ಮಾದಕವಸ್ತುಗಳ ಮಾರಟ:ಪೊಲೀಸರಿಂದ ಪ್ರಮುಖ ಆರೋಪಿಯ ಬಂಧನ..!

Source: so news | By MV Bhatkal | Published on 21st June 2019, 12:20 AM | Coastal News | Don't Miss |

 


ಮಂಗಳೂರು:ನಗರದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕವಸ್ತುಗಳನ್ನು ಮಾರಟ ಮಾಡಿತ್ತಿದ್ದ ವ್ಯಕ್ತಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.ಕೊಕೇನ್ ನನ್ನು ಮೋನಿಶ್ ಎಂಬಾತ ವಿದ್ಯಾರ್ಥಿಗಳಿಗೆ ಸರಬರಾಜು ಮಾಡುತ್ತಿದ್ದ ಎಂಬ ಖಚಿತ ಮಾಹಿತಿ ಮೇರೆಗೆ ಮಂಗಳೂರು ಪೊಲೀಸರ ತಂಡ ದಾಳಿ‌ ನಡೆಸಿ ಆರೋಪಿಯನ್ನು‌ ಬಂಧಿಸಿ ಮಾರಟ ವಸ್ತುಗಳ ಜಾಲ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಗಳೂರಿನ ಸುಲ್ತಾನ್ ಬತ್ತೇರಿ ನಿವಾಸಿ ಮೋನಿಶ್ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ.16 ಗ್ರಾಂ ತೂಕದ 1,60,00 ಮೌಲ್ಯದ ಕೊಕೇನ್,ಎರಡು ಮೊಬೈಲ್,ಡಿಜಿಟಲ್ ಸ್ಕೇಲ್ ಹಾಗೂ ಒಂದು ಹೋಂಡಾ ‌ಅಕ್ವಿವಾ ಸ್ಕೂಟರ್ ಇತ್ಯಾದಿಗಳನ್ನು ಪೊಲೀಸರು ಆರೋಪಿಯಿಂದ ವಶಪಡಿಸಿಕೊಂಡಿದ್ದಾರೆ.2,81,500 ಲಕ್ಷ‌ ರೂಪಾಯಿ ಮೌಲ್ಯದ ವಸ್ತುಗಳನ್ನು ಎಂದು ಅಂದಾಜಿಸಲಾಗಿದೆ.ಆತ ಮುಂಬೈನಿಂದ ಮಾದಕ ವಸ್ತುಗಳನ್ನು ತಂದು ಮಾರಟ ನಡೆಸುತ್ತಿದ್ದ.ಈತನ ಜೊತೆ ಮಾದಕ ವಸ್ತುಗಳನ್ನು ಇನ್ನೂ ಹಲವಾರು ಜನ ಭಾಗಿಯಾಗಿದ್ದರೆ ಎನ್ನಲಾಗಿದೆ. ಪೊಲೀಸರು ಆತನ ವಿಚಾರಣೆ ನಡೆಸುತ್ತಿದ್ದಾರೆ.ಇನ್ನು ಪೊಲೀಸ್ ತನಿಖೆಯಲ್ಲಿ ಕೆಲವು ವಿಚಾರ ತಿಳಿದು ಬರಲಿದೆ.

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...