ದುಬೈ.ಡಿ.ಕೆ.ಎಸ್.ಸಿ ಯು.ಎ.ಇ ರಾಷ್ಟ್ರೀಯ ಸಮಿತಿ ನೂತನ ಅದ್ಯಕ್ಷರಾಗಿ ಹಾಜಿ. ಇಕ್ಬಾಲ್ ಕಣ್ಣಂಗಾರ್ ಆಯ್ಕೆ.

Source: yusuf | By Arshad Koppa | Published on 29th March 2017, 8:22 AM | Gulf News |

ದುಬೈ. ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ಡಿ.ಕೆ.ಎಸ್.ಸಿ) ಯು.ಎ.ಇ ರಾಷ್ಟ್ರೀಯ ಸಮಿತಿ ಇದರ ಮಹಾ ಸಭೆಯು ದುಬೈ  ಕ್ರೀಕ್ ಪರ್ಲ್ ಹೋಟೆಲ್  ಆಡಿಟೋರಿಯಂ ನಲ್ಲಿ ಡಿ.ಕೆ.ಎಸ್.ಸಿ ಯು.ಎ.ಇ. ರಾಷ್ಟೀಯ ಸಮಿತಿ ಗೌರವಾಧ್ಯಕ್ಷರಾದ ಸಯ್ಯದ್ ತ್ವಾಹ ಭಾಪಕಿ  ತಂಙಳ್ ರವರ ಘನ ಉಪ ಸ್ಥಿತಿಯಲ್ಲಿ ಹಾಜಿ.ಮುಹಮ್ಮದ್ ಇಬ್ರಾಹಿಂ ಮೂಳೂರು  ಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯನ್ನು  ಸಯ್ಯದ್ ತ್ವಾಹ ಭಾಪಕಿ ತಂಙಳ್ ರವರ ದುವಾ ಅಬ್ಬು ಹಾಜಿ ಕಿನ್ಯ ರವರ  ಕಿರಹಾತ್ ನೊಂದಿಗೆ ರಾಷ್ಟೀಯ ಸಮಿತಿ ಸಲಹೆಗಾರರಾದ ಇಬ್ರಾಹಿಂ ಸಖಾಫಿ ಕೆದಂಬಾಡಿ ರವರು ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕಣ್ಣಂಗಾರ್ ರವರು ಸ್ವಾಗತಿಸಿದರು. ಗತ ವರ್ಷದ ವರದಿಯನ್ನು ಜೊತೆ ಕಾರ್ಯದರ್ಶಿ ಕಮಲ್ ಅಜ್ಜಾವರ ರವರು ವರದಿ  ವಾಚಿಸಿ ಲೆಕ್ಕ ಪತ್ರ ವನ್ನು ಲೆಕ್ಕಪರಿಶೋದಕರಾದ ಅಬ್ದುಲ್ಲ ಪೆರುವಾಯಿ  ರವರು ಮಂಡಿಸಿದರು. ಸೆಂಟ್ರಲ್ ಕಮಿಟಿ ಯಿಂದ ರಾಷ್ಟೀಯ ಸಮಿತಿ ಗೆ ಬಂದ ಪತ್ರವನ್ನು ಜೊತೆ ಕಾರ್ಯದರ್ಶಿ ಕಮರುದ್ದೀನ್ ಗುರುಪುರ ರವರು ವಾಚಿಸಿದರು. ಇದೇ ಸಂದರ್ಭದಲ್ಲಿ ಗತ ವರ್ಷದಲ್ಲಿ ಉತ್ತಮ ಸಾಧನೆ ಮಾಡಿದ ಯುನಿಟ್ ಹಾಗೂ ಸಹ ಕಮಿಟಿ ಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಹಾಗೂ ನೂತನವಾಗಿ ರಚನೆಯಾದ ಶಾರ್ಜಾ ಅಲ್ ನಾದ ಯುನಿಟ್ ಗೆ ಸಭೆಯಲ್ಲಿ ಅಂಗೀಕಾರ ನೀಡಲಾಯಿತು. ಅಲ್ ನಾದ ಯುನಿಟ್ ಅಧ್ಯಕ್ಷರಾದ ಜೈನುದ್ದೀನ್ ಬೆಳ್ಳಾರೆಯವರು ಉತ್ತಮ ರೀತಿಯಲ್ಲಿ ಪ್ರವರ್ತಿಸಿ ಸಂಘಟನೆಯನ್ನು ಎಲ್ಲರ ಸಹಕಾರದಿಂದ ಉನ್ನತ ಮಟ್ಟಕ್ಕೆ ತಲುಪಿಸಲು ಪ್ರಯತ್ನಿಸುವುದಾಗಿ ಘೋಷಿಸಿದರು, ಇದೇ ಸಂದರ್ಭದಲ್ಲಿ ಸಿಲ್ವರ್ ಕಾರ್ಡ್ ಯೋಜನೆ ಯ ಸರ್ಟಿಫಿಕೇಟ್ ಅನ್ನು ಕ್ರಮವಾಗಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕಣ್ಣಂಗಾರ್ ಹಾಗೂ ಕೋಶಾಧಿಕಾರಿ ಇಬ್ರಾಹಿಂ ಹಾಜಿ ಕಿನ್ಯ ರವರಿಗೆ ಸೆಂಟ್ರಲ್ ಕಮಿಟಿ ಪ್ರದಾನ ಕಾರ್ಯದರ್ಶಿ ಇಸ್ಮಾಯಿಲ್ ಹಾಜಿ ಕಿನ್ಯರವರು ನೀಡುವುದರ ಮೂಲಕ ಯು.ಎ.ಇ. ಯಲ್ಲಿ ಈ ಯೋಜನೆಗೆ ಚಾಲನೆ ನೀಡಿದರು. ಡಿ.ಕೆ.ಎಸ್.ಸಿ ಹಿರಿಯ ಸದಸ್ಯರು  ಸ್ಥಾಪಕ ಪ್ರಧಾನ ಕಾರ್ಯದರ್ಶಿ ಆದ ಇ.ಕೆ.ಇಬ್ರಾಹಿಂ ಕಿನ್ಯ ರವರು ತಾಯಿನಾಡಿಗೆ ತೆರಳುತ್ತಿದ್ದು ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಹಾಜಿ.ಮುಹಮ್ಮದ್ ಇಬ್ರಾಹಿಂ ಮೂಳೂರು ರವರು ತನ್ನ ಅದ್ಯಕ್ಷ ಭಾಷಣ ದಲ್ಲಿ ಯು.ಎ.ಇ ಯಲ್ಲಿ  ಸಂಘಟನೆಯು ಉನ್ನತ ಮಟ್ಟಕ್ಕೆ ಏರಲು ಶ್ರಮಿಸಿದ ಎಲ್ಲ ಸಹ ಪ್ರವರ್ತಕರಿಗೆ ಅಭಿನಂದನೆ ಸಲ್ಲಿಸುತ್ತಾ ಕಮಿಟಿಯನ್ನು ಬರ್ಖಾಸ್ತು ಗೊಳಿಸಿದರು. ಸೆಂಟ್ರಲ್ ಕಮಿಟಿ ಯಿಂದ ಉಸ್ತುವಾರಿಯಾಗಿ ಆಗಮಿಸಿದ ಸೆಂಟ್ರಲ್ ಕಮಿಟಿ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಹಾಜಿ ಕಿನ್ಯ ರವರು ಯು.ಎ.ಇ ರಾಷ್ಟೀಯ ಸಮಿತಿಯ ವತಿಯಿಂದ ನಿರ್ಮಿಸಲ್ಪಟ್ಟ ಅಲ್ ಇಹ್ಸಾನ್ ಮಹಿಳಾ ಕಾಲೇಜು ಕಟ್ಟಡ, 20 ನೇ ವಾರ್ಷಿಕ ಮಹಾ ಸಮ್ಮೇಳನದಲ್ಲಿ 50 ಬಡ ಕುಟುಂಬದ ಮಹಿಳೆಯರಿಗೆ ನೀಡಿದ ಹೊಲಿಗೆ ಯಂತ್ರ , ಡಿ.ಕೆ.ಎಸ್.ಸಿ ಯ ಬ್ರಹತ್ ಕಾರ್ಯಕ್ರಮಗಳಲ್ಲೊಂದಾದ ಪ್ಯಾಮಲಿ ಮುಲಾಖತ್ ಹಾಗೂ ಇಲ್ಲಿಯ ಸಂಘಟನೆ ವಿವಿಧ ಕಾರ್ಯಕ್ರಮಗಳ ಬಗ್ಗೆ ಮುಚ್ಚುಗೆ ವ್ಯಕ್ತಿಪಡಿಸುದರೊಂದಿಗೆ  ಚುನಾವಣಾಧಿಕಾರಿಯಾಗಿ ನೂತನ ಸಮಿತಿ ರಚನೆಯ ಜವಾಬ್ದಾರಿಯನ್ನು ವಹಿಸಿ ಸಮಿತಿಯನ್ನು ರಚಿಸಲಾಯಿತು. ನೂತನ ಸಮಿತಿಗೆ ಸಯ್ಯದ್ ತ್ವಾಹ ಭಾಪಕಿ  ತಂಙಳ್, ಎಂ.ಕೆ.ಬ್ಯಾರಿ ಕಕ್ಕಿಂಜೆ, ಸಯ್ಯದ್ ಅಸ್ಗರ ಅಲಿ ತಂಙಳ್ ಕೋಳ್ಪೆ ಶುಭ ಹಾರೈಸಿದರು.  ಹಾಜಿ. ವೇದಿಕೆಯಲ್ಲಿ   ಅಬೂಬಕ್ಕರ್ ಮದನಿ ಕೆಮ್ಮಾರ,  ಅಬ್ಧುಲ್ಲ ಮುಸ್ಲಿಯಾರ್ ಕುಡ್ತಮುಗೆರು,  ಸೆಂಟ್ರಲ್ ಕಮಿಟಿ ಸದಸ್ಯರಾದ ಜಮಾಲ್ ಕಣ್ಣಂಗಾರ್ ರವರು ಉಪಸ್ಥಿತರಿದ್ದರು.  ಎಸ್. ಯೂಸುಪ್ ಅರ್ಲಪದವು ರವರು ಕಾರ್ಯಕ್ರಮ ನಿರ್ವಹಿಸಿದರು.

ಗೌರವ ಸ್ಮರಣಿಕೆ ಪಡೆದ ಯುನಿಟ್ ಗಳು

ಪ್ರಥಮ : ಉಮ್ಮುಲ್ ಖುಯೈನ್

ದ್ವಿತೀಯ : ಅಜ್ಮಾನ್

ತೃತೀಯ : ಶಾರ್ಜಾ

ಪ್ರಥಮ : ದೇರಾ

ಗೌರವ ಸ್ಮರಣಿಕೆ ಪಡೆದ ಸಹ ಸಮಿತಿ ಗಳು

ಪ್ಯಾಮಲಿ ಮುಲಾಖತ್ ಕಮಿಟಿ ಕಮಿಟಿ

ಅಲ್ ಇಹ್ಸಾನ್ ಮಹಿಳಾ ಕಾಲೇಜು ಕಟ್ಟಡ ನಿರ್ಮಾಣ ಸಮಿತಿ

ಇಪ್ತಾರ್ ಕಮಿಟಿ

ಮಿಲಾದ್ ಕಮಿಟಿ

2017-18ನೇ ಸಾಲಿನ ಪಧಾಧಿಕಾರಿಗಳು

ಗೌರವಾಧ್ಯಕ್ಷರು: ಸಯ್ಯದ್ ತ್ವಾಹ ಬಾಫಕಿ ತಂಙಳ್

ಸಲಹೆಗಾರರು : ಹಾಜಿ.ಎಂ.ಕೆ.ಬ್ಯಾರಿ ಕಕ್ಕಿಂಜೆ, ಹುಸೈನ್ ಹಾಜಿ ಕಿನ್ಯ, ಹಾಜಿ.ಎಂ.ಇ.ಮೂಳೂರು, ಸಯ್ಯದ್ ಅಸ್ಗರ ಅಲಿ ತಂಙಳ್ ಕೋಳ್ಪೆ, ಹಸನಬ್ಬ ಕೊಲ್ನಾಡ್, ಹಾಜಿ.ಹೈದರ್ ಅಲಿ ಉಜಿರೆ.

ಧಾರ್ಮಿಕ ಸಲಹೆಗಾರರು : ಇಬ್ರಾಹಿಂ ಸಖಾಫಿ ಕೆದಂಬಾಡಿ,  ಅಬ್ಧುಲ್ಲ ಮುಸ್ಲಿಯಾರ್ ಕುಡ್ತಮುಗೆರು, ಅಬೂಬಕ್ಕರ್ ಮದನಿ ಕೆಮ್ಮಾರ. ಶಾಫಿ ಸಖಾಫಿ ಕರಿಂಬಿಲ

ಅಧ್ಯಕ್ಷರು : ಹಾಜಿ. ಮುಹಮ್ಮದ್ ಇಕ್ಬಾಲ್ ಕಣ್ಣಂಗಾರ್

 

ಪ್ರಧಾನ ಕಾರ್ಯದರ್ಶಿ : ಎಸ್.ಯೂಸುಫ್ ಅರ್ಲಪದವು

ಕೋಶಾಧಿಕಾರಿ : ಇಬ್ರಾಹಿಂ ಹಾಜಿ ಕಿನ್ಯ

ಉಪಾದ್ಯಕ್ಷರು :   ಅಬ್ದುಲ್ ಲತೀಫ್ ಮುಲ್ಕಿ,  ಅಬ್ದುಲ್ಲ ಹಾಜಿ ಬೀಜಾಡಿ, ಹಾಜಿ.ಎಸ್.ಕೆ.ಅಬ್ದುಲ್ ಖಾದರ್ ಉಚ್ಹಿಲ, ಅಬ್ದುಲ್ ರಹಿಮಾನ್ ಸಜಿಪ

ಜೊತೆ ಕಾರ್ಯದರ್ಶಿ : ಹಾಜಿ. ನವಾಜ್ ಕೊಟೆಕ್ಕಾರ್,  ಕಮರುದ್ದೀನ್ ಗುರುಪುರ, ಕಮಲ್ ಅಜ್ಜಾವರ, ಬದ್ರುದ್ದೀನ್  ಅರಂತೋಡು

ಲೆಕ್ಕ ಪರಿಶೋದಕರು : ಅಬ್ದುಲ್ಲ ಕುಂಞ್ಞಿ  ಪೆರುವಾಯಿ

ಸಂಚಾಲಕರು : ಹಾಜಿ.ಜೈನುದ್ದೀನ್ ಬೆಳ್ಳಾರೆ, ಹಾಜಿ.ಅಬ್ದುಲ್ ರಜಾಕ್ ಕುತ್ತಾರ್, ಹಾಜಿ ಅಬ್ದುಲ್ ರಜಾಕ್ ಜಲ್ಲಿ , ಇಕ್ಬಾಲ್ ಕುಂದಾಪುರ , ಹಾಜಿ.ಮುಹಮ್ಮದ್ ಕುಂಞ್ಞಿ ಅಡ್ಕ , ಹಾಜಿ.ಅಬ್ದುಲ್ ರಹಿಮಾನ್ ಸಂಟ್ಯಾರ್, ಸೈಫುದ್ದೀನ್ ಪಟೇಲ್, ಅಪ್ಜಲ್ ಮಂಗಳೂರು, ಸಮೀರ್ ಕೊಳ್ನಾಡು, ಇ.ಕೆ.ಇಬ್ರಾಹಿಂ, ಇಸ್ಮಾಯಿಲ್ ಬಾರೋದ್,  ಮುಹಮ್ಮದ್ ಶುಕೂರ್ ಮಣಿಲ, ಇಸ್ಮಾಯಿಲ್ ಬಾಬಾ ಮೂಳೂರು, ಮುಹಮ್ಮದ್ ರಹೀಮ್ ಸುಳ್ಯ, ಇಬ್ರಾಹಿಂ ಕಳತ್ತೂರು, ಶೇಖಬ್ಬ ಕಿನ್ಯ , ಅಶ್ರಫ್ ಸತ್ತಿಕಲ್ , ಬಷೀರ್ ಕಾಪಿಕ್ಕಾಡ್, ಅಬ್ದುಲ್ ಹಮೀದ್ ಸುಳ್ಯ .

ಸದಸ್ಯರು : ಸಮದ್ ಬಿರಾಲಿ, ಉಮ್ಮರ್ ಪಾಣಾಜೆ, ನಜೀರ್ ಕಣ್ಣಂಗಾರ್, ರಾಶೀದ್ ಕುವೆಂಜ, ಅಶ್ರಫ್ ಕಾನಾ, ಅಮಾನುಲ್ಲಾ ಕುಂದಾಪುರ, ವೈ.ಅಶ್ರಫ್ ಶೈಖ್, ಮುಹಮ್ಮದ್ ಅಲಿ ಮೂಡುತೋಟ, ಜುಬೇರ್ ಕಿನ್ನಿಮಜಲು, ಮುಹಮ್ಮದ್ ಅಶ್ರಫ್ ಪೆರಿಂಜೆ, ಹಮೀದ್ ಮಣಿಲ , ರಹೀಮ್ ಮಂಡಿಯೂರ್,  ಹಸನ್ ಬಾವ ಹಳೆಯಂಗಡಿ

ವಿಶೇಷ ಆಹ್ವಾನಿತರು : ಉಮ್ಮರ್ ಸುಳ್ಯ , ಅಶ್ರಫ್ ಉಳ್ಳಾಲ,  ಅಬ್ಬಾಸ್ ಪಾಣಾಜೆ , ಮುಹಮ್ಮದ್ ಸಾದಿಕ್ ಉಚ್ಚಿಲ, ಸಾಹುಲ್ ನೆಲ್ಯಾಡಿ, ಹಾಜಿ.ಹಸನ್ ಬಾಳೆಹೊನ್ನೂರು, ರಜಾಕ್ ಮುಟ್ಟಿಕಲ್, ಹಂಝ ಮೂಳೂರು , ಮೂಸಾ ಹಾಜಿ ಕಿನ್ಯ ,ಅಬ್ಬು ಹಾಜಿ ಕಿನ್ಯ , ಅಕ್ಬರ್ ಅಲಿ ಸುರತ್ಕಲ್.

Read These Next

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.

ಪ್ರವಾದಿ ಕುರಿತು ವಿವಾದಾತ್ಮಕ ಹೇಳಿಕೆಗೆ ಮುಂದುವರಿದ ಆಕ್ರೋಶ; 17 ದೇಶಗಳ ಖಂಡನೆ; ಗಲ್ಫ್ ಸಹಕಾರ ಮಂಡಳಿಯಿಂದಲೂ ಆಕ್ಷೇಪ

ತಾನು ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ ಎಂದು ಒತ್ತಿ ಹೇಳುವ ಮೂಲಕ ವಿವಿಧ ದೇಶಗಳಲ್ಲಿ ಭುಗಿಲೆದ್ದಿರುವ ಕ್ರೋಧದ ಅಲೆಯನ್ನು ...