ಸಂಕಷ್ಟದಲ್ಲಿ ನೆರವಿಗೆ ಬಂದ ಭಟ್ಕಳದ ಉದ್ಯಮಿ; ತಾಯ್ನಾಡು ಸೇರಿದ 184 ಮಂದಿ ಭಟ್ಕಳಿಗರು

Source: sonews | By Staff Correspondent | Published on 13th June 2020, 4:43 PM | Coastal News | Gulf News | Don't Miss |

* ಎಲ್ಲರಿಗೂ 7ದಿನಗಳ ಸಾಂಸ್ಥಿಕ ಕ್ವಾರೆಂಟೈನ್

* ಎಲ್ಲರ ಪ್ರಶಂಸೆಗೆ ಪಾತ್ರವಾಗುತ್ತಿರುವ ಅತಿಕುರ್ರಹ್ಮಾನ್ ಮುನಿರಿ

ಭಟ್ಕಳ:  40 ದಿನಗಳ ವೀಸಾ ಪಡೆದು ಫೆಬ್ರವರಿಯಲ್ಲಿ ಭಟ್ಕಳದಿಂದ ದುಬೈಗೆ ಹೋಗಿದ್ದು ಕೆಲವೇ ದಿನಗಳಲ್ಲಿ ಕರೋನಾ ಸಾಂಕ್ರಾಮಿಕ ರೋಗ ಬೆಳಕಿಗೆ ಬಂದಿತು. ದುಬೈ ಸೇರಿದಂತೆ ಭಾರತವೂ ಸಹ ಲಾಕ್ಡೌನ್ ಆಗಿತ್ತು. ನಾನು ದುಬೈಗೆ ಆಗಮಿಸಿ ತುಂಬಾ ಕೆಟ್ಟದಾಗಿ ಸಿಲುಕಿಕೊಂಡೆ. ಕೆಲಸವಿಲ್ಲ, ವಾಸಿಸಲು ಮತ್ತು ತಿನ್ನಲು ಹಣವಿಲ್ಲ ಮತ್ತು ಹಿಂತಿರುಗಲು ವಿಮಾನ ಸೇವೆ ಇಲ್ಲ, ಅಂತಹ ಕೆಟ್ಟ ಪರಿಸ್ಥಿತಿಯಲ್ಲಿ ವ್ಯಕ್ತಿಯು ಏನು ಮಾಡುತ್ತಾನೆ. ವೀಸಾ ಅವಧಿ ಮುಗಿದ ಎರಡು ತಿಂಗಳ ನಂತರ, ಲಾಕ್ಡೌನ್ನಲ್ಲಿ ಸಿಲುಕಿರುವ ನಮ್ಮಂತಹ ಜನರನ್ನು ತೊಂದರೆಯಿಂದ ರಕ್ಷಿಸಲು ಭಟ್ಕಳ ಮೂಲದ ಉದ್ಯಮಿ ಅತೀಕ್-ಉರ್-ರೆಹಮಾನ್ ಮುನಿರಿ ಮಂಗಳೂರಿಗೆ ಚಾರ್ಟರ್ಡ್ ವಿಮಾನದ ವ್ಯವಸ್ಥೆ ಮಾಡಿದ್ದಾರೆ ಎಂದು ವರದಿಯಾಯಿರು. ಇದು ನನಗೆ ಮತ್ತು ನನ್ನಂತಹ ಅನೇಕರಿಗೆ ಒಂದು ದೊಡ್ಡ ವರದಾನವಾಯಿತು. ಇಂದು ನಾನು ಸುರಕ್ಷಿತವಾಗಿ ಊರು ಸೇರಿದ್ದೇನೆ ನಾವು ಅವರಿಗೆ ಕೃತಜ್ಞನಾಗಿದ್ದೇನೆ.  ಎಂದು ದುಬೈಯಿಂದ ಬಾಡಿಗೆ ವಿಮಾನದ ಮೂಲಕ ಶನಿವಾರ ಭಟ್ಕಳ ತಲುಪಿದ ಪ್ರಯಾಣಿಕರೊಬ್ಬರ ಮನದಾಳದ ಮಾತಿದು. ಮಾತ್ರವಲ್ಲ ಎಲ್ಲರ ಅಭಿಪ್ರಾಯವೂ ಇದೆ ಆಗಿದೆ.  

ಲಾಕ್ಡೌನ್ ನಿಂದಾಗಿ ದುಬೈ,ಯುಎಇ ಯಲ್ಲಿ ಸಿಲುಕಿದ  ಭಟ್ಕಳ ಮತ್ತು ಸುತ್ತಮುತ್ತಲಿನ ಸಾವಿರಾರು ಜನರ ಪೈಕಿ 184 ಮಂದಿ ಶನಿವಾರದಂದು ಬಾಡಿಗೆ ವಿಮಾನದ ಮೂಲಕ ಮಂಗಳೂರಿಗೆ ಬಂದು ಅಲ್ಲಿಂದ 4 ಖಾಸಗಿ ಬಸ್ಸುಗಳಲ್ಲಿ ಭಟ್ಕಳ ತಲುಪಿದರು. 

ದುಬೈಯ ನೂಹಾ ಜನರಲ್ ಟ್ರೆಡಿಂಗ್ಸ್ ನ ಮಾಲಿಕ  ಹಾಗೂ ಭಟ್ಕಳದ ತಂಝೀಮ್ ಸಂಸ್ಥೆಯ ಉಪಾಧ್ಯಕ್ಷರಾದ ಅತಿಕುರ್ರಹ್ಮಾನ್ ಮುನಿರಿಯ ಮುಂದಾಳುತ್ವದಲ್ಲಿ ದುಬೈಯಲ್ಲಿ ಸಂಕಷ್ಟಕ್ಕೆ ಸಿಲುಕಿದ ಜನರು ಕೊನೆಗೆ ಭಟ್ಕಳವನ್ನು ಸೇರಿ ನಿಟ್ಟುಸಿರು ಬಿಟ್ಟಿದ್ದಾರೆ. 

ಶುಕ್ರವಾರ (ದುಬೈ ಸಮಯ) ರಾತ್ರಿ 11: 20 ಕ್ಕೆ ರಾಸ್ ಅಲ್ ಖೈಮಾ ವಿಮಾನ ನಿಲ್ದಾಣದಿಂದ ಹಾರಾಟ ನಡೆಸಿದ ಬಾಡಿಗೆ ವಿಮಾನವು ಶನಿವಾರ ಮುಂಜಾನೆ 4: 20 ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಿತು. ಮಂಗಳೂರಿನಿಂದ ಮೊದಲೆ ನಿರ್ಧರಿಸಿದಂತೆ ಅಲ್ಲಿ ಭಟ್ಕಳ ಮುಸ್ಲಿಮ ಜಮಾಅತ್ ಮಂಗಳೂರು ಹಾಗೂ ತಂಝೀಮ್ ಸಂಸ್ಥೆಯ ಮೇಲು ಉಸ್ತುವಾರಿಯಲ್ಲಿ 4 ಖಾಸಗಿ ಬಸ್ಸುಗಳ ಮೂಲಕ ಶನಿವಾರ 184 ಮಂದಿ ಪ್ರಯಾಣಿಕರು ಸುರಕ್ಷಿತವಾಗಿ ಭಟ್ಕಳ ಸೇರಿದರು. ಇದರಲ್ಲಿ ಗರ್ಭೀಣಿ ಮಹಿಳೆಯರು ಸೇರಿದಂತೆ ಮಕ್ಕಳು ವಯೋವೃದ್ಧರು ಸೇರಿದ್ದಾರೆ.  
ಈ ಕುರಿತಂತೆ ಭಟ್ಕಳ ಪ್ರಯಾಣದ ಎಲ್ಲ ವ್ಯವಸ್ಥೆಯನ್ನು ಮಾಡಿರುವ ಅತಿಕುರ್ರಹ್ಮಾನ್ ಮುನಿರಿ ಶುಕ್ರವಾರ ರಾಸ್ ಅಲ್ –ಖೈಮಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ್ದು, ಮೊದಲಿಗೆ ಅಲ್ಲಾಹನಿಗೆ ಕೃತಜ್ಞತೆಯನ್ನು ಸಲ್ಲಿಸಿ ಈ ಕಾರ್ಯಕ್ಕಾಗಿ ಸಹಕರಿಸಿ ಭಾರತೀಯ ರಾಯಭಾರಿ ಕಚೇರಿ ಹಾಗೂ ಮಂಗಳೂರು ಮತ್ತು ಉತ್ತರಕನ್ನಡ ಜಿಲ್ಲಾಧಿಕಾರಿ ಹಾಗೂ ವಿವಿಧ ದಾನಿಗಳನ್ನು ಅಭಿನಂದಿಸಿದ್ದಾರೆ. ಇದೊಂದು ಚಿಕ್ಕ ಪ್ರಯತ್ನವಾಗಿದ್ದು ಭಟ್ಕಳದ ಜನರು ತಮ್ಮ ತಾಯ್ನಾಡಿಗಾಗಿ ಮರಳಲು ಬಯಸುತ್ತಿದ್ದಾರೆ. ಲಾಕ್ಡೌನ್ ನಲ್ಲಿ ಇಲ್ಲಿ ಅವರು ಬಹಳಷ್ಟು ಕಷ್ಟವನ್ನು ಅನುಭವಿಸುತ್ತಿರುವುದು ಗಮನಿಸಿ ಭಟ್ಕಳದ ಜನರ ಸಹಕಾರ ನಿಂತ ಅವರ ಕಾರ್ಯವನ್ನು ಭಟ್ಕಳದ ಜನರು ಶ್ಲಾಘಿಸುತ್ತಿದ್ದಾರೆ. 

ತಾಲೂಕಾಡಳಿತ ಮತ್ತು ತಂಝೀಮ್ ಸ್ವಯಂಸೇವಕರ ನಡುವೆ ಮಾತಿನ ಚಕಮಕಿ: ಪ್ರಯಾಣಿಕರ ಲಗೇಜುಗಳನ್ನು ಬೇರ್ಪಡಿಸುವ ವಿಷಯಕ್ಕೆ ಸಂಬಂಧಿಸಿದಂತೆ ತಾಲೂಕಾಡಳಿತ ಮತ್ತು ತಂಝೀಮ್ ಸಂಸ್ಥೆಯ ಸ್ವಯಂ ಸೇವಕರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು. ದುಬೈಯಿಂದಲೇ ಪ್ರಯಾಣಿಕರಿಗೆ ಟೋಕನ್ ನೀಡಿದ್ದು ಯಾರು ಎಲ್ಲಿ ಕ್ವಾರೆಂಟೈನ್ ನಲ್ಲಿರಬೇಕು ಎಂಬುದನ್ನು ಸ್ಪಷ್ಟವಾಗಿ ತಿಳಿಸಲಾಗಿತ್ತು. ಆದರೆ ಭಟ್ಕಳ ಪ್ರಯಾಣಿಕರು ಬಂದ ನಂತರ ಲಗೇಜು ವಿಷಯದಲ್ಲಿ ಗೊಂದಲ ಉಂಟಾಗಿದ್ದು ನಂತರ ತಂಝೀಮ್ ಮುಖಂಡರು ತಾಲೂಕಾಡಳಿತದೊಂದಿಗೆ ನಾವು ನಿಮ್ಮ ಎಲ್ಲ ಸಲಹೆ ಸೂಚನೆಗಳನ್ನು ಪಾಲಿಸುತ್ತಿದ್ದೇವೆ. ಆದರೆ ತಾವು ಮಾತ್ರ ನಮ್ಮ ಯಾವುದೇ ಸಲಹೆಯನ್ನು ಗಮನಕ್ಕೆ ತೆಗೆದುಕೊಳ್ಳುತ್ತಿಲ್ಲ ನೀವು ನಿಮ್ಮ ಮನಸ್ಸಿಗೆ ಬಂದ ಹಾಗೆ ಮಾಡಿದರೆ ನಾವು ಈ ವಿಷಯದಲ್ಲಿ ತಟಸ್ಥರಾಗಬೇಕಾಗುತ್ತದೆ ಎಂದಾಗ ಕೊನೆಗೂ ಒಪ್ಪಿಕೊಂಡ ತಾಲೂಕಾಡಳಿತ ಲಗೇಜು ವಿಷಯದಲ್ಲಿ ಗೊಂದಲಗಳನ್ನು ಬಗೆಹರಿಸಿದರು. 
ಎಲ್ಲರಿಗೂ ಕ್ವಾರೈಂಟೇನ್: ಭಟ್ಕಳಕ್ಕೆ ಬಂದಿಳಿದ ಎಲ್ಲ ಪ್ರಯಾಣಿಕರನ್ನು ನೇರವಾಗಿ ಬಸ್ಸಿನಿಂದ ಇಳಿಸಿ ಕ್ವಾರೈಂಟೈನ್ ಕೇಂದ್ರಗಳಿಗೆ ತಲುಪಿಸಲಾಗಿದೆ. ಹೊಟೇಲ್ ಕೋಲಾ ಪ್ಯಾರಾಡೈಸ್ ನಲ್ಲಿ 68 ಮಂದಿ, ನಿಲಾವರ್ ಅಪರ್ಮೆಂಟ್ ನಲ್ಲಿ 67 ಮತ್ತು ಅಂಜುಮನ್ ಹಾಸ್ಟೆಲ್ ನಲ್ಲಿ 49 ಮಂದಿಯನ್ನು ಕ್ವಾರೆಂಟೈನ್ ಮಾಡಲಾಗಿದ್ದು, ಇಲ್ಲಿ 7ದಿನಗಳು ಕಳೆದ ನಂತರ ಅವರನ್ನು ಮನೆಗಳಿಗೆ ಕಳುಹಿಸಲಾಗುವುದು ಎಂದು ತಿಳಿದುಬಂದಿದೆ. 
ದುಬೈನ ಎಲ್ಲ ಜನರನ್ನು ಈಗ ಎರಡು ಖಾಸಗಿ ಹೋಟೆಲ್ಗಳು ಮತ್ತು ಅಂಜುಮಾನ್ ಹಾಸ್ಟೆಲ್ನಲ್ಲಿ ನಿಬರ್ಂಧಿಸಲಾಗಿದೆ.ಹೋಟಲ್ ಕೋಣೆಗೆ ಹೋಗುವ ಮೊದಲು ಎಲ್ಲಾ ಜನರನ್ನು ಥರ್ಮಲ್ ಆಗಿ ಸ್ಕ್ಯಾನ್ ಮಾಡಲಾಗುತ್ತದೆ, ನಂತರ ತಮ್ಮ ಸ್ವಂತ ಕೋಣೆಗಳಿಗೆ ಹೋಗಲು ಅನುಮತಿಸಲಾಗುತ್ತದೆ. ಅಂಜುಮಾನ್ ಹಾಸ್ಟೆಲ್ಗೆ ಹೋದವರಿಗೆ ಬಸ್ನಿಂದ ಇಳಿಯುವಾಗ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಯಿತು ಮತ್ತು ನಂತರ ಹಾಸ್ಟೆಲ್ಗೆ ಪ್ರವೇಶಿಸಲು ಅವಕಾಶ ನೀಡಲಾಯಿತು. ಎಲ್ಲವನ್ನೂ ಈಗ ಏಳು ದಿನಗಳವರೆಗೆ ನಿಬರ್ಂಧಿಸಲಾಗಿದೆ.

ಗಂಟಲು ದ್ರವ ಮಾದರಿ ಪರೀಕ್ಷೆಗೆ: ಐದು ದಿನಗಳ ಕ್ವಾರೆಂಟೈನ್  ನಂತರ ದುಬೈಯಿಂದ ಮರಳಿದ ಎಲ್ಲರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗಳು ಕಳುಹಿಸಲಾಗುತ್ತಿದ್ದ ವರದಿಯು ನೆಗೆಟಿವ್ ಬಂದರೆ ಅವರನ್ನು ಮನೆಗೆ ಹೋಗಲು ಹೋಗಲು ಅನುಮತಿಸಲಾಗುವುದು. ಗರ್ಭೀಣಿ ಮಹಿಳೆಯರ ದ್ರವನ್ನು ಭಾನುವಾರವೆ ಪಡೆದುಕೊಂಡು ಪರೀಕ್ಷೆಗೆ ಕಳುಹಿಸಿ ಅವರನ್ನು ಮನೆಗೆಳಿಗೆ ಕಳುಹಿಸಿ ಕೊಡುವ ಬಗ್ಗೆ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ. 
 

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...