‘ಭಟ್ಕಳದಲ್ಲಿ ಸಂಭ್ರಮದಿಂದ ನಡೆದ ಬಕ್ರಿದ ಹಬ್ಬ’

Source: so news | Published on 13th August 2019, 12:05 AM | Coastal News | Don't Miss |

 

ಭಟ್ಕಳ: ತ್ಯಾಗ ಬಲಿದಾನಗಳ ಸಂಕೇತವಾಗಿರುವ ಈದುಲ್ ಅಝ್ಹಾ (ಬಕ್ರೀದ್ ಹಬ್ಬ)ವನ್ನು ಮುಸಲ್ಮಾನ ಬಂಧುಗಳು ಸಂಭ್ರಮ, ಸಡಗರದಿಂದ ಸೋಮವಾರದಂದು ಬೆಳಿಗ್ಗೆ ಆಚರಿಸಿದರು. 

ಸೋಮವಾರದಂದು ಬೆಳಿಗ್ಗೆ ಇಲ್ಲಿನ ಜಾಮಿಯಾ ಮಸೀದಿ (ಚಿನ್ನದ ಪಳ್ಳಿ)ಯಲ್ಲಿ ಈದ್ ನಮಾಝ್ ನಿರ್ವಹಿಸುವುದರ ಮೂಲಕ ಪರಸ್ಪರ ಶುಭವನ್ನು ಕೋರಿದರು. ಈದ್ ನಮಾಝ್ ನೇತೃತ್ವ ವಹಿಸಿದ್ದ ಮೌಲಾನ ಅಬ್ದುಲ್ ಅಲೀಮ್ ನದ್ವಿ ಸಮಸ್ತ ಬಾಂಧವರನ್ನು ಉದ್ದೇಶಿಸಿ ಈದ್ ಸಂದೇಶ ನೀಡಿದರು.
ಪ್ರವಾದಿ ಇಬ್ರಾಹೀಮ್ ಹಾಗೂ ಅವರ ಏಕೈಕ ಪುತ್ರ. ಇಸ್ಮಾಯಿಲ್‍ರ ತ್ಯಾಗ ಹಾಗೂ ಬಲಿದಾನವನ್ನು ಸ್ಮರಿಸುವ ಈದ್ ನಮ್ಮ ಜೀವನದಲ್ಲೂ ಕಷ್ಟಗಳನ್ನು ಸಹಿಸುವ, ತ್ಯಾಗ ಮನೋಭಾವನೆಗಳನ್ನು ಬೆಳೆಸಿಕೊಳ್ಳುವ ಶಕ್ತಿ ದಯಪಾಲಿಸಿ ಎಂದು ಸಂದೇಶ ಸಾರಿದರು.
ಇಲ್ಲಿನ ನೂರ್ ಮಸೀದಿ, ಖಲಿಫಾ ಜಾಮಿಯಾ ಮಸೀದಿ, ಸೈಯ್ಯದನಾ ಇಬ್ರಾಹೀಮ್ ಜಾಮಿಯಾಬಾದ್, ತೆಂಗಿನ ಗುಂಡಿ ಜಾಮಿಯಾ ಮಸೀದಿ, ಆಹ್ಮದ್ ಸಯೀದ್ ಜಾಮಿಯಾ ಮಸೀದಿ ಹುರುಳೀಸಾಲ, ಸಲಫಿ ಮಸೀದಿ ನವಾಯತ್ ಕಾಲೋನಿ ಹಾಗೂ ಮದೀನಾ ಕಾಲೋನಿ ಜಾಮಿಯ ಮಸೀದಿಗಳಲ್ಲಿ ಈದ್ ನಮಾಝ್ ನೆರವೇರಿತು.

Read These Next

ಪ್ರಾರ್ಥನಾ ಪ್ರತಿಷ್ಠಾನ ಹಾಗೂ ಆನಂದಾಶ್ರಮ ಪ.ಪೂ. ಕಾಲೇಜಿನ ಸಹಯೋಗದಲ್ಲಿ ರಸಪ್ರಶ್ನೆ ಕಾರ್ಯಕ್ರಮ ಸಂಪನ್ನ 

ಪ್ರಾರ್ಥನಾ ಪ್ರತಿಷ್ಠಾನ ಹಾಗೂ ಆನಂದಾಶ್ರಮ ಪ.ಪೂರ್ವ ಕಾಲೇಜಿನ ಸಹಯೋಗದಲ್ಲಿ ಭಟ್ಕಳ ತಾಲೂಕಿನ ಹೈಸ್ಕೂಲಿನ ಪ್ರೌಢಶಾಲಾ ...