ದುಬೈ:ಯು.ಎ.ಇ ಯಲ್ಲಿ ಯಶಸ್ವಿಯಾಗಿ ನೆರವೇರಿದ ಡಿ ಕೆ ಎಸ್ ಸಿ ಯ ಗ್ರಾಂಡ್  ಕರಾವಳಿ ಫ್ಯಾಮಿಲಿ ಮುಲಾಖತ್  - 2016-17

Source: yusuf arlapadavu | By Arshad Koppa | Published on 13th January 2017, 11:14 AM | Gulf News | Special Report |

ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು.ಎ.ಇ ರಾಷ್ಟ್ರಿಯ ಸಮಿತಿಯು ಜನವರಿ 1 ರಂದು   ಹಮ್ಮಿಗೊಂಡ ಗ್ರಾಂಡ್  ಕರಾವಳಿ ಫ್ಯಾಮಿಲಿ ಮುಲಾಖತ್ ನೀರಿಕ್ಷೆಗೂ ಮಿಗಿಲಾದ ಯಶಸ್ವಿಯನ್ನು ಪಡೆದು ಆಗಮಿಸಿದ ಪ್ರತಿಯೋರ್ವರ ಮನಸ್ಸಿನಲ್ಲಿ ಡಿ.ಕೆ.ಎಸ್.ಸಿ ಮುಂದಿನ ಮುಲಾಖತ್ ನ್ನು ನಿರೀಕ್ಷಿಸುವಂತೆ ಮಾಡಿತು.  ಸುಂದರವಾದ ಪ್ರಕ್ರತಿ ಸೌಂದರ್ಯ  ಇಕ್ಕಡೆಗಳಲ್ಲಿ  ಪರ್ವತ ಉತ್ತಮ ವಾತಾವರಣ ಸುಂದರವಾದ ಕೆಂಪು ಬಣ್ಣದ  ಕಾರ್ಪೆಟ್ ಆಸಿದ ವಿಶಾಲ ಮೈದಾನ ದಿಂದ ವ್ಯವಸ್ಥಿತಗೊಳಿಸಿದ ಶಾರ್ಜಾ ಮಲಿಹ ರಸ್ತೆಯಲ್ಲಿರುವ ಆಯಿಷ್ ವೆಡ್ಡಿಂಗ್ ಹಾಲ್ ನಲ್ಲಿ ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಕಾರ್ಯಕ್ರಮದ ಉಧ್ಘಾಟನ ಸಮಾರಂಭವು ನಡೆಯಿತು.  ಕಾರ್ಯಕ್ರಮದಲ್ಲಿ ಮಾಸ್ಟರ್ ಜ.ಮಾಸ್ಟರ್ ಮೊಯುದ್ದೀನ್ ಹಾಫಿಲ್ ರವರ ಕಿರಹಾತ್ ನೊಂದಿಗೆ  ಸಯ್ಯದ್ ಅಸ್ಗರ್  ಅಲಿ ತಂಙಳ್  ನೆರೆವೇರಿಸಿದರು.  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ  ಫ್ಯಾಮಿಲಿ ಮೂಲಖಾತ್ ಸ್ವಾಗತ ಸಮಿತಿ ಛೇರ್ಮನ್ ಜನಾಬ್. ಅಬ್ದುಲ್ ಲತೀಫ್ ಮುಲ್ಕಿ  ಪ್ರಸ್ತುತ ಕಾರ್ಯಕ್ರಮದ ವಿಷಯ ಪ್ರಸ್ತಾವಿಸಿ ಆಗಮಿಸಿದ ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಲು ಸಹಕರಿಸುವಂತೆ ವಿನಂತಿಸಿದರು . ಡಿ.ಕೆ.ಎಸ್.ಸಿ ಅಜ್ಮಾನ್ ಯುನಿಟ್ ಗೌರವಾಧ್ಯಕ್ಷರಾದ  ಅಬೂಬಕ್ಕರ್ ಮದನಿ ಕೆಮ್ಮಾರ  ಫ್ಯಾಮಿಲಿ ಮೂಲಖಾತ್ ನಡೆಸುವ ಉದ್ದೇಶ ವನ್ನು ಸಭಿಕರಿಗೆ ಮನದಟ್ಟು ಮಾಡಿ ಸಭೆಯನ್ನು ಅಧಿಕ್ರತವಾಗಿ ಉದ್ಘಾಟನೆ  ಮಾಡಿದರು. ಸ್ವಾಗತ ಭಾಷಣ ಮಾಡಿದ  ಡಿ.ಕೆ.ಎಸ್.ಸಿ  ಯು.ಎ.ಇ ರಾಷ್ಟ್ರಿಯ ಸಮಿತಿ ಪ್ರಧಾನ ಕಾರ್ಯದರ್ಶಿ  ಜನಾಬ್ ಮುಹಮ್ಮದ್ ಇಕ್ಬಾಲ್ ಕಣ್ಣಂಗಾರ್ ಸಂಘಟನೆ ಯ  ಕಾರ್ಯಚಟುವಟಿಕೆಗಕ ಬಗ್ಗೆ ವಿವರಿಸಿದರು.

ಮಗ್ರಿಬ್ ನಮಾಝಿನ ನಂತರ ನಡೆದ ಸಮಾರೋಪ ಕ್ಕೆ ಯು.ಎ.ಇ ರಾಷ್ಟ್ರಿಯ ಸಮಿತಿ ಗೌರವ ಅಧ್ಯಕ್ಷರಾದ ಸಯ್ಯದ್  ತ್ವಾಹ  ಬಾಫಖಿ ತಂಙಳ್ ದುಃವಾ ಮೂಲಕ ಸಭೆಗೆ ಚಾಲನೆ ನೀಡಿದರು. ಯು.ಎ.ಇ ರಾಷ್ಟೀಯ ಸಮಿತಿಯ ಉಪಾಧ್ಯಕ್ಷರಾದ ಜನಾಬ್ ಎಂ.ಇ. ಮೂಳೂರು ಸಭೆಯ ಸಭಾಧ್ಯಕ್ಷೆತೆ ವಹಿಸಿದರು . ಪ್ರಸ್ತುತ ಕಾರ್ಯಕ್ರಮಕ್ಕಾಗಿ ಆಗಮಿಸಿದ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ  ಜನಾಬ್ ಇಸ್ಮಾಯಿಲ್ ಹಾಜಿ ಕಿನ್ಯ ಮಾತನಾಡಿ ಡಿ.ಕೆ.ಎಸ್.ಸಿ  ಯು.ಎ.ಇ ಯ ಕಾರ್ಯಚಟುವಟಿಕೆಗಳ  ಬಗ್ಗೆ ಪ್ರಸ್ತಾವಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಕೇಂದ್ರ ಸಮಿತಿ ಉಪಾಧ್ಯಕ್ಷರು ಯು.ಎ.ಇ ರಾಷ್ಟೀಯ ಸಮಿತಿ ಉಸ್ತುವಾರಿ ಯು ಕೂಡ ಆದ ಹಾಜಿ ಹಾತೀಮ್ ಕುಳೂರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಡಿ.ಕೆ.ಎಸ್.ಸಿ  ಯ ಹಿರಿಯ ಸಲಹೆಗಾರರು ಆದ ಹಾಜಿ ಮೊಯಿದೀನ್ ಕುಟ್ಟಿ ಕಕ್ಕಿಂಜೆ ಶುಭ ಹಾರೈಸಿ ಮಾತನಾಡಿದರು. ವೇದಿಕೆಯಲ್ಲಿ ಫ್ಯಾಮಿಲಿ ಮೂಲಖಾತ್ ಸ್ವಾಗತ ಸಮಿತಿ ಛೇರ್ಮನ್ ಜನಾಬ್ ಅಬ್ದುಲ್ ಲತೀಫ್ ಮುಲ್ಕಿ , ಸಯ್ಯದ್ ಅಸ್ಗರ್ ಅಲಿ ತಂಙಲ್ , ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್ ಕಣ್ಣಂಗಾರ್ , ಕೇಂದ್ರಸಮಿತಿ ಸದಸ್ಯರಾದ  ಜಮಾಲ್ ಅಬೂಸಾಲಿಹ್ ಕಣ್ಣಂಗಾರ್  , ಕಾರ್ಯಕ್ರಮದ ಮುಖ್ಯ ಪ್ರಾಯೋಜಕರಾದ  ಬಿ.ಎ. ತುಂಬೆ (ಮೊಯಿದ್ದೀನ್) ವುಡ್ ವರ್ಕ್ಸ್ ಇದರ ಮ್ಯಾನೇಜರ್ ಮುಹಮ್ಮದ್ ಅನ್ವರ್,  ಜನಾಬ್ ಝಯಿನುದ್ದೀನ್ ಬೆಳ್ಳಾರೆ  , ಬಷೀರ್ ಬೊಳುವಾರ್ ಮೊದಲಾದವರು ಉಪಸ್ಥಿತರಿದ್ದರು .  ಫ್ಯಾಮಿಲಿ ಮೂಲಾಖತ್  ಜನರಲ್ ಕನ್ವಿನರ್ ಎಸ್. ಯುಸೂಫ್ ಅರ್ಲಪದವು ಸ್ವಾಗತ ಭಾಷಣ ಮಾಡಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ ವಿಜೇತರಿಗೆ ಬಹುಮಾನ ವಿತರಣೆಯು ನಡೆಯಿತ್ತು ಜನಾಬ್ ಉಮ್ಮರ್ ಎಸ್.ಎಂ. ಹಾಗೂ ಕಮಲ್ ಅಜ್ಜಾವರ ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು .

ಪ್ರಸ್ತುತ ಕಾರ್ಯಕ್ರಮದಲ್ಲಿ ಸೇರಿದ ಸುಮಾರು 850 ರಷ್ಟು  ಜನರಲ್ಲಿ ಒಬ್ಬರನ್ನು ಅದ್ರಷ್ಟ ಚೀಟಿ ಎತ್ತುವ ಮೂಲಕಒಬ್ಬರಿಗೆ ಪವಿತ್ರ ಉಮ್ರಾ ಯಾತ್ರೆಗೆ ಅವಕಾಶ ಕಲ್ಪಿಸಲಾಯಿತು ಅದರಲ್ಲಿ ರಾಝಿ ಇಸ್ಮಾಯಿಲ್ ಮೂಳೂರುಭಾಗ್ಯಶಾಲಿ ಆಗಿ ಒರಹೊಮ್ಮಿದರು

ಮುಲಾಖತ್ ನ ವಿಶೇಷತೆಗಳು :

1.  ಪ್ರವೇಶ ದ್ವಾರದಲ್ಲಿ ನೋಂದಾವಣೆ ಕೌಂಟರ್ ತೆರೆಯಲಾಗಿತ್ತು.ಇದರ ಜವಾಬ್ದಾರಿಯನ್ನು ವಹಿಸಿದ  ಜನಾಬ್. ಝುಬೈರ್ ಆತೂರ್ , ರಿಯಾಜ್ ಕಿನ್ಯ , ಅರ್ಷದ್ ಅರ್ಕುಳ , ಶಫೀಕ್  ಕೋಝಿಕೋಡ್, ಕಮರುದ್ದೀನ್ ಗುರುಪುರ  ಆಗಮಿಸಿದ ಪ್ರತಿಯೊಬ್ಬರನ್ನು ಸ್ವಾಗತಿಸಿ  ನೋಂದಾವಣೆ  ಮಾಡಿಸಿ ಗಂಡಸರಿಗೆ ವಿವಿಧ ಬಣ್ಣದ  ಟಿ ಶರ್ಟ್ ಕೂಪನ್  ಹಾಗೂ ಮಹಿಳೆಯರಿಗೆ ರಿಬ್ಬನ್  ನೀಡುವುದರ ಮೂಲಕ ನೇರವಾಗಿ ತಂಡಗಳಿಗೆ ಆಯ್ಕೆ ಮಾಡುವ   ವ್ಯವಸ್ಥೆಗೊಳಿಸಲಾಗಿತ್ತು.

2. 8 ತಂಡಗಳನ್ನಾಗಿ ವಿಂಗಡಿಸಲಾಗಿತ್ತು. ವಿವಿಧ ಬಣ್ಣದ ಟಿ ಶರ್ಟ್ ಇದರ ಪ್ರಾಯೋಜಕರಾಗಿ ಸಹಕರಿಸಿದ   ಮಿಲನೋ ಗ್ರೂಪ್ , ಸ್ಟೈಲ್ ಟೆಕ್ , ಮೆಗಾ ಸ್ಟಾರ್ ಜುವೆಲ್ಲರಿ  , ಅಕ್ಕುವ ಪೂಲ್ಸ್ , ಗ್ರಾಂಡ್ ಸ್ಟೇಷನರಿ , ಫೈನಲ್ ಟಚ್, ಕ್ಲಾಸಿಕ್ ಮರೀನ್  , ನಾದ್ ಅಲ್ ಶಾಮ ಗ್ರೂಪ್ ನ ಮುಂದಾಳುತ್ವ ವಹಿಸಿದ್ದರು.

3. ಕೆಂಪು ಬಣ್ಣದ  ಕಾರ್ಪೆಟ್ ಆಸಿದ ವಿಶಾಲ ಮೈದಾನದಲ್ಲಿ ಸಮವಸ್ತ್ರದೊಂದಿಗೆ ಭಾರತದ ಹಾಗೂ ಯು.ಎ.ಇ ರಾಷ್ಟ್ರ ದ್ವಜವನ್ನು ಕ್ರಮವಾಗಿ ಹಾಜಿ.ಮೊಯಿದ್ದೀನ್ ಕುಟ್ಟಿ ಕಕ್ಕಿಂಜೆ ಹಾಗೂ ಜನಾಬ್. ಬಷೀರ್ ಬೊಳ್ವಾರ್ ರವರುಹಿಡಿದು  ಆಕರ್ಷಕ ಪಥ ಸಂಚನ ನಡೆಯಿತ್ತು . ಪಥ ಸಂಚಲನದಲ್ಲಿ ಭಾರತದ ಹಾಗೂ ಯು ಎ ಇ ರಾಷ್ಟ್ರಿಯ ಗೀತೆಯೊಂದಿಗೆ ಡಿ.ಕೆ.ಎಸ್.ಸಿ ಯ ಸುಂದರವಾದ ಹಾಡು ಮೊಳಗಿತು. ಪಥ ಸಂಚನದ ನೇತೃತ್ವವನ್ನು ಅಲ್ ಐನ್  ಜೂನಿಯರ್  ಸ್ಕೂಲ್ ನ ಪ್ರಾದ್ಯಾಪಕ ಜನಾಬ್ ಉಮ್ಮರ್ ಎಸ್.ಎಂ. ವಹಿಸಿದರು.

4.  ಹಾಜಿ ಅಬ್ದುಲ್ ರಹಿಮಾನ್ ಸಂಟ್ಯಾರ್ ಹಾಗೂ  ಹಸನಬ್ಬ ಕೊಳ್ನಾಡ್ ರವರ ಉಸ್ತುವಾರಿಯಲ್ಲಿ ನಡೆದ ಇಸ್ಲಾಂ ಧರ್ಮದ ಪಾರಂಪರ್ಯ ಕಲೆ ಯಾದ ದಫ್ಫ್ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದ ವಿಶೇಷ ಅತಿಥಿಗಳಾದ ಯು.ಎ.ಇ ರಾಷ್ಟ್ರಿಯ ಸಮಿತಿ ಗೌರವ ಅಧ್ಯಕ್ಷರು ಹಾಗೂ ಜಲಾಲಿಯ ರಾತೀಬ್  ಇದರ  ನೇತೃತ್ವವನ್ನು ನೀಡುವ  ಸಯ್ಯದ್ ತ್ವಾಹ ಬಾಫಖಿ ತಂಙಳ್, ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ  ಜನಾಬ್ ಇಸ್ಮಾಯಿಲ್ ಹಾಜಿ ಕಿನ್ಯ, ಕೇಂದ್ರ ಸಮಿತಿ ಉಪಾಧ್ಯಕ್ಷರು ಯು ಎ ಇ ಸಮಿತಿ ಉಸ್ತುವಾರಿ ಯು ಕೂಡ ಆದ ಹಾಜಿ. ಹಾತೀಮ್ ಕುಳೂರ್, ಕೇಂದ್ರ ಸಮಿತಿ ಸದಸ್ಯರಾದ ಜನಾಬ್. ಜಮಾಲ್ ಅಬೂಸಾಲಿಹ್ ಕಣ್ಣಂಗಾರ್ ರವರನ್ನುದಫ್ಫ್ ಮೂಲಕ ಡಿ.ಕೆ.ಎಸ್.ಸಿ ಯು.ಎ.ಇ ರಾಷ್ಟೀಯ ಸಮಿತಿ ನೇತಾರರು ಬರಮಾಡಿಕೊಂಡರು.

5. ಜನಾಬ್ ಅಬ್ದುರಹ್ಮಾನ್ ಸಜಿಪ ರವರ  ನೇತೃತ್ವದಲ್ಲಿ  ಮಕ್ಕಳಿಗೆ ವಿವಿಧ ಇಸ್ಲಾಮಿಕ್   ಸ್ಪರ್ಧಾ ಕಾರ್ಯಕ್ರಮನಡೆಯಿತು. ಕಾರ್ಯಕ್ರಮವನ್ನು ಜನಾಬ್. ರಹೀಮ್ ಕೊಡಿ , ಜನಾಬ್.ನಿಝಾರ್ ಮದನಿ, ಜನಾಬ್. ಕಾಸಿಂ ಮದನಿ,  ಜನಾಬ್. ಶಾಫಿ ಸಖಾಪಿ ಕರಿಂಬಿಲ ಮೊದಲಾದವರು ಕಾರ್ಯಕ್ರಮ ನಡೆಸಿ ಕೊಟ್ಟರು. ಹಾಲ್ ನಂಬರ್ 2 ರಲ್ಲಿಮಕ್ಕಳ  ಇಸ್ಲಾಮಿಕ್  ಹಾಡು ರಸ ಪ್ರಸ್ನ  ಹಾಗು ಡ್ರಾಯಿಂಗ್ ಸ್ಪರ್ಧೆಗಳು ನಡೆಯಿತ್ತು.

6 . ಹಾಲ್ ನಂಬರ್ 1 ರಲ್ಲಿ ಮಹಿಳೆಯರ ಇಸ್ಲಾಮಿಕ್ ರಸಪ್ರಶ್ನೆಗಳ ಸಮೇತ ವಿವಿಧ ಸ್ಫರ್ಧಾ ಕಾರ್ಯಕ್ರಮಗಳುನಡೆಯಿತು.

7. ವಿಶಾಲ ಮೈದಾನ ದಲ್ಲಿ ಗಂಡಸರಿಗೆ ವಿವಿಧ ಸ್ಪರ್ಧೆ ಗಳು ನಡೆಯಿತು. ಇದರ  ಉಸ್ತುವಾರಿಯನ್ನು ಜನಾಬ್. ನವಾಜ್  ಕೋಟೆಕ್ಕಾರ್ ಹಾಗೂ ಜನಾಬ್ ಉಮ್ಮರ್ ಎಸ್.ಎಂ. ರವರ  ನೇತೃತ್ವದಲ್ಲಿ ಜನಾಬ್. ಸಮದ್ ಬಿರಾಲಿ, ರಫೀಕ್ ಮುಲ್ಕಿ , ಗಫೂರ್ ಫರಂಗಿಪೇಟೆ , ರಿಜ್ವಾನ್ , ಇ.ಕೆ. ಇಬ್ರಾಹಿಂ ಕಿನ್ಯ , ಇಸ್ಮಾಯಿಲ್ ಬಾರೂದ್   ಮೊದಲಾದವರು ನಡೆಸಿದರು .

8 . ಪ್ರತಿ ನಮಾಝಿನ ಸಮಯದಲ್ಲಿ  ಅಝನ್ ಹಾಗು ನಮಾಝಿನ  ವೆವಸ್ಥೆಯನ್ನು  ಅಚ್ಚುಕಟ್ಟಾಗಿ ವ್ಯವಸ್ಥೆಗೊಳಿಸಲಾಗಿತ್ತು.

9. ಟ್ರಾನ್ಸ್ ಪೋರ್ಟ್ ಉಸ್ತುವಾರಿಯಾದ ಜನಾಬ್. ಸೈಫುದ್ದೀನ್ ಪಟೇಲ್ ನೇತೃತ್ವದಲ್ಲಿ  ರಪೀಕ್ ಸಂಪ್ಯ , ಉಮ್ಮರ್ ಪಾಣಾಜೆ, ಅಬ್ದುರಹ್ಮಾನ್ ಪೆಯಿಂಬಚ್ಚಲ್ , ಶೇಖಬ್ಬ ಕಿನ್ಯ, ಅಬ್ಬಾಸ್ ಪಾಣಾಜೆ  ವಿವಿಧ ಕಡೆಗಳಿಂದಬರುವ ಬಸ್ಸುಗಳನ್ನು ನಿಯಂತ್ರಿಸದರು .

10. ಜನಾಬ್ ಇಬ್ರಾಹಿಂ ಕಳತ್ತೂರ್ ಹಾಗೂ  ಸಮೀರ್ ಕೊಳ್ನಾಡ್ ರವರ ನೇತೃತ್ವದಲ್ಲಿ ಅಜ್ಮಾನ್ ಯೂನಿಟ್ ಹಾಗೂ ಯೂಥ್ ವಿಂಗ್ ಯೂನಿಟ್ ಸದಸ್ಯರು ಸ್ವಯಂ ಸೇವಕರಾಗಿ ಸಂಪೂರ್ಣ ಕಾರ್ಯಕ್ರಮವನ್ನು ನಿಯಂತ್ರಿಸಿದರು.

11. ಆಹಾರ  ಉಸ್ತುವಾರಿಯಾದ ಜನಾಬ್ ಶಕೂರ್ ಮನಿಲಾ ಸಮಯಕ್ಕೆ ಸರಿಯಾಗಿ ಶುಚಿ ರುಚಿಯಾದ  ಬೆಳಗಿನ ಉಪಹಾರ ಮಧ್ಯಾಹ್ನದ ಊಟ ರಾತ್ರಿಯ ಭೋಜನ ಎಲ್ಲವನ್ನು ಸಮಯಕ್ಕೆ ಸರಿಯಾಗಿ ವ್ಯವಸ್ಥೆಗೊಳಿಸಿದರೆ ಡಿ.ಕೆ.ಎಸ್.ಸಿ. ರಾಷ್ಟೀಯ ಸಮಿತಿ  ಕೋಶಾಧಿಕಾರಿ  ಜನಾಬ್ ಇಬ್ರಾಹಿಂ ಹಾಜಿ ಕಿನ್ಯ ರವರು ಸಮಯಕ್ಕೆ ಸರಿಯಾಗಿಚಹಾ ದ ವ್ಯವಸ್ಥೆ ಯನ್ನು ಮಾಡಿದರು.

ಕಾರ್ಯಕ್ರಮದ ಮುಖ್ಯ ಪ್ರಾಯೋಜಕರಾಗಿ ಬಿ.ಎ. ತುಂಬೆ (ಮೊಯಿದ್ದೀನ್) ವುಡ್ ವರ್ಕ್ಸ್ ಮತ್ತ್ತು ತುಂಬೆ ಹಾಸ್ಪಿಟಲ್  (GMC) ಹಾಗೂ  ಸಹ ಪ್ರಾಯೋಜಕರಾಗಿ ಜನಾಬ್.ಎಂ.ಇ.ಮೂಳೂರು ಮಾಲಕತ್ವದ ಮಿಲನೋ ಗ್ರೂಪ್ , ಹಾಜಿ. ಶೇಖ್ ಬಾವ ಮಂಗಳೂರು ಪ್ರಧಾನ ಕಾರ್ಯದರ್ಶಿ ಕೆ.ಸಿ.ಎಫ್. ಇಂಟರ್ ನ್ಯಾಷನಲ್ ಕೌನ್ಸಿಲ್, ಬಷೀರ್ ಕಾಪಿಕ್ಕಾಡ್ಸಹೋದರರ ಮಾಲಕತ್ವದ ಅಲ್ ಇಕ್ತಿಯಾರ್, ಅಲ್ ಮನಾಪ್, ಗೋಲ್ಡನ್ ಬೇರಿಂಗ್  ಸ್ಪೇರ್ ಪಾರ್ಟ್ಸ್ ಕಂಪನಿ,ಅಲ್ ಖಮರ್ ಜನರಲ್ ಟ್ರಾನ್ಸ್ಪೋರ್ಟ್ , ಅಲ್ ಸುಹುಲ್ ಟ್ರೇಡಿಂಗ್ ಕಂಪನಿ ಹಾಗೂ ವಿಟಮಿನ್ ಸಿ ಸಹಕರಿಸಿದರು.ಅದ್ರಷ್ಟ ಡ್ರಾ ದಲ್ಲಿ ಉಮ್ರಾ ಯಾತ್ರೆ ಟೆಕೆಟ್ ಪ್ರಾಯೋಜಕರಾಗಿ ಮುಹಮ್ಮದ್ ದೆಂಜಿಪ್ಪಾಡಿ ಸಹಕರಿಸಿದರೆ ವಿವಿಧ ರೀತಿಯ ಸಹಾಯವನ್ನು ಅಬ್ದುಲ್ಲಾ ಮದುಮೂಲೆ ಪ್ರದಾನ ಕಾರ್ಯದರ್ಶಿ ಬಿ.ಡಬ್ಲ್ಯೂ.ಎಫ್ ಅಬುದಾಬಿ ಹಾಗೂ ಡಾ.ಕಾಪು ಮುಹಮ್ಮದ್ ಪ್ರದಾನ ಕಾರ್ಯದರ್ಶಿ ಬಿ.ಸಿ.ಎಫ್ ದುಬೈ , ಅಲ್ ಮುಸಲ್ಲಾ ಸ್ಟೇಷನರಿ,  ರೋಮನಾವಾಟರ್ , ಜನಾಬ್ ನಾಸಿರುದ್ದೀನ್ ಪಟೇಲ್ ರವರ ಸಹಕಾರದೊಂದಿಗೆ ಅಲೋಕೋಝಿ ಕಂಪನಿ, ಅಶ್ರಫ್ ಬಾಳೆಹೊನ್ನೂರು, ಹಾಜಿ.ಅಬ್ದುಲ್ ರಜಾಕ್ ದಿವಾ ನೀಡಿದರು. ಲತೀಫ್ ಮುಲ್ಕಿ, ಎಂ.ಇ.ಮೂಳೂರು, ಅಕ್ಬರ್ ಅಲಿ ಸುರತ್ಕಲ್ , ಶಕೂರು ಮಣಿಲಾ, ಅಶ್ರಫ್ ಸತ್ತಿಕಲ್, ಶಾಬಾನ್ ಮೂಳೂರು, ಇಸ್ಮಾಯಿಲ್ ಬಾಬಾ ಮೂಳೂರು, ಇಬ್ರಾಹಿಂ ಕಳತ್ತೂರು ರವರು ವಿಜೇತರಿಗೆ ನೀಡುವ ಬಹುಮಾನವನ್ನು ನೀಡಿ ಸಹಕರಿಸಿದರು.

ಈ ಸಂದರ್ಭದಲ್ಲಿ ಅತಿಥಿಗಳಿಗೆ ಹಾಗೂ ಪ್ರಯೋಜಕರಿಗೆ ಮತ್ತು ಅಲ್ಲದೆ ಕಾರ್ಯಕ್ರಮ ಯಶಸ್ವಿಯಲ್ಲಿ ಸಹಕರಿಸಿದ ಅಲ್ ಐನ್ ಜೂನಿಯರ್ ಸ್ಕೂಲ್ ನ ಪ್ರಾದ್ಯಾಪಕ ಉಮ್ಮರ್ ಎಸ್.ಎಂ ರವರಿಗೆ ಉಪಸಿತರಿದ್ದ ವಿಶ್ವ ಕನ್ನಡಿಗ ಪತ್ರಿಕೆಯ ರಫೀಕ್ ಕೋಲ್ಪೆ ಹಾಗು ಕೋಸ್ಟಲ್ ಡೈಜೆಸ್ಟ್ ನ ನಿಯಾಜ್ ರವರಿಗೆ ನೆನೆಪಿನ ಕಾಣಿಕೆ ನೀಡಿ ಅಭಿನಂದಿಸಲಾಯಿತು.

ಕಾರ್ಯಕ್ರಮದ ಯಶಸ್ವಿಗೆ ಹಾಜಿ.ಅಬ್ದುಲ್ ಖಾದರ್ ಉಚ್ಚಿಲ, ಬದ್ರುದ್ದೀನ್ ಅರಂತೋಡು, ಇಬ್ರಾಹಿಂ ಶರೀಫ್ ಆರ್ಲಪದವು, ಅಪ್ಜಲ್ ಮಂಗಳೂರು, ಅಬ್ದುಲ್ ರಜಾಕ್ ಸೊಂಪಾಡಿ, ರಹೀಮ್ ಮಂಡಿಯೂರ್, ಹಾಜಿ.ಅಬ್ದುಲ್ಲಾ ಬೀಜಾಡಿ, ಅಮಾನುಲ್ಲಾ ಕುಂದಾಪುರ ಮುಂತಾದವರು ಸಹಕರಿಸಿದರು.

ಕೊನೆಯಲ್ಲಿ ಜನಾಬ್.ಹಾಜಿ ನವಾಜ್ ಕೋಟೆಕ್ಕಾರ್ ಧನ್ಯವಾದ ಸಮರ್ಪಿಸಿ ಸ್ವಲಾತ್ ನೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯ ಗೊಳಿಸಲಾಯಿತು.

Read These Next

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.

ಪ್ರವಾದಿ ಕುರಿತು ವಿವಾದಾತ್ಮಕ ಹೇಳಿಕೆಗೆ ಮುಂದುವರಿದ ಆಕ್ರೋಶ; 17 ದೇಶಗಳ ಖಂಡನೆ; ಗಲ್ಫ್ ಸಹಕಾರ ಮಂಡಳಿಯಿಂದಲೂ ಆಕ್ಷೇಪ

ತಾನು ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ ಎಂದು ಒತ್ತಿ ಹೇಳುವ ಮೂಲಕ ವಿವಿಧ ದೇಶಗಳಲ್ಲಿ ಭುಗಿಲೆದ್ದಿರುವ ಕ್ರೋಧದ ಅಲೆಯನ್ನು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...