ಕೋವಿಡ್ ಮುಂಜಾಗೃತ ಕ್ರಮದೊಂದಿಗೆ ಭಟ್ಕಳದಲ್ಲಿ ಈದ್-ಉಲ್-ಅಝ್ಹಾ

Source: sonews | By Staff Correspondent | Published on 1st August 2020, 5:28 PM | Coastal News | Don't Miss |

ಭಟ್ಕಳ: ಹ.ಇಬ್ರಾಹಿಂ ಮತ್ತು ಹ.ಇಸ್ಮಾಯಿಲ್ ಪ್ರವಾದಿಗಳ ತ್ಯಾಗ ಬಲಿದಾನಗಳನ್ನು ಸ್ಮರಿಸುವ ಬಕ್ರೀದ್ (ಈದ್ ಉಲ್ ಅಝ್ಹಾ) ಹಬ್ಬವನ್ನು ಭಟ್ಕಳದ ಮುಸ್ಲಿಂ ಬಾಂಧವರು  ಶುಕ್ರವಾರ  ಬೆಳಿಗ್ಗೆ  ಕೋವಿಡ್ ಸೋಂಕು ಹರಡದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳುವುದರೊಂದಿಗೆ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವುದರ ಮೂಲಕ ಆಚರಿಸಿದರು.

ಭಟ್ಕಳದ ಪ್ರಮುಖ ಖಲೀಪಾ ಜಾಮೀಯಾ ಮಸೀದಿಯಲ್ಲಿ ಮೌಲಾನಾ ಕ್ವಾಜಾ ಅಕ್ರಮಿ ಮದನಿ ಅವರು ವಿಶೇಷ ನಮಾಝ ನ ನೇತೃತ್ವ ವಹಿಸಿ ನಂತರ ಈದ್ ಸಂದೇಶ ನೀಡಿದರು.  ಪ್ರವಾದಿ ಇಬ್ರಾಹಿಮ್ ಹಾಗೂ ಅವರ ಪುತ್ರ ಇಸ್ಮಾಯಿಲ್‍ರ  ಆದರ್ಶದ ಬದುಕು ನಮಗೆಲ್ಲ ಮಾರ್ಗದರ್ಶನವಾಗಿದೆ. ನಾವು ಸತ್ಯ ಹಾಗೂ ಧರ್ಮಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಲು ಸಿದ್ದರಿರಬೇಕು ಎಂದು ಕರೆ ನೀಡಿದರು. 

ಜಾಮೀಯಾ ಮಸೀದಿಯಲ್ಲಿ ಅಬ್ದುಲ್ ಅಲೀಮ ಖತೀಬ್ ನದ್ವಿ, ಮಕ್ದೂಂ ಜಾಮೀಯಾ ಮಸೀದಿಯಲ್ಲಿ ಮೌಲಾನಾ ನಿಯಮತ್ತುಲ್ಲಾ ಆಸ್ಕರಿ ನದ್ವಿ, ತಂಜೀಂ ಮಿಲಿಯಾ ಜುಮ್ಮಾ ಮಸೀದಿಯಲ್ಲಿ ಮೌಲಾನಾ ಅನ್ಸಾರ ಖತೀಬ್ ಮದನಿ, ಮದೀನಾ ಜಾಮೀಯಾ ಮಸೀದಿಯಲ್ಲಿ ಮೌಲಾನಾ ಅಬುಬಕ್ಕರ್ ಸಿದ್ದೀಕ ಖತೀಬ ನದ್ವಿ ನಮಾಝ ಬೋಧಿಸಿದರು. ತಾಲ್ಲೂಕಿನ ಶಿರಾಲಿ, ಮುರ್ಡೇಶ್ವರ ಸೇರಿದಂತೆ  ಎಲ್ಲಾ ಮಸೀದಿಗಳಲ್ಲಿಯೂ  ಸಹ ಮುಸ್ಲೀಮರು ಶುಕ್ರವಾರ ಬೆಳಿಗ್ಗೆ ಬ್ರಕೀದ್ ನಿಮಿತ್ತ  ವಿಶೇಷ ಪ್ರಾರ್ಥನೆ ಸಲ್ಲಿಸಿದರು.  

ಇದೇ ಸಂದರ್ಭದಲ್ಲಿ  ಕೋವಿಡ್ ಸೋಂಕು  ನಿರ್ಮೂಲನೆ ಆಗಲು ಸಹ ಪ್ರಾರ್ಥಿಸಲಾಯಿತು. ಹಬ್ಬದ ಪ್ರಯುಕ್ತ ಎಲ್ಲರೂ ಬಿಳೆ ಬಟ್ಟೆ, ಟೋಪಿ ಧರಿಸಿದ್ದರು. ಕೋವಿಡ್ ಹಿನ್ನೆಲೆಯಲ್ಲಿ ಮಾಸ್ಕ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಖಡ್ಡಾಯಗೊಳಿಸಲಾಗಿತ್ತು. ಪ್ರಾರ್ಥನೆ ಸಂದರ್ಭದಲ್ಲೂ ಸಹ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಯಿತು. ಬಕ್ರೀದ್ ಹಿನ್ನೆಲೆಯಲ್ಲಿ ಮಸೀದಿ ಬಳಿ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿತ್ತು. ಪ್ರಾರ್ಥನೆ ಪೂರ್ವದಲ್ಲಿ  ಮೌಲಾನಾ ಸೇರಿದಂತೆ ಕೆಲವೇ ಮುಖಂಡರು ಮೆರವಣೆಗೆಯಲ್ಲಿ ಮಸೀದಿಗೆ ಬಂದರು. ಬಕ್ರೀದ್ ಹಬ್ಬ ಶುಕ್ರವಾರದಿಂದ ಸೋಮವಾರ ಮಧ್ಯಾಹ್ನದ ವರೆಗೂ ನಡೆಯಲಿದೆ. ಈ ಸಲ ಕೋವಿಡ್ ಹಿನ್ನೆಲೆಯಲ್ಲಿ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೆ ಸೇರುವುದನ್ನು ಸ್ಥಗಿತಗೊಳಿಸಲಾಗಿತ್ತು.

 

Read These Next

ಸೌದಿ ಅರೇಬಿಯಾದ ತಾಯಿಫ್‌ನಲ್ಲಿ ಕಾರು ಅಪಘಾತ ಉಡುಪಿ ಜಿಲ್ಲೆಯ ಯುವಕನ ಸಾವು ಮತ್ತೊಬ್ಬ  ಗಂಭೀರ

ಭಟ್ಕಳ:  ಸೌದಿ ಅರೇಬಿಯಾದ ತಾಯಿಫ್‌ ಎಂಬಲ್ಲಿ ಬುಧವಾರ ನಡೆದ ರಸ್ತೆ ಅಪಘಾತದಲ್ಲಿ  ಉಡುಪಿ ಜಿಲ್ಲೆಯ ಗಂಗೋಳಿ ನಿವಾಸಿಗಳಾದ ಮುಹಮ್ಮದ್ ...