ಸ್ಮಾರ್ಟ್ ಫೋನ್ ನೀಡಿ ವಿದ್ಯಾರ್ಥಿಯ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ   

Source: sonews | By Staff Correspondent | Published on 29th September 2020, 7:03 PM | Coastal News |

ಭಟ್ಕಳ: ಪ್ರತಿಭಾವಂತ ವಿದ್ಯಾರ್ಥಿಯೋರ್ವನಿಗೆ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಿದ್ದ ಸ್ಮಾರ್ಟ ಫೋನ್ ಒಂದನ್ನು ಇಲ್ಲಿನ ನಾಮಧಾರಿ ಸಮಾಜದ ಅಧ್ಯಕ್ಷ ವಿವಿಧ ಮುಖಂಡರಿಂದ ಹಣ ಸಂಗ್ರಹಿಸಿ ಫೋನ್ ಖರೀಧಿಸಿಕೊಟ್ಟು ಮಾನವೀಯತೆಯನ್ನು ಮೆರೆದಿದ್ದಾರೆ. 

ಇಲ್ಲಿನ ಸಿದ್ಧಾರ್ಥ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ. ಮುಗಿಸಿದ ವಿದ್ಯಾರ್ಥಿ ಹರಕಿಶನ್ ದೇವಡಿಗ ಈತನು ದ್ವಿತೀಯ ಪಿ.ಯು.ಸಿ.ಯಲ್ಲಿ ಅತ್ಯುತ್ತಮ ದರ್ಜೆಯಲ್ಲಿ ಉತ್ತೀರ್ಣನಾಗಿದ್ದು ಆರ್ಥಿಕವಾಗಿ ತೀರಾ ಹಿಂದುಳಿದ ಈತನಿಗೆ ಮುಂದಿನ ವಿದ್ಯಾಭ್ಯಾಸವನ್ನು ಕೃಷಿ ಪದವಿ ಪಡೆಯುವುದಾಗಿತ್ತು. ಆದರೆ ಇಂದು ಪ್ರತಿಯೊಂದಕ್ಕೂ ಸ್ಮಾರ್ಟ ಫೋನ್ ಅಗತ್ಯವಾಗಿದ್ದು ವಿಷಯ ತಿಳಿದ ನಾಮಧಾರಿ ಸಂಘದ ಅಧ್ಯಕ್ಷ ಎಂ.ಆರ್. ನಾಯ್ಕ ಅವರು ಸಮಾನ ಮನಸ್ಕ ಕೆಲವರೊಂದಿಗೆ ಮಾತನಾಡಿ ಹತ್ತು ಸಾವಿರ ರೂಪಾಯಿಯ ಉತ್ತಮ ಸ್ಮಾರ್ಟ ಫೋನ್ ಕೊಡಿಸಿದರು. 

ಸ್ಮಾರ್ಟ ಫೋನ್ ಹಸ್ತಾಂತರಿಸಿದ ಎಂ.ಆರ್.ನಾಯ್ಕ ಅವರು ಸ್ಮಾರ್ಟ ಬಾಯ್ ಸ್ಮಾರ್ಟ ಫೋನ್ ಎಂದು ಹೇಳುತ್ತಾ ಈತ ಮುಂದೆ ಉತ್ತಮ ವಿದ್ಯಾಭ್ಯಾಸ ಮಾಡಿ ಒಳ್ಳೆಯ ಪ್ರಜೆಯಾಗಲಿ ಎಂದು ಹಾರೈಸಿದರು. ಉಪಸ್ಥಿತರಿದ್ದ ಶಂಭು ಹೆಗಡೆ ಅವರು ವಿದ್ಯಾರ್ಥಿಗೆ ಸಹಕರಿಸಿದವರನ್ನು ಸ್ಮರಿಸಿದರು. 

ಸಿದ್ಧಾರ್ಥ ಕಾಲೇಜಿನ ಪ್ರಾಂಶುಪಾಲೆ ಅರ್ಚನಾ ಯು. ಮಾತನಾಡಿ ವಿದ್ಯಾರ್ಥಿಯು ತೀರಾ ಬಡಕುಟುಂಬದಿಂದ ಬಂದವನಾಗಿದ್ದು ಎನಾದರು ಸಹಾಯ ಮಾಡಬೇಕೆನ್ನುವ ಹಂಬಲ ಇತ್ತು. ಆತನಿಗೆ ಮುಂದೆಯೂ ನಾಗರೀಕರ ಸಹಕಾರ ಅಗತ್ಯವಿದೆ ಎಂದರು. 

ಸ್ಮಾರ್ಟ ಫೋನ್ ಪಡೆದ ವಿದ್ಯಾರ್ಥಿ ಹರಕಿಶನ್ ಮಾತನಾಡಿ ವಿದ್ಯಾಭ್ಯಾಸಕ್ಕೆ ತುಂಬಾ ಸಹಾಯ ಮಾಡಿದ ಅರ್ಚನಾ ಮೇಡಂ ಹಾಗೂ ಸ್ಮಾರ್ಟ ಫೋನ್ ಕೊಡಿಸಿದ ಮಹನೀಯರುಗಳಿಗೆ ಧನ್ಯವಾದಗಳನ್ನು ಹೇಳುತ್ತಾ ಮುಂದಿನ ದಿನಗಳಲ್ಲಿ ಉತ್ತಮ ವಿದ್ಯಾಭ್ಯಾಸ ಮಾಡಿ ತಮ್ಮ ಹಾರೈಕೆಗಳನ್ನು ನಿಜವಾಗಿಸುತ್ತೇನೆ ಎಂದರು ಹೇಳಿದನು. 

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...