ಕರ್ನಾಟಕದ ಮಡಿಕೇರಿ, ಹಾಸನದಲ್ಲಿ ಕಂಪನದ ಅನುಭವ

Source: S O News | By I.G. Bhatkali | Published on 25th June 2022, 12:02 AM | State News | Don't Miss |

ಮಡಿಕೇರಿ: ಕೊಡಗು, ಹಾಸನದ ಹಲವೆಡೆ ಗುರುವಾರ ಭೂಮಿ ಕಂಪಿಸಿದ ಅನು ಭವವಾಗಿದ್ದು, ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಇದನ್ನು ಸ್ಪಷ್ಟಪಡಿಸಿದೆ.

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ, ನಗರನಹಳ್ಳಿ ಗ್ರಾಮ ಪಂಚಾಯತ್‌ನ, ಮಲುಗಾನಹಳ್ಳಿಯಿಂದ 0.8 ಕಿ.ಮೀ. ದೂರದಲ್ಲಿ 10 ಅಡಿ ಆಳದಲ್ಲಿ ಜೂನ್, 23 ರಂದು ಬೆಳಗ್ಗೆ 4 ಗಂಟೆ 37 ನಿಮಿಷ 21 ಸೆಕೆಂಡ್‌ಗಳಿಗೆ ಭೂಕಂಪನವಾಗಿದೆ. ರಿಕ್ಟರ್ ಮಾಪಕದಲ್ಲಿ 3.4 ಎಂದು ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

ಮೈಸೂರು: ಕೆ.ಆರ್.ನಗರದಲ್ಲೂ ಕಂಪನದ ಅನುಭವ:
ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಹಲವೆಡೆ ಭೂಮಿ ಕಂಪಿಸಿರುವ ಅನುಭವಾಗಿದೆ. ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕು ವ್ಯಾಪ್ತಿಯಲ್ಲಿ ಗುರುವಾರ ಬೆಳಗಿನ ಜಾವ 4:15 ಗಂಟೆ ಸುಮಾರಿನಲ್ಲಿ ಭೂಮಿ ಕಂಪಿಸಿದ್ದು, ಲಘು ಭೂಕಂಪನದ ಅನುಭವವಾಗಿದೆ. ಭೂವಿ ಕಂಪಿಸಿದಾಗ ನಿದ್ದೆಯಿಂದ ಎಚ್ಚರಗೊಂಡು ಕೆಲವರು ಮನೆಯಿಂದ ಹೊರ ಬಂದಿದ್ದಾರೆ. ಇದು ತಾಲೂಕಿನಲ್ಲಿ ಎರಡನೇ ಬಾರಿಗೆ ಆದ ಭೂ ಕಂಪಿಸಿದ ಅನುಭವವಾಗಿದೆ.

ಇದರ ಅನುಭವ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ರೇಂಜರ್ ಬ್ಲಾಕ್, ಅಮ್ಮಳ್ಳಿ ಗ್ರಾಮ, ನೇಗಳೆ ಗ್ರಾಮ, ಮಡಿಕೇರಿ ತಾಲೂಕಿನ ದೇವಸೂರು ಹಾಗೂ ಹಾಸನದ ಗಡಿಭಾಗದ ಕೆಲವು ಪ್ರದೇಶಗಳಲ್ಲಿ ಆಗಿದೆ. ಇದರಲ್ಲಿ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಆದರೆ ಹಲವು ಸೆಕೆಂಡ್‌ಗಳಷ್ಟು ಸಮಯ ಕಂಪನದ ಅನುಭವವಾಗಿದೆ.

ಹಾಸನ ಜಿಲ್ಲೆ ಭೂಕಂಪನ ಝನ್ 2 ಗೆ ಒಳಪಟ್ಟಿದ್ದರೆ, ಕೊಡಗು ಜಿಲ್ಲೆ ಜೋನ್ 3 ಗೆ ಒಳಪಡುತ್ತದೆ. ಹಾಗೂ ಭೂಕಂಪನದ ಕೇಂದ್ರ ಬಿಂದುವಿನಿಂದ ಸುಮಾರು 50 ರಿಂದ 60 ಕಿ.ಮೀ.ವರೆಗೆ ಅನುಭವ ಇರುತ್ತದೆ. ಹಾಗೆಯೇ ಈ ಕೇಂದ್ರ ಬಿಂದುವಿನಿಂದ ಸೋಮವಾರಪೇಟೆ 46 ಕಿ.ಮೀ.(ವಾಯು ದೂರ) ಹಾಗೂ ಮಡಿಕೇರಿ 56 ಕಿ.ಮೀ. (ವಾಯು ದೂರ) ಇರುವುದರಿಂದ ಹಾಗೂ ಝನ್ 3 ವ್ಯಾಪ್ತಿಯಲ್ಲಿರುವುದರಿಂದ ಭೂಕಂಪನದ ಅನುಭವ ಆಗಿರುವ ಸಾಧ್ಯತೆ ಇದೆ. ಆದರೆ, ಈ ಕಂಪನದಿಂದ ಭಯಪಡುವ ಅಗತ್ಯವಿಲ್ಲ. ಹೆಚ್ಚೆಂದರೆ ಮನೆಯಲ್ಲಿರುವ ವಸ್ತು ಅಲುಗಾಡಬಹುದು. ಜನತೆ ಗಾಬರಿ ಆಗುವ ಅಗತ್ಯ ಇಲ್ಲ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಜಿ.ಶ್ರೀನಿವಾಸ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಹೊಳೆನರಸೀಪುರ ತಾಲೂಕಿನಲ್ಲಿ ಕಂಪಿಸಿದ ಭೂಮಿ ಬೆಟ್ಟ ಸಾತನಹಳ್ಳಿ, ಹಳ್ಳಿಮೈಸೂರು, ಕಲ್ಲಹಳ್ಳಿ, ದಾಳ ಗೌಡನಹಳ್ಳಿ, ದೊಡ್ಡ ಕಾಡನೂರು, ಪೂಜೆ ಕೊಪ್ಪಲು, ತೇಜೂರು, ಗೋಹಳ್ಳಿ, ಕುರಿ ಕಾವಲು, ಓಡನಹಳ್ಳಿ, ನಿಡುವಣಿ, ಚಿಟ್ಟನಹಳ್ಳಿ ಬಡಾವಣೆ, ನರಸಿಂಹನಾಯಕ ನಗರ ನಗರ, ಹೌಸಿಂಗ್ ಬೋರ್ಡ್ ಸೇರಿದಂತೆ ತಾಲೂಕಿನಾದ್ಯಂತ ಭೂಮಿ ಕಂಪಿಸಿದ ಅನುಭವವಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಗ್ರಾಮಸ್ಥರಿಗೆ ಧೈರ್ಯ ಹೇಳಿದ್ದಾರೆ.

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...