ದುಬೈ: ವಿದೇಶಿ ಆವೃತ್ತಿ ಹೊಂದಿರುವ ಕನ್ನಡದ ಏಕೈಕ ಪತ್ರಿಕೆ ಗಲ್ಫ್ ಇಶಾರ ಮಾಸಿಕದ ಪ್ರಥಮ ವಾರ್ಷಿಕೋತ್ಸವ

Source: kcf dubai | By Arshad Koppa | Published on 3rd February 2017, 8:07 AM | Gulf News | Special Report |

ದುಬೈ : ಗಲ್ಫ್ ರಾಷ್ಟ್ರಗಳಲ್ಲಿ ಪ್ರಪ್ರಥಮ ಬಾರಿಗೆ ಸರಕಾರದ ಅನುಮೋದನೆಯೊಂದಿಗೆ ಪ್ರಕಾಶನಗೈದು ಸುಮಾರು ಹತ್ತು ಸಾವಿರಕ್ಕಿಂತಲೂ ಅಧಿಕ ಚಂದಾದಾರರನ್ನು ಸ್ರಷ್ಟಿಸುವಲ್ಲಿ ಯಶಸ್ವಿಯಾದ ವಿದೇಶಿ ಆವೃತ್ತಿ ಹೊಂದಿರುವ ಕನ್ನಡದ ಏಕೈಕ ಪತ್ರಿಕೆ ಗಲ್ಫ್ ಇಶಾರ ಮಾಸಿಕದ ಯುಎಇ ಆವೃತ್ತಿಯ ಪ್ರಥಮ ವಾರ್ಷಿಕೋತ್ಸವ ಮತ್ತು ಭಾರತದ 68 ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆಯು ಫೆಬ್ರವರಿ 3 ರಂದು ಸಂಜೆ 6 ಘಂಟೆಗೆ ದುಬೈ ದೇರಾ ಸಿಟಿ ಸೆಂಟರ್ ಹತ್ತಿರದ ಪರ್ಲ್ ಸಿಟಿ ಸೂಟ್ಸ್ ಹೋಟಲ್ ಸಭಾಂಗಣದಲ್ಲಿ ನಡೆಯಲಿದೆ. ಕರ್ನಾಟಕ ಕಲ್ಚರಲ್ ಫೌಂಡೇಶನ್ - ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಆಯೋಜಿಸುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯದ ಮಾಜಿ ಮುಖ್ಯ ಮಂತ್ರಿಗಳಾದ ಶ್ರೀ ಹೆಚ್ ಡಿ ಕುಮಾರಸ್ವಾಮಿ ಭಾಗವಹಿಸಲಿದ್ದಾರೆ.

ಗಲ್ಫ್ ಇಶಾರ ಇಂದು GCC ಸಹಿತ ಲಂಡನ್ ಹಾಗೂ ಮಲೇಷ್ಯಾ ರಾಷ್ಟ್ರಗಳಲ್ಲಿ ಕನ್ನಡ ಮಣ್ಣಿನ ಕಂಪನ್ನು ಪಸರಿಸುವ, ಸನಾತನ ಇಸ್ಲಾಮಿನ ನೈಜ ರೂಪವನ್ನು ಕಲಬೆರಕೆಯಿಲ್ಲದೆ ಇತರ ಧರ್ಮಾನುಯಾಯಿಗಳಿಗೆ ವಿವರಿಸಿ ಕೊಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾ ಬರುತ್ತಿದೆ, ಸಕಾಲಿಕ ಲೇಖನಗಳ ಮೂಲಕ ಓದುಗರ ಗಮನ ಸೆಳೆಯುತ್ತಾ ಯುವ ಬರಹಗಾರರನ್ನು ಸಮಾಜಕ್ಕೆ ಸಮರ್ಪಿಸುತ್ತಿರುವ ಗಲ್ಫ್ ಇಶಾರ ಕಳೆದ ವರ್ಷ ಕರ್ನಾಟಕ ವಿಧಾನ ಸಭೆಯ ಸಭಾಪತಿ ಗಳಾಗಿದ್ದ ಸನ್ಮಾನ್ಯ ಕಾಗೋಡು ತಿಮ್ಮಪ್ಪರವರರಿಂದ ಯುಎಯಲ್ಲಿ ಲೋಕಾರ್ಪಣೆಗೊಂಡು,ತನ್ನ ಚೊಚ್ಚಲ ವರ್ಷವನ್ನು ಯಶಸ್ವಿಯಾಗಿ ಪೂರೈಸಿದೆ. ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ಸಂಘಟನೆಯ ಮುಖವಾಣಿ ಗಲ್ಫ್ ಇಶಾರ ಮಾಸಿಕ ಪತ್ರಿಕೆ ಇಂದು ಗಲ್ಫ್ ರಾಷ್ಟ್ರಗಳಾದ್ಯಂತ ಪರಿವರ್ತನೆಯ ಅಲೆಯನ್ನು ಎಬ್ಬಿಸುತ್ತಾ ಗಲ್ಫ್ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ. 

ಪ್ರಸ್ತುತ ಸಮಾರಂಭದಲ್ಲಿ ರಾಜ್ಯ  ವಕ್ಫ್ ಮಂಡಳಿ ನಿರ್ದೇಶಕರೂ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷರೂ ಆದ ಬಹು ಎನ್ ಕೆ ಎಂ ಶಾಫಿ ಸಅದಿ ಬೆಂಗಳೂರು, ಜನಾಬ್ ಯಾಕೂಬ್ ಹೊಸನಗರ (ಕಾರ್ಯದರ್ಶಿ ಎಸ್ ವೈ ಎಸ್ ಕರ್ನಾಟಕ ರಾಜ್ಯ), ಜನಾಬ್ ಬಿ ಎಂ ಫಾರೂಖ್ (ಫಿಝಾ ಡೆವಲಪರ್ಸ್ ಬೆಂಗಳೂರು), ಜನಾಬ್ ಮುಹಮ್ಮದ್ ಇಕ್ಬಾಲ್ ನಾವುಂದ (ಫ್ರೀಲಾನ್ಸ್ ಖತಾರ್), ಸಂಸದರಾದ ಶ್ರೀ ಸಿ ಎಸ್ ಪುಟ್ಟರಾಜು ಮಂಡ್ಯ, ಕೆಸಿಎಫ್ ಅಂತರ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಜಿ ಶೈಖ್ ಬಾವ ಮಂಗಳೂರು ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ. 

ಹಲವು ಸಂಪನ್ಮೂಲ ವ್ಯಕ್ತಿಗಳು, ದಾರ್ಶನಿಕರು, ಚಿಂತಕರು, ಅಂತಾರಾಷ್ಟ್ರೀಯ ಮಟ್ಟದ ಉದ್ಯಮಿಗಳು, ದೇಶ ವಿದೇಶಗಳ ವಿಶಿಷ್ಟ ಅತಿಥಿಗಳು, ಸಾಮಾಜಿಕ ರಾಜಕೀಯ ನಾಯಕರುಗಳು ಆಗಮಿಸಲಿದ್ದು, ಯುಎಇ ಯಲ್ಲಿರುವ ಎಲ್ಲಾ ಅನಿವಾಸಿ ಕನ್ನಡಿಗರು ಭಾಗವಹಿಸಿ ಸಮಾರಂಭವನ್ನು ಯಶಸ್ವಿಗೊಳಿಸಿ ಕೊಡಲು ಇಶಾರ ವಾರ್ಷಿಕೋತ್ಸವ ನಿರ್ವಹಣಾ ಸಮಿತಿ ಚೇರ್ಮನ್ ಝೈನುದ್ದೀನ್ ಹಾಜಿ ಬೆಳ್ಳಾರೆ ಹಾಗೂ ಕೆಸಿಎಫ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಹಾಜಿ ನಾಪೋಕ್ಲು ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...