ತ್ವರಿತ ಆ್ಯಂಟಿಜೆನ್ ತಪಾಸಣೆಗೆ ಚಾಲನೆ

Source: so news | Published on 14th July 2020, 12:13 AM | State News | Don't Miss |

 

ಧಾರವಾಡ: ಕೋವಿಡ್ ತಪಾಣೆಗಾಗಿ ಜಿಲ್ಲೆಗೆ ಒಟ್ಟು 2,300 ಆ್ಯಂಟಿಜೆನ್ ಕಿಟ್ ಪೂರೈಕೆಯಾಗಿದ್ದು, ಜಿಲ್ಲಾಧಿಕಾರಿಗಳ ಕಚೇರಿ ಮುಂಬಾಗದಲ್ಲಿ ಇಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ ಆ್ಯಂಟಿಜನ್ ಪರೀಕ್ಷೆ ವಾಹನಕ್ಕೆ ಚಾಲನೆ ನೀಡಿದರು. 
ಆ್ಯಂಟಿಜೆನ್ ಕಿಟ್ ಹೊಂದಿರುವ ವಾಹನ ಆಸ್ಪತ್ರೆ ಬಳಿ ಇದ್ದು, ಅಲ್ಲಿಗೆ ಆಗಮಿಸುವ ಕೋವಿಡ್-19 ಲಕ್ಷಣ ಹೊಂದಿರುವ ಜನರಿಂದ ಸ್ಥಳದಲ್ಲಿಯೇ ರಕ್ತ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅರ್ಧ ಗಂಟೆಯಲ್ಲಿ ಫಲಿತಾಂಶ ತಿಳಿಯಲಿದೆ.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಶವಂತ ಮದೀನಕರ, ಡಾ.ಸುಜಾತಾ ಹಸವಿಮಠ ಸೇರಿದಂತೆ ಇತರರು ಇದ್ದರು.

Read These Next

ಸಾರ್ವಜನಿಕ ಗಣೇಶೋತ್ಸವದ ಮೇಲೆ ಕೋವಿಡ್ ಕರಿ ನೆರಳು; ಮನೆ ಹಾಗೂ ಮಂದಿರಗಳಲ್ಲಿ ಮಾತ್ರ ಗಣೇಶನ ಪ್ರತಿಷ್ಠಾಪನೆ

ಕಾರವಾರ: ಕೋವಿಡ್-19 ತಡೆಗಟ್ಟುವ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದನ್ವಯ ಮನೆ ಮತ್ತು ದೇವಸ್ಥಾನದಲ್ಲಿ ಮಾತ್ರ ಗಣೇಶಮೂರ್ತಿ ...

ಹಳೆಯ ವೈಷಮ್ಯ; ವ್ಯಕ್ತಿಯ ಕೊಲೆ  

ಭಟ್ಕಳ : ಹಳೆಯ ವೈಷಮ್ಯ ಹಾಗೂ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರು ಕೊಲೆಗೀಡಾಗಿರುವ ಘಟನೆ ತಾಲೂಕಿನ ಬೆಣಂದೂರು ...

ಭಟ್ಕಳ: ಸದಸ್ಯರ ವಿರೋಧದ ನಡುವೆಯೂ ಜಾಲಿ ಪ.ಪಂ ಕಟ್ಟಡ ಕಾಮಗಾರಿ ಆರಂಭ; ಸದಸ್ಯರಿಂದ ಸಹಾಯಕ ಆಯುಕ್ತರಿಗೆ ಮನವಿ

ಭಟ್ಕಳ; ಸ.ನಂ.242 ರಲ್ಲಿ ಜಾಲಿ ಪಟ್ಟಣ ಪಂಚಯತ್ ನ ನೂತನ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸದಸ್ಯರ ತೀವ್ರ ವಿರೋಧದ ನಡುವೆಯೂ ...