ಫಾರೆಸ್ಟರಗಳ ಮೇಲೆ ಕಾಡಾನೆ ದಾಳಿ : ಪ್ರಾಣಾಪಾಯದಿಂದ ಪಾರು

Source: sonews | By Staff Correspondent | Published on 8th December 2019, 11:30 PM | Coastal News |

ಮುಂಡಗೋಡ : ಕಾಡಾನೆಗಳನ್ನು ಓಡಿಸಲು ಹೋಗಿದ್ದ ಅರಣ್ಯ ಇಲಾಖೆ ಯ ಸಿಬ್ಬಂದಿ ಮೇಲೆ ಗಂಡಾನೆ ಬೆನ್ನಟ್ಟಿದ್ದ ಪರಿಣಾಮ ಇಬ್ಬರು ಫಾರೆಸ್ಟರ ಜೀವಪಾಯದಿಂದ ಪಾರಾದ ಘಟನೆ ಚವಡಳ್ಳಿ ಅರಣ್ಯ ಪ್ರದೇಶದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಡಿ.4 ರಂದು ರಾತ್ರಿ  ತಾಲೂಕಿನ ಚೌವಡಳ್ಳಿ ಅರಣ್ಯ ಪ್ರದೇಶದಲ್ಲಿ  ಅರಣ್ಯ ಇಲಾಖೆ ಪಟಾಕಿ ಸಿಡಿಸಿ ಕಾಡಾನೆಗಳನ್ನು ಓಡಿಸುವ ಕಾರ್ಯಾಚರಣೆ ಮಾಡುತ್ತಿರುವಾಗ ಗಂಡಾನೆಯೊಂದು ಅರಣ್ಯ ಇಲಾಖೆಯ ಸಿಬ್ಬಂದಿಗಳ ಮೇಲೆ ದಾಳಿ ನಡೆಸಲು ಬೆನ್ನಟ್ಟಿದೆ ಪ್ರಾಣವನ್ನು ಉಳಿಸುಕೊಳ್ಳಲು ಸಿಬ್ಬಂದಿ ದಿಕ್ಕಾಪಾಲಾಗಿ ಓಡಿದ್ದಾರೆ ಆದರೆ ಫಾರೆಸ್ಟರಗಳಾದ ಬಸವರಾಜ ಪೂಜಾರ ಹಾಗೂ ಫಕ್ಕಿರೇಶ ಸುಣಗಾರ ರತ್ತ ದಾಳಿನಡೆಸಲು ಆನೆ ಓಡಿಬರಲು ಪ್ರಾರಂಭಿಸಿದ ಪರಿಣಾಮ ಇಬ್ಬರು ಫಾರೆಸ್ಟರಗಳನ್ನು ದಾಳಿಯಿಂದ ತಪ್ಪಿಸಿಕೊಳ್ಳಲು ಓಡಲು ಪ್ರಾರಂಭಿಸಿ ಕತ್ತಲಲ್ಲಿ ಸುಮಾರು ಒಂದು ಮೀಟರ್ ಆಳದ ಕಂದಕದಲ್ಲಿ ಬಂದು ಬಿದ್ದಿದ್ದಾರೆ ಆನೆ ಬಂದು ಕಂದಕದ ಹತ್ತಿರ ಬಂದು ನಿಂತಿದೆ ಇತರೆ ಸಿಬ್ಬಂದಿಗಳು ಅವರ ಹೆಸರು ತೆಗೆದುಕೊಂಡು ಕೂಗಿದ್ದಾರೆ ಕಂದಕ ದಲ್ಲಿ ಬಿದ್ದಿರುವ ಫಾರೆಸ್ಟರಗಳು ಯಾವುದಕ್ಕೂ ಪ್ರತಿಯುತ್ತರ ನೀಡದೆ ಪ್ರಾಣ ಭಯದಿಂದ ಬಾಯಿಯನ್ನು ಮುಚ್ಚಿಕೊಂಡು ಕಂದಕದಲ್ಲಿ ಒರಗಿಕೊಂಡಿದ್ದಾರೆ. ಸ್ವಲ್ಪ ಹೊತ್ತಿನ ನಂತರ ಆನೆಹೋಗಿದೆ ಎಂದು ತಿಳಿದುಕೊಂಡ ಮೇಲೆ ಮೇಲಕ್ಕೆ ಬಂದಿದ್ದಾರೆ.

ಓಡುತ್ತಿರುವ ಸಂದರ್ಭದಲ್ಲಿ ಬಸವರಾಜ ಪೂಜಾರ ಅವರ ಕಾಲಿಗೆ ಬಲವಾದ ಪೆಟ್ಟುಬಿದ್ದ ಪರಿಣಾಮ ಆಸ್ಪತ್ರೆ ಸೇರಿದ್ದಾರೆ. ಫಕ್ಕಿರೇಶ ಸುಣಗಾರ ರವರು ಸಣ್ಣಪುಟ್ಟ ಗಾಯಗಳಿಂದ ಪ್ರಾಣಪಾಯದಿಂದ ಪಾರಾಗಿದ್ದಾರೆ.


 

Read These Next

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...