ಜುಲೈ 26ರಂದು ಉದ್ಯಮಶೀಲತಾ ಜಾಗೃತಿ ಶಿಬಿರ

Source: so news | By MV Bhatkal | Published on 20th July 2021, 8:05 PM | Coastal News | Don't Miss |

ಕಾರವಾರ: ಉದ್ಯಮ ಪ್ರಾರಂಭಿಸಲು ಆಸಕ್ತಿಯುಳ್ಳ ಯುವಕ-ಯುವತಿಯರಿಗಾಗಿ ಕೌಶಲ್ಯಾಭಿವೃದ್ಧಿ ಉದ್ಯಮಶೀ¯ತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ(ಸಿಡಾಕ್), ಜನ ಶಿಕ್ಷಣ ಸಂಸ್ಥಾನದಿಂದ ಜುಲೈ 26ರಂದು ಮುಂಜಾನೆ 11ಕ್ಕೆ ಶಿರಸಿ ತಾಲೂಕಿನ ಮಳಗಿಯ ದಿ. ಹನುಮಂತಪ್ಪಾ ತಿಮ್ಮಪ್ಪಾ ಪಾಟೀಲ ಸಮುದಾಯ ಭವನದಲ್ಲಿ ಒಂದು ದಿನದ ಉದ್ಯಮಶೀಲತಾ ಜಾಗೃತಿ ಶಿಬಿರ ಆಯೋಜಿಸಲಾಗಿದೆ.
ಶಿಬಿರದಲ್ಲಿ ಉದ್ಯಮಶೀಲರ ಸಾಮಥ್ರ್ಯಗಳು, ಉದ್ಯಮ ಸ್ಥಾಪಿಸುವುದಕ್ಕೆ ಲಭ್ಯವಿರುವ ಸರ್ಕಾರದ ಯೋಜನೆಗಳು, ಉದ್ಯಮ ಸ್ಥಾಪಿಸಲು ಸಹಾಯ ಮತ್ತು ಸೌಲಭ್ಯಗಳನ್ನು ಒದಗಿಸುತ್ತಿರುವ ಸಂಸ್ಥೆಗಳ ಪಾತ್ರ, ಯಶಸ್ವಿ ಉದ್ಯಮಶೀಲರ ಅನುಭವ ಸೇರಿದಂತೆ ವಿವಿಧ ವಿಷಯಗಳ ಕುರಿತು ತಿಳಿಸಲಾಗುತ್ತಿದೆ.
 ಉದ್ಯಮ ಪ್ರಾರಂಭಿಸಲು ಉತ್ಸುಕರಾಗಿರುವ ಯುವಕ/ಯುವತಿಯರು ಶಿಬಿರದಲ್ಲಿ ಭಾಗವಹಿಸಬಹುದು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದವರಿಗೆ ಆದ್ಯತೆ ನೀಡಲಾಗುತ್ತಿದ್ದು, 18 ರಿಂದ 40 ವರ್ಷ ವಯಸ್ಸಿನವರಾಗಿರಬೇಕು. ಕನಿಷ್ಠ ಓದಲು ಹಾಗೂ ಬರೆಯಲು ಬರುವವರು ಆಗಿರಬೇಕು. ಹೆಚ್ಚಿನ ಮಾಹಿತಿಗಾಗಿ ಸಿಡಾಕ್‍ನ ಉಪ ನಿರ್ದೇಶಕ ಶಿವಾನಂದ ವೆಂ. ಎಲಿಗಾರ(ಮೋಬೈಲ್ ಸಂಖ್ಯೆ: 9448812974) ಹಾಗೂ ತರಬೇತುದಾರ ಶಿವರಾಜ ಹೆಳವಿ(8722708795) ಅವರನ್ನು ಸಂಪರ್ಕಿಸಬಹುದು ಎಂದು ಸಿಡಾಕ್‍ನ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Read These Next

ಗಡಿಭಾಗಕ್ಕೆ ಹೊಂದಿಕೊಂಡಿರುವ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚಲು ಜಿಲ್ಲಾಧಿಕಾರಿ ಆದೇಶ

ಮಂಗಳೂರು - ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ, ...

ಕಾರವಾರ: ಅರ್ಜಿ ಆಹ್ವಾನ

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ 2021-22 ನೇ ...

ಕಾರವಾರ: ಸಹಾಯವಾಣಿ ಪ್ರಾರಂಭ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳ ಮಾಹಿತಿ ಕುರಿತು ಸಾರ್ವಜನಿಕರು ಹಾಗೂ ಫಲಾನುಭವಿಗಳಿಗೆ ಅನುಕೂಲವಾಗುವಂತೆ 24/7 ...

ಬಾಡಿಗೆ ಆಧಾರಿತ ಕೃಷಿ ಯಂತ್ರೋಪಕರಣಗಳ ಬಳಸಿ ಕಡಿಮೆ ವೆಚ್ಚದಲ್ಲಿ ಸುಧಾರಿತ ಕೃಷಿ ಮಾಡಿ ಆದಾಯ ಹೆಚ್ಚಿಸಿಕೊಳ್ಳಲು ರೈತರು ಶ್ರಮಿಸಬೇಕು : ಶಾಸಕ ಅಮೃತ ದೇಸಾಯಿ

ಧಾರವಾಡ : ರೈತರ ಕೃಷಿ ಉತ್ಪನ್ನಗಳನ್ನು ದ್ವಿಗುಣಗೊಳಿಸಿ ಆದಾಯ ಹೆಚ್ಚಿಸಲು ರಾಜ್ಯ ಸರ್ಕಾರವು ರೈತರಿಗೆ ಕೃಷಿ ಕಾರ್ಯಗಳಿಗಾಗಿ ಕಡಿಮೆ ...

ನರ್ಮ್ ಅಭಿಯಾನದ ಸಂಜೀವಿನಿ ಕಾರ್ಯಕ್ರಮವು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸಂಜೀವಿನಿಯಾಗಿದೆ -ಜಿ.ಪಂ. ಸಿಇಓ ಡಾ.ಬಿ. ಸುಶೀಲಾ

ಧಾರವಾಡ : ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ (ನರ್ಮ್) ಅಭಿಯಾನದಡಿ ಆರಂಭಿಸಿರುವ ಸಂಜೀವಿನಿ ಕಾರ್ಯಕ್ರಮವು ಮಹಿಳೆಯರ ...

ಸಾರ್ವಜನಿಕರು ಜಿಲ್ಲಾ ಮೆಗಾ ಲೋಕ ಅದಾಲತ್‍ಗೆ ಸಹಕರಿಸಿ. ಜಿಲ್ಲಾ ಬೃಹತ್ ಲೋಕ್ ಅದಾಲತ್ ಗೆ ವಸ್ತ್ರಮಠ ಚಾಲನೆ

ಮಂಡ್ಯ - ಕಕ್ಷಿದಾರರು, ವಕೀಲರು ನ್ಯಾಯಾಲಯದಲ್ಲಿ ಇರುವಂತಹ ರಾಜಿಯಾಗುವಂತ ವ್ಯಾಜ್ಯಗಳನ್ನು ರಾಜಿ ಮಾಡಿಕೊಂಡು ...

ಕಾರವಾರ-ಅಂಕೋಲಾ ನೆರೆಪೀಡಿತ ಪ್ರದೇಶಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ. ಕೆಪಿಸಿ ಅಧಿಕಾರಿಗಳು ತರಾಟೆಗೆ

ಕಾರವಾರ : ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರವಾರ, ಅಂಕೋಲಾದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು. ...