ಇ-ಸ್ವತ್ತು ನೋಂದಣೆ; ಲಂಚ ಸ್ವೀಕರಿಸುತ್ತಿದ್ದ  ಗ್ರಾ.ಪಂ ಅಕೌಂಟೆಂಟ್ ಎಸಿಬಿ ಬಲೆಗೆ

Source: sonews | By Staff Correspondent | Published on 28th May 2020, 8:36 PM | Coastal News | Don't Miss |

ಭಟ್ಕಳ : -ಸ್ವತ್ತು ನೋಂದಣಿಗೆ ಸಂಬಂಧಿಸಿದಂತೆ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ ರೆಡ್ ಹ್ಯಾಂಡ್ ಆಗಿ ಗ್ರಾ.ಪಂ ಲೆಕ್ಕಿಗನೊಬ್ಬ ಸಿಕ್ಕಿಹಾಕಿಕೊಂಡಿರುವ ಘಟನೆ ಗುರುವಾರ ಭಟ್ಕಳ ತಲೂಕಿನ ಬೆಳಕೆ ಗ್ರಾಮ ಪಂಚಯತ್ ಕಚೇರಿಯಲ್ಲಿ ನಡೆದಿದೆ.

ವ್ಯಕ್ತಿಯೊಬ್ಬರಿಂದ ಲಂಚಾ ಸ್ವೀಕರಿಸುತ್ತಿದ್ದ ಪ್ರಕರಣದಲ್ಲಿ ಎಸಿಬಿ ಬಲೆಗೆ ಬಿದ್ದ ಗ್ರಾ.ಪಂ ಲಕ್ಕಿಗನನ್ನು ಅಣ್ಣಯ್ಯ ನಾಯ್ಕ ಎಂದು ಗುರುತಿಲಾಗಿದೆ.

ಅಣ್ಣಯ್ಯ ನಾಯ್ಕ -ಸ್ವತ್ತು ನೋಂದಣಿಗಾಗಿ ದೇವಿದಾಸ ನಾಯ್ಕ ಅವರ ಬಳಿ 5 ಸಾವಿರ ಲಂಚ ಕೇಳಿದ್ದ ಎನ್ನಲಾಗಿದೆ. ಇದಕ್ಕೆ ದೇವಿದಾಸ ನಾಯ್ಕ ಅಷ್ಟು ಹಣ ಕಟ್ಟಲು ಕಷ್ಟವಾಗತ್ತೆ ಎಂದು ಹೇಳಿಕೊಂಡಿದ್ದ. ಎಷ್ಟೆ ಕೇಳಿಕೊಂಡರು ಸಹ ಹಣಕೊಟ್ಟರೆ ಮಾತ್ರ ಕೆಲಸ ಮಾಡಿಕೊಡುವುದಾಗಿ ತಿಳಿಸಿದ್ದ ಎನ್ನಲಾಗಿದ್ದು ಈ ಸಂಬಂಧ ದೇವಿದಾಸ್ ನಾಯ್ಕ ಎಂಬುವವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಮಾಹಿತಿ ನೀಡಿದ್ದರು ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂದಿಸಿ ಗುರುವಾರ -ಸ್ವತ್ತು ನೋಂದಣಿಯ 11100 ರೂಗಳು ಹಾಗೂ ಲಂಚದ ಬೇಡಿಕೆ ಇಟ್ಟ 5000 ರೂ ಸೇರಿ ಒಟ್ಟು 16100ರೂಗಳನ್ನು ನೀಡುವಾಗ ಬೆಳಕೆ ಪಂಚಾಯಿತಿ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಅಣ್ಣ ನಾಯ್ಕ ಇವರನ್ನು ವಶಕ್ಕೆ ಪಡೆದಿದ್ದಾರೆ. ಎಸಿಬಿ ಡಿವೈಎಸ್ಪಿ ಶ್ರೀಕಾಂತ ಕೆ. ನೇತೃತ್ವದ ತಂಡ ದಾಳಿ ನಡೆಸಿ ದಾಖಲೆಗಳನ್ನು ಪರೀಶಿಲನೆ ನಡೆಸಿ ಹೆಚ್ಚಿನ ವಿಚಾರಣೆಗಾಗಿ ಕಾರವಾರ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ.

Read These Next