ಮತದಾರರ ಜಾಗೃತಿ ವಸ್ತು ಪ್ರದರ್ಶನಕ್ಕೆ ಡಿಸಿ ಚಾಲನೆ

Source: so news | By Manju Naik | Published on 14th April 2019, 12:55 AM | Coastal News | Don't Miss |

 

ಕಾರವಾರ: ಮತದಾರರ ಜಾಗೃತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರವಾರ ಸರ್ಕಾರಿ ಬಸ್ ನಿಲ್ದಾಣದಲ್ಲಿ ಹಮ್ಮಿಕೊಂಡಿರುವ ನಾಲ್ಕು ದಿನಗಳ ವಸ್ತು ಪ್ರದರ್ಶನವನ್ನು ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಕೆ. ಶನಿವಾರ ಉದ್ಘಾಟಿಸಿದರು.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಜಾಗೃತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತದಾರರಿಗೆ ವಿವಿಧ ಮಾಹಿತಿವುಳ್ಳ ವಸ್ತು ಪ್ರದರ್ಶನ ಇದಾಗಿದ್ದು, ಇಂದಿನಿಂದ ನಾಲ್ಕು ದಿನಗಳ ಕಾಲ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಹಮ್ಮಿಕೊಂಡಿದೆ.
ಚುನಾವಣಾ ಆಪ್, ಸಿ ವಿಜಿಲ್,  ಸೇರಿದಂತೆ ವಿವಿಧ ಫೋಟೋ ವಸ್ತು ಪ್ರದರ್ಶನ ಇದಾಗಿದ್ದು ಆಕರ್ಷಕವಾಗಿ ರೂಪಿಸಿರುವ ಪ್ರದರ್ಶನವನ್ನ ಉದ್ಘಾಟಿಸಿದ ಜಿಲ್ಲಾಧಿಕಾರಿಯವರು ಇದೊಂದು ಮತದಾರರಿಗೆ ಉಪಯುಕ್ತ ಪ್ರದರ್ಶನವಾಗಿದೆ ಎಂದು ಹೇಳಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮತದಾರರಿಗೆ ಪೂರಕ ಮಾಹಿತಿ ನೀಡುವ ವಿವಿಧ ವಿಭಿನ್ನ ಕಾರ್ಯಕ್ರಮವನ್ನು ಈಗಾಗಲೇ ವಿವಿಧೆಡೆಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಇದರಿಂದ ಮತದಾರರ ಕಳೆದ ವರ್ಷಕ್ಕಿಂತಲೂ ಹೆಚ್ಚು ಜಾಗೃತರಾಗಿದ್ದಾರೆ. ನಾವು ಭೇಟಿ ನೀಡಿದೆಲ್ಲಡೆ ಮತದಾರರೇ ಇವಿಎಂ, ವಿವಿಪ್ಯಾಟ್ ಬಗ್ಗೆ ಮಾಹಿತಿ ನೀಡುತ್ತಾರೆ. ಅನಕ್ಷರಸ್ತರೆಂದು ಕುತೂಹಲಕ್ಕೆ ಚುನಾವಣೆ ಬಗ್ಗೆ ಕೇಳಿದಾಗ್ಯೂ ಮತದಾರರು ತುಂಬು ಆತ್ಮವಿಶ್ವಾಸದಿಂದ ಮಾಹಿತಿ ಹಂಚಿಕೊಳ್ಳುತ್ತಾರೆ. ಇದರಿಂದ ಜಿಲ್ಲಾಡಳಿತದಿಂದ ಕೈಗೊಂಡ ಜಾಗೃತಿ ಪ್ರಯತ್ನ ಸಾರ್ಥಕವಾಗಿದೆ ಎಂಬ ವ್ಯಕ್ತವಾಗುತ್ತದೆ ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಕೈಗೊಂಡಿರುವ ನಾಲ್ಕು ದಿನಗಳ ವಸ್ತು ಪ್ರದರ್ಶನ ಕೂಡ ಚುನಾವಣಾ ಪ್ರಕ್ರಿಯೆಯ ಪೂರ್ಣ ಮಾಹಿತಿಯೊಂದಿಗೆ ಜನರನ್ನು ಆಕರ್ಷಿಸುತ್ತಿದ್ದು ಹೊಸ ತಲಮಾರಿನ ಜನರಿಗೆ ಮೊಬೈಲ್ ಆಪ್‍ನಲ್ಲಿ ಚುನಾವಣಾ ಆಪ್, ಸಿ ವಿಜಿಲ್ ಸೇರಿದಂತೆ ವಿವಿಧ ಆಪ್‍ಗಳನ್ನು ಬಳಸುವ ವಿಧಾನವನ್ನು ತಿಳಿಸುತ್ತಿದೆ. ಇದರ ಸದ್ಬಳಕೆ ಮಾಡಿಕೊಂಡು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಬೇಕು ಎಂದು ಹೇಳಿದರು.
ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ರೋಷನ್, ಐಎಎಸ್ ಪ್ರೊಬೇಷನರ್ ದಿಲೀಷ್ ಸಸಿ, ಜಿಲ್ಲಾ ವಾರ್ತಾಧಿಕಾರಿ ಹಿಮಂತರಾಜು ಜಿ. ಉಪಸ್ಥಿತರಿದ್ದರು. 

Read These Next

ಕಿತ್ತೂರು ಚೆನ್ನಮ್ಮ ವಸತಿ ಶಾಲೆಯ ಇಬ್ಬರು ಶಿಕ್ಷಕರಿಗೆ ಕಟ್ಟೀಮನಿ ಪ್ರತಿಷ್ಟಾನ ಪುರಸ್ಕಾರ

ಭಟ್ಕಳ: ಉತ್ತರ ಕನ್ನಡ ಜಿಲ್ಲಾ ಪ್ರೌಢಶಾಲಾ ಮುಖ್ಯಾಧ್ಯಾಪಕರು ಹಾಗೂ ಸಂಯುಕ್ತ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರುಗಳ ಸಂಘದ ...

ಕಲಾತಂಡಗಳು ಅಭಿನಯದ ಮೂಲಕ ಸಾರ್ವಜನಿಕರಲ್ಲಿ ಪರಿಣಾಮಕಾರಿಯಾಗಿ ಅರಿವು ಮೂಡಿಸಬೇಕು : ಜಿಲ್ಲಾಧಿಕಾರಿ ದೀಪಾ ಚೋಳನ್

ಕಲಾತಂಡಗಳು ಅಭಿನಯದ ಮೂಲಕ ಸಾರ್ವಜನಿಕರಲ್ಲಿ ಪರಿಣಾಮಕಾರಿಯಾಗಿ ಅರಿವು ಮೂಡಿಸಬೇಕು : ಜಿಲ್ಲಾಧಿಕಾರಿ ದೀಪಾ ಚೋಳನ್