ಸಸಿ ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸಬೇಕು

Source: so news | By Manju Naik | Published on 20th June 2019, 11:58 PM | State News | Don't Miss |

 

ಮಂಡ್ಯ:ವಿಶ್ವ ಪರಿಸರ ದಿನಾಚರಣೆ ಈಗಾಗಲೇ ಮುಗಿದಿದ್ದರೂ ಪ್ರತಿಯೊಬ್ಬರೂ ಪ್ರತಿನಿತ್ಯ ಸಸಿ ನೆಡುವ ಕಾಯಕ ಮಾಡಿದಾಗ ಮಾತ್ರ ಪರಿಸರ ಜಾಗೃತಿ ಮೂಡಿಸಲು ಸಾಧ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಹೆಚ್.ಎಸ್ ಮಂಜುನಾಥರವರು ಅವರು ತಿಳಿಸಿದರು. 
ಅವರು ಜೂನ್ 18 ರಂದು ಮಂಡ್ಯ ತಾಲ್ಲೂಕು ದುದ್ದ ಹೋಬಳಿ, ಮುದಗಂದುÁರು ಗ್ರಾಮದ ಫ್ರೌಡಶಾಲಾ ಆವರಣದಲ್ಲಿ ವಿಶ್ವ ಪರಿಸರ ಮತ್ತು ಕಾನೂನು ಅರಿವು ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಹೆಚ್.ಎಸ್ ಮಂಜುನಾಥರವರು ಸಸಿ ನೆಡುವ ಮುಖಾಂತರ ಕಾರ್ಯಕ್ರಮವನ್ನು ಉದ್ಫಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಚಿಕ್ಕ ವಯಸ್ಸಿನಲ್ಲೆ ಪರಿಸರ ಮತ್ತು ಕಾನೂನಿನ ಬಗ್ಗೆ ಅರಿವು ಮೂಡಿಸಿಕೊಂಡಾಗ ಮಾತ್ರ ಉತ್ತಮವಾದ ಪರಿಸರ ಕಾಣಲು ಸಾಧ್ಯ ಎಂದರು. ವಿಶ್ವದಾದ್ಯಂತ ಹಲವಾರು ಕಡೆ ಜನಜಾಗೃತಿ ಮೂಡಿಸುತ್ತಿದ್ದು, ಸಿಗರೇಟು ಸೇವನೆಯಿಂದ ಸೇದುವ ವ್ಯಕ್ತಿಗಿಂತ ಬರುವ ಹೊಗೆಯನ್ನು ಸೇವಿಸುವ ವ್ಯಕ್ತಿಗೂ ಹೆಚ್ಚು ಹೆಚ್ಚು ಆರೋಗ್ಯದಲ್ಲಿ ಹಾನಿ ಉಂಟಾಗಲಿದೆ. ಜೀವನವನ್ನು ಆರಿಸಿಕೊಳ್ಳಿ ಆದರೆ, ತಂಬಾಕನಲ್ಲ ಎಂಬ ಘೋಷಣೆಯನ್ನು ಪ್ರತಿಯೊಬ್ಬರು ಸಾರಬೇಕೆಂದರು. 
ಇದೇ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವಕೀಲ ಎಂ. ಗುರುಪ್ರಸಾದ್‍ರವರು ಮಾತಾನಾಡಿ ಮಂಡ್ಯ ಜಿಲ್ಲೆಯ ಭೌಗೌಳಿಕ ಪ್ರದೇಶದಲ್ಲಿ ಶೇಕಡ 36 % ಅರಣ್ಯ ಮತ್ತು ಗಿಡಮರಗಳು ಇರಬೇಕಾಗಿದ್ದು ಪ್ರಸ್ತುತ ಕೇವಲ 16% ಅರಣ್ಯ ಪ್ರದೇಶವಿದ್ದು ಇದರಿಂದ ನೀರಿನ ಅಂತರ್ಜಲ ಕುಸಿತವಾಗಿದ್ದು ಪ್ರತಿಂಬ್ಬ ವ್ಯಕ್ತಿಯು ಜಿಲ್ಲೆಯಾಧ್ಯಂತ ಕನಿಷ್ಠ 20 ಸಸಿ ನೆಡುವ ಯೋಜನೆ ರೂಪಿಸಿಕೊಳ್ಳಬೇಕೆಂದರು. ಪ್ರಸ್ತುತ ಒಬ್ಬ ವ್ಯಕ್ತಿ ಪ್ರತಿನಿತ್ಯ 134 ಲೀಟರ್ ನೀರನ್ನು 2019ರ ಸಾಲಿನಲ್ಲಿ ಬಳಸುತ್ತಿದ್ದು ಪ್ರಕೃತಿಯನ್ನು ನಾವು ಭವಿಷ್ಯದಲ್ಲಿ ಕಾಪಾಡದಿದ್ದರೆ ಕುಡಿಯುವ ನೀರಿಗೂ ಆಹಾಕಾರ ಬರುತ್ತದೆ. ಇಂತಹ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ಜಾಗೃತಿ ವಹಿಸಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಎಸ್.ಪಿ. ಶಿವಕುಮಾರ್ ಮಾತಾನಾಡಿ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು ಪಠ್ಯಕ್ರಮದ ಜೊತೆ ವಿದ್ಯಾರ್ಥಿಗಳು ಪರಿಸರದ ಬಗ್ಗೆ ಜಾಗೃತಿ ವಹಿಸಬೇಕೆಂದರು. ವೇದಿಕೆಯಲ್ಲಿ ಹಿರಿಯ ಶಿಕ್ಷಕ ಬೋರೇಗೌಡ, ಭರತ್, ಶಿಕ್ಷಕರಾದ ರಮ್ಶ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.

Read These Next