ಕಾರವಾರ: ಮೂಲತಃ ಕಾರವಾರದ ಪ್ರೊ. ಸ್ವಾತಿ ನಾಯಕ ಅವರು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಮಣಿಪಾಲ ವಿಶ್ವ ವಿದ್ಯಾಲಯಕ್ಕೆ ಮಂಡಿಸಿದ್ದ ‘ಎನರ್ಜಿ ಆಫ್ ಗ್ರಾಫ್ ಆ್ಯಂಡ್ ಇಟ್ಸ್ ಜನರಲೈಸ್ಡ್ ಕಾಂಪ್ಲಿಮೆಂಟ್ಸ್ ‘ ಎನ್ನುವ ಮಹಾಪ್ರಬಂಧಕ್ಕೆ ಪಿಎಚ್.ಡಿ. ಪ್ರಧಾನ ಮಾಡಿದೆ.
ಕಾರವಾರದ ಸ್ವಾತಿ ನಾಯಕ ಅವರು ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯ ಗಣಿತ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಡಾ. ಪ್ರದೀಪ್ ಜಿ. ಭಟ್ ಅವರ ಮಾರ್ಗದ ದರ್ಶನದಲ್ಲಿ ಮಣಿಪಾಲ ವಿಶ್ವವಿದ್ಯಾಲಯಕ್ಕೆ ತಮ್ಮ ಮಹಾಪ್ರಬಂಧವನ್ನು ಸಲ್ಲಿಸಿದ್ದರು.
ಡಾ. ಸ್ವಾತಿ ನಾಯಕ ಅವರು ಕಾರವಾರದ ಸದಾನಂದ ಹಾಗೂ ಯಶೋಧಾ ನಾಯಕ ದಂಪತಿ ಪುತ್ರಿಯಾಗಿದ್ದು ಹಾಗೂ ಪವನ್ ಚೆಂಡಿಯೇಕರ್ ಅವರ ಪತ್ನಿ ಹಾಗೂ ಪ್ರೀಯಾ ಚೆಂಡಿಯೇಕರ್ ಸೊಸೆಯಾಗಿದ್ದಾರೆ.