ಯಲ್ಲಾಪುರ ಉಪಚುನಾವಣೆ : ಮುಂಡಗೋಡ ತಾಲೂಕಿನಾದ್ಯಂತ ಆರ್.ವಿ.ದೇಶಪಾಂಡೆ ಭರದ ಪ್ರಚಾರ

Source: sonews | By Staff Correspondent | Published on 22nd November 2019, 11:20 PM | Coastal News | Don't Miss |

ಮುಂಡಗೋಡ : ದೇಶದ ಸರ್ವೋಚ್ಚ ನ್ಯಾಯಾಲಯ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ ಶಾಸಕರನ್ನು ಅನರ್ಹ ಮಾಡಿ ಆದೇಶ ನೀಡಿದೆ ಸುಪ್ರೀಂ ಕೋರ್ಟ ನೀಡಿದ ಆದೇಶವನ್ನು ನಾವು ಪಾಲಿಸಿ ಸಂವಿದಾನದಲ್ಲಿ, ನ್ಯಾಯಾಲಯದಲ್ಲಿ ವಿಶ್ವಾಸ  ನಂಬಿಕೆ ಇಟ್ಟಂತಹ ನಾವು ಅನರ್ಹ ಶಾಸಕರನ್ನು ಸೋಲಿಸಿ ಬುದ್ದಿ ಕಲಿಸಬೇಕಾಗಿದೆ ಆದ್ದರಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಭೀಮಣ್ಣ ನಾಯಕರನ್ನು ಆರಿಸಿತರಬೇಕು ಎಂದು  ಮಾಜಿ ಸಚಿವ ಆರ್.ವಿ.ದೇಶಪಾಂಡೆ ಕಾರ್ಯಕರ್ತರಿಗೆ ಕರೆ ನೀಡಿದರು.

ಅವರು ಮುಂಡಗೋಡ ತಾಲೂಕಿನ ಅಗಡಿ, ಹುನಗುಂದ, ನಂದಿಕಟ್ಟಾ, ಕೆಂದಲಗೇರಿ ಯರೆಬೈಲ್, ಹುಲಿಹೊಂಡ, ಬಸಾಪುರ, ಇಂದೂರು, ಕೊಪ್ಪ ಗ್ರಾಮಗಳಲ್ಲಿ ಪ್ರಚಾರ ಮುಗಿಸಿ ಪಟ್ಟಣದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ   ಮಾಜಿ ಶಾಸಕ ವಿ.ಎಸ್.ಪಾಟೀಲ ಪುತ್ರ ಬಾಪುಗೌಡ ಪಾಟೀಲರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದರು. 

ಸಿದ್ದರಾಮಯ್ಯ ಸರಕಾರವಿದ್ದಾಗ  ಕ್ಷೇತ್ರದ ಅಭಿವೃದ್ದಿಗೆ ಸಿದ್ದರಾಮಯ್ಯ ಅವರಿಂದ ಕೆಲಸಮಾಡಿಸಿಕೊಂಡಿದ್ದಾರೆ ನಾವು ಸಹಿತ ಸಹಕಾರ ನೀಡಿದ್ದೇವೆ ಆದರೂ ಸಹಿತ ಅವರು ನಾವ್ಯಾರು ಅವರಿಗೆ ಸಹಕಾರ ನೀಡಿಲ್ಲಾ ಎನ್ನುತ್ತಿದ್ದಾರೆ ಇದು ಸರಿಯೇ? ಕ್ಷೇತ್ರದಲ್ಲಿ ಮಹಾಮಳೆಯಿಂದ ನಲುಗಿದ್ದ ಕ್ಷೇತ್ರದಲ್ಲಿ ಜನರ ಸಹಕಾರಕ್ಕೆ ನಿಲ್ಲಬೇಕಾಗಿದ್ದ ಶಾಸಕರು ತಮ್ಮ ಸ್ವಾರ್ಥ ಅಭಿವೃದ್ದಿಗೆ ಲಾಲಸೆಗೆ ಮುಂಬೈನಲ್ಲಿದ್ದರು.

ಸಮಿಶ್ರ ಸರಕಾರವಿದ್ದಾಗ ಮುಖ್ಯಮಂತ್ರಿ ಯಡ್ಯೂರಪ್ಪ ನವರು ರೈತರ ಸಾಲ ಮನ್ನಾಮಾಡಿ ಎನ್ನುತ್ತಿದ್ದರು ಈಗ ಮುಖ್ಯಮಂತ್ರಿಯಾಗಿ 4 ತಿಂಗಳಾದರೂ ಸಹಿತ ಕುಮಾರಸ್ವಾಮಿ ಸಾಲಮನ್ನಾ ಮಾಡಿದ್ದನ್ನು ಇನ್ನೂ ತನಕ ರೈತರ ಖಾತೆ ಜಮಾ ಆಗುತ್ತಿಲ್ಲಾ ಎಂದರು.

ಕ್ಷೇತ್ರದಲ್ಲಿ ಬೆಳೆಹಾನಿ  ಸಮಿಕ್ಷೆ ಮಾಡಿ ಎರಡುವರೆ ತಿಂಗಳಾದರೂ ಇನ್ನೂ ವರೆಗೂ ರೈತರಿಗೆ ಪರಿಹಾರ ನೀಡಿಲ್ಲಾ ಸುಪ್ರೀಂ ಕೋರ್ಟ್‍ನಿಂದ ಅನರ್ಹಗೊಂಡ ಶಾಸಕರಿಂದ ಜಿಲ್ಲೆಗೆ ಕೆಟ್ಟುಹೆಸರು ಬಂದಿದೆ. 

ಮಾಜಿ ಬಿಜೆಪಿ ಶಾಸಕರ ಪುತ್ರ ಬಾಪುಗೌಡ ಪಾಟೀಲ ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದಾರೆ ಯುವಕರು, ವಿದ್ಯಾವಂತರು, ಯುವಪಡೆಯೇ ಅವರ ಹಿಂದೆ ಇದೆ ಅವರಿಗೆ ಸಿದ್ದಾರಾಮಯ್ಯ ಸೇರಿದಂತೆ ಪಕ್ಷದ ಎಲ್ಲ ಹಿರಿಯ ನಾಯಕರ ಆಶೀರ್ವಾದ ಇದೆ ಎಂದರು.

ಮಾಜಿ ಸಚಿವ ರಮಾನಾಥ ರೈ ಮಾತನಾಡಿ ಅನರ್ಹ ಶಾಸಕರು ಜನರ ಹಿತಕಾಪಾಡಲಿಕ್ಕೆ ರಾಜಿನಾಮೆ ನೀಡಿಲ್ಲಾ ಅವರು ಸ್ವಾರ್ಥ ಅಭಿವೃದ್ದಿಗೆ ರಾಜಿನಾಮೆ ನೀಡಿದ್ದಾರೆ  ಕಾಂಗ್ರೆಸ್ ಸಿದ್ದರಾಮಯ್ಯ ಸರಕಾರ ಯಲ್ಲಾಪುರ ಕ್ಷೇತ್ರದಲ್ಲಿಯೂ ಸಾಕಷ್ಟು ಅಭಿವೃದ್ಧಿ ಕೆಲಸವಾಗಿವೆ ಎಂದರು.

ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ್  ಮಾತನಾಡಿ ಕ್ಷೇತ್ರದಲ್ಲಿ ಮಾಜಿ ಸಚಿವ ಆರ್.ವಿ.ದೇಶಪಾಂಡೆಯವರು ಪ್ರಚಾರ ಕೈಗೊಂಡಿದ್ದಾರೆ ನಾವು ಸಹಿತ ಬ್ಲಾಕ್ ಅಧ್ಯಕ್ಷರು ಹಾಗೂ ಕಾರ್ಯಕರ್ತರೊಂದಿಗೆ ಪ್ರಚಾರ ಮಾಡುತ್ತಿದ್ದೇವೆ ಕ್ಷೇತ್ರದಲ್ಲಿ ಬಿಜೆಪಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ವಿಶೇಷವಾಗಿ ಯುವಕಾರ್ಯಕರ್ತರು ಕಾಂಗ್ರೆಸ್ ಪಕ್ಷವನ್ನು ಸೇರುತ್ತಿದ್ದಾರೆ ಎಂದರು. 

ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡ ಬಾಪುಗೌಡ ಪಾಟೀಲ ಮಾತನಾಡಿ ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದರಿಂದ ಕಾಂಗ್ರೆಸ್ ಪಕ್ಷವನ್ನು ಸೇರುತ್ತಿದ್ದೇನೆ. ನ್ಯಾಯಾಲದಲ್ಲಿ ಅನರ್ಹಗೊಂಡ  ತೀರ್ಪುಕೊಟ್ಟು ಶಿಕ್ಷೆನೀಡಲು    ಮತದಾರರ ಹತ್ತಿರ ಕಳಿಸುತ್ತಿರುವುದು ಇದು ಮೊದಲಬಾರಿ ಎಂದರು.  

ಕಾರ್ಯಕ್ರಮದಲ್ಲಿ ಬ್ಲಾಕ್ ಅಧ್ಯಕ್ಷ ಕೃಷ್ಣ ಹಿರಳ್ಳಿ, ಎಚ್.ಎಮ್.ನಾಯ್ಕ್, ಎಮ್.ಎನ್.ದುಂಡಶಿ, ದಾಕ್ಷಾಯಿಣಿ ಸುರಗೀಮಠ, ಮಹ್ಮದಗೌಸ ಮಕಾನದಾರ ಲಕ್ಷ್ಮಣ ಬನಸೋಡೆ, ಮಹ್ಮದಜಾಫರ ಹಂಡಿ ಧರ್ಮರಾಜ ನಡೆಗೇರ, ಅಹ್ಮದರಜಾ ಪಠಾಣ ಸೇರಿದಂತೆ ಮುಂತಾದವರು ವೇದಿಕೆ ಮೇಲಿದ್ದರು.

ಕಾರ್ಯಕ್ರಮದ ನಂತರ ಮಾಜಿ ಸಚಿವ ಆರ್.ವಿ.ದೇಶಪಾಂಡೆ  ಪ್ರಚಾರಕ್ಕೆ ಅರಿಶಿಣಗೇರಿ, ಜೇನುಮುರಿ,  ಮಜ್ಜಿಗೇರಿ, ಬಾಚಣಿಕೆ, ನ್ಯಾಸರ್ಗಿ ಗ್ರಾಮಕ್ಕೆ ತೆರಳಿದರು. 

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...