ಬಿಸಿಸಿಐ ಕೋವಿಡ್ ಕಾರ್ಯಪಡೆಯಲ್ಲಿ ದ್ರಾವಿಡ್

Source: PTI | Published on 4th August 2020, 12:45 AM | Sports News | Don't Miss |

 

 


ನವದೆಹಲಿ: ಕೋವಿಡ್ ಕಾರ್ಯಪಡೆ ರಚಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂದಾಗಿದ್ದು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ಮತ್ತು ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರನ್ನು ಪ್ರತಿನಿಧಿಯಾಗಿ ಸೇರಿಸಿಕೊಳ್ಳಲಾಗಿದೆ.
ಆಯಾ ರಾಜ್ಯಗಳ ಕ್ರಿಕೆಟ್ ಸಂಸ್ಥೆಗಳಲ್ಲಿ ಕಾರ್ಯಪಡೆ ಪ್ರತಿನಿಧಿಗಳಿಗೆ ತರಬೇತಿ ನೀಡಲಾಗುವುದು. ಇದಕ್ಕೂ ಮೊದಲು ಪ್ರತಿನಿಧಿಗಳು ಒಪ್ಪಿಗೆ ಪತ್ರಕ್ಕೆ ಸಹಿ ಹಾಕಬೇಕು. 60 ವರ್ಷ ದಾಟಿದವರನ್ನು ಯಾವುದೇ ಕಾರಣಕ್ಕೂ ಸೇರಿಸಿಕೊಳ್ಳಬಾರದು ಎಂದು ಮಂಡಳಿ ಸೂಚಿಸಿದೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆಯುವ ತರಬೇತಿಯಲ್ಲಿ ರಾಹುಲ್ ದ್ರಾವಿಡ್, ಒಬ್ಬರು ಆರೋಗ್ಯಾಧಿಕಾರಿ, ಪೋಷಕ ತಜ್ಞ ಮತ್ತು ಬಿಸಿಸಿಐನ ಕ್ರಿಕೆಟ್ ಆಪರೇಷನ್ಸ್ ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕರು ಇರುವರು. ಕೋವಿಡ್‌ಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುವ ಕುರಿತು ಆಟಗಾರರಿಗೆ ನಿಖರ ಮತ್ತು ಸ್ಪಷ್ಟ ಮಾಹಿತಿಗಳನ್ನು ನೀಡುವುದು ಮತ್ತು ಕೋವಿಡ್‌ ಬಗೆಗಿನ ಮಾಹಿತಿಗಳನ್ನು ಪ್ರತಿನಿತ್ಯ ಬಿಸಿಸಿಐಗೆ ತಲುಪಿಸುವುದು ಅವರ ಪ್ರಮುಖ ಕರ್ತವ್ಯ ಆಗಿರುತ್ತದೆ.
2019–20ನೇ ಋತುವಿನ ದೇಶಿ ಕ್ರಿಕೆಟ್ ಚಟುವಟಿಕೆ ಮಾರ್ಚ್ ತಿಂಗಳಲ್ಲಿ ಮುಗಿದಿತ್ತು. ಈ ವರ್ಷದ ಚಟುವಟಿಕೆ ಈ ತಿಂಗಳಲ್ಲಿ ಆರಂಭಗೊಳ್ಳಬೇಕಾಗಿತ್ತು. ಆದರೆ ಕೋವಿಡ್–19 ತಂದಿತ್ತಿರುವ ವಿಷಮ ಪರಿಸ್ಥಿತಿ ಇದಕ್ಕೆ ಅಡ್ಡಿಯಾಗಿದೆ.
ಈ ಬಾರಿಯ ತರಬೇತಿ ಶಿಬಿರ ಆರಂಭವಾಗುವುದಕ್ಕೂ ಮೊದಲು ವೈದ್ಯಕೀಯ ತಂಡವು ಆಟಗಾರರ ಪ್ರಯಾಣ ಮಾಹಿತಿ ಮತ್ತು ಆರೋಗ್ಯದ ವಿವರಗಳನ್ನು ಪಡೆದುಕೊಳ್ಳಲಿದೆ. ಇದಕ್ಕಾಗಿ ಆನ್‌ಲೈನ್‌ನಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಿ ಉತ್ತರ ಕಂಡುಕೊಳ್ಳಲಿದೆ. ಯಾರಲ್ಲಾದರೂ ಕೋವಿಡ್–19ರ ಲಕ್ಷಣ ಕಂಡುಬಂದರೆ ಅವರನ್ನು ಪರೀಕ್ಷೆಗೆ ಒಳಪಡಿಸಲಾಗುವುದು. ಮೂರು ದಿನಗಳಲ್ಲಿ ಎರಡು ಬಾರಿ ಪರೀಕ್ಷೆ ಮಾಡಲಾಗುವುದು. ಎರಡೂ ಪರೀಕ್ಷೆಗಳಲ್ಲಿ ನಗೆಟಿವ್ ವರದಿ ಬಂದರೆ ಮಾತ್ರ ತರಬೇತಿಗೆ ಅವಕಾಶ ನೀಡಲಾಗುವುದು. ತರಬೇತಿ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಮಾರ್ಗದರ್ಶಿ ಸೂತ್ರಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಲಾಗಿದೆ

Read These Next

ಮೊದಲ ಬಾರಿ ಟ್ವೆಂಟಿ-20 ವಿಶ್ವಕಪ್ ಗೆದ್ದ ಆಸ್ಟ್ರೇಲಿಯ; ವಾರ್ನರ್, ಮಾರ್ಷ್ ಅಬ್ಬರದ ಬ್ಯಾಟಿಂಗ್

ಆಲ್‌ರೌಂಡರ್ ಮಿಚೆಲ್ ಮಾರ್ಷ್ (ಔಟಾಗದೆ 77, 50 ಎಸೆತ, 6 ಬೌಂಡರಿ, 4 ಸಿಕ್ಸರ್) ಹಾಗೂ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ (53, 38 ಎಸೆತ, 4 ...

ಐತಿಹಾಸಿಕ ಸ್ವರ್ಣ ಗೆದ್ದ ಸುಮಿತ್, ಅವನಿ; ಭಾರತಕ್ಕೆ ಒಂದೇ ದಿನ 2 ಚಿನ್ನ ಸಹಿತ ಐದು ಪದಕ

ಪ್ಯಾರಾಲಿಂಪಿಕ್ ಗೇಮ್ಸ್‌ನಲ್ಲಿ ಪ್ಯಾರಾಲಿಂಪಿಕ್ಸ್ ಅಂಟಿಲ್ ಎಫ್64 ಸ್ಪರ್ಧೆಯಲ್ಲಿ 68.55 ಮೀ.ದೂರಕ್ಕೆ * ಜಾವಲಿನ್ ಎಸೆದು ತನ್ನದೇ ವಿಶ್ವ ...

ರಾಜ್ಯದಲ್ಲಿ ವೀಕೆಂಡ್ ಕರ್ಪ್ಯೂ ಇಲ್ಲ. ನೈಟ್ ಕರ್ಪ್ಯೂ ಮುಂದುವರಿಕೆ. ಎಚ್ಚರ ತಪ್ಪದಂತೆ ಜನತೆಗೆ ಸರ್ಕಾರದ ಮನವಿ

ಬೆಂಗಳೂರು : ಕೋವಿಡ್ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ವಿಧಿಸಿದ್ದ ವೀಕೆಂಡ್ ಕರ್ಪ್ಯೂವನ್ನ ರಾಜ್ಯ ಸರ್ಕಸರವರದ್ದು ಮಾಡಿದೆ.

ಅಬಕಾರಿ ದಾಳಿ: ಅಕ್ರಮ ಮದ್ಯ ವಶ

ಶಿವಮೊಗ್ಗ : ತೀರ್ಥಹಳ್ಳಿಯ ಇಂದಿರಾನಗರ, ತಾಲೂಕಿನ ಮಾರಿಗುಣಿ, ತಲ್ಲೂರು ಅಂಗಡಿ ಕೈಮರ ಗ್ರಾಮಗಳಲ್ಲಿ ಅಬಕಾರಿ ಇಲಾಖೆಯ ಆಯುಕ್ತರು ಹಾಗೂ ...

ಕೋವಿಡ್ ತಜ್ಞರ ಸಮಿತಿ ಸಭೆ. ಎರಡು ಲಸಿಕೆ ಪಡೆದವರಿಗೆ ಗಂಭೀರ ರೋಗ ಲಕ್ಷಣ ಸಾಧ್ಯತೆ ಅತಿ ಕಡಿಮೆ

ಶಿವಮೊಗ್ಗ : ಕೋವಿಡ್ ಮೂರನೇ ಅಲೆಯಲ್ಲಿ ಹಲವೆಡೆ ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಕಂಡು ಬಂದಿದ್ದರೂ, ಆತಂಕಪಡದೇ ಶಾಲಾ ...