ದುಬೈ:ಪ್ರವಾದಿವರ್ಯರ ಜೀವನದ ನೈಜ ಪಥಕ್ಕೆ ಕೊಂಡೊಯ್ಯುವ ಸಯ್ಯಿದರುಗಳು ಮತ್ತು ವಿದ್ವಾಂಸರುಗಳಿಂದ ಕನ್ನಡ ನಾಡು ಸಮೃದ್ಧ : ಝೈನಿ ಕಾಮಿಲ್

Source: kcf dubai | By Arshad Koppa | Published on 28th December 2016, 8:33 PM | Gulf News | Special Report |

ದುಬೈ, ಡಿ ೨೮: ಕರ್ನಾಟಕವು ಇಂದು ಪ್ರವಾದಿ ಮುಹಮ್ಮದ್ (ಸ ಅ) ರವರ ಜೀವನದ ನೈಜ ಪಥಕ್ಕೆ ಕೊಂಡೊಯ್ಯುವ ಸಯ್ಯಿದರುಗಳು ಮತ್ತು ವಿದ್ವಾಂಸರುಗಳಿಂದ ಸಮೃದ್ಧ ಗೊಂಡಿದ್ದು, ರಾಜ್ಯದ ಉದ್ದಗಲಕ್ಕೂ ಇಂದು ವಿದ್ಯಾ ಸಂಸ್ಥೆಗಳು, ಸಯ್ಯಿದರುಗಳು, ವಿದ್ವಾಂಸರುಗಳ ನೇತೃತ್ವಗಳಿಂದ ಧನ್ಯಗೊಂಡಿದೆ ಎಂದು ಯುವ ವಾಗ್ಮಿ, ಶೈಖ್ ಝಾಯಿದ್ ಸಾಮರಸ್ಯ ಪ್ರಶಸ್ತಿ ವಿಜೇತರಾದ ಮೌಲಾನಾ ಎಮ್ಮೆಸ್ಸೆಂ ಅಬ್ದುಲ್ ರಶೀದ್ ಸಖಾಫಿ ಝೈನಿ ಕಾಮಿಲ್ ಸಂತೋಷ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಕಲ್ಚರಲ್ ಫೌಂಡೇಶನ್ - ಕೆಸಿಎಫ್ ದುಬೈ ಝೋನ್ ಸಮಿತಿ ಆಶ್ರಯದಲ್ಲಿ ಪ್ರೀತಿಯ ಪ್ರವಾದಿ ಶಾಂತಿಯ ಹಾದಿ ಎಂಬ ಶೀರ್ಷಿಕೆಯಲ್ಲಿ ನಡೆದ ಇಲಲ್ ಹಬೀಬ್ ಮೀಲಾದ್ ಸಮಾವೇಶದಲ್ಲಿ ಮುಖ್ಯ ಭಾಷಣ ಮಾಡಿದರು. ಮುಂದುವರಿದು ಮಾತನಾಡಿದ ಝೈನಿರವರು ಪ್ರವಾದಿ (ಸಅ) ರವರ ಬಗ್ಗೆ ಅಧ್ಯಯನ ನಡೆಸಿದ ಆಧುನಿಕ ಬುದ್ದಿ ಜೀವಿಗಳು ಪ್ರವಾದಿವರ್ಯರಷ್ಟು ಜೀವನದ ಪ್ರತಿಯೊಂದು ವಿಷಯಗಳಲ್ಲೂ ಸಂಪೂರ್ಣರಾದ ಬೇರೊಬ್ಬ ವ್ಯಕ್ತಿಯನ್ನು ಕಾಣಲು ಸಾಧ್ಯವಿಲ್ಲವೆಂದು ಹೇಳಿರುವುದು ಉದಾಹರಣೆ ಸಹಿತ ವಿವರಿಸಿದರು. 

ಸಯ್ಯದ್ ಇಲ್ಯಾಸ್ ಅಲ್ ಹೈದ್ರೋಸಿ ತಂಙ್ಙಳ್ ಎಮ್ಮೆಮಾಡು ಉದ್ಘಾಟಿಸಿ ಮಾತನಾಡಿ ಪ್ರಪಂಚದಲ್ಲಿ ಇಂದು ನಡೆಯುವ ವಿದ್ವಾಂಸಕ ಕೃತ್ಯಗಳು ನಡೆಯುತ್ತಿರುವುದು ಪ್ರವಾದಿ (ಸ ಅ) ರವರ ಜೀವನದಲ್ಲಿ ತೋರಿಸಿಕೊಟ್ಟ ನೈಜ ಆದರ್ಶವನ್ನು ಪಾಲಿಸದೆ ಇರುವುದರಿಂದಾಗಿದ್ದು,ಪ್ರವಾದಿ ಯೆಡೆಗೆ ಮರಳಬೇಕಾದದ್ದು ಪ್ರತಿಯೊಬ್ಬ ವಿಶ್ವಾಸಿಯ ಕರ್ತವ್ಯವಾಗಿದೆ ಎಂದು ಹೇಳಿದರು.  ರಾಜ್ಯ ಎಸ್ಸೆಸ್ಸೆಫ್ ಉಪಾದ್ಧ್ಯಕ್ಷರಾದ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಳ, ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಹಾಜಿ ನಾಪೋಕ್ಲು, ಸಂಘಟನಾ ವಿಭಾಗದ ಅಧ್ಯಕ್ಷರಾದ ಪಿಎಂಹೆಚ್ ಈಶ್ವರಮಂಗಳ  ರವರುಗಳು ಸಮಾರಂಭಕ್ಕೆ ಶುಭ ಹಾರೈಸಿ ಮಾತನಾಡಿದರು. 

 

ಸಯ್ಯದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ ತಂಙ್ಙಳ್ ಕಿಲ್ಲೂರು ಪ್ರಾರ್ಥನೆಗೆ ನೇತೃತ್ವವನ್ನು ಕೊಟ್ಟು ಮಾತನಾಡಿದರು. ಕೆಸಿಎಫ್ ದುಬೈ ಬುರ್ದಾ ತಂಡದಿಂದ ಬುರ್ದಾ ಆಲಾಪನೆ ಹಾಗೂ ಮೌಲೂದ್ ಪಾರಾಯಣ ನಡೆಯಿತು. ಹಿರಿಯ ವಿದ್ವಾಂಸರಾದ ಕೆ ಹೆಚ್ ಅಹಮದ್ ಫೈಝಿ ಕಕ್ಕಿಂಜೆ, ದುಬೈ ಉದ್ಯಮಿಗಳಾದ ಹಾಜಿ ಬಷೀರ್ ಬೊಳ್ವಾರ್, ಅಬ್ದುಲ್ ಲತೀಫ್ ಮುಲ್ಕಿ, ಎಂ ಇ ಮೂಳೂರು, ನಝೀರ್ ಕೆಮ್ಮಾರ, ಸ್ಟಾರ್ ಲಿಂಕ್ ಅಬ್ದುಲ್ ಹಮೀದ್ ಹಾಜಿ, ಜೆ ಎಸ್ ಮುಹಮ್ಮದ್ ಹಾಜಿ ಅರ್ಲಪದವು, ಝೈನುದ್ದೀನ್ ಬೆಳ್ಳಾರೆ, ಅರಫಾತ್ ನಾಪೋಕ್ಲು, ಖಲೀಲ್ ಭಾಷಾ ಮಡಿಕೇರಿ ಕೆಸಿಎಫ್ ದುಬೈ ಝೋನ್ ಅಧ್ಯಕ್ಷರಾದ ಮಹಬೂಬ್ ಸಖಾಫಿ ಕಿನ್ಯ, ಕೋಶಾಧಿಕಾರಿ ಅಬೂಬಕರ್ ಹಾಜಿ ಕೊಟ್ಟಮುಡಿ, ಯುಎಇ ರಾಷ್ಟ್ರೀಯ ಸಮಿತಿ ನಾಯಕರಾದ ಜಲೀಲ್ ನಿಝಾಮಿ ಎಮ್ಮೆಮಾಡು, ಇಕ್ಬಾಲ್ ಕಾಜೂರು, ಶುಕೂರ್ ಮನಿಲಾ, ಕೆಸಿಎಫ್ ಅಬುಧಾಬಿ ಸಮಿತಿ ಕಾರ್ಯದರ್ಶಿ ಹಸೈನಾರ್ ಅಮಾನಿ ಅಜ್ಜಾವರ, ಅಜ್ಮಾನ್ ಝೋನ್ ಅಧ್ಯಕ್ಷರಾದ ಅಬ್ದುಲ್ ಖಾದರ್ ಸಅದಿ, ಅಲ್ ಐನ್ ಝೋನ್ ಅಧ್ಯಕ್ಶರಾದ ಅಬ್ದುಲ್ ರಝಾಕ್ ಹಾಜಿ ನಾಟೆಕಲ್, ಶಾರ್ಜಾ ಝೋನ್ ಅಧ್ಯಕ್ಶರಾದ ಅಬ್ದುಲ್ ರಝಾಕ್ ಹಾಜಿ ಜೆಲ್ಲಿ ಸೇರಿದಂತೆ ಅನೇಕ ಉಲಮಾ ಉಮರಾ ನಾಯಕರುಗಳು ಭಾಗವಹಿಸಿದರು. 

ಕೆಸಿಎಫ್ ದುಬೈ ಝೋನ್ ಪ್ರಧಾನ ಕಾರ್ಯದರ್ಶಿ ಕಲಂದರ್ ಕಬಕ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು, ರಿಯಾಝ್ ಕೊಂಡಂಗೇರಿ ಕಾರ್ಯಕ್ರಮ ನಿರೂಪಿಸಿದರು, ಮೀಲಾದ್ ಸ್ವಾಗತ ಸಮಿತಿ ಕನ್ವೀನರ್ ಹಂಝ ಎಮ್ಮೆಮಾಡು ಸ್ವಾಗತಿಸಿ, ದುಬೈ ಝೋನ್ ಆಡಳಿತ ವಿಭಾಗದ ಅಧ್ಯಕ್ಷರಾದ ರಫೀಕ್ ಕಲ್ಲಡ್ಕ ವಂದನಾರ್ಪಣೆ ನಿರ್ವಹಿಸಿದರು
 

Read These Next

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.

ಪ್ರವಾದಿ ಕುರಿತು ವಿವಾದಾತ್ಮಕ ಹೇಳಿಕೆಗೆ ಮುಂದುವರಿದ ಆಕ್ರೋಶ; 17 ದೇಶಗಳ ಖಂಡನೆ; ಗಲ್ಫ್ ಸಹಕಾರ ಮಂಡಳಿಯಿಂದಲೂ ಆಕ್ಷೇಪ

ತಾನು ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ ಎಂದು ಒತ್ತಿ ಹೇಳುವ ಮೂಲಕ ವಿವಿಧ ದೇಶಗಳಲ್ಲಿ ಭುಗಿಲೆದ್ದಿರುವ ಕ್ರೋಧದ ಅಲೆಯನ್ನು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...