ಕಾರವಾರ: ಇ-ತಂತ್ರಾಂಶ ನಿರ್ವಹಣೆ: ತರಬೇತಿ ಕಾರ್ಯಾಗಾರ

Source: S O News service | By S O News | Published on 16th January 2021, 11:08 AM | Coastal News |

ಕಾರವಾರ: ಮೊದಲು ಪ್ರಮಾಣಪತ್ರಗಳನ್ನು ಕೈ ಬರಹದ ಮುಖೇನ ಕೊಡುವ ಪದ್ಧತಿ ಇತ್ತು, ಆದರೆ ತಂತ್ರಜ್ಞಾನವನ್ನು ಬಳಸಿ ಜನರಿಗೆ ಸುಲಭರೀತಿಯಲ್ಲಿ ಸೇವೆ ನೀಡುವುದು ಉತ್ತಮ ಸಂಗತಿ ಎಂದು ಜಿಲ್ಲಾಧಿಕಾರಿ ಹರೀಶ್ ಕುಮಾರ್ ಕೆ ಅವರು ಮಾತನಾಡಿದರು.

ನಗರದ ಜಿಲ್ಲಾ ರಂಗಮಂದಿರದಲ್ಲಿ ಶುಕ್ರವಾರ ಆರ್ಥಿಕ ಹಾಗೂ ಸಾಂಖ್ಯಿಕ ನಿರ್ದೇಶನಾಲಯ ಬೆಂಗಳೂರು ಹಾಗೂ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿ ಉತ್ತರ ಕನ್ನಡ ಇವರ ಸಹಯೋಗದೊಂದಿಗೆ ನಡೆದ ಜನನ ಮರಣ ನೋಂದಣಿ ಅಧಿನಿಯಮಗಳು ಹಾಗೂ ಇ ತಂತ್ರಾಂಶ ನಿರ್ವಹಣೆಯ ಕುರಿತು ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಜನನ ಮರಣ ಧಾಖಲಾತಿಯಲ್ಲಿ ಇ-ಜನ್ಮ ತಂತ್ರಾಂಶ ಅಳವಡಿಕೆಯು ಉತ್ತಮ ಕಾರ್ಯ, ತಂತ್ರಜ್ಞಾನ ಬಳಸಿ ಎಲ್ಲರಿಗೂ ಅವರವರ ಜೀವನವನ್ನು ಚನ್ನಾಗಿ ಜೀವಿಸುವ ಅವಕಾಶವಿದೆ ಅದನ್ನು ಬಳಸಿಕೊಳ್ಳುವುದು ಮುಖ್ಯ ಎಂದರು.

ನಗರ ನಿವಾಸಿಗಳ ಆಲೋಚನೆಗಳುನಗರದ ಅಭಿವೃದ್ಧಿಯಮೇಲೆ ಪ್ರೇರಿತವಾಗಿತ್ತದೆ. ಆದರೆ ಗ್ರಾಮೀಣ ಭಾಗದ ಜನರು ರೇಷನ್, ಅಂಗನವಾಡಿ ಹಾಗೂ ಶಾಲೆಯ ಶಿಕ್ಷಕರ ಕೊರತೆ ಎದುರಿಸುತ್ತಿರುವವರಿಗೆ ಇಂತಹ ಸುಲಭ ಸೌಕರ್ಯಗಳ ಬಗ್ಗೆ ತಿಳಿಸುವುದು ಅತಿಮುಖ್ಯವಾಗಿದೆ.

ಮೊದಲಿನಹಾಗೆ ಜೆರಾಕ್ಸ್ ಪ್ರತಿಯನ್ನ ಬೆಂಗಳೂರಿಗೆ ಕಳಿಸಿ ಕಾಯುವ ಕಾಲದಿಂದ ಕ್ಷಣಮಾತ್ರದಲ್ಲಿ ಮೇಲ್ ಮಾಡುವ ತಾಂತ್ರಿಕ ಅಭಿವೃದ್ಧಿ ಹೊಂದಿದ ಈ ಕಾಲಮಾನದಲ್ಲಿ ಜನನ ಮರಣ ಪ್ರಮಾಣಪತ್ರಗಳು ಅಗತ್ಯವಾಗಿರುತ್ತವೆ. ಇದರ ಬಗ್ಗೆ ಗ್ರಾಮೀಣ ಭಾಗದ ಜನರಿಗೆ ತಿಳಿಸುವುದು ಕಾರ್ಯಕ್ರಮದ ಉದ್ದೇಶ ಎಂದರು. ಹಣಕ್ಕಾಗಿ ಬ್ಯಾಂಕಿನಲ್ಲಿ ಉದ್ದದ ಕ್ಯೂ ನಿಂದ, ಬೀದಿ ಬೀದಿಯಲ್ಲಿನ ಎ ಟಿ ಎಂ ವರೆಗೆ, ಎ ಟಿ ಎಂ ನಿಂದ ಕ್ಯಾಶ್ ಲೆಸ್ ಮೊಬೈಲ್ ಬ್ಯಾಂಕಿಂಗ್ ವರೆಗೆ ಎಸ್ ಟಿ ಡಿ ಇಂದ ಸ್ಮಾರ್ಟ್ ಫೆÇೀನ್ ವರೆಗೆ ತಂತ್ರಜ್ಞಾನ ಬದಲಾಗಿದೆ ಹಾಗೆಯೇ ಕೈಬರಹದಿಂದ ಇ- ಜನ್ಮ ತಂತ್ರಾಂಶದ ವರೆಗೆ ಬದಲಾದ ತಂತ್ರಜ್ಞಾನ ಶ್ಲಾಘನೀಯ, ಸಮಾಜ ಹಾಗೂ ಸರ್ಕಾರ ಸೇರಿ ಕೆಲಸ ಮಾಡುವುದೇ ರಾಷ್ಟ್ರ ಸೇವೆ ಎಂದರು.

ತರಬೇತಿ ನಡೆಸಿದ ಜಿಲ್ಲಾ ಸಂಖ್ಯಾ ಸಂಗ್ರಹನಾಧಿಕಾರಿಗಳ ಕಚೇರಿಯ ಸಹಾಯಕ ನಿರ್ದೇಶಕರಾದ ದತ್ತಾತ್ರೇಯ ನಾಯ್ಕ್ ರವರು ಜನನ ಮರಣ ಪ್ರಮಾಣಪತ್ರಗಳ ಪ್ರಾಮುಖ್ಯತೆ, ಅಂಕೆ ಸಂಖ್ಯೆಗಳು, ಹಾಗೂ ಇ-ಜನ್ಮ ತಂತ್ರಾಂಶದ ನಿರ್ವಹಣೆ ಬಗ್ಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜನನ ಮರಣ ನೊಂದನಾಧಿಕಾರಿಗಳ ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂಧಿಗಳಿಗೆ, ತಾಲೂಕು ಕಛೇರಿ, ನಾಡ ಕಚೇರಿ, ತಹಶೀಲ್ದಾರ್ ಕಚೇರಿಯ ಸಿಬ್ಬಂಧಿಗಳಿಗೆ ಮತ್ತು ಸರ್ಕಾರಿ ಹಾಗೂ ಖಾಸಗಿ

ಆಸ್ಪತ್ರೆಯ ಅರೋಗ್ಯನಿರೀಕ್ಷಕರು ಹಾಗೂ ಸಿಬ್ಬಂಧಿಗಳಿಗೆ ಸವಿವರವಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಮುಖ್ಯ ಯೋಜನಾಧಿಕಾರಿ ವಿನೋದ್ ವಿ. ಅಣ್ವೇಕರ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸೋಮೇಶ್ವರ ಮೇಸ್ತ, ಕಾರವಾರ ತಹಶೀಲ್ದಾರ್ ಆರ್. ವಿ. ಕಟ್ಟಿ ಹಾಗೂ ಅಂಕೋಲಾ ತಹಶೀಲ್ದಾರ್ ಉದಯ್ ಕುಂಬಾರ್ ಉಪಸ್ಥಿತರಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...