ಫಿಫಾ ವಿಶ್ವಕಪ್ 2018: ಫಿಟ್ನೆಸ್​ಗಾಗಿ ಭಾರತದ ದೇಸಿ ಕ್ರೀಡೆ ಮೊರೆ ಹೋದ ಇಂಗ್ಲೆಂಡ್ ಫುಟ್ಬಾಲ್ ಆಟಗಾರರು  

Source: so news | By MV Bhatkal | Published on 17th June 2018, 7:40 PM | Sports News |

ರಷ್ಯಾದ ಆತಿಥ್ಯದಲ್ಲಿ ನಡೆಯುತ್ತಿರುವ 21ನೇ ಫುಟ್ಬಾಲ್ ಹಬ್ಬ ಅಭಿಮಾನಿಗಳನ್ನು ತನ್ನತ್ತ ಸೆಳೆದಿದೆ. ಈಗಾಗಲೇ ಲೀಗ್ ಹಂತದ ಪಂದ್ಯಗಳು ನಡೆಯುತ್ತಿದ್ದು ಬಲಿಷ್ಠ ತಂಡಗಳ ಹೋರಾಟ ಅಭಿಮಾನಿಗಳನ್ನು ರಂಚಿಸುತ್ತಿದೆ. ಹಾಗೇ ನಾಳೆ ವಿಶ್ವಕಪ್​​​ನಲ್ಲಿ ತನ್ನ ಮೊದಲ ಪಂದ್ಯವನ್ನು ಆಡುತ್ತಿರುವ ಇಂಗ್ಲೆಂಡ್ ತಂಡ ಫಿಟ್ನೆಸ್​ಗಾಗಿ ಭಾರತದ ದೇಸಿ ಕ್ರೀಡೆಯ ಮೊರೆ ಹೋಗಿದೆ.
‘ಜಿ’ ಗುಂಪಿನಲ್ಲಿ ಸ್ಥಾನ ಪಡೆದಿರುವ ಬಲಿಷ್ಠ ಇಂಗ್ಲೆಂಡ್ ತಂಡ ನಾಳೆ ಟುನಿಶಿಯಾ ಸವಾಲನ್ನು ಸ್ವೀಕರಿಸಲಿದೆ. ಆದರೆ ಅದಕ್ಕೂ ಮೊದಲು ಇಂಗ್ಲೆಂಡ್ ​​ ಫುಟ್ಬಾಲ್ ತಂಡ ವಿಭಿನ್ನ ರೀತಿಯಲ್ಲಿ ಅಭ್ಯಾಸಕ್ಕಿಳಿದಿದೆ. ತನ್ನ ಮೊದಲ ಪಂದ್ಯವನ್ನು ಆಡಲು ಫಿಟ್ನೆಸ್​ಗಾಗಿ ಇಂಗ್ಲೆಂಡ್ ತಂಡ, ಭಾರತದ ಅತ್ಯಂತ ಪುರಾತನ ಕ್ರೀಡೆ ಕಬಡ್ಡಿ ಆಡುವ ಮೂಲಕ ಗಮನ ಸೆಳೆಯುತ್ತಿದೆ. ಸ್ಟಾರ್ ಆಟಗಾರರಾದ ಹ್ಯಾರಿ ಕೇನ್, ಡ್ಯಾನಿ ವೆಲ್‌ಬೆಕ್, ಗ್ಯಾರಿ ಕಹಿಲ್, ಜೆಸ್ಸಿ ಲಿಂಗಾರ್ಡ್ ಸಹಿತ ಹಲವರು ಅಭ್ಯಾಸದ ವೇಳೆ ಕಬಡ್ಡಿ ಆಡಿ ಸಂಭ್ರಮಿದ್ದಾರೆ. ಇಂಗ್ಲೆಂಡ್ ಕೋಚ್ ಗಾರೆತ್ ಸೌತ್‌ಗೇಟ್ ಹೊಸತನದ ಮೂಲಕ ಇಂಗ್ಲೆಂಡ್ ಪಾಳಯದಲ್ಲಿ ಹುರುಪು ಮೂಡಿಸುತ್ತಿದ್ದಾರೆ.
ಒಟ್ಟಿನಲ್ಲಿ ಇಂಗ್ಲೆಂಡ್​ ತಂಡ ವಿಭಿನ್ನ ರೀತಿಯಲ್ಲಿ ನಾಳಿನ ಪಂದ್ಯಕ್ಕೆ ಸಜ್ಜಾಗುತ್ತಿದ್ದು, ಟುನಿಶಿಯಾ ವಿರುದ್ಧ ಸೆಣಸಾಡುವ ಮೂಲಕ ತನ್ನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.

Read These Next

ಕಾರವಾರ: 61ನೇ ನ್ಯಾಶನಲ್ ರೋಲರ್ ಹಾಕಿ ಚಾಂಪಿಯನ್ ಶಿಪ್. ಒಂದು ಬೆಳ್ಳಿ, ಎರಡು ಕಂಚು‌ ಗಳಿಸಿದ ಕರ್ನಾಟಕ.

ಡಿಸೆಂಬರ್ 11ರಿಂದ ಚಂಡಿಗಡನಲ್ಲಿ ನಡೆಯುತ್ತಿರುವ 61ನೇ ರಾಷ್ಟ್ರೀಯ ರೋಲರ್ ಹಾಕಿ ಚಾಂಪಿಯನ್ ಶಿಫ್‌ಲ್ಲಿ ಕರ್ನಾಟಕ ತಂಡ ಗಮನಾರ್ಹ ಸಾಧನೆ ...

ಟಿ20 ವಿಶ್ವಕಪ್: ಭಾರತೀಯರಿಗೆ ದೀಪಾವಳಿ ಗಿಫ್ಟ್: ಕೊಹ್ಲಿ ಅದ್ಭುತ ಆಟ; ಪಾಕ್ ವಿರುದ್ಧ ಭಾರತಕ್ಕೆ ವಿರೋಚಿತ ಗೆಲುವು!

ಟಿ20 ವಿಶ್ವಕಪ್: ಭಾರತೀಯರಿಗೆ ದೀಪಾವಳಿ ಗಿಫ್ಟ್: ಕೊಹ್ಲಿ ಅದ್ಭುತ ಆಟ; ಪಾಕ್ ವಿರುದ್ಧ ಭಾರತಕ್ಕೆ ವಿರೋಚಿತ ಗೆಲುವು!

ಕೆಲ ಪಂದ್ಯಗಳಲ್ಲಿ ಕೊಹ್ಲಿ ಓಪನರ್ ಆಗಿ ಆಡಬಹುದು; ಆದರೆ ಟಿ20 ವಿಶ್ವಕಪ್ ನಲ್ಲಿ ಮಾತ್ರ ರಾಹುಲ್ ಓಪನರ್: ರೋಹಿತ್

ಕೆಲ ಪಂದ್ಯಗಳಲ್ಲಿ ಕೊಹ್ಲಿ ಓಪನರ್ ಆಗಿ ಆಡಬಹುದು; ಆದರೆ ಟಿ20 ವಿಶ್ವಕಪ್ ನಲ್ಲಿ ಮಾತ್ರ ರಾಹುಲ್ ಓಪನರ್: ರೋಹಿತ್