ಕಾರವಾರ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ. ಬಿಜೆಪಿಗೆ ಜೆಡಿಎಸ್ ಬೆಂಬಲ ಘೋಷಣೆ : ಆನಂದ ಅಸ್ನೋಟಿಕರ್.

Source: SO News | By Laxmi Tanaya | Published on 30th October 2020, 3:18 PM | Coastal News |

ಕಾರವಾರ : ನವೆಂಬರ್ ಒಂದರಂದು ಕಾರವಾರ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಡೆಯಲಿದೆ.  ಜೆ.ಡಿ.ಎಸ್.ನ ನಾಲ್ಕು ಮತ್ತು ಇಬ್ಬರು ಪಕ್ಷೇತರ ಸದಸ್ಯರು ಬಿ.ಜೆ.ಪಿ.ಗೆ ಬಾಹ್ಯ ಬೆಂಬಲ ಘೋಷಣೆ ಮಾಡಿದ್ದಾರೆ.

ಗುರುವಾರ ಜಿಲ್ಲಾ ಪತ್ರಿಕಾಭವನದಲ್ಲಿ   ಜೆ.ಡಿ.ಎಸ್ ಮುಖಂಡ ಆನಂದ ಅಸ್ನೋಟಿಕರ್ ಮಾದ್ಯಮದವರೊಂದಿಗೆ  ಮಾತನಾಡಿ ವಿಷಯವ ತಿಳಿಸಿದರು.   ಒಂದು ವರ್ಷದ ಅವಧಿಗೆ ಮಾತ್ರ ಬಿಜೆಪಿಗೆ ಬೆಂಬಲ ನೀಡಲಾಗುತ್ತದೆ. ಈ ಅವಧಿಯಲ್ಲಿ ಬಿ.ಜೆ.ಪಿ.ಯವರು ನಗರಕ್ಕೆ ಅಗತ್ಯವಾಗಿರುವ ನಾಲ್ಕು ಯೋಜನೆಗಳಲ್ಲಿ ಯಾವುದಾದರೂ ಎರಡನ್ನು ಮಂಜೂರು ಮಾಡಿಸಬೇಕು.
ರಾಜ್ಯ ಮತ್ತು ಕೇಂದ್ರದಲ್ಲಿ ಬಿ.ಜೆ.ಪಿ ಸರ್ಕಾರಗಳೇ ಅಧಿಕಾರದಲ್ಲಿವೆ. ಕಾರವಾರದ ಶಾಸಕರು, ಜಿಲ್ಲೆಯ ಸಂಸದರು ಕೂಡ ಬಿಜೆಪಿ ಪಕ್ಷದವರು. ಉಸ್ತುವಾರಿ ಸಚಿವರೂ ಇದೇ ಜಿಲ್ಲೆಯವರು. ಬಿಜೆಪಿಯವರು ನಗರಸಭೆ ಅಧ್ಯಕ್ಷರಾದರೇ  ನಗರದ ಅಭಿವೃದ್ಧಿ ಆಗಬಹುದೆಂಬ   ನಿರೀಕ್ಷೆಯಿದೆ. ಹೀಗಾಗಿ ಜನಪರ ಕಾಮಗಾರಿಗಳ ಹೊರತಾಗಿ ಬಿ.ಜೆ.ಪಿ.ಗೆ ಬೇರಾವುದೇ ಷರತ್ತು ವಿಧಿಸದೇ ಬೆಂಬಲ ನೀಡುತ್ತಿದ್ದೇವೆ ಎಂದು ಅಸ್ನೋಟಿಕರ್  ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜೆ.ಡಿ.ಎಸ್ ಸದಸ್ಯರಾದ ರಾಜೇಶ ಮಾಜಾಳಿಕರ, ರುಕ್ಕಿಣಿ ಸುಧಾಕರ ಗೌಡ, ಪ್ರೀತಿ ಮಧುಕರ ಜೋಶಿ, ಸ್ನೇಹಾ ಸದಾನಂದ ಮಾಂಜೇಕರ, ಪಕ್ಷೇತರ ಸದಸ್ಯರಾದ ಸಂಧ್ಯಾ ಸಂಜಯ ಬಾಡ್ಕರ್ ಮತ್ತು ಮನೋಜ ಬಾಂದೇಕರ ಹಾಜರಿದ್ದರು.

31 ಸದಸ್ಯ ಬಲದ ಕಾರವಾರ ನಗರಸಭೆಯಲ್ಲಿ ಬಿ.ಜೆ.ಪಿ 11 ಮತ್ತು ಕಾಂಗ್ರೆಸ್ 11 ಸದಸ್ಯರನ್ನು ಹೊಂದಿವೆ. ಜೆ.ಡಿ.ಎಸ್. 4  ಮತ್ತು ಐವರು ಪಕ್ಷೇತರ ಸದಸ್ಯರಿದ್ದಾರೆ

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...