ಕಲಬುರಗಿ: ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಚಾಲನೆ

Source: S.O. News service | By S O News | Published on 20th February 2021, 9:02 PM | Sports News |

ಕಲಬುರಗಿ: ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ  ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕಲಬುರಗಿ ಶಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನಗರದ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳ ಕಾರ್ಯಕ್ರಮಕ್ಕೆ ಬಲೂನ್‍ಗಳನ್ನು ಗಾಳಿಯಲ್ಲಿ ಹಾರಿಬಿಡುವ ಮೂಲಕ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಅವರು ಶುಕ್ರವಾರ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಮಾತನಾಡಿ ದಿನನಿತ್ಯ ಬಿಡುವಿಲ್ಲದ ಕಚೇರಿ ಕೆಲಸದಲ್ಲಿ ನಿರತರಾಗುವ ನೌಕರರು ಇಂದು ಮತ್ತು ಶನಿವಾರ ನಡೆಯುವ ಈ ಕ್ರೀಡಾಕೂಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ತುಂಬಾ ಸಂತೋಷವಾಗಿದೆ. ನೌಕರರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿನಿತ್ಯ ಅರ್ಧ ಗಂಟೆಯಾದರು ಕ್ರೀಡೆ, ವ್ಯಾಯಾಮ, ಯೋಗಾಸನ ಮಾಡಬೇಕು. ಇಲ್ಲಿ ಭಾಗವಹಿಸಿದ ನೌಕರರು ಚೈತನ್ಯ ಮಕ್ಕಳಿಗಿಂತ ಕಮ್ಮಿಯಿಲ್ಲ ಎಂದ ಅವರು ಕ್ರೀಡಾ ಮನೋಭಾವನೆಯೊಂದಿಗೆ ಆಟವಾಡಿ ರಾಜ್ಯ ಮಟ್ಟಕ್ಕೆ ಹೋಗಿ ಅಲ್ಲಿಯೂ ಪ್ರಶಸ್ತಿ ತಂದು ಜಿಲ್ಲೆಯ ಕೀರ್ತಿ ಹೆಚ್ಚಿಸಿ ಎಂದು ಶುಭಕೋರಿ ಕ್ರೀಡಾಳುಗಳಿಗೆ ಹುರಿದುಂಬಿಸಿದರು.

ಇದಕ್ಕೂ ಮುನ್ನ ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಅವರು ಥ್ರೋ ಬಾಲ್ ಮತ್ತು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ, ಜಿಲ್ಲಾ ಪಂಚಾಯತ್ ಸಿ.ಇ.ಓ. ಡಾ.ದಿಲೀಶ ಸಾಸಿ ಹಾಗೂ ಮಹಾನಗರ ಪಾಲಿಕೆಯ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ ಅವರು ಶಾಟ್ ಪುಟ್ ಎಸೆದು ಕ್ರೀಡಾಕೂಟಕ್ಕೆ ವಿದ್ಯುಕ್ತ ಚಾಲನೆ ನೀಡಿದರು. ನಂತರ ಗಣ್ಯರು ವಿವಿಧ ತಾಲೂಕಿನಿಂದ ಆಗಮಿಸಿದ ಕ್ರೀಡಾ ಸ್ಪರ್ಧಿಗಳನ್ನು ಪರಿಚಯ ಮಾಡಿಕೊಂಡು ಶುಭಕೋರಿದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜು ಲೆಂಗಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಗೌತಮ ವೈಜುನಾಥ ಪಾಟೀಲ, ಕಲಬುರಗಿ ದಕ್ಷಿಣ ಬಿ.ಇ.ಓ. ವೀರಣ್ಣ ಬೊಮ್ಮನಳ್ಳಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಅಬ್ದುಲ್ ಅಜೀಂ, ರಾಜ್ಯ ಪರಿಷತ್ ಸದಸ್ಯ ಹಣಮಂತರಾಯ ಗೊಳಸಾರ, ಖಜಾಂಚಿ ಸತೀಷ ಕೆ. ಸಜ್ಜನ್, ಅಣ್ಣಾರಾವ ಹಾಬಾಳಕರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಸಿದ್ಧಲಿಂಗಯ್ಯ ಮಠಪತಿ, ಕ್ರೀಡಾ ಕಾರ್ಯದರ್ಶಿ ಮೊಹಮ್ಮದ ಜಮೀಲ್, ಪ್ರಚಾರ ಸಮಿತಿ ಕಾರ್ಯದರ್ಶಿ ರವಿ ಮಿರಸ್ಕರ್, ವಿವಿಧ ತಾಲೂಕಿನ ಅಧ್ಯಕ್ಷರುಗಳಾದ ಶಿವಶಂಕರಯ್ಯ ಮಠಪತಿ, ರಾಜು ಗುಣಾರಿ, ಬಸವರಾಜ ಬಳೂಂಡಗಿ, ದೇವಿಂದ್ರಪ್ಪ ಹೋಳ್ಕರ್, ಡಿ.ಬಿ.ಪಾಟೀಲ, ಸಿದ್ಧರಾಮ ಪಾಟೀಲ, ಈರಣ್ಣಾ ಕೆಂಭಾವಿ, ಶರಣಗೌಡ ಪಾಟೀಲ, ಬಲವಂತರಾಯ ಪಾಟೀಲ ಸೇರಿದಂತೆ ಜಿಲ್ಲಾ ನೌಕರರ ಸಂಘದ ಇನ್ನಿತರರ ಪದಾಧಿಕಾರಿಗಳು ಇದ್ದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ ನಾಯಕ್ ಸರ್ವರನ್ನು ಸ್ವಾಗತಿಸಿದರು. ಜಿಲ್ಲಾ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಬಾಬು ಮೌರ್ಯ ಅವರು ಕ್ರೀಡಾ ಪ್ರತಿಜ್ಞೆಯನ್ನು ಬೋಧಿಸಿದರು.

Read These Next

ಮೂಡುಬಿದಿರೆ:  ರಾಷ್ಟ್ರೀಯ ಸೀನಿಯರ್ ಬಾಲ್ ಬ್ಯಾಡ್ಮಿಂಟನ್: ಭಾರತೀಯ ರೈಲ್ವೇ ಹಾಗೂ ಕೆನರಾ ಬ್ಯಾಂಕ್ ಮುನ್ನಡೆ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಬಾಲ್‍ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಇಂಡಿಯಾದ ಸಹಭಾಗಿತ್ವದಲ್ಲಿ ನಡೆಯುತ್ತಿರುವ 67ನೇ ...

ಮೊದಲ ಬಾರಿ ಟ್ವೆಂಟಿ-20 ವಿಶ್ವಕಪ್ ಗೆದ್ದ ಆಸ್ಟ್ರೇಲಿಯ; ವಾರ್ನರ್, ಮಾರ್ಷ್ ಅಬ್ಬರದ ಬ್ಯಾಟಿಂಗ್

ಆಲ್‌ರೌಂಡರ್ ಮಿಚೆಲ್ ಮಾರ್ಷ್ (ಔಟಾಗದೆ 77, 50 ಎಸೆತ, 6 ಬೌಂಡರಿ, 4 ಸಿಕ್ಸರ್) ಹಾಗೂ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ (53, 38 ಎಸೆತ, 4 ...

ಐತಿಹಾಸಿಕ ಸ್ವರ್ಣ ಗೆದ್ದ ಸುಮಿತ್, ಅವನಿ; ಭಾರತಕ್ಕೆ ಒಂದೇ ದಿನ 2 ಚಿನ್ನ ಸಹಿತ ಐದು ಪದಕ

ಪ್ಯಾರಾಲಿಂಪಿಕ್ ಗೇಮ್ಸ್‌ನಲ್ಲಿ ಪ್ಯಾರಾಲಿಂಪಿಕ್ಸ್ ಅಂಟಿಲ್ ಎಫ್64 ಸ್ಪರ್ಧೆಯಲ್ಲಿ 68.55 ಮೀ.ದೂರಕ್ಕೆ * ಜಾವಲಿನ್ ಎಸೆದು ತನ್ನದೇ ವಿಶ್ವ ...