪ್ರಶ್ನೆ ಉತ್ತರಿಸುತ್ತಾ ೪೯೭ನೇ ಕಲಮು ಮದುವೆಯ ಪಾವಿತ್ರ್ಯವನ್ನೂ ಹಾಗೂ ಭಾರತೀಯ ಸಾಂಸ್ಕೃತಿಕ ಮೌಲ್ಯಗಳನ್ನು ರಕ್ಷಿಸುತ್ತದೆ ಎಂದು ಪ್ರತಿಪಾದಿಸುವ ಮೂಲಕ ಎಲ್ಲರಿಗೂ ಯಾವುದು ಹಿತವೆಂಬುದು ತನಗೆ ಮಾತ್ರ ತಿಳಿದಿದೆಯೆಂದು ಪ್ರತಿಪಾದಿಸಿದೆ. ತಮಗೇನು ಹಿತ ಎಂಬುದನ್ನು ತಮ್ಮ ಪರವಾಗಿ ಪ್ರಭುತ್ವವೇ ನಿರ್ಧರಿಸುವ ನಿಲುವನ್ನು ಸ್ತ್ರೀವಾದಿಗಳು ತೀವ್ರವಾಗಿ ಪ್ರಶ್ನಿಸಿದ್ದಾರೆ. ಹೀಗಾಗಿ ಕಾನೂನು ಮಹಿಳೆಯರ ಪಕ್ಷಪಾತಿಯಾಗಿದೆ ಎಂದು ವಾದಿಸುವವರ ವಾದ ಸತ್ಯಕ್ಕೆ ದೂರವಾದದ್ದು ಎಂಬುದಂತೂ ಅತ್ಯಂತ ಸ್ಪಷ್ಟವಾಗಿದೆ.

ವಿಪರ್ಯಾಸವೆಂದರೆ ನ್ಯಾಯಾಲಂiಗಳ ಹಿಂದಿನ ಆದೇಶಗಳು ಮತ್ತು ಪ್ರಭುತ್ವಗಳೆರಡೂ ಸಹ ಮಹಿಳೆಗೆ ವಿವಾಹ ಮತ್ತು ಕುಟುಂಬಗಳೆಂಬ ಸಂಸ್ಥೆಯೊಳಗಡೆ ಸ್ವ ಇಚ್ಚೆಯ ಮತ್ತು  ಸ್ವಂತಿಕೆಯ ಅವಕಾಶವನ್ನು ನಿರಾಕರಿಸುತ್ತವೆ. ಪ್ರಭುತ್ವದ ಧೋರಣೆಯನ್ನು ಪದೇಪದೇ ವಿಮರ್ಶಿಸಿಸುತ್ತಾ ಬಂದಿರುವವರು ಪ್ರಭುತ್ವ ಧೋರಣೆಯು ವಿವಾಹದ ಸಂಸ್ಥೆಯೊಳಗೆ ಮಹಿಳೆಯ ಅತಂತ್ರ ಪರಿಸ್ಥಿತಿಯನ್ನು ಮತ್ತಷ್ಟು ಹೆಚ್ಚುಗೊಳಿಸುತ್ತದೆ ಎಂದು ಆರೋಪಿಸುತ್ತಿದ್ದಾರೆ.

ಯಾವುದನ್ನು ಸಮಷ್ಟಿ ಹಿತ ಎಂದು ಪ್ರಭುತ್ವವು ಪರಿಗಣಿಸುತ್ತಿದೆಯೋ ಅದು ಮಹಿಳೆಯ ಲೈಂಗಿಕತೆಯ ಬಗ್ಗೆ ಪ್ರಚುರದಲ್ಲಿರುವ ಪುರುಷಪ್ರಧಾನ ಧೋರಣೆಯನ್ನು ಎತ್ತಿಹಿಡಿಯುವುದನ್ನೂ ಒಳಗೊಂಡಿಲ್ಲವೇ ಎಂದು ಪ್ರಶ್ನಿಸುವ ಅಗತ್ಯವಿದೆ. ಸಮಾಜದಲ್ಲಿ ೪೯೭ನೇ ಕಲಮಿನ ಬಗ್ಗೆ ನಡೆಯುತ್ತಿರುವ ಚರ್ಚೆಗಳು ಮತ್ತು ಸುಪ್ರೀಂ ಕೋರ್ಟಿನಲ್ಲಿ ನಡೆಯುತ್ತಿರುವ ವಾದ ಮತ್ತು ವಿಚಾರಣೆಯ ಸಾರಾಂಶಗಳು ಒಂದನ್ನಂತೂ ಸ್ಪಷ್ಟಪಡಿಸುತ್ತಿವೆ-ವ್ಯಭಿಚಾರದ ಬಗೆಗಿನ ಭಾರತದ ಕಾನೂನು ಖಾಸಗಿತನ, ಲಿಂಗ ಪಕ್ಷಪಾತ, ನೈತಿಕತೆಯೆ ಧೋರಣೆಗಳು ಮತ್ತು ವಿವಾಹವೆಂಬ ಸಂಸ್ಥೆಯ ಬಗ್ಗೆ ಪ್ರಭುತ್ವ ಮತ್ತು ಸಮಾಜಕ್ಕಿರುವ ಹಿತಾಸಕ್ತಿಗಳ ಸಿಕ್ಕಿನಲ್ಲಿ ಸಿಲುಕಿಕೊಂಡಿದೆ. ಅಷ್ಟು ಮಾತ್ರವಲ್ಲ, ೪೯೭ನೇ ಕಲಮು ವಿವಾಹಿತ ಪುರುಷ ಮತ್ತೊಬ್ಬನ ಹೆಂಡತಿಯನ್ನು ಹೊರತು ಪಡಿಸಿ ಮಿಕ್ಕಂತೆ ವಿವಾಹೇತರ ಲೈಂಗಿಕ ಸಂಬಂಧವನ್ನು ಹೊಂದುವುದನ್ನು ಅಪರಾಧವೆಂದು ಪರಿಗಣಿಸದ ಮೂಲಕ ಹೆಣ್ಣು ಮಾತ್ರ ವಿವಾಹಕ್ಕೆ ನಿಷ್ಟೆಯನ್ನು ತೋರಬೇಕೆಂಬ ನಂಬಿಕೆಗೂ ಇಂಬುಕೊಡುತ್ತದೆ. ಹಾಗೆಯೇ ಆಕೆಯ ಗಂಡ ಅನುಮತಿಸಿದರೆ ಪರಪುರುಷನೊಂದಿಗೆ ಲೈಂಗಿಕ ಸಂಬಂಧ ಹೊಂದುವುದು ಕಾನೂನಿನ ಪ್ರಕಾರ ವ್ಯಭಿಚಾರವಲ್ಲ. ಸ್ಪಷ್ಟವಾಗಿ ಕಾಣುವಂತೆ ಮಹಿಳೆಯ ದೇಹದ ಮೇಲೆ ಗಂಡನಿಗೆ ಹಕ್ಕಿರುವುದು ಮಾತ್ರವಲ್ಲದೆ ಅದನ್ನು ಲೈಂಗಿಕವಾಗಿ ಯಾರು ಬಳಸಬಹುದೆಂಬ ಅಧಿಕಾರವನ್ನು ಹೊಂದಿರುತ್ತಾನೆ ಎಂದು ಕಾನೂನು ಭಾವಿಸುತ್ತದೆ.

ಮದುವೆಯೆಂಬ ತೀರಾ ವೈಯಕ್ತಿಕ ಮತ್ತು ಆಪ್ತ ಸಂಬಂಧಗಳಲ್ಲಿ ಈರ್ವರು ಹೇಗೆ ಸಂಬಂಧವನ್ನು ನಿರ್ವಹಿಸುತ್ತಾರೆ ಎಂಬುದು ಆಯಾ ದಂಪತಿಗಳಿಗೆ ಬಿಟ್ಟಿರುವ ವಿಚಾರವಾದರೂ ಭಾರತ ಪ್ರಭುತ್ವವು ಮಾತ್ರ  ಖಾಸಗಿತನದ ಪರಿಕಲ್ಪನೆ ಮತ್ತು ಖಾಸಗಿತನದ ಹಕ್ಕು ಇಲ್ಲಿ ಅನ್ವಯವಾಗುವುದಿಲ್ಲ ಎಂದು ಭಾವಿಸುತ್ತದೆ. ಹೀಗಾಗಿ ವಿವಾಹದಂತ ಆಪ್ತ ಸಂಬಂಧಗಳೊಳಗಿನ ವರ್ತನೆಗಳು ಮತ್ತು ಇಬ್ಬರು ವಯಸ್ಕರು ಪರಸ್ಪರ ಸಮ್ಮತಿಯೊಂದಿಗೆ ರೂಢಿಸಿಕೊಳ್ಳುವ ಲೈಂಗಿಕ ಸಂಬಂಧಗಳು ಕಾನೂನು ವಿವಾದಕ್ಕೆ ಸಂಬಂಧಪಟ್ಟ ಸಂಗತಿಗಳೇ ಎಂಬುದೇ   ವಿಷಯದ ಅಸಲೀ ಸಾರವಾಗಿದೆ.

ಒಂದು ಮದುವೆಯನ್ನು ಕಾನೂನಾತ್ಮಕವಾಗಿ ಅನೂರ್ಜಿತಗೊಳಿಸುವ ಸಂದರ್ಭದಲ್ಲಿ ಮತ್ತು ಪ್ರಕ್ರಿಯೆಯಲ್ಲಿ ಯಾರೊಬ್ಬರೂ ತಾರತಮ್ಯಕ್ಕೆ ಗುರಿಯಾಗದಂತೆ ನೋಡಿಕೊಳ್ಳುವ ಸಲುವಾಗಿ ಕಾನೂನಿನ ಮೊರೆ ಹೋಗಬಹುದು. ಹೀಗಾಗಿ ವೈವಾಹಿಕ ಸಂಬಂಧದಲ್ಲಿ ನಿಷ್ಟೆಯನ್ನು ನಿರೀಕ್ಷಿಸುವುದು ತಪ್ಪೋ ಸರಿಯೋ ಎಂಬುದಾಗಲೀ, ವ್ಯಭಿಚಾರವು ಲೈಂಗಿಕ ಸ್ವೇಚ್ಚಾಚಾರವೇ ಎಂಬ ಫ್ರಶ್ನೆಗಳಾಗಲೀ ಇಲ್ಲಿ ಮುಖ್ಯವಲ್ಲ. ಇಲ್ಲಿ ಅತ್ಯಂತ ಮುಖ್ಯವಾಗಿರುವ ಪ್ರಶ್ನೆ ಇಬ್ಬರು ವಯಸ್ಕರ ನಡುವಿನ ಅತ್ಯಂತ ಸಂಕೀರ್ಣವೂ, ಸೂಕ್ಷ್ಮವೂ ಮತ್ತು ವೈಯಕ್ತಿಕವೂ ಆದ ಸಂಬಂಧವನ್ನು ನ್ಯಾಯಯುತವಾಗಿ ನಿರ್ವಹಿಸಲಾಗುತ್ತಿದೆಯೋ ಇಲ್ಲವೋ ಎಂಬುದರ ಮೇಲುಸ್ತುವಾರಿಯನ್ನು ಪ್ರಭುತ್ವವು ಮಾಡಬಲ್ಲದೇ?... ಮಾಡಬೇಕೆ? ಎಂಬುದೇ ಆಗಿದೆ.

ಕೃಪೆ: Economic and Political Weekly   ಅನು: ಶಿವಸುಂದರ್    

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...