ಪರಿಸರ ಸ್ನೇಹಿ ಅರಿಶಿನ ಗಣೇಶ ಅಭಿಯಾನ

Source: SO News | By Laxmi Tanaya | Published on 2nd September 2021, 9:54 PM | Coastal News | Don't Miss |

ಕಾರವಾರ  :   ಕೋವಿಡ್–19ನ ಹಿನ್ನೆಲೆಯಿಂದಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಂಣ ಮಂಡಳಿಯು ಈ ಬಾರಿಯ ಗಣೇಶ ಹಬ್ಬವನ್ನು  ಪರಿಸರ ಸ್ನೇಹಿ ಅರಿಶಿನ ಗಣೇಶ ಅಭಿಯಾನವನ್ನು ಹಮ್ಮಿಕೊಂಡಿದೆ.  

 ಅರಿಶಿನ ಪುಟ್ಟ ಗಣಪತಿ ಪೂಜಿಸೋಣ ಕೋವಿಡ್ ನಿವಾರಕ ಪರಿಸರಸ್ನೇಹಿ ಹಬ್ಬ ಆಚರಿಸೋಣ ಧ್ಯೇಯ ವಾಕ್ಯದೊಂದಿಗೆ ಹತ್ತು ಲಕ್ಷ ಅರಿಶಿನ ಗಣೇಶನ್ನು ನಿರ್ಮಿಸುವ ಗುರಿಹೊಂದಿದ್ದು ವಿಶ್ವ ದಾಖಲೆ ನಿರ್ಮಿಸುವ ಪ್ರಯತ್ನಕ್ಕೆ ಸಾರ್ವಜನಿಕರು ಕೈ ಜೋಡಿಸಬೇಕು,  ಸೆ. 10 ರಂದು  ಸಂಜೆ 6 ಗಂಟೆಯ ಒಳಗೆ ಸಾರ್ವಜನಿಕರ ತಾವು ತಯಾರಿಸಿದ  ಅರಿಶಿನ ಗಣೇಶನ ಛಾಯಾಚಿತ್ರವನ್ನು ಮಂಡಳಿಯ ವೆಬ್‍ಸೈಟ್ https://kspcb.karnataka.gov.in/  youtube@kspcbkarnataka, facebook@kspcbofficial, Twitter@karnatakakspcb,  instagram: kspcb_official ವೆಬ್ಸೈಟ್ ಗೆ ಕಳಿಸಬೇಕು.

ಹಿಂದೂ ಧಾರ್ಮಿಕ ಆಚರಣೆಯಲ್ಲಿ ಬಳಸುವ  ಕೆಲವು ಪದಾರ್ಥಗಳಾದ ಅರಿಸಿನ, ಗೋಮೂತ್ರ, ಸಗಣಿ, ಬೇವು, ತುಳುಸಿ ಮುಂತಾದವುಗಳು ರೋಗ ನಿರೋಧಕ ಶಕ್ತಿಯನ್ನು ಹೊಂದಿವೆ.  ಕೋವಿಡ್ ಸಮಯದಲ್ಲಿ  ರೋಗ ನಿರೋಧಕ ಶಕ್ತಿಯುಳ್ಳ ಅರಿಶಿನ ಮಿಶ್ರಿತವಾದ ಗೋಧಿ ಹಿಟ್ಟು , ರಾಗಿ ಹಿಟ್ಟಿನಿಂದ ಮಾಡಿದ  ಪುಟ್ಟ ಗಣೇಶನ ವಿಗ್ರಹ ಪೂಜಿಸಿ ಮನೆಯಲ್ಲಿಯೇ ಗಣೇಶನ ಮೂರ್ತಿ ವಿಸರ್ಜಿಸುವ ಮೂಲಕ ಸಾಮಾಜಿಕ ಅಂತರ ಕಾಪಾಡಿಕೊಂಡು,  ವಿಸರ್ಜಿತ ನೀರಿನಿಂದ ಮನೆಯನ್ನು ಶುಚಿ ಮಾಡಿಕೊಂಡರೆ ಕ್ರಿಮಿನಾಶಕವಾಗಿಯೂ ಬಳಕೆ ಆಗುವುದು. ಸಾರ್ವಜನಿಕರು ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕೆಂದು ಕಾರವಾರದ ಪರಿಸರ ಅಧಿಕಾರಿಗಳು  ಪ್ರಕಟಣೆಯಲ್ಲಿ ‌ತಿಳಿಸಿದ್ದಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...